ಕೆ.ಆರ್‌.ಮಾರ್ಕೆಟ್‌ನಲ್ಲಿ ಮಾರಾಕಾಯುಧಗಳಿಂದ ಕೊಚ್ಚಿ ವ್ಯಕ್ತಿಯ ಬರ್ಬರ ಹತ್ಯೆ

4 ಅಡಿ ವಿಸ್ತೀರ್ಣದ ಜಾಗಕ್ಕಾಗಿ ಜಗಳ ಕೊಲೆಯಲ್ಲಿ ಅಂತ್ಯ

Team Udayavani, May 15, 2019, 11:12 AM IST

ಬೆಂಗಳೂರು : ಕೆ.ಆರ್‌.ಮಾರ್ಕೆಟ್‌ ನಲ್ಲಿ ವ್ಯಾಪಾರಿಗಳಿಬ್ಬರ ನಡುವೆ ನಡೆದ ಜಗಳಕೊಲೆಯಲ್ಲಿ ಅಂತ್ಯವಾದಘಟನೆ ಮಂಗಳವಾರ ಸಂಜೆ ನಡೆದಿದೆ.

ಭರತ್‌ ಎನ್ನುವ ವ್ಯಾಪಾರಿ ಹತ್ಯೆಗೀಟಾದವ್ಯಕ್ತಿ. ಶರವಣ ಎಂಬಾತ ಸಹಚರರೊಂದಿಗೆ ಆಗಮಿಸಿ ಹತ್ಯೆಗೈದಿದ್ದಾನೆ ಎಂದು ಹೇಳಲಾಗಿದೆ.

ಕೆ.ಆರ್‌.ಮಾರ್ಕೆಟ್‌ನ ರೌಡಿ ವೇಲು ಸಂಬಂಧಿಯಾಗಿರುವ ಶರವಣ ಹತ್ಯೆಗೀಡಾದ ಭರತ್‌ನೊಂದಿಗೆ ವೈಷಮ್ಯ ಹೊಂದಿದ್ದ ಎನ್ನಲಾಗಿದೆ.

ಲಿಂಬೆಹಣ್ಣಿನ ಅಂಗಡಿ ಇಡಲು ನಾಲ್ಕು ಅಡಿ ವಿಸ್ತೀರ್ಣಕ್ಕಾಗಿ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿದೆ ಎಂದು ತಿಳಿದು ಬಂದಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ