ಠಾಣೆಗಳ ಅನೈರ್ಮಲ್ಯ: ಆಯುಕ್ತರು ಗರಂ

Team Udayavani, Sep 11, 2019, 3:05 AM IST

ಬೆಂಗಳೂರು: ಬನಶಂಕರಿ ಪೊಲೀಸ್‌ ಠಾಣೆಗೆ ಇತ್ತೀಚೆಗೆ ದಿಢೀರ್‌ ಭೇಟಿ ನೀಡಿದ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ರಾವ್‌, ಠಾಣೆಯಲ್ಲಿ ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ ಠಾಣಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಜತೆಗೆ, ನಗರದ ಎಲ್ಲ ಠಾಣೆಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ನಿರ್ದೇಶನ ನೀಡಿದರು.

ಇತ್ತೀಚೆಗೆ ಬನಶಂಕರಿಯಲ್ಲಿ ನಡೆದ ಪರಿಚಯಸ್ಥರೊಬ್ಬರ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಆಯುಕ್ತರಾದ ಭಾಸ್ಕರ್‌ ರಾವ್‌, ಪೊಲೀಸ್‌ ಠಾಣೆಗೆ ಭೇಟಿ ನೀಡಿದ್ದಾರೆ. ಈ ವೇಳೆ ಅರ್ಧ ಕಾಮಗಾರಿ ಆಗಿರುವ ಠಾಣೆಯ ಶೌಚಾಲಯ ಹಾಗೂ ಶುಚಿತ್ವ ಇಲ್ಲದಿರವುದು ಕಂಡು ಗರಂ ಆದರು. ಅಷ್ಟೇ ಅಲ್ಲದೆ, ಪೊಲೀಸ್‌ ಠಾಣೆ ಮನೆಯಿದ್ದಂತೆ, ಸ್ವಚ್ಛವಾಗಿಲ್ಲ ಎಂದರೆ ಏನರ್ಥ? ಮುಂದಿನ 15 ದಿನಗಳಲ್ಲಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸಿ.

ಸ್ವಚ್ಛತೆ ಕಾಪಾಡಿ ಎಂದು ಸೂಚನೆ ನೀಡಿದ್ದಾರೆ. ಆಯುಕ್ತರ ದಿಢೀರ್‌ ಭೇಟಿ ಕಂಡು ಠಾಣೆಯ ಸಿಬ್ಬಂದಿ ದಂಗಾಗಿದ್ದಾರೆ. ಕೆಲಹೊತ್ತು ಠಾಣೆಯಲ್ಲಿ ಕುಳಿತ ಆಯುಕ್ತರು ಠಾಣಾ ವ್ಯಾಪ್ತಿಯಲ್ಲಿನ ಅಪರಾಧ ಪ್ರಕರಣಗಳ ಅಂಕಿ- ಅಂಶ, ಬೀಟ್‌ ವ್ಯವಸ್ಥೆಯ ಕಾರ್ಯನಿರ್ವಹಣೆ. ಸಿಬ್ಬಂದಿಯ ಕರ್ತವ್ಯ ನಿರ್ವಹಣೆ ಸೇರಿದಂತೆ ಮತ್ತಿತರ ಮಾಹಿತಿ ಪಡೆದುಕೊಂಡಿದ್ದಾರೆ.

ಜತೆಗೆ, ಇತ್ತೀಚೆಗೆ ನಡೆಸಿದ್ದ ಎಟಿಎಂ ದರೋಡೆ ಕೇಸ್‌ನ ಬಗ್ಗೆ ಮಾಹಿತಿ ಪಡೆದು, ದುಷ್ಕರ್ಮಿಗಳ, ದರೋಡೆಕೋರರ ಕಡಿವಾಣಕ್ಕೆ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸಿ. ಸರಗಳ್ಳರ ಬಗ್ಗೆ ನಿಗಾವಹಿಸಿ ಎಂದು ಸೂಚನೆ ನೀಡಿದರು. ಈ ಕುರಿತು ಆಯುಕ್ತ ಭಾಸ್ಕರ್‌ರಾವ್‌ ಪತ್ರಿಕಾಗೋಷ್ಟಿಯಲ್ಲಿ ಮಂಗಳವಾರ ತಿಳಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಕೋವಿಡ್ 19 ಸೋಂಕಿತರಿಗೆ ರಾಜ್ಯವ್ಯಾಪಿ ಏಕರೂಪ ಚಿಕಿತ್ಸೆ ನೀಡಲು ಮತ್ತು ಅವರ ಆರೈಕೆಗೆ ಅನುಕೂಲ ಆಗುವಂತೆ ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು...

  • ಬೆಂಗಳೂರು: ಪಾಲಿಕೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ತರಕಾರಿ ಮಾರಾಟಕ್ಕೆ ಯಾವುದೇ ಪೂರ್ವಸಿದ್ಧತೆ ಮಾಡಿಕೊಳ್ಳದೆ ಅವಕಾಶ ನೀಡಿದ್ದರಿಂದ ನ್ಯಾಷನಲ್‌...

  • ಬೆಂಗಳೂರು: ಕೋವಿಡ್ 19 ಲಾಕ್‌ಡೌನ್‌ ವೇಳೆ ಪೊಲೀಸರು ತಮ್ಮ ಕರ್ತವ್ಯಪರತೆ ಮೆರೆದಿದ್ದಾರೆ. ಆದರೆ, ಅವರ ಸಮಸ್ಯೆಯನ್ನು ಕೇಳುವವರಾರು? ಉದಾಹರಣೆ ಇಲ್ಲಿದೆ. ನಗರದ ಆಸ್ಪತ್ರೆಗಳಲ್ಲಿ...

  • ಬೆಂಗಳೂರು: ಕೋವಿಡ್ 19 ನಿಯಂತ್ರಣಕ್ಕಾಗಿ ಕಾಂಗ್ರೆಸ್‌ ಶಾಸಕರು ತಲಾ ಕನಿಷ್ಠ 1 ಲಕ್ಷ ರೂ. ದೇಣಿಗೆ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌...

  • ಬೆಂಗಳೂರು: ಬೇಸಿಗೆ ಬಂದರೆ ಸಾಕು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಬೆವರುತ್ತಿದ್ದರು. ಆದರೆ, ಈ ಬಾರಿ ಒಂದಿಷ್ಟು ರಿಲಾಕ್ಸ್‌ ಮೂಡ್‌ನ‌ಲ್ಲಿದ್ದಾರೆ. ಇದಕ್ಕೆ...

ಹೊಸ ಸೇರ್ಪಡೆ