
ಕುಡಿತದ ಚಟ ಬಿಡಿಸಲು ಯತ್ನಿಸಿದಕ್ಕೆ ಪಾಲಕರಿಗೆ ಚೂರಿ ಹಾಕಿ, ಎ ಸಿನಿಮಾದ ಪೋಸ್ ಕೊಟ್ಟ ಆರೋಪಿ
Team Udayavani, Sep 10, 2022, 3:11 PM IST

ಬೆಂಗಳೂರು: ಕುಡಿತದ ಚಟ ಬಿಡಿಸಲು ರಿ-ಹ್ಯಾಬಿಲಿಟೇಷನ್‌ಗೆ ತನ್ನನ್ನು ಕಳುಹಿಸುತ್ತಾರೆ ಎಂದು ಆತಂಕಗೊಂಡ ಯುವಕ ಚೂರಿಯಿಂದ ಪಾಲಕರು ಹಾಗೂ ಸೋದರಮಾವನಿಗೆ ಇರಿದು, ಸ್ಥಳೀಯ 12 ವಾಹನಗಳ ಗಾಜು ಒಡೆದು ಆತಂಕ ಸೃಷ್ಟಿಸಿದ್ದ. ಇದೀಗ ಕೊನೆಗೂ ಆತನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸುಬೇದಪಾಳ್ಯದ ತೇಜಸ್ (24) ಬಂಧಿತ. ತೇಜಸ್ ನಿತ್ಯ ಮದ್ಯಪಾನ ಮಾಡಿ ಮನೆಗೆ ಬಂದು ಪಾಲಕರ ಜತೆ ಜಗಳ ಮಾಡುತ್ತಿದ್ದ. ಇದರಿಂದ ನೊಂದಿದ್ದ ಆತನ ಪಾಲಕರು ಹೇಗಾದರೂ ಮಾಡಿ ಮಗನಿಗೆ ಕುಡಿತದ ಚಟ ಬಿಡಿಸಬೇಕು ಎಂದು ರಿ ಹ್ಯಾಬಿಲಿಟೆಷನ್ ಸೆಂಟರ್‌ಗೆ ದಾಖಲಿಸಲು ನಿರ್ಧರಿಸಿದ್ದರು. ಗುರುವಾರ ರಾತ್ರಿ ರಿ-ಹ್ಯಾಬಿಲಿಟೇಶನ್ ಸೆಂಟರ್‌ನವರು ಇವರ ಮನೆಗೆ ಬಂದಾಗ ಈ ವಿಷಯ ತೇಜಸ್ ಗಮನಕ್ಕೆ ಬಂದಿತ್ತು.
ಆಕ್ರೋಶಗೊಂಡ ತೇಜಸ್, ಮನೆಯಲ್ಲಿದ್ದ ಚೂರಿಯಿಂದ ತಂದೆ, ತಾಯಿ ಹಾಗೂ ರಿ-ಹ್ಯಾಲಿಟೇಶನ್ ಸಿಬ್ಬಂದಿಯನ್ನು ಕರೆತಂದು ಸೋದರ ಮಾವನಿಗೆ ಇರಿದು ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ. ಇಷ್ಟಕ್ಕೆ ಸುಮ್ಮನಾಗದ ತೇಜಸ್, ಮನೆಸಮೀಪ ರಸ್ತೆ ಬದಿ ನಿಲುಗಡೆ ಮಾಡಿದ್ದ 12 ಕಾರುಗಳ ಗಾಜನ್ನು ಒಡೆದು ದುಷ್ಕೃತ್ಯ ಮೆರೆದಿದ್ದಾನೆ.
ಎ ಸಿನಿಮಾದಲ್ಲಿ ಉಪೇಂದ್ರ ರೀತಿ ಆರೋಪಿ ಪೋಸ್ : ಇದೇ ಸಂದರ್ಭದಲ್ಲಿ ಯಶವಂತಪುರದ ದೇವರಾಯಪಾಳ್ಯದಲ್ಲಿ ಗಣೇಶ ಮೂರ್ತಿಯ ವಿಸರ್ಜನೆ ಮೆರವಣಿಗೆ ಬರುತ್ತಿತ್ತು. ಗಣೇಶ ಮೂರ್ತಿ ಬಳಿ ತೆರಳಿ ಉಪೇಂದ್ರ ಅಭಿನಯದ ‘ಎ’ ಸಿನಿಮಾದ ದೃಶ್ಯದಂತೆ ಪೋಸ್ ಕೊಟ್ಟಿದ್ದ. ಗಣೇಶ ಮೂರ್ತಿ ಮೆರವಣಿಗೆಬಂದೋಬಸ್ತ್ ನಲ್ಲಿದ್ದ ಪೊಲೀಸರು ಆತನನ್ನು ವಶಕ್ಕೆ ಪಡೆದು ಯಶವಂತಪುರ ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆರೋಪಿ ತೇಜಸ್‌ನನ್ನು ವಿಚಾರಣೆ ನಡೆಸಿದಾಗ ಅಸಲಿ ಸಂಗತಿ ಬೆಳಕಿಗೆ ಬಂದಿದೆ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ : ಕುಮಾರಸ್ವಾಮಿ

ಡಿಕೆಶಿ, ಯುವತಿ ಸೇರಿ ಸಿಡಿ ಗ್ಯಾಂಗ್ ಬಂಧಿಸಲು ರಮೇಶ ಜಾರಕಿಹೊಳಿ ಒತ್ತಾಯ

ಗಾಂಧಿ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಮಾಡಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಹವಾಮಾನ ವೈಪರೀತ್ಯದಿಂದ ವಿಮಾನ ಹಾರಾಟ ರದ್ದು: ಸಿದ್ದರಾಮಯ್ಯ ಶ್ರೀನಗರ ಪ್ರವಾಸ ರದ್ದು

ಹೈದರಾಬಾದ್: ಖ್ಯಾತ ಕವಿ, ವಿಮರ್ಶಕ, ಕತೆಗಾರ ಕೆ.ವಿ.ತಿರುಮಲೇಶ್ ವಿಧಿವಶ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಖ್ಯಾತ ನಟ ಅರವಿಂದ ಬೋಳಾರ್

ಮೈಗ್ರೇನ್ ಎಂಬ ತಲೆಶೂಲೆ…ಇದರ ಲಕ್ಷಣಗಳೇನು? ಮೈಗ್ರೇನ್ಗೆ ಇದೆ ಮನೆ ಮದ್ದು

ದುಬೈಯಿಂದ ಆಕ್ಲೆಂಡ್ ಗೆ ಹೊರಟಿದ್ದ ಎಮಿರೇಟ್ಸ್ ವಿಮಾನ ಮತ್ತೆ ದುಬೈಗೆ ಬಂದಿಳಿಯಿತು!

ಪುಟಿನ್ ಗಿಂತ ಚೀನಾ ಅಧ್ಯಕ್ಷ ಅತ್ಯಂತ ಒರಟು, ಕ್ರೂರ ನಾಯಕ: ಮೈಕ್ ಪೊಂಪಿಯೊ

ಭಾರತ್ ಜೋಡೋ ಯಾತ್ರೆ ಎಲ್ಲಾ ಸಮಾಜ ವಿರೋಧಿ ಅಂಶಗಳನ್ನು ಒಟ್ಟುಗೂಡಿಸಿತು: ಬಿಜೆಪಿ