Udayavni Special

ಅಕ್ರಮ  ಸಂಬಂಧ: ಪತ್ನಿಯ ಪ್ರಿಯಕನ ಕೊಲೆಗೈದ ಪತಿ

Team Udayavani, Mar 25, 2021, 11:58 PM IST

Untitled-1

ಸಾಂದರ್ಭಿಕ ಚಿತ್ರ

ಬೆಂಗಳೂರು:  ಪತ್ನಿ ಜತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಪತಿಯೇ ಭೀಕರವಾಗಿ ಹತ್ಯೆಗೈದಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ಮುಂಜಾನೆ ನಡೆದಿದೆ.

ಚಿಕ್ಕಮಗಳೂರು ತರೀಕೆರೆ ತಾಲೂಕಿನ ಹೊಸಹಳ್ಳಿ ತಾಂಡ ನಿವಾಸಿ ಶಿವಕುಮಾರ್‌ (26) ಹತ್ಯೆಯಾದ ವ್ಯಕ್ತಿ. ಈ ಸಂಬಂಧ ನೆಲಮಂಗಲದ ನಿವಾಸಿ ಭರತ್‌ ಕುಮಾರ್‌ (31) ಬಂಧಿತ.

ಎಂಟು ವರ್ಷಗಳ ಹಿಂದೆ ಆರೋಪಿ ಭರತ್‌ ಮತ್ತು ವಿನುತಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಾಗ ಪರಿಚಯವಾಗಿದ್ದು, ಇಬ್ಬರು ಪ್ರೀತಿಸಿ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ಮೂರು ವರ್ಷಗಳ ಹಿಂದೆ ವಿನುತಾಳ ಊರಿನವನಾದ ಶಿವಕುಮಾರ್‌ ಕೆಲಸ ಹುಡುಕಿಕೊಂಡು ಬೆಂಗಳೂರಿಗೆ ಬಂದಿದ್ದ. ಆಗ 2-3 ದಿನ ವಿನುತಾ ಮನೆಯಲ್ಲೇ ಉಳಿದುಕೊಂಡಿದ್ದ. ಈ ವೇಳೆ ವಿನುತಾ ಜತೆ ಶಿವಕುಮಾರ್‌ ಹೆಚ್ಚು ಸಲುಗೆಯಿಂದ ಇದ್ದ. ಅದನ್ನು ಕಂಡ ಭರತ್‌ ಈತನೊಂದಿಗೆ ಜಗಳ ಮಾಡಿದ್ದ. ಅದರಿಂದ ಆಕ್ರೋಶಗೊಂಡ ಶಿವಕುಮಾರ್‌ ವಿನುತಾ ಮನೆಯಿಂದ ಹೊರ ಹೋಗಿದ್ದ. ಈ ಘಟನೆಯಿಂದ ನೊಂದ ವಿನುತಾ ಕೂಡ ಪತಿಯೊಂದಿಗೆ ಜಗಳ ಮಾಡಿಕೊಂಡು ಆಂದ್ರಹಳ್ಳಿಯ ಬಾಡಿಗೆ ಮನೆಯಲ್ಲಿ ಪ್ರತ್ಯೇಕವಾಗಿ ವಾಸವಾಗಿದ್ದಳು. ಬಳಿಕವೂ ಶಿವಕುಮಾರ್‌ ಆಗಾಗ ವಿನುತಾ ಮನೆಗೆ ಬಂದು ಹೋಗುತ್ತಿದ್ದ. ಬುಧವಾರ ರಾತ್ರಿ ಶಿವಕುಮಾರ್‌ ಕರೆ ಮಾಡಿ ಮನೆಗೆ ಬರುತ್ತೇನೆ ಎಂದು ವಿನುತಾಗೆ ತಿಳಿಸಿದ್ದ. ಹೀಗಾಗಿ ವಿನುತಾ  ಮನೆಯ ಬಾಗಿಲು ಚೀಲಕ ಹಾಕಿಕೊಂಡು  ಚಿಕನ್‌ ತರಲು ಹೋಗಿದ್ದಳು. ಅದೇ ವೇಳೆ ಸ್ನೇಹಿತ ಅಭಿ ಎಂಬಾತನನ್ನು ಅಂದ್ರಹಳ್ಳಿಗೆ ಬೈಕ್‌ನಲ್ಲಿ ಡ್ರಾಪ್‌ ಮಾಡಲು ಬಂದಿದ್ದ ಭರತ್‌, ಪತ್ನಿ ಚಿಕನ್‌ ಅಂಗಡಿಯಲ್ಲಿ ಇರುವುದನ್ನು ಗಮನಿಸಿದ್ದಾನೆ  ಎಂದು ಪೊಲೀಸರು ಹೇಳಿದರು.

ಮಂಚದಡಿ ಅಡಗಿಕುಳಿತ ಪತಿ:

ಪತ್ನಿ ವಿನುತಾಗೆ ಗೊತ್ತಾಗದಂತೆ ಆಕೆಯ ಮನೆಗೆ ಹೋಗಿ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ. ಶಿವಕುಮಾರ್‌ ರಾತ್ರಿ 10.30ಕ್ಕೆ ವಿನುತಾ ಮನೆಗೆ ಬಂದಿದ್ದು, ಊಟ ಮುಗಿಸಿ ಇಬ್ಬರೂ ಜತೆಯಾಗಿ ಮಲಗಿದ್ದರು. ಈ ನಡುವೆ ಮುಂಜಾನೆ 4 ಗಂಟಗೆ ವಿನುತಾ ಶೌಚಗೃಹಕ್ಕೆ ಹೋಗಿದ್ದಾಳೆ. ಈ ವೇಳೆ ಮಂಚದಡಿಯಿಂದ ಹೊರಬಂದ ಭರತ್‌, ಪತ್ನಿಯನ್ನು ಶೌಚಗೃಹದ ಚಿಲಕ ಹಾಕಿ ಕೂಡಿಹಾಕಿದ್ದಾನೆ. ಬಳಿಕ ಶಿವಕುಮಾರ್‌ನ ಕತ್ತು ಹಿಸುಕಿ ತನ್ನ ಬಳಿ ಇಟ್ಟುಕೊಂಡಿದ್ದ ಚಾಕುಯಿಂದ ಆತನ ಹೊಟ್ಟೆಗೆ ಹಲವು ಬಾರಿ ಇರಿದು ಹತ್ಯೆ ಮಾಡಿದ್ದಾನೆ. ನಂತರ ಆತನೇ ಶೌಚಗೃಹದ ಬಾಗಿಲು ತೆರೆದಿದ್ದ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಿವಕುಮಾರ್‌ನನ್ನು ಕಂಡು ಆತಂಕಗೊಂಡ ವಿನುತಾ ಜೋರಾಗಿ ಕೂಗಿಕೊಂಡಿದ್ದಾಳೆ. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಬ್ಯಾಡರಹಳ್ಳಿ ಪೊಲೀಸರು ಆರೋಪಿ ಭರತ್‌ನನ್ನು ಬಂಧಿಸಿದ್ದಾರೆ.

ತಿಂಗಳ ಹಿಂದೆಯೇ ಸಂಚು: ಪತ್ನಿ ಮತ್ತು ಆಕೆಯ ಪ್ರಿಯಕರನ ಮೇಲೆ ಆಕ್ರೋಶಗೊಂಡಿದ್ದ ಭರತ್‌, ಒಂದು ತಿಂಗಳ ಹಿಂದೆಯೇ ಹತ್ಯೆಗೆ ಸಂಚು ರೂಪಿಸಿದ್ದ. ಅದಕ್ಕಾಗಿ ಆನ್‌ಲೈನ್‌ ಮೂಲಕ ಸ್ಪ್ರಿಂಗ್‌ ಚಾಕುವನ್ನು ಖರೀದಿಸಿದ್ದಾನೆ. ಕಾಕತಾಳೀಯ ಎಂಬಂತೆ ಅಂದ್ರಹಳ್ಳಿಗೆ ಬಂದ ಭರತ್‌ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ಮಂಗಳೂರು: ಸೈನಿಕನ ಸೋಗಿನಲ್ಲಿ ಕುಟುಂಬದಿಂದ 2.23 ಲಕ್ಷ ರೂ. ಪಡೆದು ವಂಚನೆ

ಮಂಗಳೂರು: ಸೈನಿಕನ ಸೋಗಿನಲ್ಲಿ ಕುಟುಂಬದಿಂದ 2.23 ಲಕ್ಷ ರೂ. ಪಡೆದು ವಂಚನೆ

nothing ear 1

ಆಡಿಯೋ ಪ್ರಿಯರು ಕಾತುರದಿಂದ ಕಾಯುತ್ತಿದ್ದ ನಥಿಂಗ್‍ ಇಯರ್ (1) ಬಿಡುಗಡೆ: ಇದರ ವಿಶೇಷವೇನು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್

ನಾನು ಸಂಪುಟ ಸೇರಲ್ಲ, ಪಕ್ಷ ಸಂಘಟನೆಗೆ ಒತ್ತು ನೀಡುತ್ತೇನೆ : ಜಗದೀಶ್ ಶೆಟ್ಟರ್

ommai

ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಗಣ್ಯರಿಂದ ಶುಭಾಶಯ

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ಮೊಬೈಲ್‌ನಲ್ಲಿ ಕೈದಿಗಳಿಂದ ಕಲಾಪ ವೀಕ್ಷಣೆ: ವಿವರಣೆ ಕೇಳಿದ ಹೈಕೋರ್ಟ್‌

ghtryrtyr

ಬೊಮ್ಮಾಯಿ ಸರ್ಕಾರದಲ್ಲಿ ಮೂವರು ಉಪಮುಖ್ಯಮಂತ್ರಿಗಳು ; ಯಾರಿಗೆ ಒಲಿದಿದೆ ಡಿಸಿಎಂ ಪಟ್ಟ ?

hrtyrtyrtr

ಸರ್ಕಾರ ರಚನೆಗೆ ಹಕ್ಕು ಮಂಡಿಸಿದ ಬೊಮ್ಮಾಯಿ : ನಾಳೆ ಬೆಳಗ್ಗೆ 11 ಗಂಟೆಗೆ ಪ್ರಮಾಣ ವಚನ

MUST WATCH

udayavani youtube

ಉದುರಿದ ಹೂಗಳಲ್ಲಿ ಅಕ್ಷರ ,123 ಬರಿಸುತ್ತಿದ್ದೆ!

udayavani youtube

ಶುಭಾಶಯಗಳು ಮಾಮ : ಬಸವರಾಜ್ ಬೊಮ್ಮಾಯಿಗೆ ಕಿಚ್ಚ ಸುದೀಪ್ ಹಾರೈಕೆ

udayavani youtube

ಹಳ್ಳಿಯ ಹೋಟೆಲ್ ಉದ್ಯಮದಲ್ಲಿ ತೃಪ್ತಿ ಕಂಡುಕೊಂಡ IT ಉದ್ಯೋಗಿಗಳು!

udayavani youtube

ಸಿಎಂ ಪಟ್ಟ ಅಲಂಕರಿಸಿದ ಬೊಮ್ಮಾಯಿ: ಕುಟುಂಬ ಸದಸ್ಯರಿಂದ ಸಂಭ್ರಮ

udayavani youtube

ಧೈರ್ಯದಿಂದ ಕೋವಿಡ್ ಲಸಿಕೆ ಪಡೆಯಿರಿ : ಗರ್ಭಿಣಿಯರಿಗೆ ನಟಿ ಚೈತ್ರಾ ರೈ ಸಲಹೆ

ಹೊಸ ಸೇರ್ಪಡೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಹಾಕಿಯಲ್ಲಿ ಅರ್ಜೆಂಟೀನಾ ಸೋಲಿನ ರುಚಿ ತೋರಿಸಿದ ಭಾರತ ತಂಡ ಕ್ವಾರ್ಟರ್ ಫೈನಲ್ ಗೆ ಲಗ್ಗೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಬ್ಯಾಕ್‌ ಟು ಬ್ಯಾಕ್‌ ಧನಂಜಯ್‌ ಸಿನ್ಮಾ! ಈ ವರ್ಷ ಎಂಟಕ್ಕೂ ಹೆಚ್ಚು ಚಿತ್ರ ಬಿಡುಗಡೆ ಸಾಧ್ಯತೆ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಹೂಡಿಕೆದಾರರಿಗೆ ವಿಮಾ ರಕ್ಷಣೆ; 90 ದಿನದಲ್ಲಿ ಠೇವಣಿದಾರರಿಗೆ ಹಣ ವಾಪಸ್‌ ನಿಶ್ಚಿತ

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ಸಂಬಳ, ಪಿಂಚಣಿ, ಇಎಂಐ ಪಾವತಿ ನಿಯಮಗಳಲ್ಲಿ ಬದಲಾವಣೆ 

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

ನದಿಗೆ ಬಿದ್ದ ಬಾಲಕಿಯ ರಕ್ಷಣೆಗೆ ಹೋದ ಅತ್ತೆಯೂ ನೀರುಪಾಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.