ಶಿವಮೊಗ್ಗ ಕ್ಷೇತ್ರಕ್ಕೆ ಮಧು ಹೆಸರು ಘೋಷಣೆ

Team Udayavani, Feb 26, 2019, 12:30 AM IST

madu.jpg

ಬೆಂಗಳೂರು:ಲೋಕಸಭೆ ಚುನಾವಣೆ ಸೀಟು ಹಂಚಿಕೆ ಕುರಿತು ಅಗತ್ಯ ಬಿದ್ದರೆ ಕಾಂಗ್ರೆಸ್‌ ಹೈಕಮಾಂಡ್‌  ಮಟ್ಟದಲ್ಲಿ ಮಾತನಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ.

ಮಧು ಬಂಗಾರಪ್ಪ ನಿವಾಸಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸೀಟು ಹಂಚಿಕೆ ಕುರಿತು ರಾಜ್ಯ ನಾಯಕರು ಮಾತುಕತೆ ನಡೆಸುತ್ತಿದ್ದಾರೆ. ಸಮನ್ವಯ ಸಮಿತಿ ಸಭೆಯಲ್ಲೂ ಚರ್ಚಿಸಲಿದ್ದಾರೆ. ಅನಿವಾರ್ಯ ಆದರೆ, ನಾನು ಎಐಸಿಸಿ ಆಧ್ಯಕ್ಷ ರಾಹುಲ್‌ಗಾಂಧಿಯವರ ಜತೆ ಮಾತನಾಡುತ್ತೇನೆ ಎಂದು ತಿಳಿಸಿದರು.

ಸೀಟು ಹಂಚಿಕೆ ಕುರಿತು ನಡೆದ ಮಾತುಕತೆಯಲ್ಲಿ 12 ಸೀಟು ಬಿಟ್ಟುಕೊಡುವಂತೆ ರೇವಣ್ಣ ಅವರು ಪ್ರಸ್ತಾಪ ಮಾಡಿದ್ದಾರೆ.  ಏನು ನಿರ್ಧಾರ ಆಗುತ್ತದೆಯೋ ನೋಡೋಣ. ಇನ್ನೊಂದು ವಾರದಲ್ಲಿ ದೇವೇಗೌಡರು ಎಲ್ಲಿ ಸ್ಪರ್ಧೆ ಮಾಡುತ್ತಾರೆ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.

ರಾಹುಲ್‌ಗಾಂಧಿಯವರ ನೇತೃತ್ವದಲ್ಲಿ ರಾಜ್ಯದಲ್ಲಿ ಮೈತ್ರಿ ಸರ್ಕಾರ ನಡೆಯುತ್ತಿದೆ. ಮುಂದೆಯೂ ಸುಸೂತ್ರವಾಗಿ ನಡೆಯಲಿದೆ. ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದರು.

ಬಿಜೆಪಿಯವರು ಮೋದಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ನಾವೂ ಪಕ್ಷ ಸಂಘಟನೆ ಹಾಗೂ ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾತ್ರೆ ಕೈಗೊಳ್ಳಬೇಕಾಗಿದೆ. ಆದಷ್ಟು ಬೇಗ ರೂಪು-ರೇಷೆ ನಿರ್ಧಾರವಾಗಲಿದೆ ಎಂದು ಹೇಳಿದರು.

ಪ್ರಧಾನಿ ನರೇಂದ್ರಮೋದಿ ಅವರು ರೈತರ ಖಾತೆಗೆ ಎರಡು ಸಾವಿರ ರೂ. ಹಾಕಿದ್ದಾರೆ. ನಾಲ್ಕೂವರೆ ವರ್ಷ ರೈತರನ್ನು ಮರೆತಿದ್ದರು, ಈಗ ನೆನಪಿಸಿಕೊಂಡಿದ್ದಾರೆ. 

ಮರೆತಿರುವವರಿಗೆ ಶಿಕ್ಷೆ ಕೊಡುವ ಶಕ್ತಿ ರೈತರಿಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ರಾಷ್ಟ್ರಪ್ರೇಮ ಹಾಗೂ ದೇಶಭಕ್ತಿ ಬಿಜೆಪಿಯಿಂದ ನಾವು ಕಲಿಯಬೇಕಿಲ್ಲ. ನಮಗೂ ಎರಡೂ ಇದೆ ಎಂದು ಹೇಳಿದರು.

ಬಂಡಿಪುರದಲ್ಲಿ ಕಾಡ್ಗಿಚ್ಚು ಬಗ್ಗೆ ಪ್ರತಿಕ್ರಿಯಿಸಿದ ದೇವೇಗಡರು, ದೊಡ್ಡ ಅನಾಹುತ ಆಗಿದೆ. ಬಿಸಿಲು ಕೂಡ ಜಾಸ್ತಿಯಿದೆ. ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಹೆಚ್ಚು ನಿಗಾ ವಹಿಸಿದ್ದಾರೆ ಎಂದು ತಿಳಿಸಿದರು. ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌  ಉಪಸ್ಥಿತರಿದ್ದರು.

ಮಧು ಕಣಕ್ಕೆ ,ಮೊದಲ ಅಭ್ಯರ್ಥಿ ಪ್ರಕಟ
ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಮಧು ಬಂಗಾರಪ್ಪ ಅವರನ್ನೇ ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ. ಇದೇ ಕಾರಣಕ್ಕೆ ದೇವೇಗೌಡರೇ ಖುದ್ದಾಗಿ ಮಧು ಬಂಗಾರಪ್ಪ ಅವರ ನಿವಾಸಕ್ಕೆ ಹೋಗಿ ಮಾತುಕತೆ ನಡೆಸಿ ಒಪ್ಪಿಸಿದ್ದಾರೆ. ಮಧು ಬಂಗಾರಪ್ಪ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.  ವಿಧಾನಸಭೆ ಹಾಗೂ ಲೋಕಸಭೆ  ಉಪ ಚುನಾವಣೆಯಲ್ಲಿ ಸೋಲು ಅನುಭವಿಸಿದ ನಂತರ ಮಧು ಬಂಗಾರಪ್ಪ ಅವರು ಬೇಸರಗೊಂಡಿದ್ದರು. ವಿಧಾನಪರಿಷತ್‌ ಸದಸ್ಯ ಸ್ಥಾನ ಹಾಗೂ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸ್ಥಾನ ಸಹ ನಿರಾಕರಿಸಿದ್ದರು. ಇದೀಗ ಮತ್ತೆ ಅವರನ್ನೇ ಲೋಕಸಭೆ ಚುನಾವಣೆ ಕಣಕ್ಕಿಳಿಸಲು ನಿರ್ಧರಿಸಲಾಗಿದೆ.

ಮಧು ಬಂಗಾರಪ್ಪ ಸ್ಪಲ್ಪ ಮುನಿಸಿಕೊಂಡು ತಟಸ್ಥರಾಗಿದ್ದರು. ಹಾಗಾಗಿ ಅವರನ್ನು ಮಾತನಾಡಿಸಲು ಬಂದರೆ, ಶಿವಮೊಗ್ಗ ಕ್ಷೇತ್ರ ನಮಗೆ ಖಚಿತ, ಮಧು ಅವರೇ ಅಭ್ಯರ್ಥಿ. ನಾವೆಲ್ಲಾ ಜತೆಗಿರುತ್ತೇವೆ.
– ಎಚ್‌.ಡಿ.ದೇವೇಗೌಡ

ದೇವೇಗೌಡರು ಮನೆಗೆ ಬಂದಿದ್ದು ನನ್ನ ತಂದೆಯವರೇ ಬಂದಷ್ಟು ಖುಷಿಯಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ನಾಯಕರು ಒಪ್ಪಿಯೇ ನನ್ನ ಹೆಸರು ಫೈನಲ್‌ ಮಾಡಿದ್ದಾರೆ. ಪಕ್ಷ ಹೇಳಿದಂತೆ ನಾನು ಕೇಳುತ್ತೇನೆ. ಈ ಬಾರಿ ದಡ ಮುಟ್ಟುತ್ತೇನೆ ಎನ್ನುವ ವಿಶ್ವಾಸವಿದೆ.
– ಮಧು ಬಂಗಾರಪ್ಪ

ಟಾಪ್ ನ್ಯೂಸ್

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಉ.ಪ್ರ. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ 10 ಲಕ್ಷ ರೂ.ವರೆಗಿನ ಚಿಕಿತ್ಸೆ ಉಚಿತ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಉಪ ಚುನಾವಣೆ ಬಿಜೆಪಿ ಹಣ ಹಂಚುವ ಮೂಲಕ ಗೆಲ್ಲಲು ಯತ್ನ: ಸುರ್ಜೆವಾಲ ಆರೋಪ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಕೋವಿಡ್‌ ಲಸಿಕೆ ಕಡ್ಡಾಯ ಪ್ರಶ್ನಿಸಿದ ಅರ್ಜಿ ವಜಾ: ಅರ್ಜಿದಾರ ವಕೀಲರಿಗೆ ಹೈಕೋರ್ಟ್‌ ತರಾಟೆ

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಉಪ ಚುನಾವಣೆ ಸಿಎಂಗೆ ಸೋಲಿನ ಭಯ :ಡಿ.ಕೆ.ಶಿವಕುಮಾರ್‌

ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಗೌರವವಿದೆ ರೋಷನ್ ಶ್ರೀಕಾಂತ್

ಕನ್ನಡ ಪ್ರೇಕ್ಷಕರಿಗೆ ಸಿನಿಮಾ ಕ್ಷೇತ್ರದಲ್ಲಿ ಬಹುದೊಡ್ಡ ಗೌರವವಿದೆ ರೋಷನ್ ಶ್ರೀಕಾಂತ್

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಏರ್‌ಇಂಡಿಯಾ ಮಾರಾಟ ಒಪ್ಪಂದ ಪತ್ರಕ್ಕೆ ಸಹಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ಆನ್‌ಲೈನ್‌ ದಾಳಿ: ಶಮಿ ಬೆಂಬಲಕ್ಕೆ ಸಹಸ್ರ ಮಂದಿ

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ನವೆಂಬರ್‌ ಅಂತ್ಯಕ್ಕೆ ಮತ್ತೊಂದು ಲಸಿಕೆ?

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ರಾಜಧಾನಿಯಲ್ಲಿ ಎವೈ 4.2 ರೂಪಾಂತರಿ ಪ್ರಕರಣ ವರದಿ

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

ಟಿ20 ವಿಶ್ವಕಪ್‌: ಅಫ್ಘಾನ್‌ಗೆ ಭರ್ಜರಿ ಗೆಲುವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.