ವಿಜ್ಞಾನಾಸಕ್ತರಿಗೆ ಮುಕ್ತವಾದ ಐಐಎಸ್ಸಿ


Team Udayavani, Mar 1, 2020, 3:09 AM IST

vijnansaktar

ಬೆಂಗಳೂರು: ಸದಾ ಶಾಂತವಾಗಿರುತ್ತಿದ್ದ ಆ ವಿಜ್ಞಾನ ಪರಿಸರದಲ್ಲಿ ಶನಿವಾರ ವಿಜ್ಞಾನಾಸಕ್ತರ ದಂಡೇ ನೆರೆದಿತ್ತು. ಎತ್ತ ಕಣ್ಣಾಡಿಸಿದರೂ ವಿಜ್ಞಾನ ಸಂಶೋಧನಾ ಮಾದರಿಗಳು. ಆ ಮಾದರಿಗಳನ್ನು ಸಂಶೋಧಕರು ವಿವರಿಸು ತ್ತದ್ದರೆ, ಗುಂಪಾಗಿ ನಿಂತು ಬೆರಗಿನಿಂದ ಆಸಕ್ತರು ಮಾಹಿತಿ ಪಡೆಯುತ್ತಿದ್ದರು. -ಇದು ಭಾರತೀಯ ಸಂಶೋಧನಾ ಸಂಸ್ಥೆ (ಐಐಎಸ್ಸಿ) ಹಮ್ಮಿಕೊಂಡಿದ್ದ ಓಪನ್‌ ಡೇ (ಮುಕ್ತ ಪ್ರವೇಶ ದಿನ) ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಿತ್ಯವೂ ವಿಜ್ಞಾನ ಸಂಶೋಧನೆ ನಡೆಯುತ್ತಿದ್ದರೂ, ವಿಜ್ಞಾನಾಸಕ್ತರಿಗೆ ಮುಕ್ತ ಪ್ರವೇಶ ಇರುವುದಿಲ್ಲ. ಆದರೆ ಶನಿವಾರ, ಸಂಸ್ಥೆ ಯಲ್ಲಿರುವ ಜೀವಶಾಸ್ತ್ರ, ರಸಾಯನಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ನ್ಯಾನೋ ವಿಜ್ಞಾನ, ವಿವಿಧ ಎಂಜಿನಿಯರಿಂಗ್‌ ಸೇರಿದಂತೆ 42 ವಿಭಾಗಗಳು ತಾವು ನಡೆಸುತ್ತಿರುವ ಸಂಶೋಧನೆ, ಪ್ರಯೋಗ ಮತ್ತು ಯಶಸ್ಸಿನ ಸಂಗತಿಗಳನ್ನು ಪ್ರದರ್ಶಿಸಲು ಓಪನ್‌ ಡೇ ಕಾರ್ಯಕ್ರಮ ವೇದಿಕೆಯಾಯಿತು.

ಪ್ರಾಧ್ಯಾ ಪಕರು, ಸಂಶೋಧನಾ ವಿದ್ಯಾರ್ಥಿಗಳು ತಮ್ಮ ವಿಭಾಗದ ಸಂಶೋಧನೆ, ಕಾರ್ಯಚಟುವಟಿಕೆ ಬಗ್ಗೆ ಜನ ಸಾಮಾನ್ಯ ರಿಗೆ ಮನದಟ್ಟು ಮಾಡುತ್ತಿದ್ದರು. ಮಕ್ಕಳಿಂದ ಹಿಡಿದು ವೃದ್ಧರು, ಮಹಿಳೆಯರು, ಉದ್ಯಮಿಗಳು ಸೇರಿ 40 ಸಾವಿ ರಕ್ಕೂ ಹೆಚ್ಚು ಮಂದಿ ವಿಜ್ಞಾನದ ಮಾಹಿತಿ ಪಡೆದರು. ಏರೋಸ್ಪೇಸ್‌ ಎಂಜಿನಿಯರಿಂಗ್‌ ವಿಭಾಗದಿಂದ ಮಾದರಿ ರಾಕೆಟ್‌ ಉಡಾವಣೆ ಮಾಡಿ ತೋರಿಸಲಾಯಿತು. ರಸಾಯನಶಾಸ್ತ್ರ ವಿಭಾಗದಲ್ಲಿ ಗಾಜಿಗೆ ಶಾಖನೀಡಿ ಪ್ರಯೋಗಾಲಯ ಬಳಸುವ ಟ್ಯಾಬ್‌ಗಳನ್ನು ಕ್ಷಣ ಮಾತ್ರ ದಲ್ಲಿ ಮಾಡಿ ತೋರಿಸಲಾಯಿತು.

ಭೌತಶಾಸ್ತ್ರ ವಿಭಾಗದಲ್ಲಿ ಕಳ್ಳನನ್ನು ಪತ್ತೆ ಮಾಡುವ ಸ್ಕ್ಯಾನರ್‌, ಅಡುಗೆ ಅನಿಲ ಸೋರಿಕೆಯಾಗುತ್ತಿದ್ದರೆ ಎಚ್ಚರಿಸುವ ಸೆನ್ಸರ್‌ ಭದ್ರತಾ ಮಾದರಿಗಳನ್ನು ಪ್ರದರ್ಶಿಸಲಾಯಿತು. ರೋಬರ್ಟ್‌ ಬೋಷ್‌ ಸೆಂಟರ್‌ನಲ್ಲಿ ಹೆಜ್ಜೆಯಿಂದ ಹಾಗೂ ಭೌತಶಾಸ್ತ್ರ ವಿಭಾಗದಲ್ಲಿ ಬಿಸಿನೀರು ತಣ್ಣಿರಿನ ಉಷ್ಣಾಂಶ ಸಮಾ ಗಮ ದಿಂದ ವಿದ್ಯುತ್‌ ಉತ್ಪಾದಿಸುವ ಮಾದರಿಗಳನ್ನು ಸ್ವತಃ ವಿಜ್ಞಾನ ಆಸಕ್ತರೇ ಬಳಸಿ ವಿದ್ಯುತ್‌ ಉತ್ಪಾದನೆ ಎಷ್ಟು ಸುಲಭ ಎಂದುಕೊಂಡರು. ನ್ಯಾನೋ ಸೈನ್ಸ್‌ ಎಂಜಿಯ ರಿಂಗ್‌ ವಿಭಾಗದಲ್ಲಿ ಕೂದಲ ಎಳೆಗಿಂತಲೂ ಕಿರಿದಾದ ಉಪ ಕರಣವನ್ನು ಸೂಕ್ಷ್ಮದರ್ಶಕದಲ್ಲಿ ಕಂಡು ಬೆರಗಾದರು.

ಐಐಎಸ್ಸಿಯಲ್ಲಿರುವ ಸೂಪರ್‌ ಕಂಪ್ಯೂಟರ್‌ಗಳು, ಭೂಕಂಪ ಸಂಭವಿಸುವ ಬಗೆ, ಸುಸ್ಥಿರ ಕಟ್ಟಡಗಳ ನಿರ್ಮಾಣ ಮಾದರಿ ಮುಂತಾದವುಗಳನ್ನು ಪ್ರಾಯೋಗಿಕ ವಾಗಿ ಪ್ರದರ್ಶಿಸಲಾಯಿತು. ನೀರಿನ ಮೇಲೆ ನಡೆಯುವ, ಅಂಗೈಯಲ್ಲಿ ಬೆಂಕಿ ಹಿಡಿಯುವ ಜಾದೂ ವಿಧಾನದಲ್ಲಿ ರುವ ವಿಜ್ಞಾನವನ್ನು ಜನರಿಗೆ ಪ್ರದರ್ಶಿಸಲಾಯಿತು. ಟ್ರಾಫಿಕ್‌ ಗೇಮ್‌, ಮಾನವ ಮೆದುಳು ಮಾದರಿ, ಮೈಂಡ್‌ಜಿಮ್‌, ಲೇಜರ್‌ ಚಟುವಟಿಕೆಗಳು, ಕರ್ನಾಟಕ ರಾಜ್ಯ ವಿಜ್ಞಾನ ತಂತ್ರಜ್ಞಾನ ಮಂಡಳಿ 3ಡಿ ಐತಿಹಾಸಿಕ ಕಟ್ಟಡ ಪ್ರದರ್ಶನ, ಮಳೆ ಮಂಜಿನ ಆಟ, 5 ಜಿ ತಂತ್ರಜ್ಞಾನ ಪ್ರಾತ್ಯಕ್ಷಿಕೆ ಬಳಿ ಹೆಚ್ಚು ಜನರು ಕಂಡು ಬಂದರು.

ಇನ್ನು ಈ ಬಾರಿ “ಹಸಿರು ಕ್ಯಾಂಪಸ್‌’ ಎಂಬ ಪರಿಕಲ್ಪನೆ ಅಡಿ ಕಾಗದರಹಿತ ಓಪನ್‌ ಡೇ ಆಚರಿಸಲಾಯಿತು. 10ಕ್ಕೂ ಹೆಚ್ಚು ವಿಭಾಗಗಲ್ಲಿ ರಸಪ್ರಶ್ನೆ ಆಯೋಜಿಸಲಾಗಿತ್ತು. ಶಾಲಾ ಮಕ್ಕಳಿಗಾಗಿ ಮಾಡಿದ ಕಿಡ್‌ ಜೋನ್‌ನಲ್ಲಿ ಶಾಲಾ ಮಟ್ಟದ ಸಾಮಾನ್ಯ ವಿಜ್ಞಾನದ ಪ್ರಾತ್ಯಕ್ಷಿಕೆ ಇಡಲಾಗಿತ್ತು.

ಕೊರೊನಾ ಜಾಗೃತಿ: ಸೋಂಕು ರೋಗಗಳ ಸಂಶೋಧನಾ ವಿಭಾಗದಲ್ಲಿ ಕಳೆದ ಒಂದು ಶತಮಾನದಲ್ಲಿ ಜನರನ್ನು ಕಾಡಿದ ಡೆಂ à, ಎಚ್‌1ಎನ್‌1, ಎಬೊಲಾ, ಸಾರ್ಸ್‌, ನಿಫಾ ನಂತಹ ಸಾಂಕ್ರಾಮಿಕ ಸೋಂಕುಗಳ ಕುರಿತು ಮಾಹಿತಿ ಪ್ರದರ್ಶನವಿತ್ತು. ಇಲ್ಲಿಯೇ ಸದ್ಯ ಜಗತ್ತನ್ನೇ ವ್ಯಾಪಿಸಿರು ಕೊರೊನಾ ಸೋಂಕು ಎಂದರೆ ಏನು, ಲಕ್ಷಣಗಳು, ಸದ್ಯ ಸೋಂಕಿನ ಸ್ಥಿತಿಗತಿ, ಮುಂಜಾಗೃತಾ ಕ್ರಮಗಳ ಉಪನ್ಯಾಸವನ್ನು ವಿಡಿಯೋಗಳ ಮೂಲಕ ನೀಡಲಾಯಿತು.

ಹಿಟ್ಟಿನ ನೀರಲ್ಲಿ ನಡಿಗೆ: ಮೆಟೀರಿಯಲ್‌ ರಿಸರ್ಚ್‌ ಸೆಂಟರ್‌ನಿಂದ 10×5 ಅಡಿ ವಿಸ್ತೀರ್ಣದಲ್ಲಿ ಗುಂಡಿ ಮಾಡಿ ಅದರಲ್ಲಿ ಮೆಕ್ಕೆಜೋಳದ ಹಿಟ್ಟು ಬೆರಸಿದ ನೀರನ್ನು ಹಾಕಲಾಗಿತ್ತು. ಈ ಮಿಶ್ರಣವು ಸಂಪೂರ್ಣ ದ್ರವ ರೂಪದಲ್ಲಿದ್ದರೂ, ಒತ್ತಡ ಹಾಕಿದರೆ ಘನರೂಪಕ್ಕೆ ಪರಿವರ್ತನೆಯಾಗಿ ಮುಟ್ಟಿದರೂ, ಕೈಗೆ ಅಂಟುಕೊಳ್ಳುತ್ತಿರಲಿಲ್ಲ. ಈ ದ್ರವ ರೂಪದ ಮಿಶ್ರಣದ ಮೇಲೆ ಜೋರಾಗಿ ಓಡಾಟ ನಡೆಸಿ ಅನೇಕರು ಖುಷಿಪಟ್ಟರು.

ಕೆರೆಗಳ ಕಲುಷಿತ ನೀರಿಂದ ಕಲಾಕೃತಿ: ಐಐಎಸ್ಸಿ ಮುಖ್ಯಕಟ್ಟದ ಮುಂಭಾಗವೇ ಸೈನ್ಸ್‌ ಗ್ಯಾಲರಿ ಬೆಂಗಳೂರು ನಗರದ 10 ಕೆರೆಗಳ ಕಲುಷಿತ ನೀರನ್ನು ಬಳಸಿ ಗಾಜಿನ ಪೆಟ್ಟಿಗೆಯೊಳಗೆ ಕಲಾಕೃತಿಗಳನ್ನು ರಚಿಸಿ ಪ್ರದರ್ಶನಕ್ಕಿಟ್ಟಿದ್ದರು. ವಿಶೇಷವೆಂದರೆ ಈ ಕಲಾಕೃತಿಯನ್ನು ರಚಿಸಿದ ಮಾಲಿನ್ಯ ನೀರಲ್ಲಿಯೇ ಸೂಕ್ಷಜೀವಿಗಳು ಜೀವಿಸುತ್ತಿದ್ದು, ಎಲ್ಲರನ್ನು ಆಕರ್ಷಿಸುವಂತಿತ್ತು.

ಐಐಎಸ್ಸಿ ಪರಿಸರಕ್ಕೆ ಮನಸೋತ ವಿದ್ಯಾರ್ಥಿಗಳು
ಫಿದಾ:
ಕ್ಯಾಂಪಸ್‌ ಸುತ್ತಲು ಹಚ್ಚ ಹಸಿರು, ದೊಡ್ಡ ಮರಗಳು, ಹಳೆಯ ಕಟ್ಟಡಗಳಿದ್ದು ಇಲ್ಲಿನ ಪರಿಸರಕ್ಕೆ ಓಪನ್‌ ಡೇಗೆ ಬಂದಿದ್ದ ಶಾಲಾ-ಕಾಲೇಜು ವಿದ್ಯಾರ್ಥಿಗಳು ಮನಸೋತರು. ವಿಶೇಷವಾಗಿ ಜೆ.ಎನ್‌.ಟಾಟಾ ಪ್ರತಿಮೆ ಬಳಿ ಆಯೋಜಿಸಿದ್ದ ಪುಷ್ಪಪ್ರದರ್ಶನವು ಆವರಣದ ಸೌಂದರ್ಯಕ್ಕೆ ಇನ್ನಷ್ಟು ಮೆರಗು ನೀಡಿತ್ತು. ವಿಜ್ಞಾನ ಪ್ರದರ್ಶನ ವೀಕ್ಷಣೆ ಬಳಿಕ ಮಕ್ಕಳು ಮರ ಹತ್ತಿ, ಉದ್ಯಾನಗಳಲ್ಲಿ ಸುತ್ತ ನಡೆಸಿ ಸಂತಸಪಟ್ಟರು. ಟಾಟಾ ಪ್ರತಿಮೆ ಗಳಿ ಸೆಲ್ಫಿಯನ್ನು ಕ್ಲಿಕ್ಕಿಸಿಕೊಳ್ಳುವುದು ಸಾಮಾನ್ಯವಾಗಿತ್ತು.

ಶೈಕ್ಷಣಿಕ ಮಾಹಿತಿ ಮಳಿಗೆಗಳಿಗೆ ಮುಗಿಬಿದ್ದ ಜನ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಮೆಡಿಕಲ್‌, ಎಂಜಿ ನಿಯರಿಂಗ್‌ನಂತಹ ಕೋರ್ಸ್‌ಗಳಿಗಿಂತ ಮೂಲ ವಿಜ್ಞಾನ ಕೋರ್ಸ್‌ಗಳತ್ತ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ ಎಂಬುದಕ್ಕೆ ಭಾರ ತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಓಪನ್‌ ಡೇ ಸಾಕ್ಷಿಯಾಯಿತು. ಇದೇ ಮೊದಲ ಬಾರಿ ವಿಶೇಷವಾಗಿ ಐಐಎಸ್ಸಿಯ ಶೈಕ್ಷಣಿಕ ಚಟುವಟಿಕೆಗಳ ಮಾಹಿತಿ ನೀಡಲೆಂದೇ ಪ್ರತ್ಯೇಕ ಮಳಿಗೆ ತೆರೆಯ ಲಾಗಿತ್ತು. ಈ ಮಳಿಗೆಯಲ್ಲಿ ವಿದ್ಯಾರ್ಥಿಗಳು, ಪೋಷಕರು ಮುಗಿ ಬಿದ್ದು ಮಾಹಿತಿ ಪಡೆದರು. ಓಪನ್‌ ಡೇಗೆ ಆಗಮಿಸಿದ್ದವರ ಪೈಕಿ 10 ಸಾವಿರಕ್ಕೂ ಹೆಚ್ಚು ಮಂದಿ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

ಮೆಡಿಕಲ್‌, ಎಂಜಿನಿಯರಿಂಗ್‌ ಬೇಡಿಕೆ ಕಡಿಮೆಯಾಗಿದ್ದು, ಮಕ್ಕಳನ್ನು ಐಐಎಸ್ಸಿಯಲ್ಲಿ ಓದಿಸಬೇಕು ಎಂಬ ಆಸೆ ಇದ್ದು, ಈ ಕುರಿತು ಮಾಹಿತಿ ಪಡೆಯಲು ಈ ಶೈಕ್ಷಣಿಕ ಮಳಿಗೆ ಉತ್ತಮ ವಾಗಿತ್ತು. ಇಲ್ಲಿನ ಮಾಹಿತಿಯಿಂದ ಮೂಲ ವಿಜ್ಞಾನದ ಕೋರ್ಸ್‌ ಗಳ ಪ್ರಾಮುಖ್ಯತೆ ಎಂದು ಶಿವಮೊಗ್ಗದಿಂದ ಬಂದಿದ್ದ ಆಂಜನ್‌ಕುಮಾರ್‌ ಅಭಿಪ್ರಾಯಪಟ್ಟರು.

ಪುಸ್ತಕಗಳಿಗೆ ಬೇಡಿಕೆ: ಇತ್ತೀಚಿನ ವರ್ಷಗಳಲ್ಲಿ ಐಐಎಸ್ಸಿಯಿಂದ ಪ್ರಕಟವಾಗಿರುವ 42 ಪುಸ್ತಕಗಳನ್ನು ಕ್ಯಾಂಪಸ್‌ನ 2 ಕಡೆ ಮಳಿಗೆ ಗಳಲ್ಲಿ ಮಾರಾಟಕ್ಕಿಡಲಾಗಿತ್ತು. ಇವುಗಳ ಜತೆಗೆ ಜರ್ನಲ್‌, ಐಐಎಸ್ಸಿ ಲೋಗೋ ಇರುವ ಪೆನ್‌, ಪೆನ್‌ಡ್ರೈವ್‌ ಮಾರಾಟಕ್ಕಿದ್ದವು. ರಾಜ್ಯ ಸೇರಿದಂತೆ ಇತರೆಡೆಯಿಂದ ಬಂದಿದ್ದ ಸಾವಿರಕ್ಕೂ ಹೆಚ್ಚು ಮಂದಿ ಮಳಿಗೆಗಳಿಗೆ ಭೇಟಿ ನೀಡಿ ಖರೀದಿ ಮಾಡಿದ್ದಾರೆ.

ಶಾಲೆಯಲ್ಲಿ ಪುಸ್ತಕದಲ್ಲಿ ಓದುತ್ತಿದ್ದ ವಿಜ್ಞಾನ ಪ್ರಯೋಗಗಳನ್ನು ನೇರವಾಗಿ ನೋಡಿ ಖುಷಿಯಾಯಿತು. ಪುಸ್ತಕ ವಿವರಣೆಗಿಂತ ಹೆಚ್ಚು ಅರ್ಥವಾಗಿತು. ಸಾಮಾನ್ಯ ವಿಜ್ಞಾನದ ಪ್ರಾತ್ಯಕ್ಷಿಕೆಗಳನ್ನು ನೋಡಿ ವಿಜ್ಞಾನ ಸುಲಭ ಅನಿಸಿತು.
-ಧೀರಜ್‌, ವಿದ್ಯಾರ್ಥಿ, ಶಾಂತಿನಿಕೇತನ ಶಾಲೆ

ವಿಜ್ಞಾನ ಪದವಿಗೆ ಅವಕಾಶಗಳು ಎಷ್ಟಿವೆ ಎಂದು ಇಲ್ಲಿನ ಸಂಶೋಧನೆಗಳನ್ನು ನೋಡಿ ತಿಳಿಯಿತು. ಎಂಜಿನಿಯರಿಂಗ್‌, ಮೆಡಿಕಲ್‌ ಬಿಟ್ಟು ಬಿಎಸ್ಸಿ ಆಯ್ಕೆ ಮಾಡಿಕೊಂಡಿದ್ದಕ್ಕೆ ಹೆಮ್ಮೆ ಎನಿಸುತ್ತಿದೆ.
-ಸಾನಿಯಾ, ಎಸ್‌ಡಿಸಿ ಕಾಲೇಜು ಕೋಲಾರ

ವಿಜ್ಞಾನ ಎಷ್ಟು ಮುಂದುವರಿದಿದೆ ಎಂಬುದನ್ನು ಈ ಕಾರ್ಯಕ್ರಮ ಮೂಲಕ ಐಐಎಸ್ಸಿ ತೋರಿಸಿಕೊಡುತ್ತದೆ. ವಿಜ್ಞಾನ ಸಂಶೋಧನೆಗಳತ್ತ ಯುವ ಪೀಳಿಗೆ ಹಾಗೂ ಮಕ್ಕಳನ್ನು ಆಕರ್ಷಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದೆ. ಕಳೆದ ಎಂಟು ವರ್ಷದಿಂದ ವಿದ್ಯಾರ್ಥಿ ಗಳೊಂದಿಗೆ ತಪ್ಪದೇ ಭಾಗವಹಿಸುತ್ತಿದ್ದೇನೆ.
-ಹರಿಕೃಷ್ಣ, ಉಪನ್ಯಾಸಕರು

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.