ಜೆಪಿ ನಗರದಲ್ಲಿ “ಪಾಕಶಾಲ’ ರೆಸ್ಟೋರೆಂಟ್‌ಗೆ ಚಾಲನೆ

Team Udayavani, Aug 4, 2019, 3:04 AM IST

jp-nagaradalli

ಬೆಂಗಳೂರು: ಹೋಟೆಲ್‌ ಉದ್ಯಮದಲ್ಲಿ ಹೊಸತನಕ್ಕೆ ನಾಂದಿ ಹಾಡಿರುವ ಅಡಿಗ ಹೋಟೆಲ್‌ ಸಮೂಹ ಸಂಸ್ಥೆ ಸಂಸ್ಥಾಪಕ ವಾಸುದೇವ ಅಡಿಗ ಅವರ ನೂತನ ಪರಿಕಲ್ಪನೆಯ ಅಧಿಕೃತ ಸಸ್ಯಾಹಾರಿ ಮಲ್ಟಿ ಕ್ಯೂಸಿನ್‌ “ಪಾಕಶಾಲ’ ರೆಸ್ಟೋರೆಂಟ್‌ಗೆ ಜಯನಗರದಲ್ಲಿ ಶಾಸಕಿ ಸೌಮ್ಯಾ ರೆಡ್ಡಿ ಚಾಲನೆ ನೀಡಿದರು. ನಗರದ ಆಸ್ಟರ್‌-ಆರ್‌ವಿ ಆಸ್ಪತ್ರೆ ಕ್ಯಾಂಪಸ್‌ನಲ್ಲಿ ವಿನೂತನ ಹಾಗೂ ಆಧುನಿಕ ಶೈಲಿಯಲ್ಲಿ ರೂಪಿಸಿರುವ ಪಾಕಶಾಲ ರೆಸ್ಟೋರೆಂಟ್‌ನ 6ನೇ ಶಾಖೆ ಇದಾಗಿದೆ.

ಈ ಸಂದರ್ಭದಲ್ಲಿ ಶ್ರೀ ಅನಂತೇಶ್ವರ ಫುಡ್ಸ್‌ ಪ್ರೈ.ಲಿ., ಅಧ್ಯಕ್ಷ ಮತ್ತು ಎಂ.ಡಿ ಕೆ.ಎನ್‌.ವಾಸುದೇವ ಅಡಿಗ, ನಿರ್ಮಲಾ ಅಡಿಗ, ಬಿಬಿಎಂಪಿ ಸದಸ್ಯೆ ಮಾಲತಿ ಸೋಮಶೇಖರ್‌, ಮಾಜಿ ಸದಸ್ಯ ಸೋಮಶೇಖರ್‌, ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಡಾ.ಎಂ.ಕೆ. ಪಾಂಡುರಂಗ ಶೆಟ್ಟಿ, ಆರ್‌ಎಸ್‌ಎಸ್‌ಟಿ ಕಾರ್ಯದರ್ಶಿ ಎವಿಎಸ್‌ ಮೂರ್ತಿ, ಡಿ.ಪಿ.ನಾಗರಾಜ್‌, ಪಿ.ಎಸ್‌.ನಂದಕುಮಾರ್‌, ಕೆಪಿಎಚ್‌ಆರ್‌ಎ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್‌, ಬೆಂಗಳೂರು ಹೋಟೆಲ್ಸ್‌ ಸಂಘದ ಅಧ್ಯಕ್ಷ ಪಿ.ಸಿ.ರಾವ್‌, ಮಯೂರ ಹೋಟೆಲ್‌ ಸಮೂಹದ ಶ್ರೀನಿವಾಸ ರಾವ್‌, ಆಸ್ಟರ್‌-ಆರ್‌ವಿ ಆಸ್ಪತ್ರೆ ಸಿಒಒ ಡಾ. ಪ್ರಶಾಂತ್‌ ಎನ್‌. ಇತರರು ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಕೆ.ಎನ್‌.ವಾಸುದೇವ ಅಡಿಗ ಅವರು, ಗ್ರಾಹಕರ ಅಭಿರುಚಿಗೆ ತಕ್ಕಂತೆ ಪಾಕಶಾಲ ಸರಣಿಯ ಉಪಹಾರ ಗೃಹಗಳನ್ನು ನಿರ್ಮಿಸಲಾಗುತ್ತಿದೆ. ದಕ್ಷಿಣ ಭಾರತ, ಉತ್ತರ ಭಾರತ, ಚೈನೀಸ್‌ ಮತ್ತು ಕಾಂಟಿನೆಂಟಲ್‌ ಬಹು-ತಿನಿಸುಗಳನ್ನು ಪರಿಚಯಿಸಲಾಗಿದ್ದು, ಪಾಕಶಾಲ ಬ್ರಾಂಡನ್ನು ದೇಶದ ಎಲ್ಲ ಪ್ರಮುಖ ನಗರಗಳಲ್ಲಿ ಹಾಗೂ ವಿದೇಶಗಳಲ್ಲಿ ಪರಿಚಯಿಸಲಾಗುವುದು.

ಮುಂಬರುವ ದಿನಗಳಲ್ಲಿ ಬೆಂಗಳೂರು-ಹಾಸನ ಹೈವೇಯ ಕುಣಿಗಲ್‌ ಮತ್ತು ಮಂಗಳೂರು-ಮುಂಬೈ ಹೈವೇಯ ಕುಂಬಾಶಿಯಲ್ಲಿ ಅತ್ಯಾಧುನಿಕ ರೆಸ್ಟೋರೆಂಟ್‌ಗಳನ್ನು ತೆರೆಯಲಾಗುವುದು. ಈಗಾಗಲೇ ಬೆಂಗಳೂರಿನ ವಿದ್ಯಾರಣ್ಯಪುರ, ಆರ್‌.ಆರ್‌.ನಗರ, ಚಂದ್ರಾ ಲೇಔಟ್‌ ಹಾಗೂ ಮಲ್ಲೇಶ್ವರದಲ್ಲಿ ನಮ್ಮ ರೆಸ್ಟೋರೆಂಟ್‌ಗಳಿವೆ ಎಂದರು. ಈ ಸಂದರ್ಭದಲ್ಲಿ ಸಿಇಒ ಮತ್ತು ಇಡಿ ಗಣೇಶ್‌ ರಾಮನಾಥನ್‌ ಮಾತನಾಡಿ, ಪಾಕಶಾಲ ಎಂಬ ಉತ್ತಮ ಗುಣಮಟ್ಟದ, ಶುಚಿ-ರುಚಿ ಮತ್ತು ಆರೋಗ್ಯಕರ ತಿಂಡಿ ತಿನಿಸುವ ದೊರೆಯುವ ಹೊಸ ಸ್ಥಳವನ್ನು ಹುಟ್ಟುಹಾಕಿದ್ದೇವೆ. ಈ ಬ್ರಾಂಡ್‌ನ‌ಡಿ ಸದ್ಯದಲ್ಲೇ ಕನಕಪುರ ರಸ್ತೆಯ ಯಲಚೇನಹಳ್ಳಿಯಲ್ಲಿ ಮತ್ತೂಂದು ಆಧುನಿಕ ರೆಸ್ಟೋರೆಂಟ್‌ ಬರಲಿದೆ ಎಂದು ತಿಳಿಸಿದರು.

ನಮ್ಮ ರೆಸ್ಟೋರೆಂಟ್‌ಗಳ ತಿನಿಸುಗಳು ನೈಸರ್ಗಿಕವಾಗಿದ್ದು, ಗುಣಮಟ್ಟ ಮತ್ತು ರುಚಿ ಕಾಪಾಡುವ ಉದ್ದೇಶದಿಂದ ಪ್ರತಿ ಗಂಟೆಗೊಮ್ಮೆ ತಾಜಾ ಆಹಾರ ತಯಾರಿಸಿ ಕೊಡಲಾಗುತ್ತದೆ. ತರಕಾರಿ ಮತ್ತಿತರ ದಿನಸಿಗಳನ್ನು ನೇರವಾಗಿ ರೈತರಿಂದಲೇ ಖರೀದಿಸಿ ತರುವುದು ನಮ್ಮ ಸಂಸ್ಥೆಯ ವಿಶೇಷ. ಕನಕಪುರದಲ್ಲಿ ನಮ್ಮದೇ ಕೃಷಿ ಫಾರಂ ಇದ್ದು ಅಲ್ಲಿ ಸಾವಯವ ಉತ್ಪನ್ನಗಳನ್ನು ಬೆಳೆಯಲಾಗುತ್ತಿದೆ. ಆ ಮೂಲಕ ಮುಂದಿನ ದಿನಗಳಲ್ಲಿ ಜನತೆಗೆ ಆರೋಗ್ಯಕರ ರಾಸಾಯನಿಕ ಮುಕ್ತ ಆಹಾರ ನೀಡಲಾಗುವುದು. ಅಷ್ಟೇ ಅಲ್ಲದೆ, ಪ್ಯಾಕೇಜಿಂಗ್‌ ಫುಡ್‌ ಕ್ಷೇತ್ರವನ್ನೂ ಸಂಸ್ಥೆ ಪ್ರವೇಶಿಸಲಿದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್‌ ಸುಲಿಗೆ; ಮೂವರ ಬಂಧನ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್‌ ಬಾತ್ಮೀದಾರ ಸೆರೆ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: ಸುಲಿಗೆ ಸೇರಿ 42 ಕೇಸ್‌ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

Arrested: 17 ಕೇಸ್‌ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್‌ ಬಂಧನ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

24

OTT Release: ವಿಜಯ್‌ ದೇವರಕೊಂಡ ʼಫ್ಯಾಮಿಲಿ ಸ್ಟಾರ್‌ʼ ಓಟಿಟಿ ರಿಲೀಸ್‌ಗೆ ಡೇಟ್‌ ಫಿಕ್ಸ್

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್‌ ಮುರಿದು ಕಳ್ಳತನ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್‌ ಶೆಟ್ಟಿ ಬೆಳ್ಳಾರೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.