ಐಟಿ ಭೇಟಿ ಪಿತೂರಿ; ಬಿಎಸ್‌ವೈ,ವಿಜಯೇಂದ್ರ ವಿರುದ್ಧ ಸಿಎಂ ಆರೋಪ


Team Udayavani, Sep 6, 2018, 6:00 AM IST

cm-hd-bsy.jpg

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಪುತ್ರ ವಿಜಯೇಂದ್ರ ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ್ದಾರೆ ಎಂಬ ಪ್ರಕರಣ ರಾಜ್ಯ ರಾಜಕೀಯ ವಲಯದಲ್ಲಿ ಗಂಭೀರ ಆರೋಪ- ಪ್ರತ್ಯಾರೋಪಗಳಿಗೆ ಕಾರಣವಾಗಿದೆ.

“ನಮ್ಮ ಸರ್ಕಾರಕ್ಕೆ ಆಪತ್ತು ತರಲೆಂದೇ ಈ ಪಿತೂರಿಯ ಭೇಟಿ ನಡೆದಿದೆ”ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರ ಸ್ವಾಮಿ ಅವರು ಯಡಿಯೂರಪ್ಪ ವಿರುದ್ಧ ನೇರ ಆರೋಪ ಮಾಡಿ ದರೆ,”ಇದೆಲ್ಲಾ ಸುಳ್ಳು.ಪುರಾವೆಗಳಿದ್ದರೆ ತನಿಖೆ ಮಾಡಲಿ’ ಎಂದು ಯಡಿಯೂರಪ್ಪ ಆಗ್ರಹಿಸಿದ್ದಾರೆ.

ವಿಜಯೇಂದ್ರ ಅವರು ಆದಾಯ ತೆರಿಗೆ ಇಲಾಖೆಯ ಮುಖ್ಯ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎನ್ನಲಾದ ಬೆಳವಣಿಗೆಗೂ,ಮುಖ್ಯಮಂತ್ರಿ ಕುಮಾರಸ್ವಾಮಿಯವರ ಲೆಕ್ಕಪರಿಶೋಧಕರ ಕಚೇರಿ ಮೇಲಿನ ಆದಾಯ ತೆರಿಗೆ ದಾಳಿಗೂ ಸಂಬಂಧ ಇದೆ ಎನ್ನುವ ಮಾತುಗಳು ಕಾಂಗ್ರೆಸ್‌ ಹಾಗೂ ಜೆಡಿಎಸ್‌ ವಲಯದಲ್ಲಿ ಕೇಳಿ ಬರುತ್ತಿದೆ. ಮುಖ್ಯಮಂತ್ರಿ ವಿರುದ್ಧ ಪಿತೂರಿ ನಡೆಸಿ ಆ ಮೂಲಕ ಸರ್ಕಾರ ಉರುಳಿಸಲು ಸಂಚು ರೂಪಿಸಲಾಗುತ್ತಿದೆ ಎಂಬ ಮಾತುಗಳು ಈ ಪಕ್ಷದಲ್ಲಿ ಪ್ರತಿಧ್ವನಿಸುತ್ತಿವೆ. ಈ ಬಗ್ಗೆ ಸ್ವತಃ ಮುಖ್ಯ ಮಂತ್ರಿಗಳೇ ಬಹಿರಂಗವಾಗಿ ಮಾತನಾಡಿರುವುದು ಪ್ರಕರಣದ ಗಂಭೀರತೆಯನ್ನು ಹೆಚ್ಚಿಸಿದೆ.

ಏನೇನಾಯ್ತು?:
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಈ ಸರ್ಕಾರಕ್ಕೆ ಅಪತ್ತು ತರಲು ಕೆಲವು ಪ್ರಯತ್ನ ನಡೆಯುತ್ತಿವೆ. ಬಿ.ಎಸ್‌. ಯಡಿಯೂರಪ್ಪ ಅವರ ಪುತ್ರ ಇತ್ತೀಚೆಗೆ ಐಟಿ ಇಲಾಖೆ ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ್ದಾರೆ. ಯಾರ್ಯಾರು ಏನೆಲ್ಲಾ ನಡೆಸುತ್ತಿದ್ದಾರೆ ಎಲ್ಲ ಗೊತ್ತಿದೆ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಬುಧವಾರ ಮಾಧ್ಯಮಗಳ ಜತೆ ಮಾತನಾಡಿದ ಪ್ರತಿಪಕ್ಷ ನಾಯಕ ಬಿ.ಎಸ್‌. ಯಡಿಯೂರಪ್ಪ, ಕುಮಾರಸ್ವಾಮಿಯವರು ಜವಾಬ್ದಾರಿಯುತ ಮುಖ್ಯಮಂತ್ರಿಯಾಗಿ ಮಾತನಾಡಬೇಕು. ಇಲ್ಲ ಸಲ್ಲದ ಆರೋಪ ಮಾಡಬಾರದು. ಪಿತೂರಿ ಮಾಡಿದ್ದಕ್ಕೆ ಏನಾದರೂ ಪುರಾವೆ ಇದ್ದರೆ ಕೊಡಲಿ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿಯವರು ಅನಗತ್ಯ ಹೇಳಿಕೆ ಕೊಟ್ಟು ಯಾರನ್ನೋ ಬಲಿಪಶು ಮಾಡಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ. ನಮಗೆ ಸುಪ್ರೀಂಕೋರ್ಟ್‌, ಹೈಕೋರ್ಟ್‌ಗಳಲ್ಲಿ ಕೇಸ್‌ಗಳಿವೆ, ಅದಕ್ಕೆ ಓಡಾಡುತ್ತಿದ್ದೇವೆ. ನಾವ್ಯಾಕೆ ಬೇರೆಯವರ ಬಗ್ಗೆ ತಲೆಕೆಡಿಸಿಕೊಳ್ಳಬೇಕು ಎಂದರು.

ಯಡಿಯೂರಪ್ಪ ಪುತ್ರ ವಿಜಯೇಂದ್ರ ಪ್ರತಿಕ್ರಿಯಿಸಿ, ಮುಖ್ಯಮಂತ್ರಿಯವರು ಇಂತಹ ಹೇಳಿಕೆ ಕೊಡಬಾರದು. ನಾನು ಆದಾಯ ತೆರಿಗೆ ಅಧಿಕಾರಿಗಳನ್ನು ಭೇಟಿ ಮಾಡಿದ್ದೆ ಎಂಬುದು ಕಪೋಲಕಲ್ಪಿತ. ಅವರ ಅಸ್ಥಿರ ಮನಸ್ಸು ಇಂತಹ ಹೇಳಿಕೆ ಕೊಡಿಸುತ್ತಿದೆ. ಮುಖ್ಯಮಂತ್ರಿಯವರ ಬಳಿಯೇ ಗುಪ್ತಚರ ಇಲಾಖೆ ಇದೆ, ತನಿಖೆ ಮಾಡಿಸಲಿ. ಯಡಿಯೂರಪ್ಪ ಅವರ ಮಕ್ಕಳು ಎಲ್ಲಿಗೆ ಹೋಗ್ತಾರೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲೂ ಪ್ರತಿಕ್ರಿಯಿಸಿದ್ದಾರೆ.

ಇನ್ನು, ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸಹ ಇದೇ ರೀತಿ ಆಕ್ರೋಶ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿಯವರಿಗೆ ಆದಾಯ ತೆರಿಗೆ ಇಲಾಖೆ ಬಗ್ಗೆ ಯಾಕೆ ಭಯ? ಏನಾದರೂ ಇದ್ದರೆ ತನಿಖೆ ನಡೆಯಲಿ ಬಿಡಿ. ಈ ರೀತಿಯ ಆರೋಪಗಳು “ಕಳ್ಳನ ಮನಸ್ಸು ಹುಳ್ಳೊಳಗೆ’ ಎನ್ನುವಂತಾಗಿದೆ ಎಂದು ತಿಳಿಸಿದ್ದಾರೆ.

ಇದಕ್ಕೆ ವಿಧಾನಸೌಧದಲ್ಲಿ ಪ್ರಕ್ರಿಯಿಸಿರುವ ಕುಮಾರಸ್ವಾಮಿ, ನಾನು ಎಲ್ಲ ತಿಳಿದುಕೊಂಡೇ ಮಾತನಾಡಿದ್ದೇನೆ. ಮಾಧ್ಯಮಗಳಲ್ಲೂ ಇದು ಬಂದಿದೆ. ಪುರಾವೆ ಕೊಡಲು ಇವರು ಹೋದಾಗ ಕ್ಯಾಮರಾ ಹಿಡಿದುಕೊಂಡು ಹೋಗಲ್ಲಾ ಎಂದು ಪ್ರಶ್ನಿಸಿದ್ದಾರೆ. ಯಡಿಯೂರಪ್ಪ ಅವರೇ ಹೇಳಿದ್ದಾರೆ, ಸುಪ್ರೀಂಕೋರ್ಟ್‌, ಹೈಕೋರ್ಟ್‌ನಲ್ಲಿ ನಮ್ಮ ವಿರುದ್ಧ ಪ್ರಕರಣಗಳು ಅಂತ. ಅಲ್ಲಿಗೆ ಭೇಟಿಯಾಗಿರುವುದು ಸ್ಪಷ್ಟವಾಗಿದೆ. ನಾನು ಏನೂ ಗೊತ್ತಿಲ್ಲದೇ ಹೇಳುವುದಿಲ್ಲ, ಎಲ್ಲವೂ ನನಗೂ ಅರ್ಥವಾಗುತ್ತದೆ ಎಂದು ಖಾರವಾಗಿಯೇ ತಿಳಿಸಿದ್ದಾರೆ.

ಐಟಿ ಇಲಾಖೆ ಹೇಳಿಕೆ
ಯಾವುದೇ ರಾಜಕೀಯ ನಾಯಕರ ಕುಟುಂಬ ಸದಸ್ಯರು ನಮ್ಮ ಇಲಾಖೆಯ ಮುಖ್ಯ ಆಯುಕ್ತರನ್ನು ಭೇಟಿಯಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಜಂಟಿ ಆಯುಕ್ತ ತಮಿಳ್‌ ಸೆಲ್ವನ್‌, ರಾಜಕೀಯ ನಾಯಕರೊಬ್ಬರ ಕುಟುಂಬ ಸದಸ್ಯರು ಮುಖ್ಯ ಆಯುಕ್ತರನ್ನು ಭೇಟಿ ಮಾಡಿದ್ದರು ಎಂಬುದು ಆಧಾರ ರಹಿತ. ಇಲಾಖೆ ಕಳೆದ ಎರಡು ವರ್ಷಗಳಿಂದ ಹಲವಾರು ಪ್ರಕರಣಗಳಲ್ಲಿ ಪಾರದರ್ಶಕ ತನಿಖೆ ನಡೆಸಿ ತಾರ್ಕಿಕ ಅಂತ್ಯ ತಲುಪುವುಂತೆ ನೋಡಿಕೊಂಡಿದೆ. ಆದರೆ, ಯಾವುದೇ ಪ್ರಕರಣದಲ್ಲೂ ರಾಜಕೀಯ ಪ್ರೇರಿತವಾಗಿ ನಡೆದುಕೊಂಡಿಲ್ಲ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಭಾರತದ ನೈಜ ಭೀಮ ಪ್ರತಿಭೆ

ಭಾರತದ ನೈಜ ಭೀಮ ಪ್ರತಿಭೆ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರು

ಬ್ಯಾಂಕಿನ ನಿಜದ ಕಲ್ಪನೆಗೆ ಶಕ್ತಿ ಮೀರಿ ದುಡಿದವರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸಾಲ ವಿತರಣೆಗೆ ಒಮಿಕ್ರಾನ್‌ ನೆಪ ಬೇಡ

ಸತತ ಠೇವಣಿ ಕಳೆದುಕೊಂಡರೆ ಸ್ಪರ್ಧೆಗೆ ಅನರ್ಹ?

ಸತತ ಠೇವಣಿ ಕಳೆದುಕೊಂಡರೆ ಸ್ಪರ್ಧೆಗೆ ಅನರ್ಹ?

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಕೋವಿಡ್‌ ಮುನ್ನೆಚ್ಚರಿಕೆ ಎಲ್ಲರಲ್ಲೂ ಇರಲಿ; ಉಡುಪಿಯಲ್ಲಿ ಇಂದು, ನಾಳೆ ಪರ್ಯಾಯ ಸಂಭ್ರಮ

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಆಶ್ರಯಕ್ಕಾಗಿ ಆಯ್ಕೆಯೇ ಗೊಂದಲ!

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌: ಲಕ್ಷ್ಯ ಸೇನ್‌, ಚಿರಾಗ್‌-ರೆಡ್ಡಿ ಚಾಂಪಿಯನ್ಸ್‌

ಭಾರತದ ನೈಜ ಭೀಮ ಪ್ರತಿಭೆ

ಭಾರತದ ನೈಜ ಭೀಮ ಪ್ರತಿಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.