ಐಎಂಎ ಪ್ರಕರಣ: ಮತ್ತೆ 83 ಲಕ್ಷ ರೂ.ಮೌಲ್ಯದ ಚಿನ್ನಾಭರಣ ವಶ

Team Udayavani, Jun 26, 2019, 3:00 AM IST

ಬೆಂಗಳೂರು: ಬಹುಕೋಟಿ ಐಎಂಎ ವಂಚನೆ ಪ್ರಕರಣ ಸಂಬಂಧ ಮಂಗಳವಾರ ಮನ್ಸೂರ್‌ ಖಾನ್‌ಗೆ ಸೇರಿದ ತಿಲಕನಗರ ಮತ್ತು ಯಶವಂತಪುರದಲ್ಲಿರುವ ಐಎಂಎ ಗೋಲ್ಡ್‌ ಮಳಿಗೆಗಳಲ್ಲಿ ಪರಿಶೀಲನೆ ನಡೆಸಿದ ವಿಶೇಷ ತನಿಖಾ ತಂಡ(ಎಸ್‌ಐಟಿ) 83 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿಯ ವಸ್ತುಗಳನ್ನು ಜಪ್ತಿ ಮಾಡಿದೆ.

ಎಸ್‌ಐಟಿ ಎಸಿಪಿ ಬಾಲರಾಜ್‌ ನೇತೃತ್ವದ ಎರಡು ತಂಡಗಳ ಅಧಿಕಾರಿಗಳು ಬೆಳಗ್ಗೆ 9 ಗಂಟೆಯಿಂದ ರಾತ್ರಿ 9 ಗಂಟೆವರೆಗೆ ತಿಲಕ್‌ನಗರ ಮತ್ತು ಯಶವಂಪತಪುರದಲ್ಲಿರುವ ಐಎಂಎ ಗೋಲ್ಡ್‌ ಕಂಪನಿಯ ಕಚೇರಿಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದರು. ಈ ವೇಳೆ ತಿಲಕನಗರದ ಐಎಂಎ ಗೋಲ್ಡ್‌ನಲ್ಲಿ 41.60 ಲಕ್ಷ ರೂ. ಮೌಲ್ಯದ 1 ಕೆ.ಜಿ.300 ಗ್ರಾಂ ಚಿನ್ನದ ಆಭರಣಗಳು, 2.20 ಲಕ್ಷ ರೂ. ಮೌಲ್ಯದ 5.5ಕೆ.ಜಿ ತೂಕದ ಬೆಳ್ಳಿ ವಸ್ತುಗಳು, ಎರಡು ಸಾವಿರ ನಗದು ಪತ್ತೆಯಾಗಿವೆ.

ಯಶವಂತಪುರದಲ್ಲಿರುವ ಕಚೇರಿಯಲ್ಲಿ 31.04 ಲಕ್ಷ ರೂ. ಮೌಲ್ಯದ 970 ಗ್ರಾಂ ಚಿನ್ನದ ಆಭರಣಗಳು, 8.40 ಲಕ್ಷ ರೂ. ಮೌಲ್ಯದ 21 ಕೆ.ಜಿ. ಬೆಳ್ಳಿ ವಸ್ತುಗಳು ಸಿಕ್ಕಿದ್ದು, ಒಟ್ಟಾರೆ ಎರಡು ಕಡೆಗಳ ಪರಿಶೀಲನೆಯಲ್ಲಿ 83.26.000 ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿವೆ. ಅಷ್ಟೇ ಅಲ್ಲದೆ, ಕೆಲ ದಾಖಲೆಗಳು ದೊರಕಿವೆ ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಜೂ.24 ರಂದು ಸಿಕ್ಕಿದ್ದೇಷ್ಟು?: ಜೂನ್‌ 24ರಂದು ಶಿವಾಜಿನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿರುವ ಐಎಂಎ ಗೋಲ್ಡ್‌ ಹಾಗೂ ಪ್ರಧಾನ ಕಚೇರಿಗಳ ಪರಿಶೀಲನೆ ವೇಳೆ 11.34 ಕೋಟಿ ಮೌಲ್ಯದ 41 ಕೆ.ಜಿ 302 ಗ್ರಾಂ ತೂಕದ ಚಿನ್ನಾಭರಣ, 8.27 ಲಕ್ಷ ಮೌಲ್ಯದ 71 ಕೆ.ಜಿ 770 ಗ್ರಾಂ ತೂಕದ ಬೆಳ್ಳಿ ವಸ್ತುಗಳು, 5.60 ಲಕ್ಷ ರೂ ನಗದು ಹಾಗೂ 320 ಗ್ರಾಂ ತೂಕದ ಚಿನ್ನಾಭರಣ, 14.5 ಕ್ಯಾರೆಟ್‌ ವಜ್ರ, 60 ಕ್ಯಾರೆಟ್‌ ಹರಳುಗಳು, 470 ಗ್ರಾಂ ತೂಕದ ಬೆಳ್ಳಿಯ ವಸ್ತುಗಳು, 7.85 ಲಕ್ಷ ರೂ. ನಗದು, .32 ರಿವಾಲ್ವಾರ್‌, 58 ಗುಂಡುಗಳು ಸಿಕ್ಕಿವೆ. ಒಟ್ಟಾರೆ 11.72.72.000 ರೂ. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್‌ಐಟಿ ತಿಳಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಅಂಗನವಾಡಿ ದಾಖಲಾತಿ, ಮಕ್ಕಳ ಅಪೌಷ್ಠಿಕತೆಯ ನಿಖರ ಸಂಖ್ಯೆ, ಟಿ.ಟಿ ಚುಚ್ಚುಮದ್ದು ಸೇರಿ ವಿವಿಧ ಮಾಹಿತಿ ನೀಡಲು ಅನುಕೂಲವಾಗಲೆಂದು ಮಹಿಳಾ ಮತ್ತು ಮಕ್ಕಳ...

  • ಬೆಂಗಳೂರು: ಯೋಜನೆ ಇರುವುದು "ಡಬಲ್‌ ಡೆಕರ್‌'. ಆದರೆ, ಆಗುತ್ತಿರುವುದು ಟ್ರಿಪಲ್‌ ಡೆಕರ್‌! ಹೌದು, ಆರ್‌.ವಿ.ರಸ್ತೆ- ಬೊಮ್ಮಸಂದ್ರ ನಡುವೆ ರಸ್ತೆ ಕಂ ರೈಲು ಮಾರ್ಗ...

  • ಬೆಂಗಳೂರು: ಅಕ್ಟೋಬರ್‌ನಲ್ಲಿ ನಡೆಯುವ ನಾಡಹಬ್ಬ ಮೈಸೂರು ದಸರಾಕ್ಕೆ ದೇಶ-ವಿದೇಶಿಗರನ್ನು ಆಕರ್ಷಿಸಲು ಏಪ್ರಿಲ್‌ ತಿಂಗಳಿನಿಂದ ಸಿದ್ಧತೆ ಆರಂಭಿಸಲಾಗುವುದು ಎಂದು...

  • ಬೆಂಗಳೂರು: ನಗರದಲ್ಲಿ ವಾಸವಿರುವ ಮಂಗಳಮುಖೀಯರ ಶ್ರೇಯೋಭಿವೃದ್ಧಿ ಹಾಗೂ ಅವರ ಜೀವನಮಟ್ಟ ಸುಧಾರಿಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಪಾಲಿಕೆಯ ಬಜೆಟ್‌ನಲ್ಲಿ...

  • ಬೆಂಗಳೂರು: ಒತ್ತಡ ನಿವಾರಣೆಗಾಗಿ ಈಶಾನ್ಯ ಪೊಲೀಸರಿಗೆ ಮೂರುದಿನಗಳ ಕಾಲ "ಜುಂಬಾ' ನೃತ್ಯ ತರಬೇತಿ ನೀಡಿದ್ದು ಪೊಲೀಸ್‌ ಸಿಬ್ಬಂದಿ ಕುಣಿದು ಕುಪ್ಪಳಿಸಿರುವ ವಿಡಿಯೋ...

ಹೊಸ ಸೇರ್ಪಡೆ