Udayavni Special

ಮದುವೆ ಮಾಡಿಕೊಳ್ಳುವುದಾಗಿ ಹೇಳಿದಾತ ಲಕ್ಷಾಂತರ ರೂ. ಲೂಟಿ ಮಾಡಿ ಪರಾರಿ ಆದ.!


Team Udayavani, Nov 28, 2020, 10:29 AM IST

BNG-TDY-1

ಬೆಂಗಳೂರು: ವಿವಾಹ ಸಂಬಂಧಿತ ವೆಬ್‌ಸೈಟ್‌ ಮೂಲಕ ಪರಿಚಯವಾದ ದೆಹಲಿ ಮೂಲದ ಯುವಕನೊಬ್ಬ ಮದುವೆ ಮಾಡಿಕೊಳ್ಳುವುದಾಗಿ ನಗರದ ಖಾಸಗಿ ಕಂಪನಿಯ ಮಹಿಳಾ ಉದ್ಯೋಗಿಯಿಂದ ಲಕ್ಷಾಂತರ ರೂ. ಪಡೆದುಕೊಂಡಿದಲ್ಲದೆ, ಆಕೆಯನ್ನು ಮನೆಯಲ್ಲಿ ಕೂಡಿ ಹಾಕಿ ನಗ-ನಾಣ್ಯ ಸಮೇತ ಪರಾರಿಯಾಗಿರುವ ಘಟನೆ ಕಾಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಬಂಧ ಕನ್ನಮಂಗಲದ ನೀತು (ಹೆಸರು ಬದಲಿಸಲಾಗಿದೆ) (32)ಎಂಬವರು ದೆಹಲಿ ಮೂಲದ ರೂಪಂ ಕುಮಾರ್‌ ದಾಸ್‌ ಎಂಬಾತನ ವಿರುದ್ಧ ವಂಚನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ. ಉತ್ತರ ಭಾರತ ಮೂಲದ ನೀತು ಕಳೆದ ಮಾರ್ಚ್‌ನಿಂದ ಕನ್ನ ಮಂಗಲದ ಅಪಾರ್ಟ್‌ಮೆಂಟ್‌ ವೊಂದರಲ್ಲಿ ಸಹೋದರಿ, ನೀತು ಜತೆ ವಾಸವಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದಾರೆ. ಸಹೋದರಿಯರು ಜಂಟಿಯಾಗಿ ವಿವಾಹ ಸಂಬಂಧಿದ ವೆಬ್‌ಸೈಟ್‌ನಲ್ಲಿ ಖಾತೆ ತೆರೆದಿದ್ದಾರೆ.

ಈ ವೇಳೆ ದೆಹಲಿ ಮೂಲದ ದಿಲೀಪ್‌ ಕುಮಾರ್‌ ದಾಸ್‌ ಎಂಬವರು ನೀತು ಅವರ ವಿವರ ಕಂಡು ಪುತ್ರನಿಗೆ ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಇಟ್ಟಿದ್ದಾರೆ. ಅಲ್ಲದೆ, ಪುತ್ರ ರೂಪಂಕುಮಾರ್‌ ದಾಸ್‌ ಕೂಡ ತನ್ನ ಫೋಟೋ ನೋಡಿ ಒಪ್ಪಿಕೊಂಡಿದ್ದಾನೆ ಎಂದು ಆತನ ಮೊಬೈಲ್‌ ನಂಬರ್‌ ನೀಡಿದ್ದಾರೆ. ಬಳಿಕ ರೂಪಂ ಕುಮಾರ್‌ ದಾಸ್‌ ಹಾಗೂ ನೀತು ಇಬ್ಬರು ಪರಸ್ಪರ ವಾಟ್ಸ್‌ಆ್ಯಪ್‌ ಚಾಟ್‌ ಮತ್ತು ವಿಡಿಯೋ ಕಾಲ್‌ ಮಾಡುತ್ತಿದ್ದರು. ಈ ವೇಳೆ ಆರೋಪಿ, ಭಾವಿ ಪತ್ನಿಯಿಂದ ತನ್ನ ಖಾತೆಗೆ 1.22 ಲಕ್ಷ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಬಳಿಕ ತಾಯಿ ಮೃತಪಟ್ಟಿದ್ದಾರೆ ಎಂದು 20 ಸಾವಿರ ರೂ. ಪಡೆದುಕೊಂಡಿದ್ದಾನೆ. ಲಾಕ್‌ಡೌನ್‌ ಮುಗಿದ ಬಳಿಕ ಸೆಪ್ಟೆಂಬರ್‌ನಲ್ಲಿ ಗುವಾಹಟಿಯಲ್ಲಿ ನೀತುರನ್ನು ಭೇಟಿಯಾದ ಆರೋಪಿ ಆಗಲೂ 23 ಸಾವಿರ ರೂ. ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು.

ಬೀಗ ಹಾಕಿಕೊಂಡು ಪರಾರಿ :  ನ.20ರಂದು ತನ್ನ ಸಂಬಂಧಿಕರ ಮನೆಯಲ್ಲಿ ಶಿವ ಪೂಜೆ ಇದ್ದು, ಅಲ್ಲಿಗೆ ಒಟ್ಟಿಗೆ ಹೋಗಬೇಕಿದೆ ಎಂದು ತನ್ನ ಮನೆಯಲ್ಲಿ ಆತನನ್ನು ಇರಿಸಿಕೊಂಡಿದ್ದಾರೆ. ಆದರೆ, ಆರೋಪಿ ತಡರಾತ್ರಿ ಮನೆಯಲ್ಲಿದ್ದ 7.90 ಲಕ್ಷ ರೂ. ನಗದು, ಒಂದು ಲ್ಯಾಪ್‌ ಟಾಪ್‌, ಮೊಬೈಲ್‌, 2 ವಾಚ್‌, ಬ್ಲೂಟೂತ್‌, ಕ್ಯಾಮೆರಾ ಬ್ಯಾಗ್‌, ಡಿಎಸ್‌ಎಲ್‌ ಆರ್‌ ಕ್ಯಾಮೆರಾ ಹಾಗೂ ಇತರೆ ಮೌಲ್ಯಯುತ ವಸ್ತುಗಳನ್ನು ಕಳವು ಮಾಡಿ ಮನೆಗೆಬೀಗಹಾಕಿಪರಾರಿಯಾಗಿದ್ದಾನೆ.ಬಳಿಕ ಸ್ಥಳೀಯರ ನೆರವಿನಿಂದಬಾಗಿಲು ತೆರೆಸಿಕೊಂಡಿದ್ದಾರೆ. ಆರೋಪಿಗಾಗಿ ಶೋಧ ಮುಂದುವರಿದಿದೆ ಎಂದು ಕಾಡುಗೋಡಿ ಪೊಲೀಸರು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

suresh-kumar

ಶಾಸಕ ಮನಗೂಳಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

Woman, 93, Reveals Her Secret to Career Longevity as She Retires After 69 Years at Same Ad Agency

ತನ್ನ 93ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಮಹಿಳೆ..!

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

ಹಳೆಯಂಗಡಿ : ಎರಡು ಬೈಕ್ ಗಳ ನಡುವೆ ಅಪಘಾತ ; ಓರ್ವ ಸಾವು

ಅರಂತೋಡು : ಕಾಡಿನಿಂದ ಊರಿಗೆ ಬಂದ ಒಂಟಿ ಸಲಗ

ಅರಂತೋಡು :ಕಾಡಿನಿಂದ ಊರಿಗೆ ಬಂದ ಒಂಟಿ ಸಲಗ ; ಈ ಆನೆಯಲ್ಲಿದೆ ಒಂದು ವಿಶೇಷತೆ

Gagipur

ಪ್ರತಿಭಟನೆ ಅಂತ್ಯಗೊಳಿಸಿ, ಕೂಡಲೇ ಸ್ಥಳ ಬಿಟ್ಟು ಹೊರಡಿ: ರೈತರಿಗೆ ಉತ್ತರ ಪ್ರದೇಶ ಸರ್ಕಾರ

ಕಾಟಿಪಳ್ಳ : ಬೈಕ್ ಸವಾರನಿಗೆ ಹಲ್ಲೆ ಪ್ರಕರಣ ;ಸುರತ್ಕಲ್ ಪೊಲೀಸರಿಂದ ಮೂವರ ಬಂಧನ

ಕಾಟಿಪಳ್ಳ : ಬೈಕ್ ಸವಾರನಿಗೆ ಚೂರಿ ಇರಿತ ಪ್ರಕರಣ ; ಸುರತ್ಕಲ್ ಪೊಲೀಸರಿಂದ ಮೂವರ ಬಂಧನ








ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suresh-kumar

ಶಾಸಕ ಮನಗೂಳಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

ಒಂದು ದೇಶ; ಒಂದು ಚುನಾವಣೆ ಚರ್ಚೆ

ಒಂದು ದೇಶ; ಒಂದು ಚುನಾವಣೆ ಚರ್ಚೆ

Untitled-1

ಸವಾಲಾಗುತ್ತಿರುವ ಶುಲ್ಕ ನಿಗದಿ

ಇನ್ನೂ ಅಧಿಕಾರ ಸ್ವೀಕರಿಸದ  ಸಚಿವ ಆನಂದ್‌ ಸಿಂಗ್‌

ಇನ್ನೂ ಅಧಿಕಾರ ಸ್ವೀಕರಿಸದ ಸಚಿವ ಆನಂದ್‌ ಸಿಂಗ್‌

ಸಭಾಪತಿ ಸ್ಥಾನ ಹೊರಟ್ಟಿಗೆ: ಬಿಜೆಪಿಯಿಂದ ಪ್ರಾಣೇಶ್‌ ಉಪ ಸಭಾಪತಿ

ಜೆಡಿಎಸ್ ನ ಹೊರಟ್ಟಿಗೆ ಸಭಾಪತಿ ಸ್ಥಾನ : ಬಿಜೆಪಿಯ ಪ್ರಾಣೇಶ್‌ ಉಪ ಸಭಾಪತಿ

MUST WATCH

udayavani youtube

ನುಗ್ಗೆ ಸೊಪ್ಪಿನ ಬೇಸಾಯದ ಬಗ್ಗೆ ಸಂಪೂರ್ಣ ಮಾಹಿತಿ

udayavani youtube

Engineering ಮುಗಿದ ಕೂಡಲೇ ನಿಮಗೆ ಕೆಲಸ ಸಿಗಬೇಕೇ?!

udayavani youtube

ಕೃಷಿಕ ಪ್ರತಿಭಟನೆ – ಗೊಂದಲ, ಘರ್ಷಣೆ , ವಿಶ್ಲೇಷಣೆ

udayavani youtube

ಮಂಗಳೂರು: ಜ. 30ರಿಂದ ಕಂಬಳ ನಡೆಸಲು ಅನುಮತಿ

udayavani youtube

ಕೃಷಿ ಕಾಯಿದೆ; ಕೃಷಿಕನ ಅಭಿಪ್ರಾಯ ಕ್ಕೆ ಕಿವಿಯಾಗೋಣ ಬನ್ನಿ

ಹೊಸ ಸೇರ್ಪಡೆ

ANI

ಹರಿಯಾಣದ 3 ಜಿಲ್ಲೆಗಳಲ್ಲಿ ಇಂಟರ್‌ನೆಟ್‌ ಬಂದ್‌; ರೈತರ ತೆರವಿಗೆ ಉಭಯ ಸರಕಾರಗಳ ಹರಸಾಹಸ

suresh-kumar

ಶಾಸಕ ಮನಗೂಳಿ ನಿಧನಕ್ಕೆ ಸುರೇಶ್ ಕುಮಾರ್ ಸಂತಾಪ

Woman, 93, Reveals Her Secret to Career Longevity as She Retires After 69 Years at Same Ad Agency

ತನ್ನ 93ನೇ ವಯಸ್ಸಿನಲ್ಲಿ ವೃತ್ತಿಯಿಂದ ನಿವೃತ್ತಿ ಪಡೆಯುತ್ತಿರುವ ಮಹಿಳೆ..!

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

ಚರಂಡಿ ಸ್ವಚ್ಛತೆ ವೇಳೆ ಇಬ್ಬರು ಕಾರ್ಮಿಕರ ದುರ್ಮರಣ: ಅಧಿಕಾರಿಗಳ ನಿರ್ಲಕ್ಷಕ್ಕೆ ಆಕ್ರೋಶ 

28-36

ತಾಯ್ನೆಲ-ಮಾತೃಭಾಷೆಗಿಂತ ಮಿಗಿಲು ಬೇರಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.