ಎಲ್ಲ ಸಾಲವನ್ನೂ ನಾನೇ ತೀರಿಸಬೇಕೆಂದ್ರೆ ಹೇಗೆ?
Team Udayavani, Sep 30, 2018, 6:25 AM IST
ಬೆಂಗಳೂರು: “ವಿವಿಧ ಉದ್ದೇಶಗಳಿಗೆ ಖಾಸಗಿ ಸಾಲ ಮಾಡಿದವರೆಲ್ಲರೂ ತಮ್ಮ ಸಾಲವನ್ನು ನಾನೇ ತೀರಿಸಬೇಕು ಎಂದರೆ ಹೇಗೆ ಸಾಧ್ಯ’ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ನ್ಯಾಷನಲ್ ಕಾಲೇಜು ಮೈದಾನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ರೈತನೊಬ್ಬ ಜನತಾ ದರ್ಶನದಲ್ಲಿ ನನ್ನನ್ನು ಭೇಟಿಯಾಗಿದ್ದ. ಸುಮಾರು 12-13 ಲಕ್ಷ ರೂ. ಖಾಸಗಿ ಸಾಲ ಮಾಡಿದ್ದನು. ಆ ಸಾಲ ನೀವೇ ತೀರಿಸಬೇಕು ಎಂದು ಹೇಳಿದ. ಹಾಗಿದ್ದರೆ, ರಾಜ್ಯದಲ್ಲಿ ಪ್ರತಿಯೊಬ್ಬರೂ 15-20 ಲಕ್ಷ ರೂ. ಖಾಸಗಿ ಸಾಲ ಪಡೆದವರೆಲ್ಲರೂ ಆ ಸಾಲವನ್ನು ನಾನೇ ತೀರಿಸಬೇಕು ಎಂದರೆ ಹೇಗೆ ಸಾಧ್ಯ? ಈ ಬಗ್ಗೆ ನೀವೇ (ಜನರಿಗೆ) ನನಗೆ ಮಾರ್ಗದರ್ಶನ ಮಾಡಬೇಕು ಎಂದು ಹೇಳಿದರು.
ಅಷ್ಟಕ್ಕೂ ಆ ರೈತ ಸಾಲ ಮಾಡಿದ್ದು ದನಗಳನ್ನು ಖರೀದಿಸಿ, ಅತಿ ಕಡಿಮೆ ಬೆಲೆ ಮಾರಾಟ ಮಾಡುತ್ತಿದ್ದ. ಇದರಿಂದ ನಷ್ಟ ಅನುಭವಿಸಿದ್ದ. ಅದೇನೇ ಇರಲಿ, ಜನತಾ ದರ್ಶನದಲ್ಲಿ ನನ್ನನ್ನು ಭೇಟಿಯಾದಾಗ, “ಋಣಭಾರ ಯೋಜನೆ ರೂಪಿಸಲಾಗಿದ್ದು, ರಾಷ್ಟ್ರಪತಿಗಳ ಅಂಕಿತ ಬಾಕಿ ಇದೆ. ಸ್ವಲ್ಪ ದಿನ ಕಾಯುವಂತೆ ಹೇಳಿದ್ದೆ. ಸಾಲ ನೀಡಿದವರು ಕಿರಿಕಿರಿ ನೀಡಿದರೆ ಹೆದರಬೇಡ, ಆ ವ್ಯಕ್ತಿಯೇ ಜೈಲಿಗೆ ಹೋಗುತ್ತಾನೆ. ಈ ಬಗ್ಗೆ ಸ್ಥಳೀಯ ಜಿಲ್ಲಾಧಿಕಾರಿ ಅಥವಾ ಪೊಲೀಸರಿಗೆ ದೂರು ನೀಡುವಂತೆ ಸೂಚಿಸಿದ್ದೆ. ಅಷ್ಟೇ ಅಲ್ಲ, ಈ ಬಗ್ಗೆ ಜಿಲ್ಲಾಧಿಕಾರಿಗೂ ಸೂಚನೆ ನೀಡಿದ್ದೆ ಎಂದು ಮಾಹಿತಿ ನೀಡಿದರು.
ಘಟನೆ ನಂತರ ಆ ರೈತನ ತಂದೆ-ತಾಯಿಯೊಂದಿಗೂ ನಾನು ಮಾತನಾಡಿದ್ದೇನೆ ಎಂದ ಅವರು, ಮಾಧ್ಯಮಗಳು ಮಾಡುವ ವರದಿಗಳನ್ನು ನಾನು ಲಘುವಾಗಿ ತೆಗೆದುಕೊಳ್ಳುವುದಿಲ್ಲ. ತುಂಬಾ ಗಂಭೀರವಾಗಿ ಪರಿಗಣಿಸಿ, ಫಾಲೋಅಪ್ ಮಾಡುವವನು ನಾನು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಣಕಾಸಿನ ವಿಚಾರ : ನಡುರಸ್ತೆಯಲ್ಲೇ ಮಹಿಳೆಯ ಕತ್ತು ಕೊಯ್ದು ಭೀಕರ ಹತ್ಯೆ
ಗೌಡ ಲಿಂಗಾಯತರಿಗೆ 2ಎ ನೀಡಲು ಒತ್ತಾಯಿಸಿ ಬೆಂಗಳೂರು ಚಲೋಗೆ ನಿರ್ಧಾರ
ಬ್ರಾಹ್ಮಣರಿಂದ ಅರ್ಚಕ ವೃತ್ತಿ ಕಿತ್ತುಕೊಳ್ಳುವ ಪ್ರಯತ್ನ ಸರ್ಕಾರ ಮಾಡುತ್ತಿದೆ :ಪೇಜಾವರ ಶ್ರೀ
ಶಿವಮೊಗ್ಗ: ಸಿಎಂ ಗೆ ಘೇರಾವ್ ಹಾಕಲು ಕಾಂಗ್ರೆಸ್ ಪ್ಲಾನ್ : 20ಕ್ಕೂ ಹೆಚ್ಚು ಕಾರ್ಯಕರ್ತರ ಬಂಧನ
ಯೋಗೀಶ್ವರ್ ಮರ್ಕಟ ಮನಸ್ಥಿತಿಯ ‘ರಾಜಕೀಯ ಜೋಕರ್’: ಎಸ್.ಎಲ್. ಭೋಜೇಗೌಡ ಟೀಕೆ