Udayavni Special

ರಹಸ್ಯ ಪಾರ್ಟಿಗಳಿಗೆ ಪಾಟ್‌ನಲ್ಲೇ ಗಾಂಜಾ

22ನೇಮಹಡಿ ಫ್ಲ್ಯಾಟ್‌ನಲ್ಲಿ ಮಾದಕ ಬೆಳೆ | ಸೆಲೆಬ್ರಿಟಿಗಳಿಗಾಗಿ ಮನೆಯನ್ನೇ ಬ್‌ಮಾಡಿಸಿದ್ದ ಭೂಪ

Team Udayavani, Sep 21, 2020, 1:05 PM IST

bng-tdy-3

ಬೆಂಗಳೂರು: ಗಗನಚುಂಬಿ ಕಟ್ಟಡದ ಇಪ್ಪತ್ತೆರಡನೇ ಮಹಡಿ ಫ್ಲ್ಯಾಟ್‌ ಆವರಣವೇ ಸೆಲೆಬ್ರಿಟಿಗಳಿಗೆ ಪಬ್‌… ರಹಸ್ಯವಾಗಿ ನಡೆಯುತ್ತಿದ್ದ ಸೆಲೆಬ್ರೆಟಿಗಳ ಪಾರ್ಟಿಗಳು… ಪಾಟ್‌ನಲ್ಲಿಯೇ “ಗಾಂಜಾ’ ಬೆಳೆಸಿದ್ದ ಭೂಪ!.

ಡ್ರಗ್ಸ್‌ ದಂಧೆ ಪ್ರಕರಣದಲ್ಲಿ ಸಿಸಿಬಿ ಖೆಡ್ಡಾಕ್ಕೆ ಬಿದ್ದಿರುವ ಆಪ್ತ ಶ್ರೀ ಅಲಿಯಾಸ್‌ ಶ್ರೀನಿವಾಸ ಸುಬ್ರಹ್ಮಣ್ಯಂ ಫ್ಲ್ಯಾಟ್‌ನ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಬಂದ ಚಿತ್ರಣವಿದು. ಕೊಡಿಗೇಹಳ್ಳಿ ಸಮೀಪದ ಸಂಜೀವಿನಿ ನಗರದ ಬಿಯರಿ ಲೇಕ್‌ಸೈಡ್‌ ಹ್ಯಾಬಿಟೇಟ್‌ ಅಪಾರ್ಟ್‌ಮೆಂಟ್‌ನ 22ನೇ ಮಹಡಿಯ ಫ್ಲ್ಯಾಟ್‌ನಲ್ಲಿ ಸುಬ್ರಹ್ಮಣ್ಯಂ ಕುಟುಂಬದ ಜತೆನೆಲೆಸಿದ್ದಾನೆ. ಸೆಲೆಬ್ರೆಟಿಗಳಿಗೆ ಪಾರ್ಟಿ ನಡೆಸಲು ಫ್ಲ್ಯಾಟ್‌ನ  ಆವರಣವನ್ನೇ ಪಾರ್ಟಿಗಳು ನಡೆಸುವ ಪಬ್‌ ಮಾದರಿಯನ್ನಾಗಿ ಪರಿವರ್ತಿಸಿದ್ದ. ಅಲ್ಲಿ ಕಾಟೇಜ್‌ ಸ್ಟೇಜ್‌, ಲೈಟನಿಂಗ್‌ ವ್ಯವಸ್ಥೆ ಪಾರ್ಟಿ ನಡೆಸಲು ಬೇಕಾದಎಲ್ಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಹೀಗಾಗಿ, ಆತ ಪಾರ್ಟಿಗಳನ್ನು ನಡೆಸಲೇ ಈ ರೂಪಾಂತರ ಮಾಡಿರುವ ಸಾಧ್ಯತೆಯಿದೆ.

ಕೆಲವು ವಿಐಪಿ ಸೆಲೆಬ್ರೆಟಿಗಳು, ಆತನ ಪರಮಾಪ್ತ ಗಣ್ಯರ ಮಕ್ಕಳು ಆತನ ಫ್ಲ್ಯಾಟ್‌ಗೆ ಭೇಟಿ ನೀಡುತ್ತಿದ್ದರು.ಅವರಿಗೆ ಪಾರ್ಟಿಯಲ್ಲಿ ಮಾದಕ ವಸ್ತು ಸರಬರಾಜು ಮಾಡಿರುವ ಶಂಕೆಯಿದೆ. ಒಬ್ಬ ನಟಿ ಆತನ ಫ್ಲ್ಯಾಟ್‌ಗೆ ಬಂದು ಹೋಗಿರುವುದು ಖಚಿತಪಟ್ಟಿದೆ. ಆತನ ಫ್ಲ್ಯಾಟ್‌ಗೆ ಭೇಟಿ ನೀಡಿದವರು ಹಾಗೂ ಆತನ ಜತೆ ನಿರಂತರ ಸಂಪರ್ಕದಲ್ಲಿದ್ದವರ ಮಾಹಿತಿ ಕಲೆಹಾಕಲಾಗುತ್ತಿದೆ. ಆರೋಪಿ ವೈಭವ್‌ ಜೈನ್‌ ಜತೆ ವ್ಯವಹಾರ ಪಾಲುದಾರಿಕೆಯನ್ನು ಸುಬ್ರಹ್ಮಣ್ಯಂಹೊಂದಿದ್ದಾನೆ.ಜತೆಯಾಗಿ ಇಬ್ಬರೂ ಪಾರ್ಟಿಗಳನ್ನು ಆಯೋಜಿಸುತ್ತಿದ್ದರು ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

ಪಾಟ್‌ನಲ್ಲಿಯೇ ಬೆಳೆ :  ಆರೋಪಿ ಸುಬ್ರಹ್ಮಣ್ಯಂ ಫ್ಲ್ಯಾಟ್‌ನ ಪಾಟ್‌ನಲ್ಲಿ ಬೆಳೆಸಿದ್ದ ಗಾಂಜಾ ಪತ್ತೆಯಾಗಿದೆ. ಒಂದೇ ಪಾಟ್‌ನಲ್ಲಿ ಎರಡು ಗಾಂಜಾ ಗಿಡಗಳನ್ನು ಬೆಳೆಸಿದ್ದು ಪಾಟ್‌ ಸಮೇತ ಜಪ್ತಿ ಮಾಡಲಾಗಿದೆ. ತಾನು ಸೇವನೆ ಮಾಡಲು ಜತೆಗೆ ಪಾರ್ಟಿಗಳಲ್ಲಿ ಪಾಲ್ಗೊಳ್ಳುವವರಿಗೆ ನೀಡಲು ಬೆಳೆಸುತ್ತಿದ್ದ ಎಂಬುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ. ಈ ಹಿಂದೆಯೂ ಇದೇ ಮಾದರಿಯಲ್ಲಿ ಬೆಳೆದಿರುವ ಸಾಧ್ಯತೆಯಿದೆ.

ಸುಬ್ರಹ್ಮಣ್ಯಂ ಹಿನ್ನೆಲೆ ಏನು? :  ಮೈಸೂರು ಮೂಲದ ಸುಬ್ರಹ್ಮಣ್ಯಂ ವೀಕೆಂಡ್‌ಗಳಲ್ಲಿ ಹೊರ ವಲಯದ ಮನೆಗಳಲ್ಲಿ ವಾಸಿಸಲು ಇಚ್ಛಿಸುವವರಿಗೆ ಜೇಡ್‌ ಹಾಸ್ಪಿಟಾಲಿಟಿ ಹೆಸರಿನ ಉದ್ಯಮವನ್ನು 20016ರಿಂದ ಸುಬ್ರಹ್ಮಣ್ಯಂ ನಡೆಸುತ್ತಾನೆ. ಇದಕ್ಕಾಗಿ ನಗರದ ಹೊರವಲಯ ಫಾರ್ಮ್ ಹೌಸ್‌, ವಿಲ್ಲಾ ಲೀಸ್‌ಗೆ ಪಡೆದು ಬಾಡಿಗೆಗೆ ನೀಡುತ್ತಿದ್ದ ಎಂದು ಗೊತ್ತಾಗಿದೆ. ಈ ವೆಂಚರ್‌ಗಾಗಿ ಆತ2011ರಲ್ಲಿ ಭಾರತ್‌ ವಿಕಾಸ್‌ ರತ್ನ ಅವಾರ್ಡ್‌ ಇನ್‌ ಹಾಸ್ಪಿಟಾಲಿಟಿ ಪ್ರಶಸ್ತಿ ಪಡೆದುಕೊಂಡಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಆನೆ ಮರಿ

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಆನೆ ಮರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Interview: There is no goal to profit from the loss of others

ಸಂದರ್ಶನ: ಅನ್ಯರ ನಷ್ಟದಿಂದ ಲಾಭ ಗಳಿಸುವ ಗುರಿಯಿಲ್ಲ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಸ್ವಂತ ಉನ್ನತಿಯ ಮಹತ್ವಾಕಾಂಕ್ಷೆ ; ಎಲ್ಲರ ಸೌಖ್ಯದ ದರ್ಶನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sudhakar

ನಮ್ಮನ್ನೇ ದೂರವಿಟ್ಟ ಕಾಂಗ್ರೆಸ್‌ನವರು, ರಾಜ್ಯದ ಒಕ್ಕಲಿಗರ ಉದ್ಧಾರ ಮಾಡುತ್ತಾರಾ?: ಸುಧಾಕರ್

ನ. 1ರಂದು ಮತ್ತೂಂದು ಸೆಂಟಿಮೆಂಟ್‌ ಸಿನಿಮಾ ರಿಲೀಸ್ ಆಗಲಿದೆ : ಮುನಿರತ್ನ

ನ. 1ರಂದು ಮತ್ತೊಂದು ಸೆಂಟಿಮೆಂಟ್‌ ಸಿನಿಮಾ ರಿಲೀಸ್ ಆಗಲಿದೆ : ಮುನಿರತ್ನ

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಕುಸುಮಾ ಕಣ್ಣೀರಿಗೂ, ಮುನಿರತ್ನ ಕಣ್ಣೀರಿಗೂ ವ್ಯತ್ಯಾಸ ಇದೆ: ಡಿ.ಕೆ ಶಿವಕುಮಾರ್

ಆನ್ ಲೈನ್ ಶಿಕ್ಷಣದ ಅವಧಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ : ಸುರೇಶ್ ಕುಮಾರ್

ಆನ್ ಲೈನ್ ಶಿಕ್ಷಣಕ್ಕೆ ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಬಿಡುಗಡೆ:ಗೈಡ್ ಲೈನ್ಸ್ ನಲ್ಲಿ ಏನಿದೆ?

ramalinga-‘

ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ, ಇಲ್ಲವೋ? BJPಯಿಂದ ಕೀಳು ರಾಜಕೀಯ: ರಾಮಲಿಂಗಾ ರೆಡ್ಡಿ

MUST WATCH

udayavani youtube

ಅಪಾಯಕಾರಿ ತಿರುವು; ಎಚ್ಚರ ತಪ್ಪಿದರೆ ಅಪಘಾತ ಖಚಿತ!

udayavani youtube

Peoples take on reopening of schools | ಶಾಲೆ ಯಾಕೆ ಬೇಕು? ಯಾಕೆ ಬೇಡ ? | Udayavani

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

ಹೊಸ ಸೇರ್ಪಡೆ

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಆನೆ ಮರಿ

ಬೆಳ್ತಂಗಡಿ: ಕಾಡಿನಿಂದ ನಾಡಿಗೆ ಆಹಾರ ಅರಸಿಬಂದ ಆನೆ ಮರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಪುಲ್ವಾಮಾ ದಾಳಿಗೆ ನಾವು ಕಾರಣವಲ್ಲ: ಮತ್ತೆ ಉಲ್ಟಾ ಹೊಡೆದ ಪಾಕ್ ಸಚಿವ ಫವಾದ್ ಚೌಧರಿ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉಗ್ರರಿಂದ ಗುಂಡಿನ ದಾಳಿ: ಮೂವರು ಬಿಜೆಪಿ ನಾಯಕರ ಹತ್ಯೆ

ಉರುಳಿ ಬಿದ್ದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಐವರು ಸಾವು, ಹಲವರಿಗೆ ಗಾಯ

ಪಲ್ಟಿಯಾದ ಮದುವೆ ಮನೆಯಿಂದ ಬರುತ್ತಿದ್ದ ವ್ಯಾನ್: ಆರು ಮಂದಿ ಸಾವು, ಹಲವರಿಗೆ ಗಾಯ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

ಗುರಿ ಸಾಧಿಸಿಯೇ ಸಿದ್ಧ ; 5 ಲಕ್ಷ ಕೋಟಿ ಡಾಲರ್‌ ಆರ್ಥಿಕತೆ: ಮೋದಿ ಖಚಿತ ನುಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.