Udayavni Special

ಕನ್ನಡ ಪ್ರಾಧಿಕಾರದ ಪುಸ್ತಕಗಳಿಗೆ ಹೆಚ್ಚಿದ ಬೇಡಿಕೆ


Team Udayavani, Dec 12, 2018, 12:33 PM IST

kannaada.jpg

ಬೆಂಗಳೂರು: ಪುಸ್ತಕ ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ನಡುವೆ ನಗರದಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಸೇರಿದಂತೆ ಅಕಾಡೆಮಿಗಳು ಆರಂಭಿಸಿದ ರಿಯಾಯ್ತಿ ದರದ ಮಾರಾಟದಲ್ಲಿ ಪ್ರಾಧಿಕಾರದ ಪುಸ್ತಕಗಳ ಮಾರಾಟ ಭರ್ಜರಿಯಾಗಿ ನಡೆದಿದೆ.

ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿಯಲ್ಲಿ ಬರುವ ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರಗಳು ತಾವು ಪ್ರಕಟಿಸಿದ ಹಲವು ಪುಸ್ತಕಗಳನ್ನು ಶೇ. 50ರ ರಿಯಾಯ್ತಿ ದರದಲ್ಲಿ ಮಾರಾಟ ಮಾಡಿದ್ದು, ಸುಮಾರು 5 ಲಕ್ಷ ರೂ. ವಹಿವಾಟು ನಡೆದಿದೆ.

ವೈದ್ಯಕೀಯ ಕೃತಿಗಳಿಗೆ ಡಿಮ್ಯಾಂಡ್‌: ನ‌ಗರದ ರವೀಂದ್ರ ಕಲಾಕ್ಷೇತ್ರದಲ್ಲಿರುವ ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ರಿಯಾಯ್ತಿ ಮಾರಾಟ ನಡೆದಿದ್ದು ಆರೋಗ್ಯ ಸಂಬಂಧಿಸಿದ ಹಲವು ಮಾಲಿಕೆಗಳು ಮಾರಾಟವಾಗಿವೆ. ಇದರ ಜತೆಗೆ ಪ್ರೊ.ಎಸ್‌.ಜಿ.ಸಿದ್ಧಲಿಂಗಯ್ಯ ಅವರ “ಸಾಲು ದೀಪ’, ಬರಗೂರು ರಾಮಚಂದ್ರಪ್ಪ ಅವರ “ಕನ್ನಡ ಸಾಹಿತ್ಯ ಸಂಗಾತಿ’,

ಚಂದ್ರಶೇಖರ ಕಂಬಾರರ “ನೆಲಸಂಪಿಗೆ ನಾಟಕ ಸಂಪುಟ’, ಡಾ.ಪಿ.ವಿ.ನಾರಾಯಣ ಅವರ “ಪಂಪ ಭಾರತ’, ಲೇಖಕಿ ಡಾ.ಕುಸುಮ ಸೊರಬ ಅವರ “ಮೂಕ ಸಹ್ಯಾದ್ರಿಗೆ ಮಾತು ಕೊಟ್ಟವಳು’ ಸೇರಿದಂತೆ ಹಲವು ಕೃತಿಗಳು ಖರೀದಿಯಾಗಿವೆ. ವಿಮರ್ಶೆ ಸೇರಿದಂತೆ ವಿವಿಧ ಲೇಖಕರ ಸುಮಾರು 6,646 ಕೃತಿಗಳ ಮಾರಾಟವಾಗಿವೆ. 

ಆನ್‌ಲೈನ್‌ನಲ್ಲೂ ಮಾರಾಟ: ಮತ್ತೂಂದು ವಿಶೇಷ ಅಂದರೆ ಕನ್ನಡ ಪುಸ್ತಕ ಪ್ರಾಧಿಕಾರದ ಆನ್‌ಲೈನಲ್ಲೂ ಓದುಗರ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧಿಕಾರದ ಪುಸ್ತಕಗಳನ್ನು ಖರೀದಿ ಮಾಡಿದ್ದಾರೆ. ವಿವಿಧ ಲೇಖಕರ ಸುಮಾರು 764 ಕೃತಿಗಳು ಪ್ರಾಧಿಕಾರದ ಆನ್‌ಲೈನ್‌ನಲ್ಲಿ ಮಾರಾಟವಾಗಿದ್ದು 55,261 ವಹಿವಾಟು ನಡೆದಿದೆ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಸಿರಿಗನ್ನಡ ಪುಸ್ತಕ ಮಳಿಗೆಯಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದ್ದು ಸುಮಾರು 2 ಲಕ್ಷದ 48 ಸಾವಿರ ರೂ. ವಹಿವಾಟು ನಡೆಸಿದೆ. ಲೇಖಕ ಪ್ರಧಾನ ಗುರುದತ್ತ ಅವರ “ನಾಗರಿಕತೆಗಳು’ ಡಾ.ಸಿ.ಚಂದ್ರಪ್ಪ ಅವರ ‘ಪೆರಿಯಾರ್‌ ಚಿಂತನೆ’ ಕೃತಿಗಳು ಸೇರಿದಂತೆ ಹಲವು ಕೃತಿಗಳು ಸೇಲ್‌ ಆಗಿವೆ ಎಂದರು.

 ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿಸಿರುವ ಕೃತಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಯಾಗಿದ್ದು 1 ಲಕ್ಷದ 4 ಸಾವಿರ ವಹಿವಾಟು ನಡೆದಿದೆ. ಜತೆಗೆ ಕನ್ನಡ ಸಾಹಿತ್ಯ ಅಕಾಡೆಮಿ 60 ಸಾವಿರ ಪುಸ್ತಕಗಳು ಮಾರಾಟವಾಗಿವೆ.

ಊರು ಕೇರಿಗೆ ಬಾರಿ ಬೇಡಿಕೆ: ರಿಯಾಯ್ತಿ ದರದ ಪುಸ್ತಕ ಮಾರಾಟದಲ್ಲಿ ಕವಿ ಸಿದ್ಧಲಿಂಗಯ್ಯ ಅವರ ಆತ್ಮಕಥನ “ಊರು ಕೇರಿ’ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿದೆ. ಈ ಕೃತಿಯ ಸುಮಾರು ನೂರು ಪುಸ್ತಕಗಳು ಮಾರಾಟವಾಗಿವೆ. ಜತೆಗೆ ನಟರಾಜ ಹುಳಿಯಾರ್‌ ಮತ್ತು ಕಾಳೇಗೌಡ ನಾಗರವ ಸಂಪಾದಕತ್ವದ “ಲೋಹಿಯಾ ಚಿಂತನೆಗಳು’, ಜಿ.ಪಿ.ರಾಜರತ್ನಂ ಅವರ “ಮಕ್ಕಳ ಕತೆಗಳು’,” ವಿಶ್ವ ಸಮ್ಮೇಳನ ಪುಸ್ತಕ’, ಸಿದ್ದಯ್ಯ ಪುರಾಣಿಕ ಅವರ “ಶರಣ ಚರಿತಾಮೃತ’ ಕೃತಿಗಳಿಗೆ ಬೇಡಿಕೆ ಇದೆ ಎಂದು ಮಾರಾಟಗಾರರು ತಿಳಿಸಿದ್ದಾರೆ.

ಓದುಗರ ಬಳಿಗೆ ಪುಸ್ತಕಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ ಹಲವು ಯೋಜನೆಗಳನ್ನು ರೂಪಿಸಿದ್ದು, ರಿಯಾಯ್ತಿದರ ಮಾರಾಟ ಪ್ರಕ್ರಿಯೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧಿಕಾರದ ಪುಸ್ತಕಗಳು ಮಾರಾಟವಾಗಿರುವುದು ಖುಷಿ ತಂದಿದೆ.
-ವಸುಂಧರಾ ಭೂಪತಿ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ.

ನನ್ನ “ಊರುಕೇರಿ’ ಕೃತಿಯನ್ನು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕೊಳ್ಳುತ್ತಿದ್ದಾರೆ. ಈಗಾಗಲೇ ಮೂರು ಭಾಗಗಳನ್ನು ಹೊರತಂದಿದ್ದು, 4ನೇ ಭಾಗ ಬರೆಯಲು ಇದು ಪ್ರೇರಣೆ ನೀಡಿದೆ. ಶೀಘ್ರದಲ್ಲೇ ನಾಲ್ಕನೇ ಭಾಗ ಹೊರ ಬರಲಿದೆ.
-ಸಿದ್ದಲಿಂಗಯ್ಯ, ಕವಿ.

* ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ಕೇರಳ, ತಮಿಳುನಾಡಿನಲ್ಲಿ ಇಂದಿನಿಂದ ಭಾರೀ ಮಳೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ವಲಸಿಗರ ಹತ್ಯೆಗೆ ಕಾರ್ಯಸೂಚಿ; ಕಾಶ್ಮೀರದ ಉಗ್ರರಿಗೆ ಐಎಸ್‌ಐಯಿಂದ 22 ಅಂಶಗಳ ನೀಲನಕ್ಷೆ

ರಾಜಕೀಯದಲ್ಲಿ ನಶೆ ಗಲಾಟೆ!

ರಾಜಕೀಯದಲ್ಲಿ ನಶೆ ಗಲಾಟೆ!

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಬುದ್ಧನ ನಿರ್ವಾಣ ಸ್ಥಳದಲ್ಲಿ ಮೋದಿಯಿಂದ ಅಂ.ರಾ. ವಿಮಾನ ನಿಲ್ದಾಣ ಉದ್ಘಾಟನೆ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಮಧ್ಯಾಂತರ-ನಿಗದಿತ ಚುನಾವಣೆಯ ಲಾಭ ನಷ್ಟದ ಲೆಕ್ಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಇಂದು ಕೊನೆಯ ಅಭ್ಯಾಸ ಪಂದ್ಯ: ಭಾರತ-ಆಸ್ಟ್ರೇಲಿಯ ರಣತಂತ್ರ ಕೌತುಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. Death of Geeta no more

ಖ್ಯಾತ ಪ್ರಸೂತಿ ತಜ್ಞೆ ಡಾ. ಗೀತಾ ಮುರಳೀಧರ ನಿಧನ

vhfghftght

ಕೋವಿಡ್: ರಾಜ್ಯದಲ್ಲಿಂದು 310 ಹೊಸ ಪ್ರಕರಣ ಪತ್ತೆ | 347 ಸೋಂಕಿತರು ಗುಣಮುಖ 

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಆರು ಮಂದಿ ಸಾಧಕರಿಗೆ 2021 ನೇ ಸಾಲಿನ ಶ್ರೀಮಹರ್ಷಿ ವಾಲ್ಮೀಕಿ ಪ್ರಶಸ್ತಿ

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

ಕೆ.ಜಿ.ಹಳ್ಳಿ: ನಿರ್ಮಾಣದ ಹಂತದ ಕಟ್ಟಡದ ಸಂಪ್ ಗೆ ಬಿದ್ದು 14 ವರ್ಷದ ಬಾಲಕ ಸಾವು

Magistrate Court

ಮ್ಯಾಜಿಸ್ಟ್ರೇಟ್‌ ಕೋರ್ಟ್‌ಗಳಿಗೆ ಹೈ ಮಾರ್ಗಸೂಚಿ

MUST WATCH

udayavani youtube

ನಮ್ಮ ಸೇನೆಗೊಂದು ಸಲಾಂ

udayavani youtube

ಮೋದಿ ಹೆಬ್ಬೆಟ್ಟ್ ಗಿರಾಕಿ ಟ್ವಿಟ್‍ಗೆ ಶಿವಕುಮಾರ್ ವಿಷಾದ

udayavani youtube

ಗೋವಿನಲ್ಲಿ ಶ್ರೇಷ್ಠ ‘ಕಪಿಲಾ’ ಗೋವಿನ ವಿಶೇಷತೆಗಳೇನು ?

udayavani youtube

‘ಡೀಮ್ಡ್ ಫಾರೆಸ್ಟ್’ ಎಂದು ಈ ಕಾರಣಗಳಿಗೆ ಘೋಷಣೆಯಾಗುತ್ತೆ

udayavani youtube

ಚಿಂತಾಮಣಿಯಲ್ಲೊಂದು ದುರಂತ : ಕುರಿ ತೊಳೆಯಲು ಹೋದ ಮೂವರು ಯುವಕರು ನೀರು ಪಾಲು

ಹೊಸ ಸೇರ್ಪಡೆ

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಹಳೆ ತಂತ್ರಗಾರಿಕೆ ಬದಲಿಸಿದ ಪಾಕ್‌

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ರಾಜ್ಯೋತ್ಸವ ಪ್ರಶಸ್ತಿಯ ಗೌರವ ಮತ್ತಷ್ಟು ಎತ್ತರಕ್ಕೇರಲಿ

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಡಾ| ವಿವೇಕ ರೈ ಸಹಿತ 7 ಮಂದಿಗೆ “ಮಾಸ್ತಿ ಪ್ರಶಸ್ತಿ’

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

ಭಾರತ-ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು: ಬಿಸಿಸಿಐ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.