
225 ವಾಹನಗಳ ನಕಲಿ ವಿಮೆ, 2 ಕೋಟಿ ವಂಚನೆ
Team Udayavani, Sep 21, 2022, 1:01 PM IST

ಬೆಂಗಳೂರು: ಆನ್‌ಲೈನ್ ಇನ್ಶೂರೆನ್ಸ್ ಅಪ್ಲಿಕೇಶನ್ ದುರ್ಬಳಕೆ ಮಾಡಿಕೊಂಡು 225 ಕಮರ್ಷಿಯಲ್ ವಾಹನಗಳ ನಕಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಮಾಡಿಸಿ ವಂಚಿಸಿದ್ದ ಏಜೆಂಟ್‌ನನ್ನು ಆಗ್ನೇಯ ವಿಭಾ ಗದ ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.2 ಕೋಟಿ ರೂ. ಮೌಲ್ಯದ ನಕಲಿ ವಿಮೆ ಮಾಡಿ ಸಿದ ಧಾರವಾಡ ಮೂಲದ ಇರ್ಫಾನ್ ಶೇಖ್ (36) ಬಂಧಿತ.
ಬಂಧಿತ ಇರ್ಫಾನ್ ಅಕೋ ಜನರಲ್ ಇನ್ಶೂರೆನ್ಸ್ ಕಂಪನಿಯ ಅಪ್ಲಿಕೇಶನ್‌ನಲ್ಲಿ ತನ್ನ ಮೊಬೈಲ್ ನಂಬರ್, ಇ-ಮೇಲ್ ಐಡಿ, ಆಧಾರ್ ಕಾರ್ಡ್ ನಂಬರ್ ನೀಡಿ ನೋಂದಣಿ ಮಾಡಿಕೊಂಡಿದ್ದ. 14 ಸಾವಿರ ರೂ. ಪಾವತಿಸಬೇಕಾದ ಇನ್ಶೂರೆನ್ಸ್ ಗೆ ಕ್ಲಾಸ್ ಆಫ್ ವೆಹಿಕಲ್ ಅನ್ನು ಬದಲಾಯಿಸಿ ತನ್ನ ಮನಸ್ಸಿಗೆ ತೋಚಿದ ಬೇರೆ, ಬೇರೆ ವ್ಯಕ್ತಿಗಳ ಹೆಸರು ಮತ್ತು ವಾಹ ನಗಳ ಮೇಕ್ ಮಾಡೆಲ್‌ಗಳನ್ನು ಟಿವಿಎಸ್, ಟಿವಿಎಸ್ 50, ಸ್ಕೂಟಿ, ಚಾಂಪ್, ಎಕ್ಸ್‌ಎಲ್ ಸೂಪರ್ ಎಂದು ನಮೂದಿಸಿ ಇನ್ಶೂರೆನ್ಸ್ ನವೀಕರಣ ಮಾಡುತ್ತಿದ್ದ. ನಂತರ 500 ರಿಂದ 700 ರೂ. ಅನ್ನು ಪಾವತಿಸಿ ಪ್ರತಿ ವಾಹನಕ್ಕೆ 300 ರೂ.ಗಳಷ್ಟು ಕಮಿಷನ್ ಪಡೆದು ಕೊಂಡು ವಂಚಿಸಿದ್ದ ಎಂಬುದು ಪೊಲೀಸ್ ತನಿಖೆ ಯಲ್ಲಿ ಪತ್ತೆಯಾಗಿದೆ.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ನಾನ್‌ಲೈಫ್ ಇನ್ಶೂರೆನ್ಸ್ ಕಂಪನಿಯಾಗಿರುವ ಅಕೋ ಜನರಲ್ ಇನ್ಶೂರೆನ್ಸ್‌ನ ಮುಖ್ಯ ಕಚೇರಿ ಸೋಮಸಂದ್ರಪಾಳ್ಯ ದಲ್ಲಿದೆ. ಈ ಕಂಪನಿಯು 2 ಲಕ್ಷಕ್ಕೂ ಅಧಿಕ ಇನ್ಶೂರೆನ್ಸ್ ಪಾಲಿಸಿಗಳನ್ನು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್‌ಗಳ ಮೂಲಕ ಮಾಡಿಸಿದೆ. ಪಾಲಿಸಿದಾರ ರಿಂದ ಇಂತಿಷ್ಟು ಹಣದ ಮೊತ್ತವನ್ನು ಪಡೆದಿತ್ತು. ಆರೋಪಿ ಇರ್ಫಾನ್ ಅಕೋ ಜನರಲ್ ಇನ್ಶೂರೆನ್ಸ್ ಕಂಪನಿಯ ವೆಬ್‌ಸೈಟ್ ಹಾಗೂ ಮೊಬೈಲ್ ಅಪ್ಲಿ ಕೇಶನ್ (ಆ್ಯಪ್) ಲೋಪದೋಷಗಳನ್ನೇ ದುರ್ಬಳಕೆ ಮಾಡಿಕೊಂಡು ನಕಲಿ ಇನ್ಶೂರೆನ್ಸ್ ಪಾಲಿಸಿಗಳನ್ನು ಸಾರ್ವಜನಿಕರಿಗೆ ಮಾಡಿಸಿಕೊಡುತ್ತಿದ್ದ. ಆತನ ಮೂಲಕ ಇನ್ಶೂರೆನ್ಸ್ ಮಾಡಿಸಿಕೊಂಡಿದ್ದ ಸಾರ್ವ ಜನಿಕರು ಅದ ನ್ನು ಕ್ಲೈಮ್ ಮಾಡಿಕೊಳ್ಳಲು ಅಕೋ ಜನರಲ್ ಇನ್ಶೂರೆನ್ಸ್ ಕಂಪನಿಯನ್ನು ಸಂಪರ್ಕಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಕಂಪನಿಯ ಸಿಬ್ಬಂದಿ ಈ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಹೋದಾಗ 225 ನಕಲಿ ಕಮರ್ಷಿಯಲ್ ವಾಹನಗಳನ್ನು ಬೆಂಗಳೂರಿನ ವಿವಿಧ ಆರ್‌ಟಿಒಗಳಲ್ಲಿ ನೋಂದಣಿ ಮಾಡಿಸಿರುವುದು ಕಂಡು ಬಂದಿತ್ತು. ಕಂಪನಿಯ ಅಸೋಸಿಯೇಟ್ ಡೈರೆಕ್ಟರ್ ಕೆ.ಜೆ.ಜಿನ್ಸನ್ ಈ ಬಗ್ಗೆ ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮೊಬೈಲ್ ನಂಬರ್ ಕೊಟ್ಟ ಸುಳಿವು: ಪ್ರಕರಣ ದಾಖಲಿಸಿಕೊಂಡು ತಾಂತ್ರಿಕ ಕಾರ್ಯಾಚರಣೆ ನಡೆ ಸಿದ ಪೊಲೀ ಸ ರು ದೂರುದಾರ ಜಿನ್ಸನ್ ಕೊಟ್ಟ ಮಾಹಿತಿ ಆಧರಿಸಿ ಇರ್ಫಾನ್ ಶೇಖ್ ಮೊಬೈಲ್ ನಂಬರ್ ಕಾರ್ಯ ನಿರ್ವಹಿಸುತ್ತಿರುವ ಪ್ರದೇಶವನ್ನು ಹುಡುಕಿ ದ್ದರು. ಆ ವೇಳೆ ಧಾರವಾಡದಲ್ಲಿ ಆ ಮೊಬೈಲ್ ನಂಬರ್ ಕಾರ್ಯ ನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಧಾರವಾಡಕ್ಕೆ ತೆರಳಿದ ಪೊಲೀಸರ ತಂಡ ಆರೋಪಿ ಇರ್ಫಾನ್ ಶೇಖ್‌ನನ್ನು ಬಂಧಿಸಿ ಬೆಂಗಳೂರಿಗೆ ಕರೆ ತಂದಿದೆ.
ಸಾರ್ವಜನಿಕರೇ ಎಚ್ಚರ : ಆನ್‌ಲೈನ್ ಇನ್ಶೂರೆನ್ಸ್ ಅಪ್ಲಿಕೇಶನ್ ಮೂಲಕ ದೇಶಾದ್ಯಂತ 2ಲಕ್ಷಕ್ಕೂ ಹೆಚ್ಚಿನ ವಾಹನಗಳ ನಕಲಿ ಇನ್ಶೂರೆನ್ಸ್‌ಗಳನ್ನು ಮಾಡಿ ವಂಚಿಸಿರುವ ಸುಳಿವು ಸಿಕ್ಕಿದೆ. ಪೊಲೀಸರು ಇಂತಹ ವಾಹನಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಮುಂದಿನ ದಿನ ಗಳಲ್ಲಿ ಸಾರ್ವಜನಿಕರು ಇನ್ಶೂರೆನ್ಸ್ ಏಜೆಂಟ್ ಗಳಿಂದ ತಮ್ಮ ವಾಹನಗಳಿಗೆ ಇನ್ಶೂರೆನ್ಸ್ ಮಾಡಿ ಸುವಾಗ ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಇಲ್ಲದಿ ದ್ದರೆ ವಾಹನಗಳಿಗೆ ಮಾಡಿದ ಇನ್ಶೂರೆನ್ಸ್ ಕ್ಲೈಮ್ ಮಾಡಿಕೊಳ್ಳುವ ವೇಳೆ ಪಶ್ಚಾತಾಪ ಪಡಬೇಕಾಗು ತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರಿಗೆ ದ್ವಿಚಕ್ರ ವಾಹನಗಳ ವಿಮೆ : ಆರೋಪಿ ಇರ್ಫಾನ್ ಧಾರವಾಡದಲ್ಲಿ ಜೆರಾಕ್ಸ್ ಅಂಗಡಿ ಇಟ್ಟುಕೊಂಡಿದ್ದ. ಆತ ಈ ಖಾಸಗಿ ವಿಮಾ ಕಂಪನಿ ಮೂಲಕ ನೂರಾರು ಕಾರುಗಳಿಗೆ ದ್ವಿಚಕ್ರವಾಹನದ ವಿಮೆ ಮಾಡಿಸಿ ದ್ವಿಚಕ್ರವಾಹನದ ಇನ್ಶೂರೆನ್ಸ್ ಪಾವತಿಸಿದ್ದ. ಇನ್ಶೂರೆನ್ಸ್ ಪಾವತಿ ಆದ ಕೂಡಲೇ ಆರ್‌ಟಿಓ ಆನ್‌ಲೈನ್ ದಾಖಲೆಯಲ್ಲಿ ಇನ್ಶೂರೆನ್ಸ್ ಅವಧಿಯ ದಿನಾಂಕ ಅಪಡೇಟ್ ಆಗುತ್ತದೆ. ಆದರೆ, ಯಾವ ಮೊತ್ತದ ಇನ್ಶೂರೆನ್ಸ್ ಎಂಬುದು ಪತ್ತೆಯಾಗುವುದಿಲ್ಲ. ಇದನ್ನೇ ಆರೋಪಿ ಬಂಡವಾಳ ಮಾಡಿಕೊಂಡು ಕಮರ್ಷಿಯಲ್ ಕಾರುಗಳಿಗೆ ಬೈಕ್ ಇನ್ಶೂರೆನ್ಸ್ ಪಾವತಿಸುತ್ತಿದ್ದ. ಅಕೋ ಜನರಲ್ ಇನ್ಶೂರೆನ್ಸ್ ವಿಮಾ ಕಂಪನಿಗೆ ಇದುವರೆಗೂ ಸುಮಾರು 2 ಕೋಟಿ ರೂ. ಮೌಲ್ಯದ ನಕಲಿ ವಿಮೆ ಮಾಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಇರ್ಫಾನ್ ಸಹೋದರ ಮನ್ಸೂರ್ ಕಾರ್ ಡೀಲರ್ ಆಗಿದ್ದಾನೆ. 2020ರಲ್ಲಿ ಕೋವಿಡ್ ವೇಳೆ ಚಾಲಕರಿಲ್ಲದೇ ಓಲಾ ಕಂಪನಿ ಎರಡೂವರೆ ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಆ ವೇಳೆ ಇನ್ಶೂರೆನ್ಸ್ ಮುಗಿದಿದ್ದ 140 ಕಾರುಗಳನ್ನು ಮನ್ಸೂರ್ ಖರೀದಿಸಿದ್ದ. ಈ ಕಾರುಗಳಿಗೆ ಇದೇ ಮಾದರಿಯಲ್ಲಿ ಆರೋಪಿ ಇರ್ಫಾನ್ ನಕಲಿ ಇನ್ಶೂರೆನ್ಸ್ ಮಾಡಿಸಿಕೊಟ್ಟಿದ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜೆಡಿಎಸ್ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ ಸಂಘಗಳ ಸಾಲ ಮನ್ನಾ : ಕುಮಾರಸ್ವಾಮಿ

ಡಿಕೆಶಿ, ಯುವತಿ ಸೇರಿ ಸಿಡಿ ಗ್ಯಾಂಗ್ ಬಂಧಿಸಲು ರಮೇಶ ಜಾರಕಿಹೊಳಿ ಒತ್ತಾಯ

ಗಾಂಧಿ ಮಾರ್ಗದಲ್ಲಿ ನಡೆಯುವ ಸಂಕಲ್ಪವನ್ನು ಮಾಡಬೇಕು: ಸಿಎಂ ಬಸವರಾಜ ಬೊಮ್ಮಾಯಿ

ಹವಾಮಾನ ವೈಪರೀತ್ಯದಿಂದ ವಿಮಾನ ಹಾರಾಟ ರದ್ದು: ಸಿದ್ದರಾಮಯ್ಯ ಶ್ರೀನಗರ ಪ್ರವಾಸ ರದ್ದು

ಹೈದರಾಬಾದ್: ಖ್ಯಾತ ಕವಿ, ವಿಮರ್ಶಕ, ಕತೆಗಾರ ಕೆ.ವಿ.ತಿರುಮಲೇಶ್ ವಿಧಿವಶ
MUST WATCH

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?

ಕೃಷ್ಣ ನಗರಿಯ ಕುರಿತು ಅಭಿಮಾನದ ಮಾತುಗಳನ್ನಾಡಿದ Melody King Rajesh Krishnan

ಯಾರು ಬೇಕಾದರೂ ಸುಲಭವಾಗಿ ನಂದಿ ಬಟ್ಟಲು ಹೂವಿನಿಂದ ಸುಂದರ ಹಾರ ತಯಾಸಬಹುದು
ಹೊಸ ಸೇರ್ಪಡೆ

ಕಾರ್ಕಳ: ಸರಕಾರಿ-ಖಾಸಗಿ ಚಾಲಕ-ನಿರ್ವಾಹಕ ನಡುವೆ ಹೊಡೆದಾಟ

ಎಲ್ಲಾ ಮಾದರಿಯ ಕ್ರಿಕೆಟಿಗೆ ವಿದಾಯ ಹೇಳಿದ ಮುರಳಿ ವಿಜಯ್

ಸಲಿಂಗ ವಿವಾಹ : ಅರ್ಜಿಗಳ ಸಮೂಹ ಸುಪ್ರೀಂಗೆ ಸಲ್ಲಿಸಿದ ದೆಹಲಿ ಹೈಕೋರ್ಟ್

ಬಿಬಿಸಿ ಸಾಕ್ಷ್ಯಚಿತ್ರ ನಿರ್ಬಂಧ ಪ್ರಶ್ನಿಸಿದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಹಿಮಾಚಲ ಪ್ರದೇಶ ರಾಜ್ಯಪಾಲರ ಹೆಸರಿನಲ್ಲಿ ನಕಲಿ ಇನ್ಸ್ಟಾಗ್ರಾಮ್ ಖಾತೆ ಸೃಷ್ಟಿಸಿ ಹಣಕ್ಕಾಗಿ ಬೇಡಿಕೆ