- Friday 13 Dec 2019
ಶಾಯಿ ತೋರಿಸಿ ಅಭಿಯಾನ
Team Udayavani, Apr 18, 2019, 3:00 AM IST
ಬೆಂಗಳೂರು: ಈ ಬಾರಿ ಶೇ. 80ರಷ್ಟು ಮತದಾನಕ್ಕೆ ಪಣತೊಟ್ಟಿರುವ ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಷನ್ (ಬಿಎಎಫ್), ಇದಕ್ಕಾಗಿ ಮತದಾರರನ್ನು ಪ್ರೋತ್ಸಾಹಿಸಲು ಹಲವು ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಮತದಾನದಂದು ಅಂದರೆ ಗುರುವಾರ ಅಪಾರ್ಟ್‌ಮೆಂಟ್‌ಗಳಲ್ಲಿರುವ ಹಿರಿಯ ನಾಗರಿಕರು ಮತ್ತು ಅಂಗವಿಕಲ ಮತದಾರರಿಗಾಗಿಯೇ ಉಚಿತ ಕಾರ್‌ಪೂಲಿಂಗ್, ಟ್ಯಾಕ್ಸಿ ಸೇವೆ ಕಲ್ಪಿಸಲಾಗಿದೆ. ಪ್ರತಿ ಅಪಾರ್ಟ್‌ಮೆಂಟ್‌ಗಳಲ್ಲಿ ಸರಾಸರಿ 80ರಿಂದ 100 ಹಿರಿಯ ನಾಗರಿಕರು ಹಾಗೂ ಅಂಗವಿಕಲರಿದ್ದಾರೆ.
ಅವರ ಅನುಕೂಲಕ್ಕಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಯಾವುದೋ ಒಂದು ರಾಜಕೀಯ ಪಕ್ಷ ವ್ಯವಸ್ಥೆ ಮಾಡಿದ್ದಲ್ಲ. ಸ್ವತಃ ನಿವಾಸಿಗಳು ಈ ಕ್ರಮ ಕೈಗೊಂಡಿದ್ದೇವೆ ಎಂದು ಫೆಡರೇಷನ್ ಸದಸ್ಯೆ ಸಂಧ್ಯಾ ಭಟ್ ತಿಳಿಸಿದರು. ಅಗತ್ಯ ಇರುವ ಕಡೆಗಳಲ್ಲಿ ಆಟೋ, ಟ್ಯಾಕ್ಸಿಗಳನ್ನು ಬುಕಿಂಗ್ ಮಾಡಲಾಗುತ್ತಿದೆ.
“ಶೋ ದಿ ಇಂಕ್’ (ಶಾಯಿ ತೋರಿಸಿ) ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದರಡಿ ಮತದಾರರು ಟ್ವಿಟರ್‌ನಲ್ಲಿ ಶಾಯಿ ಹಾಕಿದ ಬೆರಳಿನ ಚಿತ್ರ ತೋರಿಸಿ, ನಿತ್ಯ ಬಳಕೆ ವಸ್ತುಗಳ ಖರೀದಿಯಲ್ಲಿ ರಿಯಾಯ್ತಿ ಪಡೆಯಬಹುದು. ಈ ಸಂಬಂಧ ಭಾರತೀಯ ಕೈಗಾರಿಕೆಗಳ ಒಕ್ಕೂಟ (ಸಿಐಐ)ದ ಜತೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅದು ಹಲವು ಕಂಪೆನಿಗಳೊಂದಿಗೆ ಕೈಜೋಡಿಸಿದೆ ಎಂದೂ ಸಂಧ್ಯಾ ಭಟ್ ಹೇಳಿದರು.
ಇನ್ನು ಕಳೆದ ಒಂದು ವಾರದಿಂದ ಅಪಾರ್ಟ್‌ಮೆಂಟ್‌ಗಳಲ್ಲಿರುವ ಮಕ್ಕಳಿಂದ ಮನೆ-ಮನೆ ಮತದಾರರ ಜಾಗೃತಿ ಅಭಿಯಾನ ಮಾಡಲಾಗಿದೆ. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಕ್ಕಳು ಗುರುವಾರದಂದು ಮತ ಚಲಾಯಿಸುವಂತೆ ಮನವಿ ಮಾಡುತ್ತಿದ್ದಾರೆ. ಅಪಾರ್ಟ್‌ಮೆಂಟ್‌ಗಳಲ್ಲಿ ಮತ ಜಾಗೃತಿ ಬಗ್ಗೆ ಪೋಸ್ಟರ್ ಅಳವಡಿಸಲಾಗಿದ್ದು, ಮತ ಚಲಾಯಿಸಿ ಬಂದವರು ಅದರ ಮೇಲೆ ಸಹಿ ಮಾಡುತ್ತಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ದುಪ್ಪಟ್ಟಾಗಿದೆ. ಈ ಸಲ ವಸತಿ ಸಮುತ್ಛಯಗಳಲ್ಲಿನ ಮತದಾರರ ಸಂಖ್ಯೆ ಕೂಡ ಶೇ. 10ರಿಂದ 15ರಷ್ಟು ಏರಿಕೆ ಆಗಿದೆ. ಹಲವು ಜಾಗೃತಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಇದೆಲ್ಲದರ ಪರಿಣಾಮ ಶೇ. 80ರಷ್ಟು ಮತದಾನ ಆಗುವ ಸಾಧ್ಯತೆ ಇದೆ ಎಂದು ಬಿಎಎಫ್ ಕಾರ್ಯದರ್ಶಿ ಶ್ರೀಕಾಂತ್ ನರಸಿಂಹನ್ ತಿಳಿಸಿದ್ದಾರೆ.
ಈ ವಿಭಾಗದಿಂದ ಇನ್ನಷ್ಟು
-
ಬೆಂಗಳೂರು: ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಕಾನೂನು ಜಾರಿ, ಅಂಬೇಡ್ಕರ್ ಸ್ಮಾರ್ಟ್ ಕಾರ್ಡ್ ವಿತರಣೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ...
-
ಬೆಂಗಳೂರು: ನಗರದಲ್ಲಿ ಹೊಸ ವಾಹನ ಖರೀದಿಸುವವರು ಕಡ್ಡಾಯವಾಗಿ ಆ ವಾಹನ ನಿಲುಗಡೆಗೆ ಜಾಗ ಇರುವ ಬಗ್ಗೆ ದೃಢೀಕರಣ ಪತ್ರ ನೀಡಬೇಕು. ಇನ್ನು ಈಗಾಗಲೇ ವಾಹನ ಇರುವವರಿಗೆ...
-
ಬೆಂಗಳೂರು: "ಬಯಲು ಬಹಿರ್ದೆಸೆ ಮುಕ್ತ' (ಒಡಿಎಫ್) ಎಂದು ಬೆಂಗಳೂರು ಅಧಿಕೃತವಾಗಿ ಪ್ರಮಾಣೀಕರಿಸಿಕೊಳ್ಳದ ಹಿನ್ನೆಲೆಯಲ್ಲಿ ಈ ಬಾರಿಯೂ ಬಿಬಿಎಂಪಿ ಸ್ವಚ್ಛ ಸರ್ವೇಕ್ಷಣ್ನಲ್ಲಿ...
-
ಬೆಂಗಳೂರು: ರಸ್ತೆಯಲ್ಲಿನ ಕಸ ಗಾಳಿಗೆ ಹಾರಿ ಮನೆಯೊಳಗೆ ಬರುತ್ತದೆ ಅಂತ ಮನೆಗೆ ಬೀಗಹಾಕಿ ಎಲ್ಲರೂ ಹೊರಗೆ ವಾಸವಿದ್ದರೆ ಹೇಗಿರುತ್ತದೆ? ಕೇಳಲಿಕ್ಕೂ ಇದು ಹಾಸ್ಯಾಸ್ಪದ....
-
ಬೆಂಗಳೂರು: ಮಟನ್ ಪ್ರಿಯರಿಗೆ ಸಿಹಿ ಸುದ್ದಿ. ರಾಜ್ಯ ಸರ್ಕಾರವೇ ಈಗ ಕುರಿ ಮಾಂಸದ ಸಂಚಾರಿ ಮಳಿಗೆಗಳನ್ನು ತೆರೆಯುವ ಮೂಲಕ ಮಾಂಸ ಪ್ರಿಯರಿಗೆ ತಾಜಾ ಮಾಂಸದ ಊಟ ನೀಡಲು...
ಹೊಸ ಸೇರ್ಪಡೆ
-
ಕೊರಟಗೆರೆ: ಲಿಂ. ಶ್ರೀ ಶಿವಕುಮಾರ ಸ್ವಾಮೀಜಿ ಸಂಕಲ್ಪದಂತೆ ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿ ಜಯಂತಿ ಅಂಗವಾಗಿ ಆಯೋಜಿಸಿರುವ ರಥಯಾತ್ರೆಗೆ ಪಟ್ಟಣದಲ್ಲಿ ಅದ್ಧೂರಿ...
-
ತೀರ್ಥಹಳ್ಳಿ: ತಾಲೂಕಿನಲ್ಲಿ ಕೆರೆಗಳ ಸರ್ವೇ ಕಾರ್ಯ ಸಮಾಧಾನಕರ ಆಗಿಲ್ಲ. 305 ಕೆರೆಗಳ ಗಡಿ ಗುರುತಿಸುವ ಕಾರ್ಯ ವಿಳಂಬವಾಗಿದೆ. ಸಿಬ್ಬಂದಿ ಕೊರತೆ ಇದ್ದಲ್ಲಿ ಡಿಡಿಎಲ್ಆರ್...
-
ಮಣಿಪಾಲ: ಪಂಚಭಾಷಾ ನಟ ಸೂಪರ್ ಸ್ಟಾರ್ ರಜಿನಿಕಾಂತ್ ಅವರ ಯಾವ ಕನ್ನಡ ಸಿನಿಮಾ ನಿಮಗಿಷ್ಟ ಎಂಬ ಪ್ರಶ್ನೆಯನ್ನು ಉದಯವಾಣಿ ಕೇಳಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ....
-
ನವದೆಹಲಿ/ಹೈದರಾಬಾದ್: ದಿಲ್ಲಿಯ ನಿರ್ಭಯಾ, ತೆಲಂಗಾಣದ ದಿಶಾ, ಉನ್ನಾವ್ ಅತ್ಯಾಚಾರ ಪ್ರಕರಣಗಳು ದೇಶವನ್ನೇ ಬೆಚ್ಚಿಬೀಳಿಸಿದ್ದಲ್ಲದೇ ಆರೋಪಿಗಳಿಗೆ ಕಠಿಣ ಶಿಕ್ಷೆ...
-
ಹುಳಿಯಾರು: ಶಾಲಾ ಬಿಸಿಯೂಟಕ್ಕೆ ಹುಳು ಬಿದ್ದಿರುವ ಬೇಳೆ ಸರಬರಾಜು ಮಾಡುತ್ತಿರುವುದರಿಂದ ಆಕ್ರೋಶಗೊಂಡ ಪೋಷಕರು ಬೇಳೆ ಇಳಿಸಲು ಬಂದ ಲಾರಿ ತಡೆದು ಪ್ರತಿಭಟನೆ...