53 ಲಕ್ಷ ರೂ. ಹಿಂದಿರುಗಿಸಲು ಹೈಕೋರ್ಟ್‌ ಸೂಚನೆ


Team Udayavani, Mar 5, 2021, 5:08 PM IST

High court

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರ ಆಪ್ತ ಸಚಿನ್‌ ನಾರಾಯಣ್‌ ಮನೆ ಮತ್ತವರ ಕಂಪನಿ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿದ್ದ 53 ಲಕ್ಷ ಹಣವನ್ನು ಬಿಡುಗಡೆ ಮಾಡುವಂತೆ ಸಿಬಿಐಗೆ ಹೈಕೋರ್ಟ್‌ ಸೂಚಿಸಿದೆ.

ಡಿ.ಕೆ.ಶಿವಕುಮಾರ್‌ ಅವರ ದೆಹಲಿಯ ಫ್ಲಾಟ್‌ ಹಾಗೂ ಮನೆಯಲ್ಲಿ 2017ರಲ್ಲಿ ಏಳುಕೋಟಿ ರೂಪಾಯಿಗೂ ಅಧಿಕ ನಗದು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಆಪ್ತರಾದ ಸಚಿನ್‌ ನಾರಾಯಣ್‌ಮತ್ತು ವೆಲ್‌ವರ್ತ್‌ ಸಾಫ್ಟ್ವೇರ್‌ ಪ್ರೈ.ಲಿ.ಕಚೇರಿ ಮೇಲೆ ದಾಳಿ ನಡೆಸಿ 53 ಲಕ್ಷ ರೂ.ಜಪ್ತಿ ಮಾಡಲಾಗಿತ್ತು. ಆ ಹಣ ಬಿಡುಗಡೆಗೊಳಿಸಲು ಸಿಬಿಐಗೆ ನಿರ್ದೇಶಿಸುವಂತೆ ಕೋರಿ ಸಚಿನ್‌ ನಾರಾಯಣ್‌ ಮತ್ತು ಅವರ ಕಂಪನಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಾನ್‌ ಮೈಕೆಲ್‌ ಕುನ್ಹಾ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು ವಾದಿಸಿ, ಪ್ರಕರಣಕ್ಕೂ ತಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧ ಇಲ್ಲ. ಹೀಗಿದ್ದರೂ ಅರ್ಜಿದಾರರ ಮತ್ತವರ ಕಂಪನಿ ಮೇಲೆ ದಾಳಿ ನಡೆಸಲಾಗಿದೆ. ಕಂಪನಿಗೆ ಸೇರಿದ 53 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಆ ಹಣಕ್ಕೆ ದಾಖಲೆ ತೋರಿಸಿದರೂ ಬಿಡುಗಡೆ ಮಾಡಿಲ್ಲ. ಇದರಿಂದ ಕಂಪನಿಯ ವಹಿವಾಟು ನಡೆಸಲು ತೊಂದರೆ ಉಂಟಾಗುತ್ತಿದ್ದು, ಹಣ ಬಿಡುಗಡೆ ಮಾಡಲು ಆದೇಶಿಸುವಂತೆ ಕೋರಿದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿಬಿಐ ಪರ ವಕೀಲ ಪಿ.ಪ್ರಸನ್ನ ಕುಮಾರ್‌,ಈ ಹಣವು ಅಕ್ರಮ ಮೂಲದಿಂದ ಸಂಪಾದಿಸಲಾಗಿದೆ.ಈ ಬಗ್ಗೆ ತನಿಖೆ ನಡೆಸಬೇಕಿದ್ದು, ಹಣ ಬಿಡುಗಡೆಗೆ ಆದೇಶಿಸಬಾರದು ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಸಿಬಿಐ ಜಪ್ತಿ ಮಾಡಿದ ಹಣ ಅರ್ಜಿದಾರರಿಗೆ ಸೇರಿದೆ ಎಂಬುದು ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿದು ಬರುತ್ತಿದೆ. ಹಣವನ್ನು ವಶದಲ್ಲಿಟ್ಟುಕೊಂಡು ತನಿಖೆ ನಡೆಸುವ ಅಗತ್ಯ ಕಂಡುಬರುತ್ತಿಲ್ಲ. ಅರ್ಜಿದಾರ ಕಂಪನಿಯ ವಹಿವಾಟಿಗೆ ತೊಂದರೆ ಉಂಟಾಗುತ್ತಿರುವ ಕಾರಣ ಹಣ ಬಿಡುಗಡೆ ಮಾಡಬಹುದು. ಆದರೆ,ಅದರ ಮೂಲದ ಬಗ್ಗೆ ಸಿಬಿಐ ತನಿಖೆ ಮುಂದುವರಿಸಬಹುದು ಎಂದು ನಿರ್ದೇಶಿಸಿತು.

ಟಾಪ್ ನ್ಯೂಸ್

1-dsa-dasd

ಶಿವನಿಗೆ ದೇಗುಲ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ: ಕಂಗನಾ ರಣಾವತ್

halappa-achar

ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು

ಭಾರತದಲ್ಲಿ 24ಗಂಟೆಯಲ್ಲಿ 2,364 ಕೋವಿಡ್ ಸೋಂಕು ಪ್ರಕರಣ ದೃಢ, ಹತ್ತು ಮಂದಿ ಸಾವು

1-ddasda

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಉತ್ತೀರ್ಣ; ಹುಡುಗಿಯರೇ ಮೇಲುಗೈ

1-sddda

ಔರಂಗಜೇಬ್ ಸಮಾಧಿಗೆ 5 ದಿನಗಳ ಕಾಲ ಪ್ರವೇಶವಿಲ್ಲ: ಅಜಿತ್ ಪವಾರ್

ಜ್ಞಾನವಾಪಿ ಮಸೀದಿ ವಿವಾದ: ಮೇ 20ರವರೆಗೆ ವಿಚಾರಣೆ ಬೇಡ- ವಾರಾಣಸಿ ಕೋರ್ಟ್ ಗೆ ಸುಪ್ರೀಂ

ಜ್ಞಾನವಾಪಿ ಮಸೀದಿ ವಿವಾದ: ಮೇ 20ರವರೆಗೆ ವಿಚಾರಣೆ ಬೇಡ- ವಾರಾಣಸಿ ಕೋರ್ಟ್ ಗೆ ಸುಪ್ರೀಂಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

ನಾನು ರಾಜ್ಯ ರಾಜಕಾರಣಕ್ಕೆ ಮರಳುತ್ತಿಲ್ಲ: ಶೋಭಾ ಕರಂದ್ಲಾಜೆ ಸ್ಪಷ್ಟನೆ

1-ddasda

ಎಸ್‌ಎಸ್‌ಎಲ್‌ಸಿ ಫ‌ಲಿತಾಂಶ ಪ್ರಕಟ : 85.63% ವಿದ್ಯಾರ್ಥಿಗಳು ಉತ್ತೀರ್ಣ; ಹುಡುಗಿಯರೇ ಮೇಲುಗೈ

1-sfsfsdf

ಮಳೆ ಅವಾಂತರ: ‘ಬೆಂಗಳೂರು ಬ್ರ್ಯಾಂಡ್’ ಉಳಿಸಿಕೊಳ್ಳಲು ಸಿಎಂಗೆ ಎಸ್.ಎಂ. ಕೃಷ್ಣ ಪತ್ರ

ಮುಂದುವರಿದ ಭಾರೀ ಮಳೆ: ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

ಮುಂದುವರಿದ ಭಾರೀ ಮಳೆ: ಮೈಸೂರು, ದಕ್ಷಿಣ ಕನ್ನಡ, ಶಿವಮೊಗ್ಗದ ಶಾಲೆಗಳಿಗೆ ರಜೆ ಘೋಷಣೆ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

ಎಸೆಸೆಲ್ಸಿ ಪರೀಕ್ಷಾ ಫ‌ಲಿತಾಂಶ ಇಂದು ಪ್ರಕಟ

MUST WATCH

udayavani youtube

ಕಾರ್ಖಾನೆಯ ಗೋಡೆ ಕುಸಿದು 12 ಮಂದಿ ಕಾರ್ಮಿಕರ ಸಾವು

udayavani youtube

ಬೆಂಗಳೂರಿನಲ್ಲಿ ಹೈಸ್ಕೂಲ್ ವಿದ್ಯಾರ್ಥಿನಿಯರ ಮಾರಾಮಾರಿ ! ವಿಡಿಯೋ ವೈರಲ್ ..

udayavani youtube

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಪಿಕಪ್

udayavani youtube

ಹೊರಟ್ಟಿ ಸೇರ್ಪಡೆಯಿಂದ ಪಕ್ಷಕ್ಕೆ ಬಲ : ಸಿಎಂ

udayavani youtube

ಹುಣಸೂರಿನಲ್ಲಿ ಭಾರೀ ಮಳೆಗೆ ಮನೆಗಳು ಜಲಾವೃತ

ಹೊಸ ಸೇರ್ಪಡೆ

1-dsa-dasd

ಶಿವನಿಗೆ ದೇಗುಲ ರಚನೆಯ ಅಗತ್ಯವಿಲ್ಲ, ಅವನು ಪ್ರತಿ ಕಣದಲ್ಲೂ ನೆಲೆಸಿದ್ದಾನೆ: ಕಂಗನಾ ರಣಾವತ್

halappa-achar

ಆರ್ ಎಸ್ಎಸ್ ಬಗ್ಗೆ ಮಾತಾಡದಿದ್ದರೆ ಕಾಂಗ್ರೆಸ್ ಗೆ ನಿದ್ದೆ ಬರಲ್ಲ: ಹಾಲಪ್ಪ ಆಚಾರ್

dc

ಗೋಶಾಲೆ ನಿರ್ಮಾಣಕ್ಕೆ ಶೀಘ್ರ ಭೂಮಿ ಮಂಜೂರು

honnali

ನ್ಯಾಮತಿ ತಾಲೂಕಿಗೆ ತಪ್ಪದ ಹೊನ್ನಾಳಿ ಅವಲಂಬನೆ!

7

ಸಿದ್ದಾಪುರ: ಮಳೆಗಾಲದ ಸಿದ್ಧತೆಗೆ ಪೂರ್ವಭಾವಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.