90 ಲಕ್ಷ ದೋಚಿದ ಕದೀಮರ ಬಂಧನ


Team Udayavani, Jun 9, 2021, 9:30 AM IST

90 ಲಕ್ಷ ದೋಚಿದ ಕದೀಮರ ಬಂಧನ

ಬೆಂಗಳೂರು: ಬೀಗ ಹಾಕಿದ ಮನೆಯನ್ನು ನಕಲಿ ಕೀ ಬಳಸಿ ಮನೆಯಲ್ಲಿದ್ದ 90 ಲಕ್ಷ ರೂ. ಕಳ್ಳತನ ಮಾಡಿ ಪರಾರಿಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಇಬ್ಬರು ಆರೋಪಿಗಳು ಕೇವಲ 1,600 ರೂ. ಖರ್ಚು ಮಾಡಿ ಬಾಗಲಗುಂಟೆ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ.

ಪಶ್ಚಿಮ ಬಂಗಾಳ ಮೂಲದ ಶುಭಂಕಲ್‌ ಶಿಲ್ಲು(30) ಹಾಗೂ ಸಂಜು ಸಹಾ (28) ಬಂಧಿತರು. ಅವರಿಂದ ಲಕ್ಷಾಂತರ ರೂ. ಜಪ್ತಿ ಮಾಡಲಾಗಿದೆ. ಬಾಗಲಗುಂಟೆಯ ಎಂಎಚ್‌ಆರ್‌ ಬಡಾವಣೆ ನಿವಾಸಿ ಈರಪ್ಪ ಎಂಬವರು ನೀಡಿದ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಈರಪ್ಪ ಅವರು ಮನೆಯ ನವೀಕರಣ ಹಾಗೂ ಮೊಮ್ಮಗನ ಎಂಬಿಬಿಎಸ್‌ ವ್ಯಾಸಂಗಕ್ಕಾಗಿ 90 ಲಕ್ಷ ರೂ. ಅನ್ನು ಕೂಡಿಟ್ಟಿದ್ದರು. ಅದೇ ವೇಳೆ ಲಾಕ್‌ ಡೌನ್‌ ಜಾರಿಯಾಗಿದ್ದರಿಂದ ಮೇ 23 ರಂದು ಮನೆಗೆ ಬೀಗ ಹಾಕಿ ಚಿಂತಾಮಣಿಯಲ್ಲಿರುವ ಮಗನ ಮನೆಗೆ ಹೋಗಿದ್ದರು.ಇದೇ ವೇಳೆ ಆರೋಪಿಗಳು ಚಿಂದಿ ಆಯುವ ನೆಪದಲ್ಲಿ ಬೀಗ ಹಾಕಿದ ಮನೆಗಳನ್ನು ಗುರುತಿಸಿಕೊಳ್ಳುತ್ತಿದ್ದರು. ಬಳಿಕ ರಾತ್ರಿ ವೇಳೆನಕಲಿ ಕೀ ಬಳಸಿ ಅಥವಾ ಬಾಗಿಲು ಮುರಿದು ಮನೆಯಲ್ಲಿ ಕಳವು ಮಾಡುತ್ತಿದ್ದರು.

ಈರಪ್ಪ ಅವರ ಮನೆ ಬೀಗ ಹಾಕಿರುವುದು ಮತ್ತು ಅವರ ಮನೆ ಮುಂದೆ ಸಿಸಿ ಕ್ಯಾಮೆರಾ ಇಲ್ಲದಿರುವುದನ್ನು ಗಮನಿಸಿದ ಆರೋಪಿಗಳು ನಕಲಿ ಕೀ ಬಳಸಿ ಮನೆಗೆ ನುಗ್ಗಿದ್ದಾರೆ. ಬಳಿಕ ಮನೆಯ ಬೀರುವಿನಲ್ಲಿದ್ದ 90 ಲಕ್ಷ ರೂ. ಕದ್ದು ಪರಾರಿಯಾಗಿದ್ದರು. ಈ ಸಂಬಂಧ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಈರಪ್ಪ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಆಂಧ್ರ ಪೊಲೀಸರಿಂದ ಬಂಧನ  : ಲಾಕ್‌ಡೌನ್‌ ವೇಳೆ ಕದ್ದ ಹಣದ ಸಮೇತ ಪಶ್ಚಿಮ ಬಂಗಾಳಕ್ಕೆ ಹೋಗಲು ಸಿದ್ಧತೆ ನಡೆಸಿದ್ದ ಆರೋಪಿಗಳು, ಬಾಗಲಗುಂಟೆಯಿಂದ ಕೆ.ಆರ್‌.ಪುರಂಗೆ ಗೂಡ್ಸ್‌ ವಾಹನಲ್ಲಿ ಬಂದಿದ್ದಾರೆ. ಬಳಿಕ ಪಶ್ಚಿಮ ಬಂಗಾಳಕ್ಕೆ ತೆರಳಲು ಕಾರೊಂದನ್ನು 40 ಸಾವಿರ ರೂ.ಗೆ ಬಾಡಿಗೆ ಪಡೆದು ಮೇ 3ರಂದು ಬೆಂಗಳೂರಿನಿಂದ ಹೊರಟಿದ್ದಾರೆ. ಮಾರ್ಗ ಮಧ್ಯೆ ಚಿತ್ತೂರಿನ ಪಲಂನೂರು ಬಳಿ ಪೊಲೀಸರು ಕಾರನ್ನು ತಪಾಸಣೆ ನಡೆಸಿದಾಗ ಲಕ್ಷಾಂತರ ರೂ. ಸಿಕ್ಕಿದೆ. ನಂತರ ಪೊಲೀಸರ ವಿಚಾರಣೆಯಲ್ಲಿ ಬೆಂಗಳೂರಲ್ಲಿ ಕಳ್ಳತನ ಮಾಡಿರುವ ಬಗ್ಗೆ ಬಾಯ್ಬಿಟ್ಟಿದ್ದಾರೆ. ಈ ಮಾಹಿತಿ ಮೇರೆಗೆ ಬಾಗಲಗುಂಟೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಬೆಳಕಿಗಬಂದಿದೆ.

1,600 ಖರ್ಚು: ಕಳವು ಮಾಡಿದ 90 ಲಕ್ಷ ರೂ. ಪೈಕಿ ಆರೋಪಿಗಳು ತಮ್ಮ ವೈಯಕ್ತಿಕ ಖರ್ಚು ಎಂದು ಕೇವಲ 1600 ರೂ. ವ್ಯಯಿಸಿದ್ದಾರೆ. ಇನ್ನುಳಿದ ಹಣವನ್ನು ತಮ್ಮೊಂದಿಗೆ ಇಟ್ಟುಕೊಂಡಿದ್ದರು. ಇದೀಗ ಅಷ್ಟು ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.

ಟಾಪ್ ನ್ಯೂಸ್

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

2024ರಲ್ಲೂ ಕಮಲಾ ನನ್ನ ಪ್ರತಿಸ್ಪರ್ಧಿ: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಘೋಷಣೆ

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.

ಒಬಿಸಿ ಕೋಟಾ ಎತ್ತಿಹಿಡಿದ ಸು.ಕೋ.ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

ರಾಜ್ಯಕ್ಕೆ ಶುಭ ಸುದ್ದಿ : 1200ಕೋ.ರೂ. ವೆಚ್ಚದಲ್ಲಿ ಶಿರಾಡಿ ಘಾಟ್ ರಸ್ತೆ ಮೇಲ್ದರ್ಜೆಗೆ

Nalin-kumar

ಬಿಬಿಎಂಪಿ ಚುನಾವಣೆಗೆ ಸಿದ್ಧತೆ ಆರಂಭಿಸಿದ ಬಿಜೆಪಿ: ನಳಿನ್ ಕಟೀಲ್ ನೇತೃತ್ವದಲ್ಲಿ ಸಭೆ

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

ಲಸಿಕೆ ಪಡೆಯಬೇಕೇ? ಹಾಗಿದ್ರೆ ಪರೀಕ್ಷೆ ಮಾಡಿಸಿ…! “ದೂರು ನೀಡಿದ್ರೆ ಕ್ರಮ’

jcb

ರಸ್ತೆ ಬದಿಯಲ್ಲಿ ನಿಲ್ಲಿಸಿದ ಜೆಸಿಬಿಯನ್ನೇ ಕದ್ದೊಯ್ದ ಖದೀಮರು : ಪೊಲೀಸರಿಂದ ಶೋಧಕಾರ್ಯ

ರೌಡಿಯನ್ನು ಬಿಡಿಸಲು ಬೇಕಾದ ಹಣಕ್ಕಾಗಿ ಗಾಂಜಾ ಮಾರಾಟ ಮಾಡಲು ಹೋದ ಸಹಚರರೂ ಕೂಡ ಅಂದರ್

ತನ್ನ ಸಹಚರನನ್ನು ಜೈಲಿನಿಂದ ಬಿಡಿಸಲು ಹೋಗಿ ತಾವೇ ಪೊಲೀಸರ ಖೆಡ್ಡಾಕ್ಕೆ ಬಿದ್ದರು

MUST WATCH

udayavani youtube

ನಿಯಮ ಉಲ್ಲಂಘಿಸಿದ ಬಿಜೆಪಿ ವಿರುದ್ಧವೂ ಪ್ರಕರಣ ದಾಖಲಾಗಬೇಕು: ಡಿಕೆಶಿ ಎಚ್ಚರಿಕೆ

udayavani youtube

ಆಕರ್ಷಕ ಕುರ್ತಿ(1000 – 1500 Rs. Only!!)| Umbrella Kurthis

udayavani youtube

ದಾಂಡೇಲಿಯ ಬೈಲುಪಾರಿನಲ್ಲಿ ವಿದ್ಯುತ್ ತಂತಿಯ ಮೇಲಿಂದ ಬಿದ್ದು ಗಾಯ ಮಾಡಿಕೊಂಡ ಕೋತಿ

udayavani youtube

ವಾಕಿಂಗ್‌ ವಿಚಾರಕ್ಕೆ ಪ್ರಾಂಶುಪಾಲ-ಪ್ರಾಧ್ಯಾಪಕ ಫೈಟಿಂಗ್‌-ವಿಡಿಯೋ ವೈರಲ್‌

udayavani youtube

ನಾಳೆ ರಾಜ್ಯದ ಕರ್ಫ್ಯೂ ಭವಿಷ್ಯ ನಿರ್ಧಾರ : ಇಕ್ಕಟ್ಟಿಗೆ ಸಿಲುಕಿದ ಸಿಎಂ

ಹೊಸ ಸೇರ್ಪಡೆ

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಮೂಡಂಬೈಲು ಶಾಲೆಗೆ ವಿಪ್ರೋ ಅರ್ತಿಯನ್‌ ಅವಾರ್ಡ್‌

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ಕೋವಿಡ್ ಗಿಂತ ಹೆಚ್ಚು ಬಾಧಿಸುತ್ತಿದೆ ಇನ್ಫುಯೆನ್ಸಾ ಫ್ಲೂ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ  2 ವರ್ಷ:ಆರೋಪಿಯ ವಿಚಾರಣೆ ಬಹುತೇಕ ಪೂರ್ಣ

ವಿಮಾನ ನಿಲ್ದಾಣ ಬಾಂಬ್‌ ಪ್ರಕರಣಕ್ಕೆ 2 ವರ್ಷ !

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹ ಬಲ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

ಲಸಿಕೆ ವಿತರಣೆಯಲ್ಲಿ ರಾಜ್ಯಕ್ಕೆ ಅಗ್ರ ಸ್ಥಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.