ಐಟಿ ಅಧಿಕಾರಿ ಸೋಗಲ್ಲಿ ಜನರ ಬ್ಯಾಂಕ್‌ ಖಾತೆಗೆ ಕನ್ನ


Team Udayavani, Dec 22, 2018, 12:17 PM IST

it-adi.jpg

ಬೆಂಗಳೂರು: ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ನಂಬಿಸಿ ಸಾರ್ವಜನಿಕರ ಬ್ಯಾಂಕ್‌ ಖಾತೆಗಳಿಗೆ ಕನ್ನ ಹಾಕಿ ಹಣ ದೋಚುತ್ತಿದ್ದ ವಂಚಕನನ್ನು ಸೈಬರ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ. ನಾಗಾಲ್ಯಾಂಡ್‌ ಮೂಲದ ಜಾನ್‌ ಖಜಿಚೆ (24) ಬಂಧಿತ ಆರೋಪಿ.

ನಗರದ ಈಜಿಪುರದಲ್ಲಿ ವಾಸವಿರುವ ಆರೋಪಿ ಜಾನ್‌, ಅಪರಿಚಿತ ಫೋನ್‌ ನಂಬರ್‌ಗಳಿಗೆ ಕರೆ ಮಾಡಿ ಆದಾಯ ತೆರಿಗೆ ಇಲಾಖೆ ಅಧಿಕಾರಿ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ನಿಮ್ಮ ಈ ವರ್ಷದ ಆದಾಯ ತೆರಿಗೆಯನ್ನು ಅಪ್‌ಡೆಟ್‌ ಮಾಡಬೇಕಿದೆ. ನಾನು ಕೆಲವು ಲಿಂಕ್‌ಗಳನ್ನು ಮೆಸೇಜ್‌ ಮಾಡುತ್ತೇನೆ ಅದನ್ನು ಕ್ಲಿಕ್‌ ಮಾಡಬೇಕು ಎಂದು ನಂಬಿಸುತ್ತಿದ್ದ.

ಗ್ರಾಹಕರು ಲಿಂಕ್‌ ಕ್ಲಿಕ್‌ ಮಾಡಿದ ಕೂಡಲೇ ಅವರ ಮೊಬೈಲ್‌ಗೆ ಬರುತ್ತಿದ್ದ ಸಂದೇಶ ಇವನಿಗೂ ಲಭ್ಯವಾಗುತ್ತಿತ್ತು. ಆ ಮಾಹಿತಿ ಆಧರಿಸಿ ಒಟಿಪಿ ಪಡೆದು, ಕೆಲವೇ ಕ್ಷಣಗಳಲ್ಲಿ ತನ್ನ ಬ್ಯಾಂಕ್‌ ಖಾತೆಗೆ ಹಣ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಬನ್ನೇರುಘಟ್ಟ ರಸ್ತೆಯ ನೊಬೊ ನಗರದ ನಿವಾಸಿಯೊಬ್ಬರಿಗೆ ಕರೆ ಮಾಡಿ ಆನ್‌ಲೈನ್‌ ವಂಚನೆ ಮಾಡಿದ ಕುರಿತು ದಾಖಲಾದ ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.

ಪಿಯುಸಿ ವಿಧ್ಯಾಭ್ಯಾಸ ಮಾಡಿರುವ ಜಾನ್‌, ಹಿಂದಿ, ಇಂಗ್ಲಿಷ್‌ ಭಾಷೆಯನ್ನು ನಿರರ್ಗಳವಾಗಿ ಮಾತನಾಡುತ್ತಾನೆ. ಆತನ ಸಹಚರರರ ಜತೆ ಸೇರಿ  ಆನ್‌ಲೈನ್‌ ವಂಚನೆಗಿಳಿದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಜತೆಗೆ, ಇದೇ ಪ್ರಕರಣದಲ್ಲಿ ಮತ್ತೂಬ್ಬ ಆರೋಪಿ ತಲೆ ಮರೆಸಿಕೊಂಡಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಡಿಜಿಪಿ ಖಾತೆಗೆ ಕನ್ನ ಹಾಕಿದ್ದವನ ಬಂಧನ: ಕಳೆದ ಅಕ್ಟೋಬರ್‌ನಲ್ಲಿ ರಾಜ್ಯಗುಪ್ತಚರ ದಳದ ಡಿಜಿಪಿ ಎಂ.ಎಂ.ಪ್ರಸಾದ್‌ ಅವರ ಬ್ಯಾಂಕ್‌ ಖಾತೆಗೆ ಕನ್ನ ಹಾಕಿದ್ದ ಕೋಲ್ಕತಾ ಮೂಲದ ಕಿಶೋರ್‌ ಕುಮಾರ್‌ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್‌ ಆಗಿರುವ ಆರೋಪಿ, ಹಲವರನ್ನು ವಂಚಿಸಿರುವ ಸಾಧ್ಯತೆ ಹಿನ್ನೆಲೆಯಲ್ಲಿ ಸೈಬರ್‌ ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.

ಅಕ್ಟೋಬರ್‌ 15ರಂದು ಡಿಜಿಪಿ ಎಂ.ಎಂ.ಪ್ರಸಾದ್‌ ಅವರಿಗೆ ದೂರವಾಣಿ ಕರೆ ಮಾಡಿದ್ದ ಆರೋಪಿ ಕಿಶೋರ್‌, “ಬ್ಯಾಂಕ್‌ ಗ್ರಾಹಕ ಸೇವಾ ಕೇಂದ್ರದಿಂದ ಮಾತನಾಡುತ್ತಿದ್ದೇನೆ. ನಿಮ್ಮ ಎಸ್‌ಬಿಐ ಖಾತೆಯ ಬ್ಯಾಂಕ್‌ ಡೆಬಿಟ್‌ ಕಾರ್ಡ್‌ ಅವಧಿ ಮುಗಿದಿದ್ದು, ನವೀಕರಣ ಮಾಡಬೇಕಿದೆ’ ಎಂದಿದ್ದ. ಬಳಿಕ ಮತ್ತೂಂದು ಸಂಖ್ಯೆಯಿಂದ ಕರೆ ಮಾಡಿ ಕೆನರಾ ಬ್ಯಾಂಕ್‌ ಖಾತೆಯ ಡೆಬಿಟ್‌ ಕಾರ್ಡ್‌ ಕೂಡ ನವೀಕರಿಸಬೇಕು ಎಂದು ಹೇಳಿ ಎಸ್‌ಎಂಎಸ್‌ ಕಳುಹಿಸುವುದಾಗಿ ತಿಳಿಸಿದ್ದ.

ಆರೋಪಿ ಡೆಬಿಟ್‌ ಕಾರ್ಡ್‌ ಸಂಖ್ಯೆಗಳನ್ನು ಖಚಿತವಾಗಿ ಹೇಳಿದ್ದರಿಂದ ಆತನನ್ನು ನಂಬಿದ ಡಿಜಿಪಿ, ಕಾರ್ಡ್‌ಗಳ ವಿವರವನ್ನು ಪುನಃ ಮೆಸೇಜ್‌ ಮಾಡಿದ್ದರು. ಈ ಮಾಹಿತಿ ಪಡೆದ ಕೆಲವೇ ಕ್ಷಣಗಳಲ್ಲಿ ಅವರ ಬ್ಯಾಂಕ್‌ ಖಾತೆಯಿಂದ ಒಂದು ಲಕ್ಷ  ರೂ.ಗಳನ್ನು ಆರೋಪಿ ವರ್ಗಾವಣೆ ಮಾಡಿಕೊಂಡಿದ್ದ.

ಟಾಪ್ ನ್ಯೂಸ್

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಅತ್ಯಂತ ಯಶಸ್ವಿ ಆಡಳಿತಗಾರ ಮೋದಿ: ಗೃಹ ಸಚಿವ ಅಮಿತ್‌ ಶಾ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಚೀನಾ ಕಾಯ್ದೆಗೆ ಆಕ್ಷೇಪ; ಗಡಿ ಕಾಯ್ದೆ ಬಾಂಧವ್ಯಕ್ಕೆ ಧಕ್ಕೆ ತರಲಿದೆ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಖೇಲ್‌ರತ್ನಕ್ಕೆ 11 ಹೆಸರು ಶಿಫಾರಸು; ನೀರಜ್‌ ಚೋಪ್ರಾ,ಮಿಥಾಲಿ, ಚೆಟ್ರಿ ಹೆಸರು ಮುಂಚೂಣಿಯಲ್ಲಿ

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಸಂಕಷ್ಟದಲ್ಲಿ ಕನ್ನಡ ಪುಸ್ತಕೋದ್ಯಮ; ಕೋವಿಡ್‌ದಿಂದಾಗಿ ಬಿದ್ದಿದೆ ಪೆಟ್ಟು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road accident

ರಸ್ತೆ ಅಪಘಾತ: ವರ್ಷಕ್ಕೆ 2.91 ಲಕ್ಷ ಕೋಟಿ ನಷ್ಟ!

High court of karnataka

ವರದಿಗೆ ಪ್ರತಿಕ್ರಿಯೆ ನೀಡಲು ಸರ್ಕಾರಕ್ಕೆ ಹೈ ಸೂಚನೆ‌

ನಟಿ ಮೇಲೆ ಹಲ್ಲೆ- ಮಾಜಿ ಪ್ರಿಯಕರ ಸೆರೆ

ನಟಿ ಮೇಲೆ ಹಲ್ಲೆ: ಮಾಜಿ ಪ್ರಿಯಕರ ಸೆರೆ

ನಿಷೇಧಿತ ನೋಟುಗಳ ಬದಲಾವಣೆ ಯತ್ನ ಬಿಬಿಎಂಪಿ ಉಪ ಗುತ್ತಿಗೆದಾರ ಸೇರಿ ಐವರ ಬಂಧನ | 80 ಲಕ್ಷ ರೂ. ಮೌಲ್ಯದ ಅಮಾನ್ಯಗೊಂಡ ನೋಟು ವಶ

ನಿಷೇಧಿತ ನೋಟುಗಳ ಬದಲಾವಣೆ ಯತ್ನ

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

ಪದವಿ ವಿದ್ಯಾರ್ಥಿಗಳಿಗೆ ಕನ್ನಡ ಕಡ್ಡಾಯ ಆದೇಶ ಮರುಪರಿಶೀಲನೆಗೆ ಹೈಕೋರ್ಟ್‌ ಸೂಚನೆ

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

rwytju11111111111

ರಾಯರ ವಾರದಂದು ನಿಮ್ಮ ರಾಶಿಫಲ ಹೇಗಿದೆ ನೋಡಿ!

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಕಡತಯಜ್ಞ : ಲಭಿಸಿತು ಅಗಾಧ ಜಾಗ! ಪ್ರಧಾನಿ ಸೂಚನೆಯನುಸಾರ ಸಮರೋಪಾದಿ ಕೆಲಸ

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಚಿತ್ರಮಂದಿರಗಳ ಸಮಸ್ಯೆಯಲ್ಲಿ ಬಾಲಿವುಡ್‌

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

ತನಿಖೆಯಿಂದ ವಾಂಖೆಡೆ ತೆರವಿಲ್ಲ; ಎನ್‌ಸಿಬಿ ಸ್ಪಷ್ಟನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.