ಕೊಲಂಬಿಯಾ ಏಷಿಯಾದ ಶೇ. 100 ಪಾಲು ಪಡೆದ ಮಣಿಪಾಲ ಆಸ್ಪತ್ರೆ
Team Udayavani, May 3, 2021, 2:24 AM IST
ಬೆಂಗಳೂರು: ಮಣಿಪಾಲ್ ಆಸ್ಪತ್ರೆಯು ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಶೇ. 100ರಷ್ಟು ಪಾಲನ್ನು ಪಡೆದುಕೊಂಡಿದ್ದು, ಭಾರತದ ಎರಡನೇ ಅತಿ ದೊಡ್ಡ ಬಹು ವೈಶಿಷ್ಟ್ಯವುಳ್ಳ ಮಣಿಪಾಲ ಆಸ್ಪತ್ರೆಗಳ ಸಮೂಹದ ಮಾಲಕತ್ವವನ್ನು ಪಡೆದಿದೆ. ಮಣಿಪಾಲ್ ಆಸ್ಪತ್ರೆಯು ಈಗ 14 ನಗರಗಳಿಗೆ ವಿಸ್ತರಿಸಿದ್ದು, 26 ಆಸ್ಪತ್ರೆಗಳನ್ನು ಹೊಂದಿದೆ. 7,000ಕ್ಕೂ ಹೆಚ್ಚು ಆಸ್ಪತ್ರೆಗಳು, 4,000ಕ್ಕೂ ಹೆಚ್ಚು ವೈದ್ಯರು ಮತ್ತು 10,000ಕ್ಕೂ ಅಧಿಕ ಸಿಬಂದಿಯನ್ನು ಹೊಂದಿದೆ ಎಂದು ಪ್ರಕಟನೆ ತಿಳಿಸಿದೆ.
ಮಣಿಪಾಲ್ ಶಿಕ್ಷಣ ಮತ್ತು ಆರೋಗ್ಯ ಸಮೂಹ (ಎಂಇಎಂಜಿ)ಗಳ ಮುಖ್ಯಸ್ಥ ಡಾ| ರಂಜನ್ ಪೈ ಮಾತನಾಡಿ, ಎಲ್ಲ ವರ್ಗಾವಣ ನಿಯಮಗಳನ್ನು ಪಾಲಿಸಿದ ಬಳಿಕ ಎರಡೂ ಸಂಸ್ಥೆಗಳು ಒಂದಾಗಿ ಕಾರ್ಯನಿರ್ವಹಿಸಲಿವೆ ಎಂದು ಹೇಳಲು ತುಂಬಾ ಸಂತೋಷವಾಗು ತ್ತಿದೆ. ಎರಡೂ ಸಂಸ್ಥೆಗಳಲ್ಲಿನ ಉತ್ತಮ ಅಂಶಗಳನ್ನು ಒಗ್ಗೂಡಿಸಿ ಅತ್ಯುತ್ತಮ ಆರೋಗ್ಯ ಸೇವೆ ನೀಡುವುದು ನಮ್ಮ ಗುರಿಯಾಗಿದೆ. ಕೊಲಂಬಿಯಾ ಏಷಿಯಾದ ಎಲ್ಲ ಸಿಬಂದಿಯನ್ನು ಮಣಿಪಾಲ್ ಆಸ್ಪತ್ರೆಗೆ ಆದರದಿಂದ ಸ್ವಾಗತಿಸುತ್ತೇನೆ ಎಂದು ಹೇಳಿದರು.
ಕೊಲಂಬಿಯಾ ಫೆಸಿಫಿಕ್ ಮ್ಯಾನೇಜ್ಮೆಂಟ್ ಮುಖ್ಯಸ್ಥ ಡ್ಯಾನ್ ಬಾಟಿ ಮಾತನಾಡಿ, ಮಣಿಪಾಲ್ ಮತ್ತು ಕೊಲಂಬಿಯಾ ಏಷಿಯಾ ಸಂಸ್ಥೆಗಳು ಒಟ್ಟಾಗಿ ಆರೋಗ್ಯ ಸೇವೆ ನೀಡುವುದನ್ನು ಕಾಣಲು ಉತ್ಸುಕನಾಗಿದ್ದೇನೆ. ಎರಡೂ ಸಂಸ್ಥೆಗಳಲ್ಲಿನ ಉತ್ತಮ ಅಂಶಗಳನ್ನು ಕ್ರೋಢೀಕರಿಸಿ, ಅತ್ಯುತ್ತಮ ಸೇವೆ ನೀಡಲಾಗುವುದು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Arrested: ವಿಳಾಸ ಕೇಳುವ ನೆಪದಲ್ಲಿ ಮೊಬೈಲ್ ಸುಲಿಗೆ; ಮೂವರ ಬಂಧನ
Gold Theft: ಕೆಲಸಕ್ಕಿದ್ದ ಮನೆಯಲ್ಲಿ 50 ಲಕ್ಷ ರೂ.; ಒಡವೆ ಕದ್ದಿದ್ದವ ಸೆರೆ
Arrested: ಖಾಕಿ ಸೋಗಿನಲ್ಲಿ ಗುಜರಿ ವ್ಯಾಪಾರಿ ಸುಲಿಗೆ: ಪೊಲೀಸ್ ಬಾತ್ಮೀದಾರ ಸೆರೆ
Arrested: ಸುಲಿಗೆ ಸೇರಿ 42 ಕೇಸ್ಗಳಲ್ಲಿ ಭಾಗಿಯಾಗಿದ್ದ ರೌಡಿ ಬಂಧನ
Arrested: 17 ಕೇಸ್ನಲ್ಲಿ ಭಾಗಿಯಾಗಿದ್ದ ರೌಡಿಶೀಟರ್ ಬಂಧನ