ಶಾಸಕ, ಸಚಿವರ ಆಪ್ತರ ಹುದ್ದೆಗೆ ಭಾರೀ ಲಾಬಿ


Team Udayavani, Jun 14, 2018, 6:25 AM IST

vidhana-soudha-750.jpg

ಬೆಂಗಳೂರು: ಸಮ್ಮಿಶ್ರ ಸರಕಾರದಲ್ಲಿ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿ ತಮ್ಮ ಇಲಾಖೆಗಳ ಕುರಿತು ಸಭೆ ನಡೆಸಲು ಮುಂದಾಗುತ್ತಿದ್ದಂತೆ ಸಚಿವರ ಬಳಿ ಆಪ್ತ ಕಾರ್ಯದರ್ಶಿ, ಆಪ್ತ ಸಹಾಯಕ, ವಿಶೇಷ ಕರ್ತವ್ಯಾಧಿಕಾರಿಯಾಗಿ ಸೇರಿ ಕೊಳ್ಳಲು ದೊಡ್ಡ ಮಟ್ಟದ ಕಸರತ್ತು ನಡೆದಿದೆ.

ವಿಧಾನಸೌಧ ಹಾಗೂ ವಿಕಾಸಸೌಧದ ಸಚಿವರ ಕೊಠಡಿಗಳ ಮುಂದೆ ಸಚಿವರಿಗೆ “ಆಪ್ತ’ರಾಗಲು ಆಕಾಂಕ್ಷಿಗಳ ದೊಡ್ಡ ದಂಡು ಸುಳಿದಾಡುತ್ತಿದೆ. ಪ್ರತಿಯೊಬ್ಬ ಸಚಿವರಿಗೂ ನಾಲ್ವರು ಆಪ್ತ ಸಹಾಯಕರು, ಒಬ್ಬರು ಆಪ್ತ ಕಾರ್ಯದರ್ಶಿ, ಮೂವರು ಗನ್‌ಮ್ಯಾನ್‌ಗಳು, ನಾಲ್ವರು “ಡಿ’ ದರ್ಜೆ ನೌಕರರನ್ನು ನೇಮಿಸಿಕೊಳ್ಳಲು ಅವಕಾಶವಿದೆ. ಶಾಸಕರಿಗೆ ಇಬ್ಬರು ಆಪ್ತ ಸಹಾಯಕರನ್ನು ನೇಮಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಶಾಸಕರು ಹಾಗೂ ಸಚಿವರು ತಮಗೆ ಬೇಕಾದ ಖಾಸಗಿ ಆಪ್ತ ಸಹಾಯಕರನ್ನು ನೇಮಿಸಿಕೊಳ್ಳಲೂ ಅವಕಾಶವಿದೆ. ಖಾಸಗಿಯಾಗಿ ನೇಮಿಸಿಕೊಳ್ಳುವ ಆಪ್ತ ಸಿಬಂದಿಗೆ ಆಡಳಿತ ಸುಧಾರಣಾ ಇಲಾಖೆ ಮೂಲಕ ವೇತನ ನೀಡಲಾಗುತ್ತದೆ. ಒಂದು ವೇಳೆ ಸಚಿವರಿಗೆ ಹೆಚ್ಚಿನ ಸಿಬಂದಿ ಅಗತ್ಯವಿದ್ದರೆ, ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ನಿಯೋಜನೆ ಮೇಲೆ ನೇಮಿಸಿಕೊಳ್ಳಲು ಅವಕಾಶವಿದೆ.

ನೆಲೆ ಕಂಡುಕೊಳ್ಳಲು ಕಸರತ್ತು: ವಿವಿಧ ಇಲಾಖೆಗಳಿಂದ ಸಚಿವರ ಕಚೇರಿಗೆ ನಿಯೋಜಿಸಲು ಇಷ್ಟೇ ಜನರೆನ್ನುವ ನಿರ್ಬಂಧವಿಲ್ಲ. ಅವರು ನಿಯೋಜನೆ ಮೇಲೆ ಸಚಿವರ ಕಚೇರಿಯಲ್ಲಿ ಕಾರ್ಯ ನಿರ್ವಹಿಸಿದರೂ ಸಂಬಂಧಪಟ್ಟ ಇಲಾಖೆಯಿಂದ ವೇತನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಅನೇಕ ಪ್ರಥಮ ಹಾಗೂ ದ್ವಿತೀಯ ದರ್ಜೆ ನೌಕರರು ಸಚಿವರ ಬಳಿ ಸೇರಿಕೊಂಡು ಸರಕಾರ ಇರುವವರೆಗೂ ವಿಧಾನಸೌಧದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನ ನಡೆಸಿದ್ದಾರೆ.

ಸಿಎಂ ಕಚೇರಿಯಲ್ಲೂ ಲಾಬಿ: ಮುಖ್ಯಮಂತ್ರಿ ಕಚೇರಿಯಲ್ಲೂ ಆಪ್ತ ಸಿಬಂದಿ ನೇಮಕಕ್ಕೆ ಯಾವುದೇ ನಿರ್ಬಂಧ ಇಲ್ಲ. ತಮಗೆ ಬೇಕಾದಷ್ಟು ಸಿಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುತ್ತಾರೆ. ಹೀಗಾಗಿ ಸಿಎಂ ಕಚೇರಿ ಸೇರಿಕೊಳ್ಳಲು ದೊಡ್ಡಮಟ್ಟದ ಪೈಪೋಟಿಯೇ ನಡೆಯುತ್ತಿದೆ.

ಸಿಎಂ ಆಪ್ತರಿಂದಲೂ ಪ್ರಯತ್ನ: ಸಾಮಾನ್ಯ ವಾಗಿ ಸಚಿವರ ಆಪ್ತ ಕಾರ್ಯದರ್ಶಿಯನ್ನಾಗಿ ಕೆಎಎಸ್‌ ಅಧಿಕಾರಿಗಳನ್ನು ನೇಮಿಸಲಾಗುತ್ತದೆ. ಅವರು ಸಚಿವರ ಅಧಿಕೃತ ಕಾರ್ಯ ಚಟುವಟಿಕೆಗಳ ಜವಾಬ್ದಾರಿ ನೋಡಿಕೊಳ್ಳುತ್ತಾರೆ. 

ಹೊರತಾಗಿ ಸಚಿವರು ವಿಶೇಷ ಅಧಿಕಾರಿಯನ್ನು ನೇಮಿಸಿ ಕೊಳ್ಳಲು ಅವಕಾಶವೂ ಇದೆ. ಕಡ್ಡಾಯವಾಗಿ ಸರಕಾರಿ ಅಧಿಕಾರಿಯೇ ಆಗಿರಬೇಕೆಂದೇನೂ ಇಲ್ಲ. ಸಚಿವರು ತಮಗೆ ಆಪ್ತರಾಗಿರುವ ಯಾರನ್ನಾದರೂ ನೇಮಿಸಿಕೊಳ್ಳಬಹುದು. ವಿಶೇಷ ಕರ್ತವ್ಯಾಧಿಕಾರಿ ಹುದ್ದೆಗೆ ಸಾಮಾನ್ಯವಾಗಿ ನಿವೃತ್ತ ಕೆಎಎಸ್‌ ಅಧಿಕಾರಿಗಳು, ವಿವಿಧ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಕಾಲೇಜು ಪ್ರೊಫೆಸರ್‌ಗಳು ಲಾಬಿ ನಡೆಸುತ್ತಾರೆ.

ಒಟ್ಟಾರೆ ಆಪ್ತ ಕಾರ್ಯದರ್ಶಿ ಮತ್ತು ಸಹಾಯಕರಾ ಗಲು ಜಾತಿ, ಪ್ರಾದೇಶಿಕತೆ, ಹಿಂದಿನ ಸರಕಾರದಲ್ಲಿ ಸಚಿವರಾಗಿದ್ದವರ ಅಥವಾ ಪಕ್ಷದ ಹಿರಿಯ ನಾಯಕರ ಶಿಫಾರಸುಗಳ ಆಧಾರದಲ್ಲಿ ಆಕಾಂಕ್ಷಿ ಗಳು ಮಂತ್ರಿಗಳ ಕಚೇರಿಗಳಿಗೆ ಅಲೆಯುತ್ತಿದ್ದಾರೆ.

ನಾವು ಸರಕಾರ ಮತ್ತು ಜನರ ನಡುವೆ ಕೊಂಡಿಯಾಗಿ ಕೆಲಸ ಮಾಡುತ್ತೇವೆ. ಆದರೆ ನಮ್ಮದು ಅತಂತ್ರ ಬದುಕು. ಪ್ರತಿಬಾರಿ ಹೊಸ ಸರಕಾರ ಬಂದಾಗ ಶಾಸಕರು ಸಚಿವರನ್ನು ಹುಡುಕಿಕೊಂಡು ಹೋಗಬೇಕು. ಸರಕಾರ ನಮ್ಮನ್ನು ಖಾಯಂ ಆಪ್ತ ಸಹಾಯಕರನ್ನಾಗಿ ನೇಮಕ ಮಾಡಿಕೊಂಡರೆ ಇತರ ಸಿಬಂದಿ ಯಂತೆಯೇ ನಾವೂ ಸಚಿವರು ಮತ್ತು ಶಾಸಕರ ಆಪ್ತ ಸಹಾಯಕರಾಗಿ ಕಾರ್ಯ ನಿರ್ವಹಿಸಲು ಅನುಕೂಲವಾಗುತ್ತದೆ.
 - ಪ್ರವೀಣ್‌ ಸಾಲಿಮಠ, 
ಆಪ್ತ ಸಹಾಯಕರ ಸಂಘದ ಪ್ರಧಾನ ಕಾರ್ಯದರ್ಶಿ

ಟಾಪ್ ನ್ಯೂಸ್

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ಬಟ್ಟೆ  , ಉಡುಪು, ಪಾದರಕ್ಷೆ ಬೆಲೆಯೇರಿಕೆ?

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ರಜನಿ ಸೇವೆಗೆ ಹ್ಯಾಟ್ಸ್‌ ಆಫ್: ಕ್ರಿಕೆಟಿಗ ಲಕ್ಷ್ಮಣ್‌

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಬಿಸಿಯೂಟ ದತ್ತಾಂಶಕಾರರ 20 ತಿಂಗಳ ಹಸಿವಿಗಿಲ್ಲ ಪರಿಹಾರ!

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯ

ಸುಲಭವಲ್ಲ ತಿಮ್ಮಪ್ಪನ ದರ್ಶನ ಭಾಗ್ಯಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಧಾನಪರಿಷತ್‌ ಚುನಾವಣೆ: ಗೆಲುವಿನ ಹೊಣೆ ಉಸ್ತುವಾರಿಗಳಿಗೆ

ವಿಧಾನಪರಿಷತ್‌ ಚುನಾವಣೆ: ಗೆಲುವಿನ ಹೊಣೆ ಉಸ್ತುವಾರಿಗಳಿಗೆ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಬೂಸ್ಟರ್‌ ಡೋಸ್‌ ಲಸಿಕೆ: ಕೇಂದ್ರಕ್ಕೆ ಬೇಡಿಕೆ

ಬಿಜೆಪಿ ಜತೆ ಮೈತ್ರಿಗೆ ಎಚ್‌ಡಿಕೆ ಇಂಗಿತ

ಬಿಜೆಪಿ ಜತೆ ಮೈತ್ರಿಗೆ ಎಚ್‌ಡಿಕೆ ಇಂಗಿತ

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಅಕ್ರಮ ಕಸಾಯಿಖಾನೆಗಳ ವಿರುದ್ಧ ಕಠಿನ ಕ್ರಮ: ಹೈಕೋರ್ಟ್‌ ತಾಕೀತು

ಜಾನುವಾರುಗಳಿಗೆ ಕಾಡಿಸುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

ಜಾನುವಾರುಗಳಿಗೆ ಕಾಡುತ್ತಿರುವ ಕಾಲುಬಾಯಿ ರೋಗ; ಲಸಿಕೆ 2 ತಿಂಗಳು ವಿಳಂಬ

MUST WATCH

udayavani youtube

ಜಡೇಜಾಗಾಗಿ ಮೊದಲ ಸ್ಥಾನವನ್ನೇ ಬಿಟ್ಟುಕೊಟ್ಟ ಮಾಹಿ

udayavani youtube

ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕಾಡಿನಲ್ಲಿ ಹೂತಿಟ್ಟ ರೀತಿಯಲ್ಲಿ ಪತ್ತೆ, ಕೊಲೆ ಶಂಕೆ

udayavani youtube

ತುಂಗಭದ್ರಾ ನದಿಯಿಂದ ಹಳ್ಳಗಳಿಗೆ ಬಂದ ಮೊಸಳೆ! ಜನರಲ್ಲಿ ಆತಂಕ

udayavani youtube

ದಾಂಡೇಲಿ :ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

udayavani youtube

ಮನೆ ಮಂದಿ ಬರುವಿಕೆಗಾಗಿ ದಾಂಡೇಲಿಯ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ವಯೋವೃದ್ದೆ

ಹೊಸ ಸೇರ್ಪಡೆ

hgjuthygfd

ಗ್ಯಾಂಗ್‌ ಸ್ಟರ್ ಗೆಟಪ್‌ನಲ್ಲಿ ಶಾನ್ವಿ…

rwytju11111111111

ಗುರುವಾರದ ರಾಶಿ ಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

“ಕಾರ್ನಿಕೊದ ಕಲ್ಲುರ್ಟಿ’ ಸಿನೆಮಾ ನಾಳೆ ತೆರೆಗೆ

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಸಮ್ಮಾನಕ್ಕೆ ಇದ್ದ ಉತ್ಸಾಹ ಗೌರವಧನ ನೀಡುವಲ್ಲಿಲ್ಲ !

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

ಗೋ ಹಂತಕರ ವಿರುದ್ಧ ಕಠಿನ ಕ್ರಮ: ಈಶ್ವರಪ್ಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.