ಬೆಂಗಳೂರು : ಆಟೋ ಚಾಲಕನ ಮನೆ ಮೇಲೆ ಐಟಿ ದಾಳಿ!
ಕೋಟ್ಯಂತರ ರೂಪಾಯಿಯ ಮನೆ ಖರೀದಿಸಿ ಐಟಿ ಕಣ್ಣಿಗೆ ಬಿದ್ದ ಸುಬ್ರಮಣಿ
Team Udayavani, May 1, 2019, 9:12 AM IST
ಬೆಂಗಳೂರು: ನಗರದಲ್ಲಿ ಆಟೋ ಚಾಲಕರೊಬ್ಬರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ದಾಖಲೆಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಎಪ್ರಿಲ್ 16 ರಂದು ವೈಟ್ ಫೀಲ್ಡ್ ಬಳಿ ಸುಬ್ರಮಣಿ ಎಂಬ ಆಟೋ ಚಾಲಕನ ಐಷಾರಾಮಿ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಐಟಿ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಮನೆ ಖರೀದಿಗೆ ಕೋಟ್ಯಂತರ ರೂಪಾಯಿ ಹೂಡಿರುವುದು ಕಂಡು ಬಂದಿದೆ.
ಇಡೀ ಮನೆ ಪರಿಶೀಲನೆ ನಡೆಸಿ ಸುಬ್ರಮಣಿಗೆ ನೊಟೀಸ್ ಜಾರಿ ಮಾಡಿದ್ದು, ಸುಬ್ರಮಣಿ ಐಟಿ ಕಚೇರಿಗೆ ತೆರಳಿ ದಾಖಲೆಗಳನ್ನು ನೀಡಬೇಕಾಗಿದೆ.
ಆದಾಯ ತೆರಿಗೆಕಟ್ಟದೆ ಇರುವ ಕಾರಣ ದಾಳಿ ನಡೆಸಲಾಗಿದೆ ಎಂದು ತಿಳಿದು ಬಂದಿದೆ.