ಚುನಾವಣೋತ್ತರದಲ್ಲಿ ಅರಳಿದ ಕಮಲ

Team Udayavani, May 13, 2018, 6:00 AM IST

ಬೆಂಗಳೂರು: ಕರ್ನಾಟಕ ವಿಧಾನಸಭೆಗೆ ಅತಂತ್ರ ವಿಧಾನಸಭೆ ಸೃಷ್ಟಿಯಾಗಲಿದ್ದು, ಜೆಡಿಎಸ್‌ ಕಿಂಗ್‌ ಮೇಕರ್‌ ಆಗಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ.

ಸರಿಸುಮಾರು 10 ಸುದ್ದಿವಾಹಿನಿಗಳು ಸಮೀಕ್ಷೆ ನಡೆಸಿದ್ದು, ಕೆಲವು ಬಿಜೆಪಿಗೆ ಹೆಚ್ಚು ಸ್ಥಾನ ಬರಲಿದೆ ಎಂದು ಹೇಳಿದ್ದರೆ, ಇನ್ನೂ ಕೆಲವು ಕಾಂಗ್ರೆಸ್‌ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದಿವೆ. ಆದರೆ, ಟೈಮ್ಸ್‌ನೌ-ಟುಡೇಸ್‌ ಚಾಣಕ್ಯ ನಡೆಸಿರುವ ಸಮೀಕ್ಷೆ ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ. ಇದು ಬಿಜೆಪಿಗೆ 120, ಕಾಂಗ್ರೆಸ್‌ಗೆ 73, ಜೆಡಿಎಸ್‌ಗೆ 26 ಮತ್ತು ಇತರೆ 3 ಸ್ಥಾನ ಪಡೆಯಲಿದೆ ಎಂದಿದೆ.

ಆದರೆ, ಇಂಡಿಯಾಟುಡೆ-ಆ್ಯಕ್ಸಿಸ್‌ ಇಂಡಿಯಾದ ಸಮೀಕ್ಷೆಯಲ್ಲಿ ಕಾಂಗ್ರೆಸ್‌ ಬಹುದೊಡ್ಡ ಅಥವಾ ಸರಳ ಬಹುಮತ ಪಡೆದು ಸರ್ಕಾರ ರಚಿಸುವ ಸಾಧ್ಯತೆ ಇದೆ ಎಂಬ ಅಂಶ ಹೊರಬಿದ್ದಿದೆ. ಇದು ಬಿಜೆಪಿಗೆ 79-92, ಕಾಂಗ್ರೆಸ್‌ 106-118, ಜೆಡಿಎಸ್‌ 22-30 ಮತ್ತು ಇತರೆ 1-4 ಸ್ಥಾನ ಗಳಿಸಲಿದೆ ಎಂದಿದೆ.

ಎಲ್ಲಾ ಸಮೀಕ್ಷೆಗಳನ್ನು ಆಧರಿಸಿ ಸರಾಸರಿಯಾಗಿ ಹೇಳುವುದಾದರೆ ರಾಜ್ಯದಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಎನ್‌ಡಿಟಿವಿ ಹೇಳಿವೆ. ಅಂದರೆ, ಇಂಡಿಯಾಟುಡೆ-ಆ್ಯಕ್ಸಿಸ್‌, ಇಂಡಿಯಾ ಟಿವಿ-ವಿಎಂಆರ್‌ ಮತ್ತು ಟೈಮ್ಸ್‌ನೌ-ವಿಎಂಆರ್‌ ಸಮೀಕ್ಷೆ ಪ್ರಕಾರ ಕಾಂಗ್ರೆಸ್‌ ಅತಿ ದೊಡ್ಡ ಪಕ್ಷವಾಗಲಿದೆ. ಹಾಗೆಯೇ, ಎಬಿಪಿ-ಸಿ-ವೋಟರ್‌, ನ್ಯೂಸ್‌ನೇಷನ್‌, ಸಿಎನ್‌ಎಕ್ಸ್‌-ನ್ಯೂಸ್‌ಎಕ್ಸ್‌, ಜನಕೀಬಾತ್‌-ರಿಪಬ್ಲಿಕ್‌, ಟುಡೇಸ್‌ ಚಾಣಕ್ಯ ಬಿಜೆಪಿಗೆ ಹೆಚ್ಚಿನ ಸ್ಥಾನ ನೀಡಿವೆ.

ಬಿಜೆಪಿ ಬೆನ್ನಿಗೆ ಲಿಂಗಾಯತರು
ಈ ಸಮೀಕ್ಷೆಗಳ ಪ್ರಕಾರ ಲಿಂಗಾಯತ ಸಮುದಾಯ ಬಿಜೆಪಿ ಕೈಹಿಡಿದಿದೆ. ಪ್ರತ್ಯೇಕ ಧರ್ಮ ವಿಚಾರ ಈ ಚುನಾವಣೆಯಲ್ಲಿ ಯಾವುದೇ ಪಾತ್ರ ವಹಿಸಿಲ್ಲ ಎಂದು ಸಮೀಕ್ಷೆ ಹೇಳಿದೆ. ಟುಡೇಸ್‌ ಚಾಣಕ್ಯದ ಪ್ರಕಾರ ಲಿಂಗಾಯತರಲ್ಲಿ ಶೇ.61ರಷ್ಟು ಬಿಜೆಪಿಗೆ, ಶೇ.20 ರಷ್ಟು ಕಾಂಗ್ರೆಸ್‌ಗೆ ಮತ್ತು ಶೇ.9 ರಷ್ಟು ಜೆಡಿಎಸ್‌ ಬೆಂಬಲಿಸಿದ್ದಾರೆ. ಹಾಗೆಯೇ ಒಕ್ಕಲಿಗರು ಜೆಡಿಎಸ್‌ ಬೆನ್ನಿಗೆ ನಿಂತಿದ್ದಾರೆ. ಅಂದರೆ ಶೇ.63 ರಷ್ಟು ದೇವೇಗೌಡರಿಗೆ, ಶೇ.11 ಸಿದ್ದರಾಮಯ್ಯಗೆ, ಶೇ.19 ಬಿ.ಎಸ್‌.ಯಡಿಯೂರಪ್ಪ ಪಕ್ಷಕ್ಕೆ ಮತ ಹಾಕಿರಬಹುದು ಎಂದು ಈ ಸಮೀಕ್ಷೆ ಹೇಳಿದೆ. ಎಸ್‌ಸಿ, ಎಸ್ಟಿ, ಒಬಿಸಿಯ ಬಹುತೇಕ ಮಂದಿ ಬಿಜೆಪಿ ಬೆನ್ನಿಗೆ ನಿಂತಿದ್ದಾರೆ ಎಂದಿದ್ದರೆ, ಕುರುಬ ಮತ್ತು ಮುಸ್ಲಿಂ ಮತಗಳು ಕಾಂಗ್ರೆಸ್‌ ಕಡೆ ಹೋಗಿವೆ ಎಂದು ಈ ಸಮೀಕ್ಷೆ ತಿಳಿಸಿದೆ.

ಜೆಡಿಎಸ್‌ ಕಿಂಗ್‌ಮೇಕರ್‌
ಈ ಎಲ್ಲಾ  ಸಮೀಕ್ಷೆಗಳ ಪ್ರಕಾರ ಜೆಡಿಎಸ್‌ ಕಿಂಗ್‌ಮೇಕರ್‌ ಆಗಲಿದೆ. ಯಾವುದೇ ಪಕ್ಷಗಳು ಸರಳ ಬಹುಮತದ ಬಳಿಗೆ ಸುಳಿಯುವುದಿಲ್ಲ. ಹೀಗಾಗಿ ದೇವೇಗೌಡರೇ ಸರ್ಕಾರ ರಚನೆಯಲ್ಲಿ ನಿರ್ಣಾಯಕರಾಗುತ್ತಾರೆ. ಒಂದು ವೇಳೆ ಬಿಜೆಪಿ ಅಥವಾ ಕಾಂಗ್ರೆಸ್‌ 105 ರಿಂದ 110ರ ಬಳಿಗೆ ಸುಳಿದಲ್ಲಿ ಪಕ್ಷೇತರರ ಬೆಂಬಲ ಗಿಟ್ಟಿಸಿಕೊಂಡು ಸರ್ಕಾರ ರಚಿಸಬಹುದಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ