ಪಾದಯಾತ್ರೆ: ಕಾಂಗ್ರೆಸ್ ನಾಯಕರ ಬಂಧನಕ್ಕೆ ಲಿಂಬಾವಳಿ ಆಗ್ರಹ
ಡಿಕೆಶಿಗೆ ಕೋವಿಡ್ ಟೆಸ್ಟ್ ಮಾಡಿಸಿ
Team Udayavani, Jan 12, 2022, 5:34 PM IST
ಬೆಂಗಳೂರು : ಪಾದಯಾತ್ರೆ ನಿಲ್ಲಿಸದೇ ಇದ್ದರೆ ಇಂದು ಅಥವಾ ನಾಳೆಯೊಳಗಾಗಿ ಕಾಂಗ್ರೆಸ್ ನಾಯಕರನ್ನು ಸರಕಾರ ಬಂಧಿಸಬೇಕು ಎಂದು ಬಿಜೆಪಿ ಒತ್ತಾಯಿಸಿದೆ.
ಮಾಜಿ ಸಚಿ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬೆಂಗಳೂರು ನಗರದ ಶಾಸಕರು ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರ ಬಂಧನಕ್ಕೆ ಆಗ್ರಹಿಸಿದ್ದಾರೆ.
ಮಾಜಿ ಸಿಎಂ ಪಾದಯಾತ್ರೆಯಲ್ಲಿ ಭಾಗಿಯಾಗಿದ್ದಾರೆ. ಜವಾಬ್ದಾರಿ ಇರೋರು ಈ ರೀತಿ ಮಾಡಬಾರದು. ಇಬ್ಬರೇ ಪಾದಯಾತ್ರೆ ಮಾಡ್ತೀವಿ ಅಂತ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದರು. ಆದರೆ ಈಗ ಗುಂಪು ಸೇರಿಸುತ್ತಿದ್ದಾರೆ ಎಂದು ದೂರಿದರು.
ಈ ವಿಚಾರದಲ್ಲಿ ಸರ್ಕಾರ ಮೆಚುರ್ ಆಗಿ ಕೆಲಸ ಮಾಡಿದೆ. ಪಾದಯಾತ್ರೆ ಬಗ್ಗೆ ಕೋರ್ಟ್ ನೋಟಿಸ್ ನೀಡಿದೆ. ಹೀಗಾಗಿ ಇಂದು ಅಥವಾ ನಾಳೆಯೊಳಗೆ ಕಾಂಗ್ರೆಸ್ ನಾಯಕರ ಬಂಧನ ಮಾಡಬೇಕು ಎಂದು ಒತ್ತಾಯಿಸಿದರು.
ದಯವಿಟ್ಟು ಡಿ.ಕೆ ಶಿವಕುಮಾರ್ ಅವರೇ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳಿ. ನಿಮಗೂ ಕೊರೋನಾ ಬಂದಿರಬಹುದು, ಇದೆಲ್ಲ ಸುಳ್ಳು ಅನ್ನೋ ಮಾತು ಬೇಡ. ನಿಮ್ಮನ್ನ ನೋಡಿದ್ರೆ ಕೊರೋನಾ ಓಡಿ ಹೋಗುತ್ತಾ.? ದಯವಿಟ್ಟು ರಾಜಕೀಯ ಮಾಡಬೇಡಿ ಎಂದರು.
ನೀವು ಒಬ್ಬಿಬ್ಬರು ಓಡಾಡಿದ್ರೆ ನಮ್ಮಅಭ್ಯಂತರ ಇರಲಿಲ್ಲ. ಆದ್ರೆ ಜನ ಸಮೂಹವೇ ಕರೆದುಕೊಂಡು ಹೋಗ್ತಿದ್ದೀರಿ. ಇದು ಕೋವಿಡ್ ನಿಯಮೋಲ್ಲಂಘನೆ ಎಂದು ಆರೋಪಿಸಿದರು.