ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ: ಬೆಂಗಳೂರಿಗೆ ಬಂತು 700 ಕೆ.ಜಿ. ತೂಕದ ಖಡ್ಗ
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿರ್ಮಾಣವಾಗಲಿದೆ ಕೆಂಪೇಗೌಡರ ಕಂಚಿನ ಪ್ರತಿಮೆ
Team Udayavani, May 2, 2022, 8:28 PM IST
ಬೆಂಗಳೂರು: ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರತಿಷ್ಠಾಪನೆ ಆಗಲಿರುವ 108 ಅಡಿ ಎತ್ತರದ ಕೆಂಪೇಗೌಡರ ಕಂಚಿನ ಪ್ರತಿಮೆಯ ಭಾಗವಾದ 700 ಕೆ.ಜಿ. ತೂಕದ ಖಡ್ಗವು ದೆಹಲಿಯಿಂದ ಬೆಂಗಳೂರನ್ನು ತಲುಪಿದೆ.
ವಿಶೇಷ ಟ್ರಕ್ ನಲ್ಲಿ ಬಂದ ಈ ಖಡ್ಗವನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಸೋಮವಾರ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ನೆರೆದಿದ್ದ ಪುರೋಹಿತರು, ಸಚಿವರ ನೇತೃತ್ವದಲ್ಲಿ ಖಡ್ಗಕ್ಕೆ ಸಾಂಪ್ರದಾಯಿಕ ಶಕ್ತಿಪೂಜೆಯನ್ನು ನೆರವೇರಿಸಿದರು. ಜತೆಗೆ, ಈ ಕಾರ್ಯದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಎಲ್ಲ ಕಾರ್ಮಿಕ ಸಿಬ್ಬಂದಿಗೂ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, `ಕೆಐಎನಲ್ಲಿ 23 ಎಕರೆ ವಿಸ್ತಾರದಲ್ಲಿ ಕೆಂಪೇಗೌಡರ ಸ್ಮರಣಾರ್ಥ ಹೆರಿಟೇಜ್ ಪಾರ್ಕ್ ಅಸ್ತಿತ್ವಕ್ಕೆ ಬರಲಿದ್ದು, ಕಾಮಗಾರಿಗಳು ಭರದಿಂದ ಸಾಗುತ್ತಿವೆ. ಇಲ್ಲಿ ತಲೆಯೆತ್ತಲಿರುವ ಕೆಂಪೇಗೌಡರ ಭವ್ಯ ಪ್ರತಿಮೆಗೆ 85 ಕೋಟಿ ರೂ. ವಿನಿಯೋಗಿಸಲಾಗುತ್ತಿದೆ. ನೋಯಿಡಾದ ಪದ್ಮಭೂಷಣ ಪುರಸ್ಕೃತ ಶಿಲ್ಪಿಗಳಾದ ರಾಮ್ ವಾನಜಿ ಸುತರ್ ಅವರು ಈ ಪ್ರತಿಮೆಯನ್ನು ಮಾಡಿಕೊಡುತ್ತಿದ್ದಾರೆ’ ಎಂದರು.
`ಕೆಂಪೇಗೌಡರು ಕೈಯಲ್ಲಿ ಹಿಡಿದಿರುವ ಕತ್ತಿಯು (ಖಡ್ಗ) ಕ್ಷಾತ್ರಬಲವನ್ನು ಪ್ರತಿನಿಧಿಸುತ್ತಿದ್ದು, ನವಭಾರತಕ್ಕೊಂದು ಸಂಕೇತವಾಗಿದೆ. ವಿಮಾನ ನಿಲ್ದಾಣದ ಮೂಲಕ ಹೋಗುವವರು ಮತ್ತು ಇಲ್ಲಿಗೆ ಬಂದಿಳಿಯುವವರಿಗೆ ಕೆಂಪೇಗೌಡರ ಬೃಹದಾಕಾರದ ಪ್ರತಿಮೆಯ ನೋಟವೇ ಒಂದು ದಿವ್ಯ ಅನುಭೂತಿಯನ್ನು ಮಾಡುವಂತಿರಬೇಕು ಎನ್ನುವುದು ಸರಕಾರದ ಉದ್ದೇಶವಾಗಿದೆ’ ಎಂದು ಅವರು ಬಣ್ಣಿಸಿದರು.
ಈ ಸಂದರ್ಭದಲ್ಲಿ ಅಮೆರಿಕದ `ಅಕ್ಕ’ ಕನ್ನಡ ಕೂಟಗಳ ಮುಖ್ಯಸ್ಥ ಡಾ.ಅಮರನಾಥ್ ಗೌಡ, ಪ್ರಾಧಿಕಾರದ ಆಯುಕ್ತ ವಿನಯ್ ದೀಪ್, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ, ಪ್ರಾಧಿಕಾರದ ನಿರ್ದೇಶಕರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಒಕ್ಕೂಟ ಸರ್ಕಾರವು ಕರ್ನಾಟಕವನ್ನು ಕಾಲು ಒರೆಸುವ ಮ್ಯಾಟ್ ನಂತೆ ಬಳಸುತ್ತಿದೆ: ಜೆಡಿಎಸ್
ಜೋಶಿ ಅವರು ದೇಶಸ್ಥರಲ್ಲ ಅವರು ಮಾಧ್ವ ಸಂಪ್ರದಾಯಕ್ಕೆ ಸೇರಿದವರು: ಅಶೋಕ್ ಹಾರನಹಳ್ಳಿ
ಕೇಂದ್ರ ಗೃಹ ಸಚಿವ ಅಮಿತ್ ಶಾ ಫೆ.21ರಂದು ಬಳ್ಳಾರಿಗೆ: ಸಚಿವ ಶ್ರೀರಾಮುಲು
ಗುಲಾಮಿ ಮನಸ್ಥಿತಿ ತೊಡೆದು ಹಾಕಲು ಎನ್ಇಪಿ ಸಹಾಯಕ: ಹೊಸಬಾಳೆ
ಅಭ್ಯರ್ಥಿ ಆಯ್ಕೆಗೆ ಕಾಂಗ್ರೆಸ್ ಪರಿಶೀಲನ ಸಮಿತಿ
MUST WATCH
ಹೊಸ ಸೇರ್ಪಡೆ
ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ವಿಕ್ಟೋರಿಯಾ ಗೌರಿ ಪ್ರಮಾಣ ವಚನ ಸ್ವೀಕಾರ
ಕ್ಲಚ್ ಬದಲು ಆಕ್ಸಿಲೇಟರ್ ಒತ್ತಿ 2 ಜೀವ ಕಳೆದ
ಭೀಕರ ಭೂಕಂಪ: ತಾಯಿ, ಅಣ್ಣ, ಅಕ್ಕನನ್ನು ಕಳೆದುಕೊಂಡ 18 ತಿಂಗಳ ಪುಟ್ಟ ಬಾಲೆಯ ಆರ್ತನಾದ…
ಪ್ರಶಸ್ತಿ ಸೀಕರಿಸಲು ಹಿಜಾಬ್ ಧರಿಸಿ: ಬೆಂಗಳೂರಿನ ಆಟಗಾರ್ತಿಗೆ ಇರಾನ್ ಸಂಘಟಕರ ಸೂಚನೆ
ಉತ್ತಮ ಉದ್ಯೋಗಿ – ಉದ್ಯಮಿಗಳ ನೀಡಿದ “ಐಬಿಎಂಆರ್ ವಿದ್ಯಾಸಂಸ್ಥೆ”