Udayavni Special

28, 29ರಂದು ಮಾವು, ಹಲಸು ಮೇಳ

550 ಮಾವು, 80 ಹಲಸಿನ ತಳಿಗಳ ಪ್ರದರ್ಶನ | ಜೂ.1ರಂದು ಸಿಕೆಪಿಯಲ್ಲಿ ಮೇಳ

Team Udayavani, May 23, 2019, 2:07 PM IST

bngre-tdy-2..

ಬೆಂಗಳೂರು: ಹಣ್ಣುಗಳ ರಾಜ ಮಾವಿನ ಹಣ್ಣಿನ ಎಷ್ಟು ಪ್ರಕಾರಗಳು ನಿಮಗೆ ಗೊತ್ತು? ಐದು ಅಬ್ಬಬ್ಟಾ ಎಂದರೆ ಹತ್ತು. ಆದರೆ, ನಗರದಲ್ಲಿ 550 ಮಾವಿನ ತಳಿಗಳ ದರ್ಶನ ನಿಮಗೆ ಸಿಗಲಿದೆ. ಅಷ್ಟೇ ಅಲ್ಲ, ಅದನ್ನು ಸವಿಯುವ ಅವಕಾಶವೂ ನಿಮ್ಮದಾಗಲಿದೆ. ಪ್ರತಿಷ್ಠಿತ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಎಚ್ಆರ್‌) ಈ ಅವಕಾಶ ಕಲ್ಪಿಸುತ್ತಿದೆ.

ಹಾಗೇ, ಸುಮಾರು 80 ಪ್ರಕಾರದ ಹಲಸಿನ ಹಣ್ಣುಗಳನ್ನೂ ಬೆಂಗಳೂರಿಗರು ನೋಡಿ, ಸವಿಯಬಹುದು. ನಗರದ ಹೊರವಲಯ ಮತ್ತು ಹೃದಯಭಾಗ ಎರಡೂ ಕಡೆಗಳಲ್ಲಿ ಪ್ರತ್ಯೇಕವಾಗಿ ಎರಡೆರಡು ದಿನಗಳ ಕಾಲ ಐಐಎಚ್ಆರ್‌ ಈ ಬಾರಿ ಮಾವು ಮತ್ತು ಹಲಸಿನ ವೈವಿಧ್ಯತಾ ಮೇಳ ಹಮ್ಮಿಕೊಂಡಿದೆ. ಮೇ 28 ಮತ್ತು 29ರಂದು ಹೆಸರಘಟ್ಟದಲ್ಲಿರುವ ಐಐಎಚ್ಆರ್‌ ಆವರಣದಲ್ಲಿ ಹಾಗೂ ಜೂನ್‌ 1 ಮತ್ತು 2ರಂದು ಚಿತ್ರಕಲಾ ಪರಿಷತ್‌ನಲ್ಲಿ ಮೇಳ ನಡೆಯಲಿದೆ ಎಂದು ಸಂಸ್ಥೆಯ ನಿರ್ದೇಶಕ ಡಾ.ಎಂ.ಆರ್‌. ದಿನೇಶ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಮೊದಲು ಐಐಎಚ್ಆರ್‌ ಆವರಣದಲ್ಲಿ ಮಾತ್ರ ಮೇಳ ನಡೆಯುತ್ತಿತ್ತು. ಆದರೆ, ನಗರವಾಸಿಗಳಿಗೆ ಮಾವು ಮತ್ತು ಹಲಸಿನ ವೈವಿಧ್ಯತೆಯನ್ನು ಪರಿಚಯಿಸಲು ಇದೇ ಮೊದಲ ಬಾರಿಗೆ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ. ಐಐಎಚ್ಆರ್‌ನಲ್ಲಿ ಸುಮಾರು 728 ಪ್ರಕಾರದ ಮಾವಿನ ತಳಿಗಳು ಮತ್ತು 170 ಹಲಸಿನ ತಳಿಗಳನ್ನು ಸಂಗ್ರಹಿಸಲಾಗಿದ್ದು, ಅವುಗಳ ಡಿಎನ್‌ಎ, ಎಲ್ಲಿಂದ ತೆಗೆದುಕೊಂಡು ಬರಲಾಗಿದೆ ಎಂಬುದನ್ನು ತಿಳಿಸುವ ಪಾಸ್‌ಪೋರ್ಟ್‌ ಡಾಟಾ ಸೇರಿದಂತೆ ಪ್ರತಿ ತಳಿಯ ವೈಜ್ಞಾನಿಕ ವಿವರ ಸಹಿತ ಪ್ರದರ್ಶನಕ್ಕಿಡಲಾಗುವುದು. ಆಯ್ದ ರೈತರು ಕೂಡ ಮಾವು ಮತ್ತು ಹಲಸಿನ ಪ್ರದರ್ಶನದಲ್ಲಿ ಮಳಿಗೆಗಳನ್ನು ಹಾಕಲಿದ್ದು, ಮಾರಾಟಕ್ಕೂ ಲಭ್ಯ ಇರಲಿದೆ ಎಂದು ವಿವರಿಸಿದರು.

10 ಸಾವಿರ ಜನರ ನಿರೀಕ್ಷೆ: ಈಗಾಗಲೇ ನಗರದಲ್ಲಿ ನಡೆಯುತ್ತಿರುವ ಮೇಳಗಳಿಗೂ ಐಐಎಚ್ಆರ್‌ ಹಮ್ಮಿಕೊಂಡ ಮೇಳಕ್ಕೂ ಸಾಕಷ್ಟು ವ್ಯತ್ಯಾಸ ಇದ್ದು, ಇದು ಸಂಶೋಧನಾ ಆಧಾರಿತ ಮೇಳವಾಗಿದೆ. ಇಲ್ಲಿ ಈ ಎರಡೂ ಹಣ್ಣುಗಳ ವೈವಿಧ್ಯತೆಯ ಪರಿಚಯ ಆಗಲಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ಡಾ.ದಿನೇಶ್‌, ಮೇಳದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ರಾಜೇಂದ್ರ ಪ್ರಸಾದ್‌, ಕೃಷಿ ಇಲಾಖೆ ಅಧಿಕಾರಿಗಳು ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ಜನ ಭೇಟಿ ನೀಡುವ ನಿರೀಕ್ಷೆ ಇದೆ. ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದು ಹೇಳಿದರು.

ಇದಲ್ಲದೆ, 27 ಮತ್ತು 28ರಂದು ‘ಮಾವು ಮತ್ತು ಹಲಸಿನ ಬೆಳೆಗಳಲ್ಲಿ ಉದ್ದಿಮೆ ಅವಕಾಶಗಳು’ ಕುರಿತು ತರಬೇತಿ ಕಾರ್ಯಾಗಾರ ಕೂಡ ಹಮ್ಮಿಕೊಳ್ಳಲಾಗಿದೆ. ಎರಡು ದಿನಗಳ ಕಾರ್ಯಾಗಾರಕ್ಕೆ ಆಸಕ್ತರು ಮುಂಚಿತವಾಗಿ ಹೆಸರು ನೋಂದಂಣಿ ಮಾಡಬೇಕು. ಮಾಹಿತಿಗೆ ಮೊ: 77608 35475 ಸಂಪರ್ಕಿಸಬಹುದು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕೊಪ್ಪಳದಲ್ಲಿ ಬಂದ್ ನೀರಸ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಕೊಪ್ಪಳದಲ್ಲಿ ಬಂದ್ ನೀರಸ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

corey anderson retires from New Zealand cricket

ನ್ಯೂಜಿಲ್ಯಾಂಡ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಕೋರಿ ಆ್ಯಂಡರ್ಸನ್: ಹೊಸ ತಂಡದ ಜತೆ ಒಪ್ಪಂದ

ಗದಗಿನಲ್ಲಿ ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್

ಗದಗಿನಲ್ಲಿ ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ರಾಮನಗರ: ಕಾರ್ಯಕರ್ತರ ಪ್ರತಿಭಟನೆ, ನೀರಸ ಪ್ರತಿಕ್ರಿಯೆ ತೋರಿದ ಜನತೆ

ಪತ್ರಿಕೆಯ ಜಾಹೀರಾತುಗಳೇ ವಿಶ್ವಾಸಾರ್ಹ: ಗ್ರಾಹಕ ತೀರ್ಪು

ಪತ್ರಿಕೆಯ ಜಾಹೀರಾತುಗಳೇ ವಿಶ್ವಾಸಾರ್ಹ: ಗ್ರಾಹಕ ತೀರ್ಪು

ರಾಶಿ ಭವಿಷ್ಯ: ಈ ರಾಶಿಯವರು ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸಬೇಕಾಗಬಹುದು!

ರಾಶಿ ಭವಿಷ್ಯ: ಈ ರಾಶಿಯವರು ಅನಾವಶ್ಯಕವಾಗಿ ಅವಮಾನ ಪ್ರಸಂಗಗಳನ್ನು ಅನುಭವಿಸಬೇಕಾಗಬಹುದು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dk-shivakumar

ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಆದೇಶ; ಡಿ.ಕೆ. ಶಿವಕುಮಾರ್ ಸ್ವಾಗತ

isrel-1

ಕೃಷಿ ಸಚಿವ ಬಿ.ಸಿ.ಪಾಟೀಲ್ ಭೇಟಿ ಮಾಡಿದ ಇಸ್ರೇಲ್ ಕನ್ಸಲೇಟ್ ಜನರಲ್

ಬಿಬಿಎಂಪಿ ಚುನಾವಣೆಗೆ ಹೈಕೋರ್ಟ್ ಅನುಮತಿ: 198 ವಾರ್ಡ್ ಗಳಿಗೆ ನಡೆಯಲಿದೆ ಚುನಾವಣೆ

ಬಿಬಿಎಂಪಿ ಚುನಾವಣೆ ನಡೆಸಲು ಹೈಕೋರ್ಟ್ ಸೂಚನೆ: 198 ವಾರ್ಡ್ ಗಳಿಗೆ ನಡೆಯಲಿದೆ ಚುನಾವಣೆ

ಲಾಕೌಟ್‌ ವಾಪಸ್‌ಗೆ ಕಾರ್ಮಿಕರ ಆಗ್ರಹ

ಲಾಕೌಟ್‌ ವಾಪಸ್‌ಗೆ ಕಾರ್ಮಿಕರ ಆಗ್ರಹ

ಸಾರಿಗೆ ಸಂಸ್ಥೆಗಳ ನಷ್ಟ ಶೇ.25: ಪರಿಹಾರ ಶೇ.50

ಸಾರಿಗೆ ಸಂಸ್ಥೆಗಳ ನಷ್ಟ ಶೇ.25: ಪರಿಹಾರ ಶೇ.50

MUST WATCH

udayavani youtube

ಮರಾಠ ಅಭಿವೃದ್ಧಿ ಪ್ರಾಧಿಕಾರ ವಿರೋಧಿಸಿ ಬಂದ್ | Udayavani

udayavani youtube

ಮಂಗಳೂರು ದೋಣಿ ದುರಂತದಲ್ಲಿ ಮೃತಪಟ್ಟವರಲ್ಲಿ ಅನ್ಸಾರ್ ಎಂಬಾತನ ಮೃತ ದೇಹಕ್ಕಾಗಿ ಹುಡುಕಾಟ

udayavani youtube

ಕುಂದಾಪುರ: ಬಾವಿಗೆ ಬಿದ್ದ ಜಿಂಕೆಯ ರಕ್ಷಣೆ

udayavani youtube

ಅನಾರೋಗ್ಯಕ್ಕೆ ಕುಗ್ಗದೆ ಕೃಷಿಯಲ್ಲಿ ಬದುಕು ಬದಲಿಸಿಕೊಂಡ ಸಾಧಕ

udayavani youtube

ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕೂಡಲೇ ಆಗಬೇಕು: ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ

ಹೊಸ ಸೇರ್ಪಡೆ

ಕೊಪ್ಪಳದಲ್ಲಿ ಬಂದ್ ನೀರಸ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

ಕೊಪ್ಪಳದಲ್ಲಿ ಬಂದ್ ನೀರಸ: ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

corey anderson retires from New Zealand cricket

ನ್ಯೂಜಿಲ್ಯಾಂಡ್ ಕ್ರಿಕೆಟ್ ಗೆ ಗುಡ್ ಬೈ ಹೇಳಿದ ಕೋರಿ ಆ್ಯಂಡರ್ಸನ್: ಹೊಸ ತಂಡದ ಜತೆ ಒಪ್ಪಂದ

ಗದಗಿನಲ್ಲಿ ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್

ಗದಗಿನಲ್ಲಿ ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ಕರ್ನಾಟಕ ಬಂದ್ ಗೆ ಬಳ್ಳಾರಿಯಲ್ಲಿ ನೀರಸ ಪ್ರತಿಕ್ರಿಯೆ: ಸಾರಿಗೆ ಸಂಚಾರ ಎಂದಿನಂತೆ

ಡೆತ್‌ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಜಾಮೀನು ನಿರಾಕರಿಸುವಂತಿಲ್ಲ

ಡೆತ್‌ನೋಟ್‌ನಲ್ಲಿ ಹೆಸರಿದ್ದ ಮಾತ್ರಕ್ಕೆ ಜಾಮೀನು ನಿರಾಕರಿಸುವಂತಿಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.