
ಕುಣಿಗಲ್: ಪ್ರಸಿದ್ದ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಹುಂಡಿ ಕಳವು
ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಭಕ್ತರ ಆಕ್ರೋಶ
Team Udayavani, Jan 4, 2023, 7:24 PM IST

ಕುಣಿಗಲ್ : ಮುಜರಾಯಿ ಇಲಾಖೆಗೆ ಸೇರಿರುವ ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ಹುಂಡಿ ಹಣ ಹಾಗೂ ಪೊಲೀಸ್ ಚೌಕಿಯ ಗೇಟ್‌ನ ಬೀಗ ಮುರಿದು ವೈರ್ ಲೆಸ್ ರಿಪೀಟರ್ ಅನ್ನು ದುಷ್ಕರ್ಮಿಗಳು ಕಳ್ಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ಕಳೆದ ರಾತ್ರಿ ನಡೆದಿದೆ.
ದುಷ್ಕರ್ಮಿಗಳು ದೇವಾಲಯದ ಹುಂಡಿ ಹೊಡೆದು ಹುಂಡಿಯಲ್ಲಿ ಇದ್ದ ಸುಮಾರು 25 ಸಾವಿರಕ್ಕೂ ಅಧಿಕ ಹಣ ಹಾಗೂ ಪೊಲೀಸ್ ಚೌಕಿಯಲ್ಲಿ ಅಳವಡಿಸಿದ ವೈರ್‌ಲೆಸ್ ರಿಪೀಟರ್ ಅನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವುದು ಭಕ್ತರ ಆತಂಕಕ್ಕೆ ಕಾರಣವಾಗಿದೆ.
ಕುಣಿಗಲ್‌ನಿಂದ ಸುಮಾರು 5 ಕಿ.ಮೀ ದೂರದಲ್ಲಿ ಇರುವ ಶ್ರೀ ಬೆಟ್ಟದ ರಂಗನಾಥಸ್ವಾಮಿ ದೇವಾಲಯ ಸಮುದ್ರ ಮಟ್ಟದಿಂದ 2987 ಅಡಿ ಎತ್ತರದಲ್ಲಿ ಇದೆ 1450 ಎಕರೆ ಅರಣ್ಯ ಪ್ರದೇಶ ಸುತ್ತುವರೆದಿದೆ, ದೇವಾಲಯಕ್ಕೆ ಮೆಟ್ಟಿಲುಗಳ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ, ಶ್ರವಣ ಮಾಸದಲ್ಲಿ ಇಲ್ಲಿ ಭಕ್ತರ ಜಾತ್ರೆ ಸೇರಿತ್ತದೆ, ನಿತ್ಯ ಪೂಜಾ ಕಾರ್ಯಕ್ರಮ ನಡೆಯುತ್ತವೆ, ಸುಪ್ರಸಿದ್ದ ಬೆಟ್ಟದ ರಂಗನಾಥಸ್ವಾಮಿ ದೇವಾಲಯಕ್ಕೆ ಬಾಗಿಲು ಇರುವುದಿಲ್ಲ, ದೇವಾಲಯವು ಸುಮಾರು 600 ವರ್ಷಗಳ ಇತಿಹಾಸ ಹೊಂದಿರುತ್ತದೆ, ಇಲ್ಲಿ ಪೊಲೀಸ್ ಚೌಕಿ ಇದ್ದು ಚೌಕಿಗೆ ವೈರ್‌ಲೆಸ್ ರಿಪೀಟರ್ ಅಳವಡಿಸಲಾಗಿದೆ ಆದರೂ ದುಷ್ಕರ್ಮಿಗಳು ದೇವಾಲಯಕ್ಕೆ ನುಗ್ಗಿ ದೇವಾಲಯದ ಬಳಿ ಇಟ್ಟಿದ ಹುಂಡಿಯನ್ನು ಅಪಹರಿಸಿಕೊಂಡು ಹೋಗಿ ಅದರಲ್ಲಿ ಇದ್ದ ಹಣ ತೆಗೆದುಕೊಂಡು ಸಮೀಪದಲ್ಲೇ ಹುಂಡಿ ಎಸೆದು ಹೋಗಿರುತ್ತಾರೆ, ಅದರ ಪಕ್ಕದಲ್ಲಿ ಇದ್ದು ಪೊಲೀಸ್ ಚೌಕಿಯ ಗೇಟ್‌ನ ಬೀಗ ಮುರಿದ ಕಳ್ಳರು ವೈರ್ ಲೆಸ್ ರಿಪೀಟರ್‌ನನ್ನು ಕಳ್ಳತನ ಮಾಡಿದ್ದಾರೆ, ಈ ಸಂಬಂಧ ದೇವಾಲಯದ ಕಾರ್ಯನಿರ್ವಾಣಾಧಿಕಾರಿ ಕುಣಿಗಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಸ್ಥಳಕ್ಕೆ ಬೆರಳಚ್ಚು ಹಾಗೂ ಶ್ವಾನದಳ ತಜ್ಞರು ಬೇಟಿ ನೀಡಿ ಮಾಹಿತಿ ಕಲೆ ಹಾಕಿದ್ದಾರೆ, ಪ್ರಕರಣ ದಾಖಲಾಗಿದ್ದು ತನಿಖೆ ಚುರುಕು ಗೊಂಡಿದೆ.
ಭಕ್ತರ ಆಕ್ರೋಶ: ದೇವಾಲಯಕ್ಕೆ ಬಾಗಿಲು ಇರುವುದಿಲ್ಲ ಹಾಗೂ ದೇವಸ್ಥಾನಕ್ಕೆ ಯಾವುದೇ ಭದ್ರತೆ ಇರುವುದಿಲ್ಲ ಹುಂಡಿಯ ಸುರಕ್ಷತ ಸ್ಥಳದಲ್ಲಿ ಇಡದ ಕಾರಣ ಕಳ್ಳತನಕ್ಕೆ ಕಾರಣವಾಗಿದೆ, ಇದಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಭಕ್ತರು ಆಕ್ರೋಶ ಹೊರ ಹಾಕಿದ್ದಾರೆ, ಈ ಸಂಬಂಧ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಬೇಕೆಂದು ಭಕ್ತರು ಆಗ್ರಪಡಿಸಿದ್ದಾರೆ.
ಇದನ್ನೂ ಓದಿ: ಮಾರ್ಚ್ ಒಳಗೆ ಪೂರ್ಣ ಅನುದಾನ ಬಳಕೆ ಮಾಡಿ: ಅಧಿಕಾರಿಗಳಿಗೆ ಸಚಿವ ಕೋಟ ಸೂಚನೆ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cauvery Issue; ಕಾವೇರಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರ ಕಪಟ ನಾಟಕ ಸಾಕು..: ನಿಖಿಲ್ ಗುಡುಗು

Manipal Hospital: ಎಎಂಆರ್‌ಐ ಹಾಸ್ಪಿಟಲ್ಸ್‌ನಲ್ಲಿ ಮಣಿಪಾಲ ಹಾಸ್ಪಿಟಲ್ ಶೇ.84 ಪಾಲುದಾರಿಕೆ

Politics: ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ಡಾ| ಯತೀಂದ್ರ ಸಿದ್ದರಾಮಯ್ಯ ಹೇಳಿಕೆ

Ration: ಕಾಳಸಂತೆ ಪಡಿತರ ಅಕ್ಕಿ ಮಾರಾಟಕ್ಕೆ ಬಿತ್ತು ಬ್ರೇಕ್!

Karnataka: ಸರಕಾರಿ ಕಾರ್ಯಕ್ರಮ; ಪ್ಲಾಸ್ಟಿಕ್ ಬಾಟಲ್, ಲೋಟ ನಿಷೇಧ
MUST WATCH
ಹೊಸ ಸೇರ್ಪಡೆ

Actress: 17ಕ್ಕೆ ಹೀರೋಯಿನ್,19ಕ್ಕೆ ಸೂಪರ್ ಸ್ಟಾರ್, 24ರ ವಯಸ್ಸಿಗೆ ನಟನೆ ತೊರೆದ ನಟಿ

Explained:ಸಾವಿರಾರು ಜನರ ಸಾವು…ಈಗ ಕದನ ವಿರಾಮ: ಏನಿದು ಅಜರ್ ಬೈಜಾನ್-ಅರ್ಮೇನಿಯಾ ಸಂಘರ್ಷ

Sandalwood; ವಿನೋದ್ ಪ್ರಭಾಕರ್ ನಟನೆಯ ‘ಫೈಟರ್’ ರಿಲೀಸ್ ದಿನಾಂಕ ಘೋಷಣೆ

Panaji: ರಾಜ್ಯದೆಲ್ಲೆಡೆ ವಿಜೃಂಭಣೆಯ ಗೌರಿ ಗಣೇಶ ಹಬ್ಬ; ಪಟಾಕಿ ಖರೀದಿ ಭಾರಿ ಇಳಿಕೆ

Varanasi ಕ್ರಿಕೆಟ್ ಸ್ಟೇಡಿಯಂಗೆ ಶಿವಸ್ಪರ್ಷ; ಫ್ಲಡ್ ಲೈಟ್, ಛಾವಣಿ ಎಲ್ಲವೂ ಶಿವಮಯ