ಲಾಲ್‌ಬಾಗ್‌ನಲ್ಲಿ ಕುಪ್ಪಳ್ಳಿ, ಕವಿಶೈಲ ದರ್ಶನ


Team Udayavani, Aug 3, 2017, 11:46 AM IST

sasyakashi.jpg

ಬೆಂಗಳೂರು: “ಕಾಡಿನ ಕೊಳಲಿದು, ಕಾಡ ಕವಿಯು ನಾ, ನಾಡಿನ ಜನರೊಲಿದಾಲಿಪುದು”  ರಾಷ್ಟ್ರಕವಿ ಕುವೆಂಪು ಅವರ ಪ್ರಥಮ ಕನ್ನಡ ಕವನ ಸಂಕಲನದ ಪ್ರಥಮ ಕವನದ ಮೊದಲೆರಡು ಸಾಲುಗಳಿವು. ಇದೀಗ ಕನ್ನಡದ ಈ ರಾಷ್ಟ್ರಕವಿಗೆ ಜ್ಞಾನಪೀಠ ಪುರಸ್ಕಾರ ಒಲಿದು 50 ವರ್ಷದ ಸಂಭ್ರಮ.

ಇದರ ಸವಿನೆನಪಿಗಾಗಿ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ನಡೆಯುವ ಈ ಬಾರಿಯ ಸ್ವಾತಂತ್ರೊತ್ಸವ ಫ‌ಲಪುಷ್ಪ ಪ್ರದರ್ಶನದೆಲ್ಲೆಡೆ ರಸ ಋಷಿಯ ಕಂಪು ಚೆಲ್ಲಲ್ಲಿದ್ದು, ಆ.4ರಿಂದ 15ರವರೆಗೆ ಕನ್ನಡ ಡಿಂಡಿಮ ಮೊಳಗಲಿದೆ. ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳ್ಳಿಯ ನಿವಾಸ, ಕವಿಶೈಲ ಹಾಗೂ ಜೋಗ ಜಲಪಾತದ ಸೊಬಗು ಸವಿಯಲು ಶಿವಮೊಗ್ಗಕ್ಕೆ ಹೋಗಬೇಕಿಲ್ಲ.

ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿಯೇ ಇವೆಲ್ಲವನ್ನು ಕಣ್ತುಂಬಿಕೊಳ್ಳುವ ಸುಯೋಗ ನಗರವಾಸಿಗಳಿಗೆ ಮತ್ತು ಪ್ರವಾಸಿಗಳಿಗೆ. ಹೌದು, ಈ ಸಲದ ಸ್ವಾತಂತ್ರ್ಯೋತ್ಸವ ಫಲ ಪುಷ್ಪ  ಪ್ರದ ರ್ಶ ನದಲ್ಲಿ ಪ್ರಮುಖ ಆಕರ್ಷಣೆ ಕುವೆಂಪು ಮನೆಯನ್ನು ಹಲವು ಬಗೆಯ ಹೂವುಗಳಿಗೆ ಅಲಂಕರಿಸಲಾಗಿದೆ. ಕವಿಶೈಲದ ಪ್ರತಿರೂಪದ ಹಲ್ಲಿಕ ಕಂಬಗಳು ಎಲ್ಲರನ್ನು ಸೆಳೆಯಲಿವೆ.

ಇದೇ ಮೊದಲ ಬಾರಿಗೆ ಜೋಗ ಜಲಪಾತದ ಮಾದರಿ ನಿರ್ಮಿಸಲಾಗಿದ್ದು, ಕೃತಕ ಜಲಪಾತ ರೋಮಾಂಚನಗೊಳಿಸಲಿದೆ. ಈ ಬಾರಿಯ 206ನೇ ಫಲಪುಷ್ಪ ಪ್ರದರ್ಶನವನ್ನು ರಾಷ್ಟ್ರಕವಿ ಕುವೆಂಪು ಅವರಿಗೆ ಅರ್ಪಿಸಲಾಗುತ್ತಿದೆ ಎಂದು ರಾಜ್ಯ ತೋಟಗಾರಿಕೆ ಇಲಾಖೆ ಆಯುಕ್ತ ಪ್ರಭಾಷ್‌ ಚಂದ್ರ ರೇ ಪತ್ರಿಕಾಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

ಆ.4ರಂದು ಮಧ್ಯಾಹ್ನ 1 ಗಂಟೆಗೆ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನವನ್ನು ರಾಜ್ಯಪಾಲ ವಜುಬಾಯಿ ರುಡಾಬಾಯಿ ವಾಲಾ ಅವರು ಉದ್ಘಾಟಿಸುವರು. ತೋಟಗಾರಿಕೆ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಮತ್ತಿತರರು ಅತಿಥಿಗಳು ಭಾಗಗವಹಿಸುವರು ಎಂದರು.

3.50 ಲಕ್ಷ ಹೂವುಗಳು
ಗಾಜಿನ ಮನೆಯ ಪ್ರಮುಖ ಆಕರ್ಷಣೆ ಕುಪ್ಪಳ್ಳಿ ಮನೆಗೆ 3.50 ಲಕ್ಷ ಹೂವುಗಳನ್ನು ಬಳಕೆ ಮಾಡಲಾಗಿದೆ. ಕೆಂಪು, ಹಳದಿ, ಶ್ವೇತ ವರ್ಣದ ಗುಲಾಬಿ ಹೂವುಗಳು, ಶ್ವೇತ ಹಾಗೂ ಹಳದಿ ವರ್ಣದ ಕಾರ್ನೇಷನ್‌ ಹೂವುಗಳು, ಶೀತಾಳೆ (ಆರ್ಕಿಡ್ಸ್‌) ಹೂವುಗಳು ಮತ್ತು ಆಯ್ದ ಎಲೆ ಜಾತಿಯ ಜೋಡಣೆಯಿಂದ 21 ಅಡಿ ಎತ್ತರ, 30 ಅಡಿ ಅಗಲ ಹಾಗೂ 38 ಅಡಿ ಉದ್ದದ ಕವಿ ಕುವೆಂಪುರವರ ಮನೆಯ ಪ್ರತಿರೂಪ ಕುಪ್ಪಳಿಯ ಮೂಲ ಸೊಬಗನ್ನು ನೆನಪಿಸುತ್ತದೆ.

ಅದಕ್ಕೆ ಹೊಂದಿಕೊಂಡಂತೆ ಕವಿಶೈಲದ ವಾಸ್ತವತೆಯನ್ನು ಬಿಂಬಿಸುವ ಯಥಾವತ್‌ ಪ್ರತಿರೂಪ ಕೂಡ ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ರೂಪುಗೊಳ್ಳಲಿದೆ. 2* 2 ಅಡಿ ಗಾತ್ರ ಹಾಗೂ 10 ಅಡಿ ಎತ್ತರದ 18 ಬೃಹತ್‌ ಶಿಲಾ ಮಾದರಿ ಸ್ತಂಭಗಳು ಮತ್ತು 10 ಶಿಲಾಮಾದರಿ ಬೀಮ್‌ಗಳ ಜೋಡಣೆ ಮೂಲ ಕವಿಶೈಲವನ್ನು ನೆನಪಿಸುತ್ತದೆ. 

ಮತ್ತಷ್ಟು ಆಕರ್ಷಣೆಗಳು
ಜಗದ ಕವಿಯ ಯುಗದ ಸಾಹಿತ್ಯ ದರ್ಶನ, ಕುವೆಂಪು-ಕುಪ್ಪಳಿ, ಕವಿಶೈಲ ಪರಿಸರದ ಅನಾವರಣ, ಜಲಧಾರೆಯ ಬೆರಗು ಜೋಗ ಜಲಪಾತ ಕೂಡ ಪ್ರದರ್ಶನದಲ್ಲಿ ನೋಡುಗರನ್ನು ಸೆಳೆಯಲಿವೆ. ಕುವೆಂಪು ಪುಷ್ಪ ಸಾಹಿತ್ಯ ದರ್ಶನ, ಇಂಡೋ ಅಮೆರಿಕನ್‌ ಹೈಬ್ರಿಡ್‌ ಸೀಡ್ಸ್‌ ಕಂಪನಿಯ ಆಕರ್ಷಕ ಅಲಂಕಾರಿಕ ಪುಷ್ಪಗಳ ಜೋಡಣೆ, ಹೂವಿನ ಪಿರಮಿಡ್‌ಗಳು, ವಾರ್ಷಿಕ ಹೂಗಳ ರಂಗು, ಹೊಸ ಹೂಗಳ ಜೋಡಣೆ, ಗಾಜಿನ ಮನೆಯಲ್ಲಿ ವೈವಿಧ್ಯಮಯ ಪುಷ್ಪಗಳ ಪ್ರದರ್ಶನವೂ ಇರಲಿದೆ.

ಗಾಜಿನ ಮನೆಯಲ್ಲಿ ಜೋಡಣೆಗೊಂಡಿರುವ ಹೂವುಗಳು ಬಾಡದಂತೆ ಹಾಗೂ ಅಲ್ಲಿನ ವಾತಾವರಣವನ್ನು ತಂಪಾಗಿಡಲು ಗಾಜಿನ ಮನೆಯ ಒಳಾಂಗಣಕ್ಕೆ ಹಿಮಸಿಂಚನ (ಫಾಗರ್ಸ್‌)ದ ವ್ಯವಸ್ಥೆ ಮಾಡಲಾಗಿದೆ.

1.70 ಕೋಟಿ ಖರ್ಚು
ಫಲಪುಷ್ಪ ಪ್ರದರ್ಶನಕ್ಕೆ ಒಟ್ಟಾರೆ 1.35 ಕೋಟಿ ಹಣ ಖರ್ಚು ಮಾಡಲಾಗುತ್ತಿದೆ. ಟಿಕೆಟ್‌ ಶುಲ್ಕದ ಟೆಂಡರ್‌ದಾರರಿಗೆ (12 ದಿನಕ್ಕೆ) ಸುಮಾರು 35 ಲಕ್ಷ ರೂ. ಹಣ ನೀಡುತ್ತಿದ್ದೇವೆ. ಹೀಗಾಗಿ ಒಟ್ಟಾರೆ 1.70 ಕೋಟಿಗೂ ಅಧಿಕ ಹಣ ಖರ್ಚು ಮಾಡಲಾಗುತ್ತಿದೆ. 5 ಲಕ್ಷ ಜನರು ಲಾಲ್‌ಬಾಗ್‌ಗೆ ಭೇಟಿ ನೀಡುವ ನಿರೀಕ್ಷೆ ಇದೆ.
-ಪ್ರಭಾಷ್‌ ಚಂದ್ರ ರೇ, ಆಯುಕ್ತ, ತೋಟಗಾರಿಕೆ ಇಲಾಖೆ .

ವಾಹನಗಳ ನಿಲುಗಡೆ ಎಲ್ಲಿ?
ಸಾರ್ವಜನಿಕ ವಾಹನಗಳಿಗೆ ಉದ್ಯಾನದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಸಂಪೂರ್ಣ ನಿಷೇಧ ಇರುತ್ತದೆ. ವಾಹನಗಳನ್ನು ಶಾಂತಿನಗರ ಬಸ್‌ ನಿಲ್ದಾಣದಲ್ಲಿರುವ ಬಹುಮಹಡಿ ವಾಹನ ನಿಲ್ದಾಣದಲ್ಲಿ ಹಾಗೂ ಜೆ.ಸಿ.ರಸ್ತೆಯ ಕಡೆಯಿಂದ ಬರುವ ವಾಹನಗಳಿಗೆ ಮಯೂರ ರೆಸ್ಟೋರೆಂಟ್‌ ಸಮೀಪದ ಬಿಬಿಎಂಪಿ ಬಹುಮಹಡಿ ವಾಹನ ನಿಲ್ದಾಣದಲ್ಲಿ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ ಆಲ್‌ಅಮೀನ್‌ ಕಾಲೇಜು ಆವರಣ ಮತ್ತು ಹಾಪ್‌ಕಾಮ್ಸ್‌ ಪ್ರಧಾನ ಕಚೇರಿ ಆವರಣದಲ್ಲಿ ಅನುಮು ಮಾಡಿಕೊಡಲಾಗಿದೆ. ಶಾಲಾ-ಕಾಲೇಜು ಮತ್ತು ವಿಕಲಚೇತನರ ವಾಹನಗಳಿಗೆ ಲಾಲ್‌ಬಾಗ್‌ ಡಬಲ್‌ರೋಡ್‌ನ‌ಲ್ಲಿ ಮಾತ್ರ ಅವಕಾಶ ನೀಡಲಾಗಿದೆ.
– ಡಾ.ಜಗದೀಶ್‌, ಜಂಟಿ ನಿರ್ದೇಶಕರು, ತೋಟಗಾರಿಕೆ ಇಲಾಖೆ 

ಪ್ರವೇಶ ಶುಲ್ಕ
ಪುಷ್ಪ ಪ್ರದರ್ಶನಕ್ಕೆ ಬೆಳಗ್ಗೆ 9ರಿಂದ ಸಂಜೆ 7ರವರೆಗೆ ವೀಕ್ಷಣೆಗೆ ಅವಕಾಶ ನೀಡಲಾಗಿದೆ. ವಯಸ್ಕರಿಗೆ ಸಾಮಾನ್ಯ ದಿನಗಳಲ್ಲಿ 50 ರೂ., ರಜಾ ದಿನಗಳಲ್ಲಿ 60 ರೂ., ಮಕ್ಕ ಳಿಗೆ ಎಲ್ಲಾ ದಿನಗಳಲ್ಲೂ 20 ರೂ. ಟಿಕೆಟ್‌ ದರ ನಿಗದಿ ಮಾಡಲಾಗಿದೆ. ಪ್ರವೇಶ ಟಿಕೆಟ್‌ಗಳನ್ನು ನಾಲ್ಕೂ ಪ್ರವೇಶ ದ್ವಾರಗಳಲ್ಲಿ ಪಡೆಯಬಹುದು. ಜತೆಗೆ ಕಾರ್ಡ್‌ ಸ್ಪೈಪಿಂಗ್‌ ಯಂತ್ರಗಳನ್ನೂ ಅಳವಡಿಸಲಾಗುವುದು.

ಉಚಿತ ಪ್ರವೇಶ
ಪ್ರದರ್ಶನದ ವೇಳೆ ಶನಿವಾರ, ಭಾನುವಾರಗಳಂದು ಮತ್ತು ಆ.15 ಅನ್ನು ಹೊರತುಪಡಿಸಿ ಉಳಿದ ಎಲ್ಲಾ ದಿನಗಳಲ್ಲೂ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿರುತ್ತದೆ.

ಲಾಲ್‌ ಬಗ್ಗೆ ಆಡಿಯೋ ಗೈಡ್‌ 
ಲಾಲ್‌ಬಾಗ್‌ನಲ್ಲಿರುವ ಗಾಜಿನಮನೆ, ಸಾವಿರಾರು ವರ್ಷಗಳಷ್ಟು ಹಳೆಯದಾದ ಲಾಲ್‌ಬಾಗ್‌ ಬಂಡೆ, ಬ್ಯಾಂಡ್‌ ಸ್ಟಾಂಡ್‌ ಸೇರಿದಂತೆ ಪ್ರಮುಖ 18ಕ್ಕೂ ಹೆಚ್ಚು ಪ್ರವಾಸಿ ತಾಣಗಳ ಕುರಿತು ಸವಿವರ ಆಡಿಯೋ ಮಾಹಿತಿ ನೀಡಲು ಆ್ಯಪ್‌ ಬಿಡುಗಡೆ ಮಾಡಲಾಗುತ್ತಿದೆ. ಪ್ರವಾಸೋದ್ಯಮ ಇಲಾಖೆ ಸಹಕಾರದೊಂದಿಗೆ “ಪಿನಾಕಿನ್‌ ಆಡಿಯೊ ಗೈಡ್‌ ಆ್ಯಪ್‌’ ರೂಪಿಸಲಾಗಿದೆ. ಪುಷ್ಪ ಪ್ರದರ್ಶನದಲ್ಲಿ ಈ ಆ್ಯಪ್‌ ಚಾಲನೆ ಸಿಗಲಿದೆ. ಉದ್ಯಾನದಲ್ಲಿ 2017ನೇ ಸಾಲಿನಲ್ಲಿ 75 ಕುಟುಂಬಗಳಿಗೆ ಸೇರಿದ 35 ದೇಶಗಳ 650 ಸಸ್ಯಪ್ರಬೇಧದ ಸಸಿಗಳನ್ನು ನೆಡುವ ಕಾರ್ಯಕ್ಕೆ ಆ.4ರಂದು ರಾಜ್ಯಪಾಲರು ಚಾಲನೆ ನೀಡಲಿದ್ದಾರೆ.

ಫ‌ಲಪುಷ್ಪ ಪ್ರದರ್ಶನದಲ್ಲಿ ನಾಟಕ ಪ್ರದರ್ಶನ
ಫಲಪುಷ್ಪ ಪ್ರದರ್ಶನದಲ್ಲಿ ಕುವೆಂಪು ಅವರ “ಬೊಮ್ಮನಹಳ್ಳಿಯ ಕಿಂದರಜೋಗಿ’, “ಜಲಗಾರ’ ನಾಟಕದ ದೃಶ್ಯ, “ಪೂವಮ್ಮನ ಚಿತ್ರಣ’, “ಮಲೆಗಳಲ್ಲಿ ಮದುಮಗಳು’ ಮತ್ತಿತರ “ಕಾದಂಬರಿಗಳ ಸನ್ನಿವೇಶ’, “ಶ್ರೀರಾಮಾಯಣ ದರ್ಶನಂ-ದುಶ್ಯಾಸನನ ಸ್ವಪ್ನಸಿದ್ದಿ’ ಸನ್ನಿವೇಶಗಳು ಜಾನ್‌ದೇವರಾಜ್‌ ಕೈಚಳಕದಲ್ಲಿ ಮೂಡಿಬರಲಿವೆ.

ಮರಳಿನಲ್ಲಿ ಅರಳುವ ನೇಗಿಲ ಯೋಗಿ, ಪೇಪರ್‌ ಕಪ್‌ ಮ್ಯೂರಲ್‌ನಲ್ಲಿ ಕುವೆಂಪು, ಬಣ್ಣದ ಚೆಂಡುಗಳಲ್ಲಿ ಕುವೆಂಪು ಮುಖಬಿತ್ತಿ ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ.  ಪ್ರತಿದಿನ ಸಂಜೆ 4 ರಿಂದ 7 ಗಂಟೆಯವರೆಗೆ ಕುವೆಂಪು ಅವರು ರಚಿಸಿದ ಕವಿತೆಗಳ ಗೀತಗಾಯನ ಮತ್ತು ನಾಟಕಗಳ ಪ್ರದರ್ಶನ ನಡೆಯಲಿದೆ. ಆ.5ರಂದು ನಿಸಾರ್‌ ಅಹಮದ್‌ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ಹಾಗೂ ಮಂಡ್ಯದ ಪ್ರೊ.ಜಯಪ್ರಕಾಶ್‌ಗೌಡರ ಕಲಾಬಳಗದಿಂದ ಕುವೆಂಪು ನಾಟಕ ಪ್ರದರ್ಶನವಿದೆ.

ಟಾಪ್ ನ್ಯೂಸ್

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

accident

Gangavathi: ಎರಡು ಪ್ರತ್ಯೇಕ ಅಪಘಾತದಲ್ಲಿ ಮೂರು ಜನ ಸಾವು

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Election Commission: ಮೋದಿ, ರಾಹುಲ್‌ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್‌

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ

Sumalatha Ambareesh: ಟ್ವೀಟ್‌ನಲ್ಲಿ ಸಂಸದೆ ಸುಮಲತಾ ಅಂಬರೀಶ್‌ ವಿವೇಕದ ಪಾಠ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

State government: ರಾಜ್ಯ ಸರಕಾರಕ್ಕೆ ಎನ್‌ಸಿಬಿ ನೋಟಿಸ್‌? 

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

28

Athletics: ಕಿರಿಯರ ಏಷ್ಯನ್‌ ಆ್ಯತ್ಲೆಟಿಕ್ಸ್‌  ಜಾವೆಲಿನ್‌ನಲ್ಲಿ ದೀಪಾಂಶುಗೆ ಬಂಗಾರ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Gukesh: ಚಾಂಪಿಯನ್‌ ಗುಕೇಶ್‌ಗೆ ಭವ್ಯ ಸ್ವಾಗತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.