ಡಿಕೆಶಿಗೆ ಐಟಿ ಅಧಿಕಾರಿಗಳಿಂದಲೇ ಬಿಜೆಪಿಗೆ ಆಹ್ವಾನ


Team Udayavani, Nov 9, 2017, 10:46 AM IST

siddu.jpg

ಬೆಂಗಳೂರು: ದಾಳಿ ಮಾಡಿದ ಸಂದರ್ಭದಲ್ಲಿಯೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳೇ ನೇರವಾಗಿ ಇಂಧನ ಸಚಿವ ಡಿ.ಕೆ. ಶಿವಕುಮಾರ್‌ಗೆ ಬಿಜೆಪಿ ಸೇರುವಂತೆ ಸೂಚಿಸಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದ್ದಾರೆ. ಕೇಂದ್ರ ಸರ್ಕಾರ ನೋಟುರದ್ದು ಮಾಡಿದ್ದರ ವಿರುದ್ಧ ಕೆಪಿಸಿಸಿ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆ ಅಂಗವಾಗಿ ನರಳುತ್ತಿದೆ ಭಾರತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರ್ಕಾರ ಸಿಬಿಐ, ಐಟಿ, ಇಡಿ ಇಲಾಖೆಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ರೀತಿಯ ಬೆಳವಣಿಗೆ ಆತಂಕಕಾರಿ ಎಂದು ಹೇಳಿದರು.

ಮೋದಿ ಪ್ರಧಾನಿಯಾಗುವ ಮೊದಲು ದೇಶಕ್ಕೆ ಅಚ್ಚೇದಿನ್‌ ಆಯೇಗಾ ಎಂದು ಹೇಳಿದ್ದರು. ಅಚ್ಚೆ ದಿನ್‌ ಕಬ್‌ ಆಯೇಗಾ ? ಅದಾನಿ, ಅಂಬಾನಿ, ಬಾಬಾ ರಾಮ್‌ದೇವ್‌ಗೆ ಮಾತ್ರ ಅಚ್ಚೇದಿನ್‌ ಬಂದಿದೆ. ಸಾಮಾನ್ಯ ಜನರ ಅಕೌಂಟ್‌ಗೆ 15 ಲಕ್ಷ
ರೂಪಾಯಿ ಹಾಕುವುದಾಗಿ ಪ್ರಧಾನಿ ಭರವಸೆ ನೀಡಿದ್ದರು. ಆದರೆ, ಒಂದು ನಯಾಪೈಸೆಯೂ ಬಡವರ ಅಕೌಂಟ್‌ಗೆ ಬಂದು ಸೇರಲಿಲ್ಲ. ಪ್ರತಿ ವರ್ಷ 2 ಕೋಟಿ ನಿರುದ್ಯೋಗಿ ಯುವಕರಿಗೆ ಉದ್ಯೋಗ ನೀಡುವುದಾಗಿ ಹೇಳಿದ್ದರು. ಆದರೆ,
ಇಪ್ಪತ್ತು ಲಕ್ಷ ಉದ್ಯೋಗ ಕೂಡ ಸೃಷ್ಠಿಯಾಗಿಲ್ಲ ಎಂದು ಆರೋಪಿಸಿದರು. 

ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರ ಎಂದು ಯಡಿಯೂರಪ್ಪ ಆರೋಪ ಮಾಡುತ್ತಾರೆ. ಯಡಿಯೂರಪ್ಪ ಮತ್ತು ಅಮಿತ್‌ ಷಾ ಇಬ್ಬರೂ ಜೈಲಿಗೆ ಹೋಗಿ ಬಂದವರು, ಅವರಿಗೆ ಮಾನ ಮರ್ಯಾದೆ ಇದ್ದರೆ, ಸಾರ್ವಜನಿಕವಾಗಿ ಮುಖ ಎತ್ತಿಕೊಂಡು ತಿರುಗಾಡಬಾರದು. ನಮ್ಮದು ಅತ್ಯಂತ ಪಾರದರ್ಶಕ ಮತ್ತು ಜನಪರ ಸರ್ಕಾರ ಎಂದು ಹೇಳಿದರು.

ಅಧಿಕಾರದಲ್ಲಿದ್ದಾಗ ಮಾಡಬಾರದ್ದನ್ನೆಲ್ಲಾ ಮಾಡಿ ಈಗ ಬಿಜೆಪಿಯವರು ಪರಿವರ್ತನಾ ಯಾತ್ರೆ ಮಾಡುತ್ತಿದ್ದಾರೆ. ಅದು ಕೆಜೆಪಿ ಯಾತ್ರೆ ಎಂದು ಬಿಜೆಪಿಯವರೇ ಆರೋಪ ಮಾಡಿದ್ದಾರೆ. ಅಲ್ಲದೇ ಸಮಾವೇಶಕ್ಕೆ ಜನರಿಗೆ ಸೀರೆ ಮತ್ತು ಹಣ ಹಂಚಿಕೆ ಮಾಡಲಾಗುತ್ತಿದೆ ಎಂದು ಬಿಜೆಪಿಯ ಮುಖಂಡ ಸೊಗಡು ಶಿವಣ್ಣ ಆರೋಪ ಮಾಡಿದ್ದಾರೆ. ಯಡಿಯೂರಪ್ಪ ಜೊತೆಗೆ ಮೂರೇ ಜನ ಇರೋದು. ಶೋಭಾ ಕರಂದ್ಲಾಜೆ ಮತ್ತು ಪುಟ್ಟಸ್ವಾಮಿ ಬಿಟ್ಟರೆ ಬಿಜೆಪಿಯ ಯಾವ
ನಾಯಕರೂ ಅವರ ಜೊತೆಗಿಲ್ಲ ಎಂದು ಹೇಳಿದರು.

ರಾಜ್ಯಕ್ಕೆ ಮೋದಿ, ಅಮಿತ್‌ ಷಾ ಬರುತ್ತಾರೆ ಎಂದು ಹೇಳುತ್ತಾರೆ. ಅವರು ಎಷ್ಟು ಬಾರಿ ಬಂದರೂ ಇಲ್ಲಿ ಅವರ ಆಟ ಏನೂ ನಡೆಯುವುದಿಲ್ಲ. ಕರ್ನಾಟಕ ಬಸವಣ್ಣ, ಕುವೆಂಪು ಕನಕದಾಸರು ಹುಟ್ಟಿದ ನಾಡು ಇಲ್ಲಿ ಯಾವುದೇ ಧರ್ಮ ರಾಜಕಾರಣ ನಡೆಯುವುದಿಲ್ಲ. ಈ ಬಾರಿ ಗುಜರಾತ್‌ನಲ್ಲಿಯೇ ಅವರು ಸೋಲುತ್ತಾರೆ ಎಂದು ಹೇಳಿದರು.

ಪರಿವರ್ತನಾ ಯಾತ್ರೆಗೆ 3 ಲಕ್ಷ ಜನರು ಬರುತ್ತಾರೆ ಎಂದು ಹೇಳಿದ್ದರು. ಆದರೆ. 20 ಸಾವಿರ ಜನ ಮಾತ್ರ ಬಂದಿದ್ದರು. ಅದನ್ನೂ ಅಶೋಕ್‌ ಮೇಲೆ ಬಗರ್‌ ಹುಕುಂ ಅಸ್ತ್ರ ಪ್ರಯೋಗಿಸಿ ಕಾರ್ಯಕ್ರಮ ಯಶಸ್ವಿಯಾಗದಂತೆ ಸರ್ಕಾರ ನೋಡಿಕೊಂಡಿದೆ ಎಂದು ಆರೋಪಿಸಿದರು. ಅಶೋಕ್‌ ಬಗರ್‌ ಹುಕುಂ ಸಮಿತಿ ಅಧ್ಯಕ್ಷರಾಗಿ ಅಕ್ರಮವಾಗಿ ಜಮೀನು ಹಂಚಿಕೆ ಮಾಡಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕರಾದ ಜಗದೀಶ್‌ ಶೆಟ್ಟರ್‌ ಹಾಗೂ ಕೆ.ಎಸ್‌. ಈಶ್ವರಪ್ಪ ವಿರುದ್ಧವೂ ವಾಗ್ಧಾಳಿ ನಡೆಸಿ, ಈಶ್ವರಪ್ಪಗೆ ಮೆದಳು ಇಲ್ಲ ಎಂದು ವ್ಯಂಗ್ಯವಾಡಿದರು. ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಹಾಗೂ
ರಾಜ್ಯಾಧ್ಯಕ್ಷ ಕುಮಾರಸ್ವಾಮಿ ವಿರುದ್ಧವೂ ವಾಗ್ಧಾಳಿ ನಡೆಸಿದ ಸಿಎಂ, ಮಕ್ಕಳಿಗೆ ಹಾಲು ಕೊಡುವ ಯೋಜನೆಯನ್ನು ರೇವಣ್ಣ ಆರಂಭಿಸಿದ್ದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಎಲ್ಲ ಯೋಜನೆಗಳನ್ನು ಇವರೇ ಮಾಡಿದ್ದರು. ಈಗ ಕರ್ನಾಟಕ ವಿಕಾಸ ಯಾತ್ರೆ ಮಾಡ್ತಿದ್ದಾರೆ. ಇವರು ಅಧಿಕಾರದಲ್ಲಿದ್ದಾಗ ವಿಕಾಸ ಮಾಡಿಲ್ಲವೇ ? ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದಾಗ ಹಾಸಿಗೆ ತಲೆದಿಂಬು ತೆಗೆದುಕೊಂಡು ಹೋಗಿ ಮತ್ತೆ ಎತ್ತಿಕೊಂಡು ಹೋಗುತ್ತಿದ್ದರು ಎಂದು ವ್ಯಂಗ್ಯವಾಡಿದರು.

ಸೀರೆ ರಹಸ್ಯ ಬಿಚ್ಚಿಟ್ಟ ಸಿಎಂ
ನಾನು ವಕೀಲನಾಗಿದ್ದಾಗ ಶಾಂತಲಾ ಸಿಲ್ಕ್ ನಲ್ಲಿ ಸೀರೆ ತೆಗೆದುಕೊಳ್ಳುವವರ ಜೊತೆಗೆ ಹೋಗಿದ್ದೆ. ನನ್ನ ಹತ್ತಿರ ದುಡ್ಡಿರಲಿಲ್ಲ. ನಾನು ಬೇಡ ಎಂದಿದ್ದಕ್ಕೆ ಅವರು ಒತ್ತಾಯ ಮಾಡಿ ಸೀರೆ ಕೊಟ್ಟರು. ಆ ಮೇಲೆ ದುಡ್ಡು ಕೊಟ್ಟು ಕಳುಹಿಸಿದೆ. ಅವರು ನೀವು ಬಂದು ಹೋದ ಮೇಲೆ ನಮ್ಮ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಹೇಳಿದ್ದರು. 

ಟಾಪ್ ನ್ಯೂಸ್

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

ಹಿಜಾಬ್‌ ವಿಷಯದಲ್ಲಿ ಕೋರ್ಟ್‌ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್‌

ಹಿಜಾಬ್‌ ವಿಷಯದಲ್ಲಿ ಕೋರ್ಟ್‌ ತೀರ್ಪು ಪಾಲಿಸಲಿ: ಬಿ.ಸಿ. ನಾಗೇಶ್‌

ಇತಿಹಾಸ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಯಿಲ್ಲ: ಬರಗೂರು

ಇತಿಹಾಸ ತಜ್ಞರಿಗೆ “ಕಡ್ಡಾಯ ರಜೆ’ ನೀಡಿದರೆ ಅಚ್ಚರಿಯಿಲ್ಲ: ಬರಗೂರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

ವೃತ್ತಗಳ ಅಂದ ಹೆಚ್ಚಿಸಲು ಯೋಜನೆ

ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್‌ ಮಾಡಿ ವಂಚನೆ

ಸ್ನೇಹಿತರ ಇನ್‌ಸ್ಟ್ರಾಗ್ರಾಂ ಖಾತೆ ಹ್ಯಾಕ್‌ ಮಾಡಿ ವಂಚನೆ

ದೇಶ ವಿರೋಧಿಗಳ ಮೇಲೆ ನಿಗಾ

ದೇಶ ವಿರೋಧಿಗಳ ಮೇಲೆ ನಿಗಾ

1ACB

ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್‌ ಸಿಬ್ಬಂದಿ

ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್‌ ಊಟ; ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ

ಇಂದಿರಾ ಕ್ಯಾಂಟೀನ್‌ಗೆ ಇಸ್ಕಾನ್‌ ಊಟ; ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ

MUST WATCH

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

udayavani youtube

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ

udayavani youtube

ಶಂಕರನಾರಾಯಣ : ವಾರಾಹಿ ನದಿಯಲ್ಲಿ ಮುಳುಗಿ ರೈತ ಸಾವು

udayavani youtube

ಚಿತ್ರದುರ್ಗದ ಐತಿಹಾಸಿಕ ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

udayavani youtube

ಉಸಿರಾಟದ ಸಮಸ್ಯೆ: ಕೇದಾರನಾಥದಲ್ಲಿ ಮತ್ತೆ ನಾಲ್ವರು ಯಾತ್ರಾರ್ಥಿಗಳ ಸಾವು

ಹೊಸ ಸೇರ್ಪಡೆ

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಬೆಳ್ತಂಗಡಿಯಲ್ಲಿ ಉತ್ತಮ ಮಳೆ

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಮಂಗಳೂರು : ಜೂ. 25ರಂದು ಮೆಗಾ ಲೋಕ ಅದಾಲತ್‌

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ಲಕ್ಷಾಂತರ ಜನರ ಹೋರಾಟದಿಂದ ನಮಗೆ ಸ್ವಾತಂತ್ರ್ಯ ಲಭಿಸಿದೆ: ಕಾಗೇರಿ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ತೆರೆಮರೆಯ ಸ್ವಾತಂತ್ರ್ಯ ಹೋರಾಟಗಾರರ ಕೃತಿ ಪ್ರಕಟ: ಸಿಎಂ

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

ಹುತಾತ್ಮರ ಸ್ಮರಣೆಗೆ ಸರಕಾರದ ಮುನ್ನುಡಿ: ಸುನಿಲ್‌ ಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.