11ರಂದು ಪೊಲೀಯೋ ಕಾರ್ಯಕ್ರಮ
Team Udayavani, Mar 9, 2018, 6:40 AM IST
ಬೆಂಗಳೂರು: ಎರಡನೇ ಸುತ್ತಿನ ಪಲ್ಸ್ ಪೊಲೀಯೋ ಕಾರ್ಯಕ್ರಮ ಮಾ.11ರಂದು ರಾಜ್ಯಾದ್ಯಂತ ನಡೆಯಲಿದ್ದು, ಲಸಿಕೆ ಕಾರ್ಯಕ್ರಮಕ್ಕೆ ಆರೋಗ್ಯ ಇಲಾಖೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.
ರಾಜ್ಯಾದ್ಯಂತ ಐದು ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಲು 32,737 ಬೂತ್ಗಳು, 51,972 ತಂಡಗಳು, 1,03,944 ಲಸಿಕಾ ಕಾರ್ಯಕರ್ತರು, 6546 ಮೇಲ್ವಿಚಾರಕರು, 1020 ಸಂಚಾರಿ ತಂಡಗಳ ಜತೆಗೆ 1737 ಟ್ರ್ಯಾನ್ಸಿಟ್ ತಂಡ ರಚಿಸಲಾಗಿದೆ. ಐದು ವರ್ಷದೊಳಗಿನ ಎಲ್ಲ ಮಕ್ಕಳಿಗೂ ಲಸಿಕೆ ಹಾಕಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ