18 ವರ್ಷಗಳ ನಂತರ ಕೋಡಿ ಹರಿದ ಕಾಕೋಳು ಕೆರೆ

Team Udayavani, Oct 13, 2017, 11:30 AM IST

ಯಲಹಂಕ: ಇತ್ತೀಚೆಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕಾಕೋಳು ಕೆರೆ ತುಂಬಿ ಕೋಡಿ ಹರಿಯುತ್ತಿದ್ದು, ಸ್ಥಳೀಯರು ಹರ್ಷ ವ್ಯಕ್ತಪಡಿಸಿದ್ದಾರೆ. ಅರ್ಕಾವತಿ ನದಿ ಮಾರ್ಗದಲ್ಲಿ ಬರುವ ಹೆಸರಘಟ್ಟ ಕೆರೆಗೆ ಹೊಂದಿಕೊಂಡಿರುವ ಕಾಕೋಳು ಕೆರೆ ತುಂಬಿ 18 ವರ್ಷಗಳೇ ಕಳೆದಿದ್ದವು. ಪ್ರಸ್ತುತ ತುಂಬಿರುವ ಕೆರೆಯನ್ನು ನೋಡಲು ಪ್ರತಿ ನಿತ್ಯ ನೂರಾರು ಮಂದಿ ಭೇಟಿ ನೀಡುತ್ತಿದ್ದಾರೆ. ಒಂದೂವರೆ ತಿಂಗಳಿನಿಂದ ಸತತವಾಗಿ ಬಿದ್ದ ಮಳೆಯಿಂದ ಹನಿಯೂರು ಮತ್ತು ಬೈರಾಪುರ ಕೆರೆಗಳು ತುಂಬಿ ಕೋಡಿ ಹರಿದ ನೀರು, ಸುಮಾರು 570 ಹೆಕ್ಟೇರ್‌ ವಿಸ್ತೀರ್ಣದ ಕಾಕೋಳು ಕೆರೆಯನ್ನು ತುಂಬಿಸಿದೆ. ಇದರಿಂದ ಸುತ್ತಮುತ್ತ ಅಂತರ ಜಲ ವೃದ್ಧಿಯಾಗುವುದಲ್ಲದೆ, ಜಾನುವಾರು ಗಳಿಗೆ ನೀರು ದೊರೆಯಲಿದೆ. ಕೆರೆ ಗೇಟ್‌ನಿಂದ ನೀರು ಹೊರಹೋಗ ದಂತೆ ಸ್ಥಳೀಯರು ಭದ್ರ ಮಾಡಿದ್ದಾರೆ. ಆದರೆ
ಕೆರೆ ಹಿಂಭಾಗದಲ್ಲಿರುವ ಭೂಮಿಯನ್ನು ಕಬಳಿಸಿರುವ ಒತ್ತುವರಿದಾರರು, ತೂಬು ಮತ್ತು ಕೋಡಿಯನ್ನು ಒಡೆದು ನೀರು ಹೊರ ಬಿಡುವ ಸಾಧ್ಯತೆಯಿದ್ದು, ಅಧಿಕಾರಿಗಳು ಒತ್ತು ವರಿದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ಕೆರೆ ತುಂಬಿರುವುದರಿಂದ ಸಂತೋಷವಾಗಿದೆ. ಉತ್ತಮ ಮಳೆಯಿಂದ ಈ ಭಾಗದ ಬತ್ತಿಹೋಗಿದ್ದ ಕೆರೆಗಳು ಮರುಜೀವ ಪಡೆದುಕೊಂಡಿವೆ. ಇದರಿಂದ ಕೃಷಿ ಚಟುವಟಿಕೆಗಳಿಗೆ ಸಾಕಷ್ಟು ಅನುಕೂಲವಾಗಲಿದೆ. 
ಜಯರಾಮಯ್ಯ, ಬ್ಯಾತ ಗ್ರಾಮದ ರೈತ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಖಾಸಗಿ ಕಂಪನಿಯೊಂದರಲ್ಲಿ ಕಾರ್ಯನಿರ್ವಹಿಸುವ ಸುರೇಶ್‌, ಮೈಸೂರು ರಸ್ತೆಗೆ ಬಂದಿಳಿದಾಗ ರಾತ್ರಿ 12 ಗಂಟೆ. ಅಲ್ಲಿಂದ ಆರ್‌.ಆರ್‌. ನಗರದಲ್ಲಿರುವ ಮನೆಗೆ...

  • ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಕ್ಷೆ ಹಾಗೂ ಬೈಲಾ ನಿಯಮಾವಳಿ ಉಲ್ಲಂಘಿಸಿ ನಿರ್ಮಾಣವಾಗಿರುವ ಕಟ್ಟಡಗಳ ಮಾಲೀಕರಿಂದ ಆಸ್ತಿ...

  • ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಫ‌ಲಪುಷ್ಪ ಪ್ರದರ್ಶನಕ್ಕೆ ಚಾಲನೆ ದೊರೆಕಿದ್ದು, ಗಾಜಿನಮನೆಯಲ್ಲಿ ವಿವೇಕಾನಂದರ ಸ್ಮಾರಕ, ವಿವೇಕವಾಣಿ,...

  • ಬೆಂಗಳೂರು: ಬೀದಿ ಬದಿ ವ್ಯಾಪಾರಿಗಳ ಹಿತ ಕಾಯುವ ದೃಷ್ಟಿಯಿಂದ ರಾಜ್ಯ ಸರ್ಕಾರ ಆರಂಭಿಸಿದ್ದ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ "ಬಡವರ ಬಂಧು' ಈಗ ಕಷ್ಟದಲ್ಲಿರುವ...

  • ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ವರ್ಷದ ಅಬಕಾರಿ ಆದಾಯದಲ್ಲಿ ನೆರೆಯ ಆಂಧ್ರಪ್ರದೇಶದ ಗ್ರಾಹಕರ ಪಾಲು ಸೇರಿದೆ. ಹೌದು, ಆಂಧ್ರಪ್ರದೇಶದಲ್ಲಿ ಮದ್ಯದ ಬೆಲೆ ಶೇ.20...

ಹೊಸ ಸೇರ್ಪಡೆ