ವ್ಯಾಲಂಟೈನ್ಸ್ ಡೇಗೆ ಮಾಲ್‌ಗಳು, ಫ್ಯಾನ್ಸಿ ಮಳಿಗೆ, ಪಾರ್ಕ್‌ಗಳಲ್ಲಿ ಹೊಸ ಜೋಶ್
Team Udayavani, Feb 13, 2021, 8:22 AM IST
ಬೆಂಗಳೂರು: ಪ್ರೇಮಿಗಳ ದಿನಾಚರಣೆಗೆ ಒಂದು ದಿನ ಮಾತ್ರ ಬಾಕಿ ಉಳಿದಿದ್ದು, ನಗರದ ಮಾಲ್ ಹಾಗೂ ಮಾರುಕಟ್ಟೆಗಳಲ್ಲಿ ಪ್ರೇಮಿಗಳ ದಿನಾಚರಣೆಯಂದು ಗಿಫ್ಟ್ ನೀಡಲು ಖರೀದಿ ಪ್ರಕ್ರಿಯೆ ಜೋರಾಗಿ ನಡೆದಿದೆ.
ಈ ವರ್ಷ ಕೊರೊನಾ ನಡುವೆ ಪ್ರೇಮಿಗಳ ದಿನ ಆಚರಿಸುವಂತಾಗಿದ್ದು, ಪ್ರೇಮ ನಿವೇದನೆಗೆ ಈಗಾಗಲೇ ಸಿದ್ಧರಾಗಿದ್ದಾರೆ. ಪ್ರೇಮಿಗಳ ದಿನಾಚರಣೆಗೆ ಈ ಹಿಂದಿನ ವರ್ಷಗಳಲ್ಲಿ ಇರುತ್ತಿದ್ದ ಜೋಶ್ ಇಲ್ಲವಾದರೂ, ಪ್ರೇಮಿಗಳ ದಿನದ ಸಂಭ್ರಮ ಕಳೆಗುಂದಿಲ್ಲ.
ಪ್ರೇಮಿಗಳ ದಿನಾಚರಣೆಗಾಗಿಯೇ ಮಾಲ್ ಗಳನ್ನು ಹಾರ್ಟ್ ಮಾದರಿಯ ಬಲೂನ್ ಹಾಗೂ ಹೂಗಳಿಂದ ಅಲಂಕಾರ ಮಾಡಲಾ ಗಿದೆ. ನಗರದ ಗರುಡ ಮಾಲ್, ಸಿಗ್ನೇಚರ್ ಮಾಲ್, ಬೆಂಗಳೂರು ಒನ್ ಮಾಲ್ ಹಾಗೂ ಲಿಡೋ ಮಾಲ್ ಸೇರಿದಂತೆ ಹಲವು ಮಾಲ್ ಗಳಲ್ಲಿ ಪ್ರೇಮಿಗಳ ದಿನಾಚರಣೆ ಸಿದ್ದತೆ ಭರ್ಜರಿಯಾಗಿ ನಡೆದಿದೆ.
ಭಿನ್ನ ಶೈಲಿಯ ಆಭರಣಗಳು, ಸಿದ್ಧ ಉಡುಪುಗಳು ಕೂಡ ಮಾರುಕಟ್ಟೆಗೆ ಲಗ್ಗೆಯಿರಿಸಿವೆ. ಚಿತ್ರಕಲಾ ಪರಿಷತ್ತು ಸೇರಿದಂತೆ ಇನ್ನೂ ಹಲವು ಕಡೆಗಳಲ್ಲಿ ಪ್ರೇಮಿಗಳು ದಿನಾಚರಣೆ ಹಿನ್ನೆಲೆಯಲ್ಲಿ ಭಿನ್ನ ಶೈಲಿಗಳ ಆಭರಣಗಳು ಪ್ರದರ್ಶನ ಮತ್ತು ಮಾರಾಟವನ್ನೂ ಏರ್ಪಡಿಸಲಾಗಿದೆ.
ಸಂಗಾತಿಗಾಗಿ ಕೊಡುಗೆ ಆಯ್ಕೆ: ವ್ಯಾಲಂಟೈನ್ಸ್ ಡೇಯನ್ನು ಮತ್ತಷ್ಟು ವಿಶೇಷಗೊಳಿಸುವ ಉದ್ದೇಶದಿಂದ ನಗರದ ಚಿತ್ರಕಲಾ ಪರಿಷತ್ತಿನಲ್ಲಿ ದಿ ಸೋಕ್ ಮಾರ್ಕೇಟ್ -ಆರ್ಟ್ ಆ್ಯಂಡ್ ಕ್ರಾಫ್ಟ್ ಮೇಳ ಆಯೋಜಿಸಲಾಗಿದೆ. ಸಂಗಾತಿಗೆ ವಿಶಿಷ್ಟವಾದ ಕೊಡುಗೆಯನ್ನು ಇಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನೂರಕ್ಕೂ ಹೆಚ್ಚು ಮಳಿಗೆಗಳು ವ್ಯಾಲಂಟೈನ್ಸ್ ಡೇಗೆ ಕೊಡುಗಾಗಿ ಅಣಿಗೊಳಿಸಲಾಗಿದೆ.
ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ಮನೆಯ ಗಾರ್ಡನ್ ಅಲಂಕರಿಸುವ ಉತ್ಪನ್ನಗಳು, ಉಡುಪು, ಹ್ಯಾಂಡ್ ಲ್ಯೂಮ್‌ಗಳು ಇಲ್ಲಿ ದೊರೆಯಲಿವೆ.
ಪ್ರೇಮಿಗಳ ದಿನಾಚರಣೆಗೆ ರಜೆ ನೀಡಿ: ಪ್ರೇಮಿಗಳ ದಿನಾಚರಣೆಯನ್ನು ಪ್ರತಿ ವರ್ಷ ಕನ್ನಡ ಚಳವಳಿ ವಾಟಾಳ್ ಪಕ್ಷದ ಮುಖಂಡ ವಾಟಾಳ್ ನಾಗರಾಜ್ ಭಿನ್ನರೀತಿಯಲ್ಲಿ ಆಚರಿಸುತ್ತಾರೆ. ಈ ಬಾರಿಯು ಫೆ.14 ರಂದು ಕಬ್ಬನ್ ಪಾರ್ಕ್ ನಲ್ಲಿ ವಿಶಿಷ್ಟ ರೀತಿಯಲ್ಲಿ ಪ್ರೇಮಿಗಳು ದಿನಾಚರಣೆಯನ್ನು ಆಚರಿಸಲಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವಾಟಾಳ್ ನಾಗರಾಜ್, ಯಾರು ಕೂಡ ಪ್ರೇಮಿಗಳು ದಿನಾಚರಣೆಯನ್ನು ಲಘುವಾಗಿ ತೆಗೆದುಕೊಳ್ಳಬಾರದು. ಪ್ರೇಮಿಗಳನ್ನು ದಿನಾಚರಣೆಗೆ ಮನ್ನಣೆ ನೀಡಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರ ಪ್ರೇಮಿಗಳ ದಿನಾಚರಣೆಗಾಗಿ ರಜೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ವಿಕಲಾಂಗ ಚೇತನರಿಗೆ ಮಾಸ್ಕ್ ವಿತರಣೆ: ಐಡಿಯಲ್ ಫೌಂಡೇಶನ್ ವತಿಯಿಂದ ಫೆ.14ರಂದು ನಗರದಲ್ಲಿ ಪ್ರೇಮಿಗಳ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಪ್ರೇಮಿಗಳ ದಿನಾಚರಣೆ ಅಂಗವಾಗಿ ನಗರದ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿಕಲಾಂಗ ಚೇನತರಿಗೆ ಉಚಿತವಾಗಿ ಮಾಸ್ಕ್ ವಿತರಿಸಿ ಕೊರೊನಾದ ಬಗ್ಗೆ ಜಾಗೃತಿ ಮೂಡಿಸಲಾಗುವುದು. ಮತ್ತಿಕೆರೆಯ ಜೆ.ಪಿ.ಪಾರ್ಕ್‌ನ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸಂಜೆ 4 ರಿಂದ 5 ಗಂಟೆ ವರೆಗೆ ನಡೆಯಲಿದೆ. ಇದೇ ವೇಳೆ ಮಿಮಿಕ್ರಿ ಗೋಪಿ ಅವರು ಹಾಸ್ಯ ರಸಸಂಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಎಸಿಬಿ ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಮಾಜಿ ಪೊಲೀಸ್ ಸಿಬ್ಬಂದಿ
ಇಂದಿರಾ ಕ್ಯಾಂಟೀನ್ಗೆ ಇಸ್ಕಾನ್ ಊಟ; ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ
ತಾಜಾ ಮಾವು, ಹಲಸು ಬೇಕಾ?ಮೇಳಕ್ಕೆ ಬನ್ನಿ;ಲಾಲ್ಬಾಗ್ನಲ್ಲಿ ಜೂ.13ರವರೆಗೆ ಪ್ರದರ್ಶನ, ಮಾರಾಟ
ಸ್ತ್ರೀಯರ ವೇಷದಲ್ಲಿ ಫೈನಾನ್ಸ್ನಲ್ಲಿ ಕಳವಿಗೆ ಯತ್ನ: ಸೈರನ್ ಶಬ್ದ ಕೇಳಿ ಆರೋಪಿಗಳು ಪರಾರಿ
ಮೆಡಿಕಲ್ ಸೀಟ್ ನೆಪದಲ್ಲಿ ವಂಚನೆ: ವಂಚಿಸಿದ ಹಣ ಕೇಳಿದ್ದಕ್ಕೆ ಹನಿಟ್ರ್ಯಾಪ್