Udayavni Special

ಕೆಂಪೇಗೌಡ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕ ಪರಿಷ್ಕರಣೆ


Team Udayavani, Apr 16, 2019, 3:00 AM IST

kempegowda

ದೇವನಹಳ್ಳಿ: ತಾಲೂಕಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆರ್ಥಿಕ ನಿಯಂತ್ರಣ ಪ್ರಾಧಿಕಾರ ತನ್ನ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್‌)ವನ್ನು ಪರಿಷ್ಕರಿಸಿ ಆದೇಶ ಹೊರಡಿಸಿದ್ದು, ಅದು ಏಪ್ರಿಲ್‌ 16ರಿಂದ ಆಗಸ್ಟ್‌ 15 ರವರೆಗೆ ಜಾರಿಯಲ್ಲಿರುತ್ತದೆ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹರಿಮಾರರ್‌ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್‌ ಅನ್ನು 139ರೂ. ನಿಂದ 306 ರೂ. ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558 ರೂ.ನಿಂದ 1226 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಮಾಹಿತಿ ನೀಡಿದರು.

ವಿಮಾನ ನಿಲ್ದಾಣ ಆರ್ಥಿಕ ನಿಯಂತ್ರಣ ಪ್ರಾಧಿಕಾರ(ಎಇಆರ್‌ಎ)ಏಪ್ರಿಲ್‌ 4ರಂದು ನೀಡಿರುವ ತಿದ್ದುಪಡಿ ಆದೇಶ ಆಧರಿಸಿ ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(ಕೆಐಎಬಿ)ದ ಬಳಕೆದಾರರ ಅಭಿವೃದ್ಧಿ ಶುಲ್ಕ(ಯುಡಿಎಫ್‌)ವನ್ನು ಪರಿಷ್ಕರಿಸಲಾಗಿದೆ ಎಂದು ತಿಳಿಸಿದರು.

ಟೆಲಿಕಾಂ ಡಿಸ್ಪೂಟ್ಸ್‌ ಸೆಟಲ್‌ಮೆಂಟ್‌ ಆ್ಯಂಡ್‌ ಅಪಿಲೇಟ್‌ ಟ್ರಿಬ್ಯುನಲ್‌(ಟಿಡಿಎಸ್‌ಎಟಿ)2019ರ ಮಾರ್ಚ್‌ 14 ರಂದು ನೀಡಿದ ಮಧ್ಯಂತರ ಪರಿಹಾರದ ಆದೇಶದಡಿ ನಿಯಮಿತ 4 ತಿಂಗಳ ಅವಧಿಗೆ ಪರಿಷ್ಕಕರಣಾ ಶುಲ್ಕಗಳನ್ನು ಸಂಗ್ರಹಿಸಲು ಬಿಐಎಎಲ್‌ಗೆ ಅವಕಾಶ ನೀಡಲಾಗಿದೆ.

ಈ ಆದೇಶ 2019ರ ಏಪ್ರಿಲ್‌ 16ರಿಂದ ಜಾರಿಗೆ ಬರುವುದರ ಜೊತೆಗೆ ಸ್ವದೇಶಿ ನಿರ್ಗಮನಗಳಿಗೆ ಯುಡಿಎಫ್‌ ಅನ್ನು 139ರೂ.ನಿಂದ 306ರೂ.ಗೆ ಮತ್ತು ಅಂತಾರಾಷ್ಟ್ರೀಯ ನಿರ್ಗಮನಗಳಿಗೆ 558ರೂ.ನಿಂದ 1,226ರೂ. ಗೆ ಪರಿಷ್ಕರಿಸಲಾಗಿದೆ ಎಂದರು.

ಏಪ್ರಿಲ್‌ 16 ರಿಂದ ಆಗಸ್ಟ್‌ 15 ರವರೆಗೆ ಖರೀದಿಸಲಾದ ಟಿಕೆಟ್‌ಗಳ ಮೇಲೆ ಈ ಪರಿಷ್ಕೃತ ಶುಲ್ಕ ಅನ್ವಯವಾಗಲಿದೆ. ಈ ದಿನಾಂಕದ ನಂತರ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯುಡಿಎಫ್‌ ಹಳೇ ಮೊತ್ತಕ್ಕೆ ಹಿಂತಿರುಗಲಿದೆ.

ಹೆಚ್ಚುವರಿಯಾಗಿ ಸಂಗ್ರಹಿಸಲಾದ ನಿಧಿಯನ್ನು ಯೋಜನೆ ವಿಸ್ತರಣೆಯ ಬಂಡವಾಳ ವೆಚ್ಚ ಪೂರೈಸಲು ಬಳಸಲಾಗುವುದು. ಅಲ್ಲದೇ, ಈ ಯೋಜನೆಗಳ ಅನುಷ್ಠಾನ‌ಕ್ಕೆ ಅಗತ್ಯವಾದ ನಗದು ಹರಿವನ್ನು ಬಿಐಎಎಲ್‌ಗೆ ಇದು ಪೂರೈಸಲಿದೆ ಎಂದು ಹೇಳಿದರು.

ಭಾರತದಲ್ಲಿನ ವೈಮಾನಿಕ ಕ್ಷೇತ್ರದ ಅಪಾರ ಬೆಳವಣಿಗೆಗೆ ಅಗತ್ಯ ಸೌಕರ್ಯಗಳನ್ನು ಪೂರೈಸಲು 13,000 ರೂ. ಮೊತ್ತದ ಸಾಮರ್ಥ್ಯ ವಿಸ್ತರಣೆ ನಡುವೆ ಬಹಳ ಅಗತ್ಯವಾದ ಪರಿಹಾರವನ್ನು ಶುಲ್ಕಗಳಲ್ಲಿನ ಈ ಹೆಚ್ಚಳ ಬಿಈಎಎಲ್‌ಗೆ ಪೂರೈಸಲಿದೆ. ಬಿಐಎಎಲ್‌ನ ಬೃಹತ್‌ ವಿಸ್ತರಣಾ ಯೋಜನೆಗೆ ಮುಂದುವರಿದ ಬೆಂಬಲಕ್ಕಾಗಿ ಟಿಡಿಎಸ್‌ಎಟಿ, ಎಇಆರ್‌ಎ ಮತ್ತು ಕರ್ನಾಟಕ ಸರ್ಕಾರಗಳಿಗೆ ನಾವು ವಂದನೆ ಸಲ್ಲಿಸುತ್ತೇವೆ.

ಎಇಆರ್‌ಎ ಕಡ್ಡಾಯ ಮಾಡಿರುವಂತಹ ಈ ನಾಲ್ಕು ತಿಂಗಳಲ್ಲಿ ಯುಡಿಎಫ್ ಹೆಚ್ಚಳದಿಂದ ಬರುವ ಹಣವನ್ನು ಪ್ರತ್ಯೇಕ ಬ್ಯಾಂಕ್‌ ಖಾತೆಯಲ್ಲಿ ಜಮಾ ಮಾಡಲಾಗುವುದು. ಕೈಗೊಂಡಿರುವ ಮೂಲ ಸೌಕರ್ಯ ವಿಸ್ತರಣೆಗೆ ಮಾತ್ರ ಈ ನಿಧಿ ಬಳಸಲಾಗುವುದು ಎಂದು ತಿಳಿಸಿದರು.

ಟಾಪ್ ನ್ಯೂಸ್

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ghfght

ಶಾರುಖ್ ಸಿನಿಮಾ ಟ್ರೈಲರ್ ನೋಡಿ ಮೋಸಹೋದ ಪ್ರೇಕ್ಷಕಳಿಗೆ ಸುಪ್ರೀಂ ಕೋರ್ಟ್ ನಲ್ಲಿ ಜಯ

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಸೀತಾಫಲದ ಸಿಹಿ ಹಂಚುತ್ತಿವೆ ಚಿತ್ತಾಪುರದ ಗುಡ್ಡಗಳು

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ಹಿಂದೂವಿರೋಧಿ ಬೊಮ್ಮಾಯಿಯವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿ: ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ

ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು

ದಟ್ಟ ಮಂಜು ಕವಿದ ವಾತಾವರಣ; ಉಧಾಂಪುರ್ ನಲ್ಲಿ ಸೇನಾ ಹೆಲಿಕಾಪ್ಟರ್ ಪತನ, ಪೈಲಟ್ ಪಾರು

dfdsf

ಹುಬ್ಬಳ್ಳಿ: ಚಿರತೆ ಕಣ್ಣಾಮುಚ್ಚಾಲೆಗೆ ಹೆಚ್ಚಾಯ್ತು ಚಿಂತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

protest

ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ವರ್ಗಾವಣೆ ವಿಳಂಬ ಖಂಡಿಸಿ ಧರಣಿ

bangalore news

ಹಿಂದಿ ಹೇರಿಕೆಗೆ ವಿರೋಧ

covid news

ಆರೋಪಕ್ಕೆ ತಲೆಬಾಗದೆ ಲಸಿಕೆ ಮುಂದುವರಿಸಿ

bangalore news

ಒಂದೂವರೆ ವರ್ಷದ ನಂತರ ಗರಿಷ್ಟ ಪ್ರಯಾಣಿಕರು

MUST WATCH

udayavani youtube

‘ತಾಸೆದ ಪೆಟ್ಟ್ ಗ್’ ತುಳು ಹಾಡು ಹಾಡಿದ ಮಂಗಳೂರು ಪೊಲೀಸ್ ಆಯುಕ್ತ

udayavani youtube

ರಷ್ಯಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯಿಂದ ಗುಂಡಿನ ದಾಳಿ

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

ಹೊಸ ಸೇರ್ಪಡೆ

ಡಿಜೆ ಪಾರ್ಟಿ ನಡೆದಿದ್ದ ಜಾಗ ಗೋಶಾಲೆ ಆಯ್ತು!

ಡಿಜೆ ಪಾರ್ಟಿ ನಡೆದಿದ್ದ ಜಾಗ ಗೋಶಾಲೆ ಆಯ್ತು!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಸಚಿವ ಮುರುಗೇಶ್ ನಿರಾಣಿ ಟ್ವಿಟ್ಟರ್ ಖಾತೆ ಹ್ಯಾಕ್!

ಮಕ್ಕಳ ಪ್ರತಿಭೆಗೆ ವೇದಿಕೆ ನಮ್ಮ ಕರ್ತವ್ಯ: ಚಂದ್ರಹಾಸ್‌ ಕೆ. ಶೆಟ್ಟಿ

ಮಕ್ಕಳ ಪ್ರತಿಭೆಗೆ ವೇದಿಕೆ ನಮ್ಮ ಕರ್ತವ್ಯ: ಚಂದ್ರಹಾಸ್‌ ಕೆ. ಶೆಟ್ಟಿ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಕೊಚ್ಚೆ ಸುರಿದುಕೊಂಡು ಸಫಾಯಿ ಕರ್ಮಚಾರಿಗಳ ಪ್ರತಿಭಟನೆ

ಮುಂಬಯಿ ಕನ್ನಡಿಗರು ಸಾಮರಸ್ಯಕ್ಕೆ ಹೆಸರಾದವರು: ಸಂಸದ ರಾಹುಲ್‌ ಶೆವ್ಹಾಲೆ

ಮುಂಬಯಿ ಕನ್ನಡಿಗರು ಸಾಮರಸ್ಯಕ್ಕೆ ಹೆಸರಾದವರು: ಸಂಸದ ರಾಹುಲ್‌ ಶೆವ್ಹಾಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.