ಬಿಎಂಟಿಸಿ ಬಸ್‌ಗಳಲ್ಲಿ ಹೆಚ್ಚಿದ ಕಳ್ಳರ ಹಾವಳಿ


Team Udayavani, Dec 19, 2018, 12:25 PM IST

bmtc.jpg

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್‌ಗಳಲ್ಲಿ ಈಚೆಗೆ ಕಳ್ಳರ ಹಾವಳಿ ಹೆಚ್ಚಿದ್ದು, ಇದು ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ತಲೆನೋವಾಗಿ ಪರಿಣಮಿಸಿದೆ. 

“ಪೀಕ್‌ ಅವರ್‌’ನಲ್ಲಿ ಸಾಮಾನ್ಯರಂತೆ ಬಸ್‌ಗಳನ್ನು ಏರುವ ಕಿಡಿಗೇಡಿಗಳು, ಒಂದೆರಡು ತಂಗುದಾಣಗಳನ್ನು ದಾಟುತ್ತಿದ್ದಂತೆ ನಿಧಾನವಾಗಿ ತಮ್ಮ ಕೈಚಳಕ ತೋರಿಸಿ ಕಣ್ಮರೆಯಾಗುತ್ತಾರೆ. ಪ್ರತಿದಿನ ಒಂದಿಲ್ಲೊಂದು ಘಟನೆಗಳು ವರದಿಯಾಗುತ್ತಿವೆ. ಆದರೆ, ಇದರಲ್ಲಿ ಕೆಲವು ಮಾತ್ರ ಪೊಲೀಸ್‌ ಠಾಣೆ ಮೆಟ್ಟಿಲು ಹತ್ತುತ್ತವೆ. ಉಳಿದವು ಸ್ಥಳೀಯವಾಗಿ ಬೆಳಕಿಗೆ ಬಂದು ಮರೆಯಾಗುತ್ತವೆ.

ದಿನದ ಪಾಸು ತೆಗೆದುಕೊಂಡು ತುಂಬಿತುಳುಕುವ ಬಸ್‌ ಏರುವ ಜೇಬುಗಳ್ಳರ ತಂಡ, ಪ್ರಯಾಣಿಕರು ಒಳಗಡೆ ಕಂಬಿ ಹಿಡಿದು ನಿಂತಿರುವುದನ್ನು ಗಮನಿಸಿ, ಅವರೊಂದಿಗೆ ನಿಲ್ಲುತ್ತಾರೆ. ಗದ್ದಲದಲ್ಲಿ ಮೈಮೇಲೆ ಬಿದ್ದಂತೆ ನಟಿಸಿ ಮೊಬೈಲ್‌, ವ್ಯಾಲೆಟ್‌ಗಳನ್ನು ಎಗರಿಸುತ್ತಾರೆ.

ಹಾಗೊಂದು ವೇಳೆ ಸಿಕ್ಕಿಬಿದ್ದರೆ, ಆ ತಂಡದ ಉಳಿದ ಸದಸ್ಯರೇ ಕದ್ದವನಿಗೆ ನಾಲ್ಕು ಏಟು ಹಾಕಿದಂತೆ ನಟಿಸಿ ಪೊಲೀಸ್‌ ಠಾಣೆಗೆ ಕರೆದೊಯ್ಯುವುದಾಗಿ ಇಳಿದುಬಿಡುತ್ತಾರೆ. ಕೇವಲ ಒಂದು ವಾರದಲ್ಲಿ ಇಂತಹ ಹಲವು ಘಟನೆಗಳು ವರದಿಯಾಗಿವೆ ಎನ್ನಲಾಗಿದೆ.

ವಸಂತನಗರ-ಟಿವಿ ಟವರ್‌, ಮೆಜೆಸ್ಟಿಕ್‌-ನೆಲಮಂಗಲ, ಯಲಹಂಕ ಮಾರ್ಗ, 8ನೇ ಮೈಲಿ-ದಾಸರಹಳ್ಳಿ- ಜಾಲಹಳ್ಳಿ ಕ್ರಾಸ್‌- ಆರ್‌ಎಂಸಿ-ಯಶವಂತಪುರ, ಕಾರ್ಪೊರೇಷನ್‌- ನಿಮ್ಹಾನ್ಸ್‌-ಕೋರಮಂಗಲ ಮಾರ್ಗಗಳ ಬಸ್‌ಗಳಲ್ಲಿ ಹೆಚ್ಚಾಗಿ ಈ ಘಟನೆಗಳು ನಡೆಯುತ್ತಿವೆ. ಸಾಮಾನ್ಯವಾಗಿ ಒಂದೇ ರೀತಿಯ ಬ್ಯಾಗ್‌ಗಳನ್ನು ಹಾಕಿಕೊಂಡಿರುವ ಈ ಜೇಬುಗಳ್ಳರ ತಂಡ, ಒಂದೇ ಕಡೆಗೆ ಇಳಿಯುತ್ತಾರೆ.

ಮೊಬೈಲ್‌, ವ್ಯಾಲೆಟ್‌ ಮತ್ತಿತರ ವಸ್ತುಗಳನ್ನು ಎಗರಿಸಿದವನನ್ನು ಮೊದಲು ಕೆಳಗಡೆ ಇಳಿಸುತ್ತಾರೆ. ಕಳ್ಳತನ ಮಾಡಿದವನನ್ನು ಈ ತಂಡ ಮೊದಲು ನಿಧಾನವಾಗಿ ಯಾವುದಾದರೂ ಸ್ಟಾಪ್‌ನಲ್ಲಿ ಇಳಿಸಿಬಿಡುತ್ತಾರೆ. ನಂತರ ಸಂತ್ರಸ್ತನನ್ನು ಸ್ವತಃ ಈ ತಂಡ ಸದಸ್ಯರೇ ಸಂತೈಸುತ್ತಾರೆ.

ಬಸ್‌ ಏರಿದ ತಕ್ಷಣ ಹರಿದು ಹಂಚಿಹೋಗುತ್ತಾರೆ. ಒಂದಿಬ್ಬರು ಪ್ರವೇಶ ದ್ವಾರಗಳಲ್ಲಿ ನಿಂತು “ರೈಟ್‌’ ಅಥವಾ “ಸ್ಟಾಪ್‌’ ಹೇಳುತ್ತಾರೆ. ಜೇಬಿಗೆ ಕತ್ತರಿ ಹಾಕುವುದಿಲ್ಲ. ಅಕ್ಕಪಕ್ಕದ ಪ್ರಯಾಣಿಕರ ಚಲನವಲನ ವೀಕ್ಷಿಸುತ್ತಾರೆ. ತಮ್ಮ ಮೇಲೆಯೇ ಕಣ್ಣಿಟ್ಟಿದ್ದರೆ, ತಮ್ಮ ತಂಡಕ್ಕೆ ಕಣ್ಣಿನಲ್ಲೇ ಸಿಗ್ನಲ್‌ ಕೊಡ್ತಾರೆ. ಬಸ್‌ ಬಂದು ನಿಲ್ಲುತ್ತಿದ್ದಂತೆ ಪ್ರಯಾಣಿಕರು ಮುಗಿಬೀಳುತ್ತಾರೆ.

ಈ ವೇಳೆ ಜೇಬುಗಳ್ಳರು ತಮ್ಮ ಕೈಚಳಕ ತೋರಿಸುವುದು ಹೆಚ್ಚು ಎಂದು ಪ್ರತ್ಯಕ್ಷದರ್ಶಿ ಹಾಗೂ ಕೆ.ಆರ್‌. ಮಾರುಕಟ್ಟೆ ವ್ಯಾಪಾರಿ ಸಂತೋಷ್‌ ತಿಳಿಸುತ್ತಾರೆ. ಕಳ್ಳತನ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಹೊರವರ್ತುಲ ರಸ್ತೆಗಳ ಮಾರ್ಗದುದ್ದಕ್ಕೂ ಬರುವ ಪೊಲೀಸ್‌ ಠಾಣೆಗಳಿಗೆ ನಿಗಮದಿಂದ ಪತ್ರ ಬರೆದು, ಸೂಕ್ತ ಕ್ರಮಕ್ಕೆ ಮನವಿ ಮಾಡಲಾಗಿದೆ. ಪೊಲೀಸರಿಂದ ಪೂರಕವಾಗಿ ಸ್ಪಂದಿಸುವುದಾಗಿ ಲಿಖೀತ ಉತ್ತರವೂ ಬಂದಿದೆ.

ಅಷ್ಟೇ ಅಲ್ಲ, ಬಿಎಂಟಿಸಿ ಅಧಿಕಾರಿಗಳು ಕೂಡ ಹೆಚ್ಚು ದೂರುಗಳು ಕೇಳಿ ಬಂದ ಬಸ್‌ಗಳಲ್ಲಿ ಸಾಮಾನ್ಯ ಪ್ರಯಾಣಿಕರಂತೆ ಪ್ರಯಾಣಿಸುತ್ತಿದ್ದಾರೆ. ಹಾಗಾಗಿ, ಈ ಕಳ್ಳರ ಹಾವಳಿಗೆ ಶೀಘ್ರದಲ್ಲೇ ಕಡಿವಾಣ ಬೀಳಲಿದೆ ಎಂದು ಹೆಸರು ಹೇಳಲಿಚ್ಛಿಸದ ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದರು.

ಬಸ್‌ಗಳಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಕೂಡ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಾರೆ. ಈ ಬಗ್ಗೆಯೂ ದೂರುಗಳು ಬಂದಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿಯ ಎಲ್ಲ ಘಟಕಗಳ ವ್ಯವಸ್ಥಾಪಕರಿಗೂ ಸೂಚನೆ ನೀಡಲಾಗಿದೆ ಎಂದು ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

450ಕ್ಕೂ ಅಧಿಕ ದೂರುಗಳು: ಜನವರಿಯಿಂದ ಡಿಸೆಂಬರ್‌ವರೆಗೆ ಬಿಎಂಟಿಸಿ ನಿಯಂತ್ರಣ ಕೊಠಡಿಗೇ 450ಕ್ಕೂ ಅಧಿಕ ದೂರುಗಳು ಬಂದಿವೆ. ಇವರೆಲ್ಲರೂ ಬ್ಯಾಗ್‌, ಪವರ್‌ಬ್ಯಾಂಕ್‌, ಮೊಬೈಲ್‌, ವ್ಯಾಲೆಟ್‌ ಸೇರಿದಂತೆ ಒಂದಿಲ್ಲೊಂದು ವಸ್ತುಗಳನ್ನು ಕಳೆದುಕೊಂಡವರು.

ಆದರೆ, ಕಳ್ಳತನ ಆಗಿದೆ ಎಂದು ಹೇಳಿಕೊಂಡಿಲ್ಲ. ಹಾಗಾಗಿ, ಕೆಲವರು ಬಸ್‌ ಇಳಿಯುವಾಗ ಮರೆತು ಹೋಗಿರುವ ಸಾಧ್ಯತೆಗಳೂ ಇವೆ. 50ಕ್ಕೂ ಹೆಚ್ಚು ವಸ್ತುಗಳನ್ನು ಹಿಂತಿರುಗಿಸಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ. 

ಟಾಪ್ ನ್ಯೂಸ್

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Mishap: ಭೀಕರ ರಸ್ತೆ ಅಪಘಾತ: ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ 7 ಮಂದಿ ಸ್ಥಳದಲ್ಲೇ ಮೃತ್ಯು

Sensible voters know who to win: Yatnal

Vijayapura; ಯಾರನ್ನು ಗೆಲ್ಲಿಸಬೇಕೆಂದು ಪ್ರಜ್ಞಾವಂತ ಮತದಾರರಿಗೆ ಗೊತ್ತಿದೆ: ಯತ್ನಾಳ್

1-ckm-rsrt-close

Tourists ಗಮನಕ್ಕೆ: ಈ 2 ದಿನಗಳ ಕಾಲ ಚಿಕ್ಕಮಗಳೂರಿನ‌ ಎಲ್ಲ ಹೋಂ ಸ್ಟೇ, ರೆಸಾರ್ಟ್‌ ಬಂದ್!

ಸಿ.ಟಿ.ರವಿ

Vijayapura; ವಿಕಸಿತ ಭಾರತಕ್ಕೆ ವಿಶ್ವನಾಯಕ ಮೋದಿ ನಾಯಕತ್ವ ಅನಿವಾರ್ಯ: ಸಿ.ಟಿ.ರವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Fraud: ಮದುವೆ ಆಗದೇ ದೈಹಿಕ ಸಂಪರ್ಕ ಬೆಳೆಸಿ ಮಹಿಳಾ ಟೆಕಿಗೆ ವಂಚನೆ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

Bengaluru: ಸೆ*ಕ್ಸ್‌ ವಿಡಿಯೋ ಮಾದರಿ ಲೈಂಗಿಕ ಕ್ರಿಯೆಗೆ ಒತ್ತಾಯ

15

ವೃದ್ಧಾಶ್ರಮ ಸ್ವಚ್ಛತೆ ಬಂದು ಮಾಲೀಕರ ಮನೆಗೇ ಕನ್ನ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Bengaluru: ಶಾರ್ಟ್‌ ಸರ್ಕ್ಯೂಟ್‌ನಿಂದ ಬೆಂಕಿ; ನಾಲ್ಕು ವರ್ಷದ ಮಗು ಆಹುತಿ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

Fraud: ಫ್ಲ್ಯಾಟ್‌ ಖರೀದಿ ಹೆಸರಲ್ಲಿ ಖಾಸಗಿ ಫೈನಾನ್ಸ್‌ ಕಂಪನಿಗೆ 60.8 ಲಕ್ಷ ವಂಚನೆ

MUST WATCH

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

udayavani youtube

ಕೇಕ್ ಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಔರಾ .

ಹೊಸ ಸೇರ್ಪಡೆ

3-

ಕಾರ್ಯಕರ್ತರ ಸಭೆ; ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ ಬೆಂಬಲ ನೀಡಿ ಗೆಲ್ಲಿಸುವಂತೆ ಮನವಿ

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

Dwarakish:ಸೋಲು, ಗೆಲುವಿನ ಪಯಣ; ವ್ಯಾಪಾರ ಬಿಟ್ಟು ಖ್ಯಾತ ನಟನಾದ ಪ್ರಚಂಡ ಕುಳ್ಳ ದ್ವಾರಕೀಶ್!

2-

ಸಂಸದರ ವಿರುದ್ಧ ಸುದ್ದಿ ಹರಿಬಿಟ್ಟು,ಪೊಲೀಸ್ ಪ್ರಕರಣ ಎದುರಿಸಿದ್ದವರಿಂದ ಪಾಠ ಕಲಿಯಬೇಕಾಗಿಲ್ಲ

19

Aamir Khan: ರಾಜಕೀಯ ಪಕ್ಷದ ಪರ ಪ್ರಚಾರ; ನಕಲಿ ವಿಡಿಯೋ ವಿರುದ್ಧ FIR ದಾಖಲಿಸಿದ ಆಮಿರ್‌

BCCI instructions to share photos of the IPL match day ground!

IPL 2024 ಪಂದ್ಯ ದಿನ ಮೈದಾನದ ಫೋಟೋ ಹಂಚದಂತೆ ಬಿಸಿಸಿಐ ಸೂಚನೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.