ರೈತ ಕುಟುಂಬಗಳಿಗೆ ಸಿಗದ ಜಮೀನು ಒಡೆತನ


Team Udayavani, Feb 10, 2020, 11:23 AM IST

state-tdy-1

ಸಾಂಧರ್ಬಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಸರಿ ಸುಮಾರು 95 ವರ್ಷದಿಂದ ಉಳುಮೆ ಮಾಡುತ್ತಿದ್ದರೂ ಜಮೀನಿನ ಒಡೆತನ ಸಿಗದೆ ಸಾವಿರಾರು ರೈತ ಕುಟುಂಬಗಳು ಅತಂತ್ರ ಸ್ಥಿತಿ ಎದುರಿಸುವಂತಾಗಿದೆ.

1924ರಲ್ಲಿ ಮೈಸೂರು ಮಹಾರಾಜರಿಂದ ಮಂಜೂ ರಾಗಿರುವ ಜಮೀನಿನ ಒಡೆತನಕ್ಕಾಗಿ ರೈತರು ಅಲೆ ದಾಡುವಂತಾಗಿದೆ. “ಸರ್ಕಾರಿ ಫ‌ಡಾ’ ಎಂದು ಪಹಣಿ ಯಲ್ಲಿ ಉಲ್ಲೇಖವಾಗಿರುವುದೇ ಇದಕ್ಕೆ ಕಾರಣ. ಕಾಂಗ್ರೆಸ್‌ ಹಾಗೂ ಜೆಡಿಎಸ್‌-ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಜಾರಿಗೊಂಡ ಸಾಲಮನ್ನಾ ಯೋಜನೆಯೂ ಈ ರೈತರಿಗೆ ಅನ್ವಯವಾಗಿಲ್ಲ. ಸಹಕಾರ ಸಂಘಗಳಷ್ಟೇ ಅಲ್ಲ, ಖಾಸಗಿ ಲೇವಾದೇವಿದಾರರು ಅಥವಾ ಬ್ಯಾಂಕ್‌ಗಳಿಂದಲೂ ಇವರಿಗ ಸಾಲ ಸಿಗುವುದಿಲ್ಲ.

ಎಚ್‌.ಡಿ.ಕುಮಾರಸ್ವಾಮಿ ಜಾರಿಗೆ ತಂದ ಸಾಲಮನ್ನಾದ ಸವಲತ್ತು ಅವರ ತವರು ಜಿಲ್ಲೆ ರಾಮನಗರದ ಸರ್ಕಾರಿ ಫ‌ಡಾ ಎಂದು ಪಹಣಿಯಲ್ಲಿ ನಮೂದಾಗಿರುವ ರೈತ ಕುಟುಂಬಗಳಿಗೆ ಸಿಕ್ಕಿಲ್ಲ. ಮಂಡ್ಯ, ಹಾಸನ, ಮೈಸೂರು, ಚಾಮರಾಜನಗರ, ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೂ ಇಂತಹ ಸಮಸ್ಯೆ ಇದೆ. ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡವರಿಗೆ ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ 94 ಸಿ, 94 ಸಿಸಿ ಅಡಿ ಅಕ್ರಮ- ಸಕ್ರಮಕ್ಕೆ ಮುಂದಾಗಿದೆ. ಆದರೆ, 95 ವರ್ಷಗಳಿಂದ ಉಳುಮೆ ಮಾಡುತ್ತಿರುವ ಸರ್ಕಾರಿ ಫ‌ಡಾ ಪಹಣಿ ಹೊಂದಿರುವವರಿಗೆ ಜಮೀನು ಒಡೆತನ ನೀಡಲಾಗುತ್ತಿಲ್ಲ.

1985 ರಿಂದ 1995 ರವರೆಗೆ ಕೈ ಬರವಣಿಗೆಯಲ್ಲಿ ಪಹಣಿ ಇದ್ದಾಗ ಜಮೀನು ಯಾರಿಗೆ ಮಂಜೂರು ಮಾಡ ಲಾಗಿತ್ತೋ ಅವರ ಹೆಸರು ಬರುತ್ತಿತ್ತು. ಗಣಕೀಕೃತ ಪಹಣಿ ವ್ಯವಸ್ಥೆ ಜಾರಿಗೆ ಬಂದ ನಂತರ ಕೇವಲ ಸರ್ಕಾರಿ ಫ‌ಡಾ ಎಂದು ಮಾತ್ರ ಬರುತ್ತಿದೆ. ಅದಕ್ಕೂ ಮುಂಚೆ ಖಾತೆ ಸಂಖ್ಯೆ ಆಧಾರದಲ್ಲಿ ಕಂದಾಯ ಕಟ್ಟಿಸಿಕೊಳ್ಳಲಾಗುತ್ತಿತ್ತು. ಇದೀಗ ಕಂದಾಯ ಸಹ ಕಟ್ಟಿಸಿಕೊಳ್ಳುತ್ತಿಲ್ಲ.

ಇದರಿಂದಾಗಿ ಸಾವಿರಾರು ರೈತ ಕುಟುಂಬಗಳು ಅತ್ತ ಒಡೆತನವೂ ಇಲ್ಲ, ಇತ್ತ ಕೃಷಿಗೆ ಸಾಲ ಸೌಲಭ್ಯವೂ ಇಲ್ಲ. ಸರ್ಕಾರದ ಯಾವುದೇ ಯೋಜನೆ ಗಳೂ ಸಿಗದೆ ಪರದಾಡು ವಂತಾಗಿದೆ.2014ರಲ್ಲಿ ಒಮ್ಮೆ ಸರ್ಕಾರದ ವತಿಯಿಂದಲೇ ಸರ್ಕಾರಿ ಫ‌ಡ ವಿಚಾರ ಇತ್ಯರ್ಥ ಪಡಿಸಲು ರೈತರಿಂದ ಅರ್ಜಿ ಸ್ವೀಕರಿಸಲು ಸಮಯ ನಿಗದಿ ಮಾಡಲಾಗಿತ್ತು. ಆದರೆ, ಅದರ ಬಗ್ಗೆ ಹೆಚ್ಚು ಜಾಗೃತಿ ಮೂಡಿಸಲಿಲ್ಲ. ಹೀಗಾಗಿ ಕೆಲವೇ ಸಂಖ್ಯೆಯ ರೈತರು ಅರ್ಜಿ ಹಾಕಿ ದರು. ಆದರೂ ಆ ಅರ್ಜಿಗಳು ಇನ್ನೂ ಇತ್ಯರ್ಥವಾಗಿಲ್ಲ.

ಪರಿಶೀಲಿಸಿ ಕ್ರಮ: ಈ ಕುರಿತು ಕಂದಾಯ ಸಚಿವ ಆರ್‌. ಅಶೋಕ್‌ ಪ್ರತಿಕ್ರಿಯಿಸಿ, ಈ ಕುರಿತು ಸಂಪೂರ್ಣ ಮಾಹಿತಿ ತರಿಸಿಕೊಳ್ಳುತ್ತೇನೆ. ಹಿಂದೆ ಏನಾಗಿತ್ತೋ ಗೊತ್ತಿಲ್ಲ, ಕಾನೂನಿನಲ್ಲಿ ಅವಕಾಶ ಇದ್ದರೆ ರೈತರಿಗೆ ಅನುಕೂಲ ಮಾಡಿಕೊಡಲಾಗುವುದು. ಅಧಿಕಾರಿಗಳ ಜತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳುತ್ತಾರೆ. ರೈತರು ಇತ್ತೀಚೆಗೆ ತಮ್ಮ ಜಮೀನುಗಳಿಗೆ ಸಂಬಂಧಿಸಿದಂತೆ ದಾಖಲೆ ಮತ್ತಿತರ ಮಾಹಿತಿ ಕೇಳಿದರೆ ಸಿಗುತ್ತಿಲ್ಲ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮರಳವಾಡಿ ಹೋಬಳಿಯ ತಟ್ಟೆಕೆರೆ ಗ್ರಾಮದವರು ತಹಸೀಲ್ದಾರ್‌ ಅವರಿಗೆ ಪತ್ರ ಬರೆದರೆ, ಸರ್ಕಾರಿ ಫ‌ಡಾ ಮಾಡಿಕೊಂಡಿರುವ ಬಗ್ಗೆ ಸರ್ಕಾರಿ ಆದೇಶ ಹಾಗೂ ಇತರೆ ದಾಖಲಾತಿಗಳು ಲಭ್ಯವಿರುವುದಿಲ್ಲ ಎಂದು ಹಿಂಬರಹ ನೀಡಿದ್ದಾರೆ.

ಜಿಲ್ಲಾಧಿಕಾರಿಗಳ ಬಳಿ ಹೋದರೆ, ಮೂರು ವರ್ಷ ಸತತ ಉಳುಮೆ ಮಾಡದಿದ್ದರೆ ಕಂದಾಯ ಪಾವತಿಸದಿದ್ದರೆ ಅಂತಹ ಜಮೀನು ಸರ್ಕಾರಿ ಫ‌ಡಾ ಎಂದು ಪರಿಗಣಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ, ರೈತರು ವರ್ಷಗಳಿಂದ ಉಳುಮೆ ಮಾಡುತ್ತಿದ್ದಾರೆ. ಹತ್ತು ವರ್ಷದಿಂದ ಸರ್ಕಾರವೇ ಅವರಿಂದ ಕಂದಾಯ ಪಾವತಿಸಿಕೊಳ್ಳುತ್ತಿಲ್ಲ. ಸರ್ಕಾರಿ ಫ‌ಡಾ ಎಂದು ಪಹಣಿಯಲ್ಲಿರುವುರಿಂದ ನಾಲ್ಕೈದು ಜಿಲ್ಲೆ ಗಳಲ್ಲಿ 95 ವರ್ಷಗಳಿಂದ ಉಳುಮೆ ಮಾಡುತ್ತಿರುವ ರೈತರು ಜಮೀನು ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದಾರೆ. ಇತ್ತೀಚೆಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರಿಗೂ ಪತ್ರದ ಮೂಲಕ ಸಮಸ್ಯೆ ಬಗೆಹರಿಸುವಂತೆ ಕೋರಿದ್ದಾರೆ.

ಏನಿದು ಸರ್ಕಾರಿ ಫ‌ಡಾ? :  ಕಂದಾಯ ಜಮೀನುಗಳಲ್ಲಿ ಸರ್ಕಾರಿ ಖರಾಬು, ಸಿ ಖರಾಬು, ನೆಡು ತೋಪು, ಗುಂಡು ತೋಪು, ಸೊಪ್ಪಿನ ಬೆಟ್ಟ, ಕಾನು ಎಂದು ಪಹಣಿಯಲ್ಲಿ ನಮೂದಾಗಿರುತ್ತದೆ. ಹಳೇ ಮೈಸೂರು ಭಾಗದ ಕೆಲವು ಭಾಗಗಳಲ್ಲಿ 1995ರ ಈಚೆಗೆ ಸರ್ಕಾರಿ ಫಡಾ ಎಂದು ಪಹಣಿಯಲ್ಲಿ ನಮೂದಾಗುತ್ತಿದೆ, ಇದು ಸರ್ಕಾರಿ ಭೂಮಿ ಎಂಬ ಅರ್ಥ ಎಂದು ಕಂದಾಯ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ತಮ್ಮ ಕುಟುಂಬದ ಪೂರ್ವಿಕರ ಹೆಸರು ಇದ್ದ ಪಹಣಿಯಲ್ಲಿ ಇದ್ದಕ್ಕಿದ್ದಂತೆ ಸರ್ಕಾರಿ ಫ‌ಡಾ ಎಂದು ಬರುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ.

 

ಎಸ್‌.ಲಕ್ಷ್ಮಿನಾರಾಯಣ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

PSI re-examination: ಪಿಎಸ್‌ಐ ಮರು ಪರೀಕ್ಷೆ, ಅಂತಿಮ ಅಂಕಪಟ್ಟಿ ಬಿಡುಗಡೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Congress candidate: ನಾನು ಹುಟ್ಟಿದಾಗ ಒಕ್ಕಲಿಗ, ಬೆಳೆಯುತ್ತ ವಿಶ್ವಮಾನವ: ಲಕ್ಷ್ಮಣ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Dinesh Gundu Rao: ಕ್ಷಯ ರೋಗ ನಿಯಂತ್ರಣ ಔಷಧ ಪೂರೈಕೆಗೆ ಕೇಂದ್ರಕ್ಕೆ ಮನವಿ; ದಿನೇಶ್‌

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

Lok Sabha elections: ಸಂಸದ ಬಸವರಾಜುಗೆ “ಗೋ ಬ್ಯಾಕ್‌’ ಎಂದ ಬಿಜೆಪಿಗರು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.