ತಾರತಮ್ಯದ ವಿರುದ್ಧ ಜನಾಂದೋಲನ


Team Udayavani, Feb 19, 2019, 6:47 AM IST

taratamya.jpg

ಬೆಂಗಳೂರು: ಬಿಬಿಎಂಪಿ ಬಜೆಟ್‌ನಲ್ಲಿ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಧೋರಣೆ ಅನುಸರಿಸಲಾಗಿದೆ. ಬಜೆಟ್‌ ಅನ್ನು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿಗೆ ವಾಪಸ್‌ ಕಳುಹಿಸಬೇಕು. ಇಲ್ಲವಾದರೆ, ಜನಾಂದೋಲನ ನಡೆಸಲಾಗುವುದು ಎಂದು ಪ್ರತಿಪಕ್ಷ ನಾಯಕ ಪದ್ಮನಾಭ ರೆಡ್ಡಿ ಎಚ್ಚರಿಸಿದರು. 

ಸೋಮವಾರ ಮಂಡನೆಯಾದ ಪಾಲಿಕೆ ಬಜೆಟ್‌ ಕುರಿತು ಪ್ರತಿಕ್ರಿಯಿಸಿದ ಅವರು, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೇ 900 ಕೋಟಿ ರೂ.ಗಳಿಗೂ ಅಧಿಕ ಅನುದಾನ ಹಂಚಿಕೆಯಾಗಿದೆ. ಬಿಜೆಪಿ ಶಾಸಕರಿರುವ ಕ್ಷೇತ್ರಗಳಿಗೆ ಕನಿಷ್ಠ ಅನುದಾನ ನೀಡಲಾಗಿದೆ. ಸಾಮಾಜಿಕ ನ್ಯಾಯ ಎಲ್ಲಿದೆ? ಎಲ್ಲ 198 ವಾರ್ಡ್‌ಗಳ ಜನರೂ ತೆರಿಗೆ ಪಾವತಿಸುತ್ತಿಲ್ಲವೇ ಎಂದು ಪ್ರಶ್ನಿಸಿದರು.

93 ಕಾಂಗ್ರೆಸ್‌-ಜೆಡಿಎಸ್‌ ಸದಸ್ಯರು ಸೇರಿಕೊಂಡು 101 ಬಿಜೆಪಿ ಸದಸ್ಯರ ಮೇಲೆ ದಬ್ಟಾಳಿಕೆ ಮಾಡುತ್ತಿದ್ದಾರೆ. ಆದ್ದರಿಂದ ಬಜೆಟ್‌ ವಾಪಸ್‌ ಕಳುಹಿಸಿ, ಈ ತಾರತಮ್ಯ ಸರಿಪಡಿಸಬೇಕು. ಇಲ್ಲವಾದರೆ, ಪಕ್ಷದ ನಾಯಕರೊಂದಿಗೆ ಚರ್ಚಿಸಿ ಜನಾಂದೋಲನ ರೂಪಿಸಲಾಗುವುದು ಎಂದು ಹೇಳಿದರು. 

ಬಜೆಟ್‌ ಸಂಪೂರ್ಣ ಅವಾಸ್ತವಿಕವಾಗಿದೆ. 2,350 ಕೋಟಿ ರೂ. ತೆರಿಗೆ, 14ನೇ ಹಣಕಾಸು ಆಯೋಗದ ಅನುದಾನ, ನಗರೋತ್ಥಾನ ಸೇರಿ ಸರ್ಕಾರದಿಂದ 2,480 ಕೋಟಿ ರೂ. ಹಾಗೂ ತೆರಿಗೆಯೇತರ ಮೂಲದಿಂದ 770 ಕೋಟಿ ರೂ. ಬರುತ್ತದೆ. ಇದೆಲ್ಲವೂ ಸೇರಿ ಅಂದಾಜು 5,570 ಕೋಟಿ ರೂ. ಆಗುತ್ತದೆ. ಆದರೆ, ಬಜೆಟ್‌ ಗಾತ್ರ 10,688 ಕೋಟಿ ರೂ. ಆಗಿದೆ. ಹಾಗಿದ್ದರೆ, ಉಳಿದ ಹಣ ಎಲ್ಲಿಂದ ತರುತ್ತಾರೆ ಎಂದರು. 

ಗದ್ದಲದ ನಡುವೆಯೇ ಮಂಡನೆ: ಅನುದಾನ ಹಂಚಿಕೆಯಲ್ಲಿನ ತಾರತಮ್ಯ ಖಂಡಿಸಿ ಪ್ರತಿಪಕ್ಷದ ಸದಸ್ಯರ ಪ್ರತಿಭಟನೆ, ಗದ್ದಲದ ನಡುವೆಯೇ ಬಜೆಟ್‌ ಮಂಡನೆಯಾಯಿತು. ಬಜೆಟ್‌ ಮಂಡನೆ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷ ನಾಯಕರು, ತಾರತಮ್ಯ ಧೋರಣೆ ವಿರೋಧಿಸಿ ಪ್ರತಿಭಟನೆಗೆ ಮುಂದಾದರು. ಶಿಷ್ಟಾಚಾರ ಉಲ್ಲಂ ಸಲಾಗಿದ್ದು, ಇದೊಂದು ಬೋಗಸ್‌ ಬಜೆಟ್‌ ಎಂದು ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದರು. ಆದರೆ, ಹೇಮಲತಾ ಗೋಪಾಲಯ್ಯ ಇದಾವುದಕ್ಕೂ ಕಿವಿಗೊಡದೆ ಬಜೆಟ್‌ ಪುಸ್ತಕ ಓದುವುದರಲ್ಲಿ ತಲ್ಲೀನರಾಗಿದ್ದರು.

ಬಜೆಟ್‌ ಪ್ರಮುಖ ಅಂಶಗಳು
ಆಡಳಿತ ಸುಧಾರಣೆ

-ಪಾಲಿಕೆಯ ಅಧಿಕಾರಿ ಮತ್ತು ನೌಕರರ ಹಾಜರಾತಿಯನ್ನು ಭಾವಚಿತ್ರ ಗುರುತಿಸುವ ತಂತ್ರಾಂಶ ಅಳವಡಿಕೆ ಹಾಗೂ ಅದನ್ನು ಆಧಾರಿಸಿ ವೇತನ ಪಾವತಿ
-ಕಡತಗಳ ಶೀಘ್ರ ವಿಲೇವಾರಿಗಾಗಿ ಪಾಲಿಕೆಯ ಎಲ್ಲ ಕಚೇರಿಗಳಲ್ಲಿ “ಇ-ಆಫೀಸ್‌’ ವ್ಯವಸ್ಥೆ ಜಾರಿ
-ಪಾಲಿಕೆ ಎಲ್ಲ ಅಧಿಕಾರಿ/ನೌಕರರಿಗೆ ಅಜೀಮ್‌ ಪ್ರೇಮ್‌ಜಿ ಫೌಂಡೇಷನ್‌ನಿಂದ ವ್ಯಕ್ತಿತ್ವ ವಿಕಸನ ತರಬೇತಿ
-ಉತ್ತಮ ಆಡಳಿತ ವ್ಯವಸ್ಥಾಗಾಗಿ “ಏಕ ಕಡತ ನಿರ್ವಹಣೆ’ ಪದ್ಧತಿ 
-ಪಾಲಿಕಯ ಮಾಹಿತಿ ತಂತ್ರಜ್ಞಾನ ವಿಭಾಗದಿಂದ ಆಧುನಿಕ ತಂತ್ರಾಂಶ ಅಳವಡಿಕೆ ಹಾಗೂ ಅಧಿಕಾರಿಗಳಿಗೆ ಕೌಶಲ್ಯಾಭಿವೃದ್ಧಿ ತರಬೇತಿ
-ಪಾಲಿಕೆಯ ಐಪಿಪಿ ಕೊಠಡಿಯಲ್ಲಿರುವ ದತ್ತಾಂಶ ಕೇಂದ್ರದ ಉನ್ನತೀಕರಣ
-ಐಪಿಪಿ ಆವರಣದಲ್ಲಿರುವ 2ನೇ ಮಹಡಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಸಭಾ ಕೊಠಡಿಗಾಗಿ 50 ಲಕ್ಷ ರೂ.
-ಹಾಲಿ ತಂತ್ರಾಂಶಗಳ ಉನ್ನತೀಕರಣ ಹಾಗೂ ಹೊಸ ತಂತ್ರಾಂಶಗಳ ಅಭಿವೃದ್ಧಿಗೆ 7.50 ಕೋಟಿ ರೂ.

ಆರ್ಥಿಕ ಸುಧಾರಣೆ
-ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲ ತಿರುವಳಿ ಮಾಡಲು ಕೈಗೊಂಡ ಕ್ರಮದಿಂದ 22.50 ಕೋಟಿ ರೂ. ಉಳಿತಾಯ
-ಕರ್ನಾಟಕ ಮುನಿಸಿಪಲ್‌ ಅಕೌಂಟಿಂಗ್‌ ಅಂಡ್‌ ಬಜೆಟಿಂಗ್‌ ನಿಯಮ 2006 ಪಾಲಿಕೆಗೆ ಅನ್ವಯವಾಗುವಂತೆ ಪರಿಷ್ಕರಿಸಿ ಜಾರಿಗೆ
-ಆರ್ಥಿಕ ಮತ್ತು ಆಡಳಿತ ಸುಧಾರಣೆಗಾಗಿ ಕೇಂದ್ರೀಕೃತ ಹಣಕಾಸು ಮತ್ತು ಲೆಕ್ಕಪತ್ರ ವ್ಯವಸ್ಥೆ ಜಾರಿ

ಸಾಮಾನ್ಯ ಕಾರ್ಯಕ್ರಮಗಳು
-ಜೆಜೆಆರ್‌ ನಗರ ಡಾ.ಬಾಬು ಜಗಜೀವನರಾವ್‌ ಸಾರ್ವಜನಿಕ ಆಸ್ಪತ್ರೆಯಲ್ಲಿ ಕ್ಯಾನ್ಸರ್‌ ಚಿಕಿತ್ಸಾ ವಿಭಾಗ ಆರಂಭಿಸಲು 50 ಲಕ್ಷ ರೂ.
-ಪಾಲಿಕೆಯ ಎಲ್ಲ ವಾರ್ಡ್‌ಗಳಲ್ಲಿ ಮಹಿಳೆಯರಿಗಾಗಿ ಸಾಮಾಜಿಕ ಕಾರ್ಯಕ್ರಮಕ್ಕೆ ಪ್ರತಿವಾರ್ಡ್‌ಗೆ 10 ಲಕ್ಷ ರೂ. 
-ನಿರಾಶ್ರಿತರ ರಾತ್ರಿ ತಂಗುದಾಣ ನಿರ್ಮಾಣ ಹಾಗೂ ನಿರ್ವಹಣೆಗೆ 1 ಕೋಟಿ ರೂ. 
-ಆರ್ಥಿಕವಾಗಿ ಹಿಂದುಳಿದ ಸಾಮಾನ್ಯ ವರ್ಗದವರ ಮನೆ ನಿರ್ಮಾಣಕ್ಕೆ 5 ಕೋಟಿ ರೂ.
-ಪ್ರತಿ ವಾರ್ಡ್‌ಗೆ 15 ತಳ್ಳು ಗಾಡಿಗಳನ್ನು ನೀಡಲು 4 ಕೋಟಿ ರೂ. 
-ಪ್ರತಿ ವಾರ್ಡ್‌ನ 10 ವಿಕಲಚೇತನರಿಗೆ ತ್ರಿಚಕ್ರವಾಹನ ಖರೀದಿಗೆ 10 ಕೋಟಿ ರೂ.
-ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಕ್ರೀಡೆಗಳಲ್ಲಿ ಭಾಗವಹಿಸಲು ವಿಕಲಚೇತನರಿಗೆ 2 ಕೋಟಿ ರೂ.
-ಮಂಗಳಮುಖೀಯರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲು 1 ಕೋಟಿ ರೂ. 
-ಪ್ರತಿ ವಾರ್ಡ್‌ಗೆ 50 ಸೈಕಲ್‌ ವಿತರಿಸಲು 4 ಕೋಟಿ ರೂ.
-ಪ್ರತಿವಾರ್ಡ್‌ಗೆ 50 ಟೈಲರಿಂಗ್‌ ಯಂತ್ರ ನೀಡಲು 8 ಕೋಟಿ ರೂ. 
 ಬೀದಿ ಬದಿ ವ್ಯಾಪಾರಿಗಳ ಕಲ್ಯಾಣಕ್ಕಾಗಿ 25 ಲಕ್ಷ ರೂ. 
-ಹಿರಿಯ ನಾಗರಿಕರ ಕಲ್ಯಾಣಕ್ಕಾಗಿ 5 ಕೋಟಿ ರೂ.
-ಪೂರ್ವ, ಪಶ್ಚಿಮ ಹಾಗೂ ದಕ್ಷಿಣ ವಲಯ ಮಾರುಕಟ್ಟೆ ಕಟ್ಟಡಗಳ ನವೀಕರಣಕ್ಕಾಗಿ 5 ಕೋಟಿ ರೂ. 

ಶಿಕ್ಷಣ ವಿಭಾಗ
-ಎಸ್‌ಎಸ್‌ಎಲ್‌ಸಿಯಲ್ಲಿ ಅತಿಹೆಚ್ಚು ಅಂಕ ಪಡೆದ 150 ವಿದ್ಯಾರ್ಥಿಗಳಿಗೆ ತಲಾ 25 ಸಾವಿರ ನಗದು ಪ್ರಶಸ್ತಿ
-ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮೊದಲ 100 ವಿದ್ಯಾರ್ಥಿಗಳಿಗೆ 35 ಸಾವಿರ ನಗದು ಪ್ರಶಸ್ತಿ
-ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕಾಗಿ 1.50 ಕೋಟಿ ರೂ.
-ಪಾಲಿಕೆಯ ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಪಾಸ್‌ ನೀಡಲು 1 ಕೋಟಿ ರೂ. 
-ಪಿಯುಸಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನ ಬಿಸಿಯೂಟಕ್ಕಾಗಿ 1 ಕೋಟಿ ರೂ.
-ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆಗೆ 1 ಕೋಟಿ ರೂ.
-ಶಾಲಾ-ಕಾಲೇಜುಗಳಲ್ಲಿ ಮಳೆನೀರು ಕೊಯ್ಲು ಅಳವಡಿಕೆಗೆ 2 ಕೋಟಿ ರೂ. 
-ಶಾಲಾ-ಕಾಲೇಜು ಮಕ್ಕಳ ಆರೋಗ್ಯ ಕಾಪಾಡಲು 1 ಕೋಟಿ ರೂ. ಬ್ಯಾಂಕ್‌ನಲ್ಲಿ ಠೇವಣಿ
-ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿ ಹೆಣ್ಣು ಮಕ್ಕಳ ಶುಚಿತ್ವಕ್ಕಾಗಿ ಸ್ಯಾನಿಟರಿ ಇನ್ಸಿನೇಟರ್‌ ಯಂತ್ರ ಅಳವಡಿಕೆಗೆ 50 ಲಕ್ಷ ರೂ. 
-ಶಾಲಾ-ಕಾಲೇಜು ದುರಸ್ತಿ ಹಾಗೂ ಮೂಲಬೂತ ಸೌಕರ್ಯ ಒದಗಿಸಲು 25 ಕೋಟಿ ರೂ.

ಆರೋಗ್ಯ
-ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಡಯಾಲಿಸಿಸ್‌ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ. 
-ಬಡ ರೋಗಿಗಳಿಗೆ ಉಚಿತ ಸ್ಟಂಟ್‌ ಹಾಗೂ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ 4 ಕೋಟಿ ರೂ. 
-ಬೈಕ್‌ ಆ್ಯಂಬುಲೆನ್ಸ್‌ ಖರೀದಿಗೆ 2 ಕೋಟಿ ರೂ.
-ಎಚ್‌.ಸಿದ್ದಯ್ಯ ರೆಫ‌ರಲ್‌ ಆಸ್ಪತ್ರೆಯಲ್ಲಿ ಎಸ್‌ಎನ್‌ಸಿಯು ಘಟಕ ಮೇಲ್ದರ್ಜೆಗೆ
-ದಾಸಪ್ಪ ಹೆರಿಗೆ ಆಸ್ಪತ್ರೆಯಲ್ಲಿ ಜೀರಿಯಾಟ್ರಿಕ್‌ ಹೊರ ರೋಗಿ ವಿಭಾಗ ಡೇ ಕೇರ್‌ ಆರಂಭಿಸಲು 50 ಲಕ್ಷ ರೂ. 
-ಕಿದ್ವಾಯಿ ಆಸ್ಪತ್ರೆಯಲ್ಲಿರುವ ಪಾಲಿಕೆಯ ಧರ್ಮಶಾಲೆಯ ನವೀಕರಣಕ್ಕಾಗಿ 5 ಕೋಟಿ ರೂ. 
-ಎಸ್‌ಡಿಎಸ್‌ ರಾಜೀವ್‌ಗಾಂಧಿ ಇನ್ಸ್‌ಸ್ಟಿಟ್ಯೂಟ್‌ ಆಫ್ ಚೆಸ್ಟ್‌ ಡಿಸಿಸ್‌ ಆಸ್ಪತ್ರೆಯಲ್ಲಿ ಪಾಲಿಕೆಯಿಂದ ಧರ್ಮಶಾಲೆ ನಿರ್ಮಾಣಕ್ಕಾಗಿ 5 ಕೋಟಿ ರೂ. 
-ಪ್ರಮುಖ ಜಂಕ್ಷನ್‌ಗಳಲ್ಲಿ ವಾಯು ಮಾಳಿನ್ಯ ನಿಯಂತ್ರಣಕ್ಕಾಗಿ ವಾಯು ಶುದ್ಧೀಕರಣ ಯಂತ್ರ ಅಳವಡಿಕೆಗೆ 5 ಕೋಟಿ ರೂ.
-ವಿಲ್ಸನ್‌ ಗಾರ್ಡನ್‌ ಹೆರಿಗೆ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ನಿಮ್ಹಾನ್ಸ್‌ ಆಸ್ಪತ್ರೆ ಸಹಯೋಗದಲ್ಲಿ ದುಶ್ಚಟ ನಿವಾರಣಾ ಕೇಂದ್ರ ಸ್ಥಾಪನೆಗೆ 2 ಕೋಟಿ ರೂ.
-ತಾಯಿ ಮಡಿಲು ಯೋಜನೆಗಾಗಿ 1.50 ಕೋಟಿ ರೂ. 
-ಗರ್ಭಿಣಿಯರಿಗೆ ಕಬ್ಬಿಣ ಮತ್ತು ಕ್ಯಾಲ್ಸಿಯಂ ಅಂಶದ ಮಾತ್ರೆ ಒದಗಿಸಲು 25 ಲಕ್ಷ ರೂ. 

ಪಶುಸಂಗೋಪನೆ
-ಅನಾಥ ಪ್ರಾಣಿಗಳ ರಕ್ಷಿಸಿ ಚಿಕಿತ್ಸೆ ಹಾಗೂ ಆಶ್ರಯ ಹಾಗೂ ಎಬಿಸಿ ಚಿಕಿತ್ಸೆಗಾಗಿ ಪ್ರತಿ ವಲಯದಲ್ಲಿ ಕೇಂದ್ರ ಸ್ಥಾಪನೆಗೆ 5 ಕೋಟಿ ರೂ. 
-ಬೊಮ್ಮನಹಳ್ಳಿ ಮತ್ತ ಪೂರ್ವ ವಲಯಗಳಲ್ಲಿ ಎಬಿಸಿ ನಿರ್ವಹಣಾ ಕೇಂದ್ರ ಹಾಗೂ ಕೆನಲ್‌ ದುರಸ್ತಿಗೆ 50 ಲಕ್ಷ ರೂ. 
-ರೋಗ ಹಾಗೂ ಅಪಘಾತಕ್ಕೆ ಒಳಗಾದ ಪ್ರಾಣಿಗಳ ತುರ್ತು ಚಿಕಿತ್ಸೆಗಾಗಿ ಆ್ಯಂಬುಲೆನ್ಸ್‌ ಖರೀದಿಗೆ 25 ಲಕ್ಷ ರೂ. 

ಸಂಸ್ಕೃತಿ ಮತ್ತು ಕ್ರೀಡೆ
-ಜೆಸಿ ನಗರ ದಸರ, ಕಡಲೇ ಕಾಯಿ ಪರಿಷೆ, ಕರಗ ಹಾಗೂ ಜಾನಪದ ಸಂಸ್ಕೃತಿಕ ಹಬ್ಬಗಳನ್ನು ಉತ್ತೇಜಿಸಲು 2.50 ಕೋಟಿ ರೂ. 
-ಡಾ.ಬಿ.ಆರ್‌.ಅಂಬೇಡ್ಕರ್‌ ದಿನಾಚರಣೆ ಮತ್ತು ಪೌರಕಾರ್ಮಿಕರ ದಿನಾಚರಣೆಗೆ 5.50 ಕೋಟಿ ರೂ. 
-ನಾಡಪ್ರಭು ಕೆಂಪೇಗೌಡ ದಿನಾಚರಣೆಗೆ 5 ಕೋಟಿ ರೂ. 
-ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ದೇಶ, ವಿದೇಶದಲ್ಲಿ ಭಾಗವಹಿಸುವ ಕ್ರೀಡಾಪಟುಗಳ ಅನುಕೂಲಕ್ಕಾಗಿ 1 ಕೋಟಿ ರೂ. 

ಸಾರ್ವಜನಿಕ ಸಂಪರ್ಕ ವಿಭಾಗ
-ಪಾಲಿಕೆಯ ಮೀಡಿಯಾ ಕೇಂದ್ರ ಸ್ಥಾಪನೆಗೆ 3 ಕೋಟಿ ರೂ. 
-ಮುದ್ರಣ ಮತ್ತು ಮಾಧ್ಯಮ ವರದಿಗಾರರಿಗೆ ವೈದ್ಯಕೀಯ ವೆಚ್ಚಕ್ಕಾಗಿ 50 ಲಕ್ಷ ರೂ.
-ಪಾಲಿಕೆಯ ಎಲ್ಲ ಕಾರ್ಯಕ್ರಮಗಳು ಹಾಗೂ ಮಾಹಿತಿ ಜನರಿಗೆ ತಿಳಿಸಲು “ಬಿಬಿಎಂಪಿ ಬೆಳಕು’ ಮಾಸಿಕ ಪತ್ರಿಕೆ, ಸಾಮಾಜಿಕ ಕೋಶ ಪ್ರಾರಂಭಿಸಲು 2 ಕೋಟಿ ರೂ. 

ಘನತ್ಯಾಜ್ಯ ನಿರ್ವಹಣೆ
-ಪೌರಕಾರ್ಮಿಕರ ವೇತನ ಪಾವತಿಗಾಗಿ 375 ಕೋಟಿ ರೂ.
-ನಗರದಲ್ಲಿ ತ್ಯಾಜ್ಯ ವಿಲೇವಾರಿಗಾಗಿ 375 ಕೋಟಿ ರೂ.
-ಬೊಮ್ಮನಹಳ್ಳಿ ವ್ಯಾಪ್ತಿಯ ಕೆಸಿಡಿಸಿ ಘಟಕ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ 20 ಕೋಟಿ ರೂ.
-ಮಹದೇವಪುರದ ಮಂಡೂರು ವ್ಯಾಪ್ತಿಯ ಗ್ರಾಮಗಳ ಅಭಿವೃದ್ಧಿಗೆ 20 ಕೋಟಿ ರೂ. 
-ಬ್ಯಾಟರಾಯನಪುರದ ಬೆಳ್ಳಳ್ಳಿ ಮತ್ತು ಮಿಟಗಾನಹಳ್ಳಿ ಪ್ರದೇಶ ಅಭಿವೃದ್ಧಿಗೆ 20 ಕೋಟಿ ರೂ.
-ಯಲಹಂಕದ ಮಾವಳ್ಳಿಪುರ ಪ್ರದೇಶದ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ 20 ಕೋಟಿ ರೂ.
-ಯಶವಂತಪುರದ ದೊಡ್ಡಬಿದರಕಲ್ಲು, ಸುಬ್ರಮಣ್ಯಪುರ, ಲಿಂಗಧೀರನಹಳ್ಳಿ, ಕನ್ನಳ್ಳಿ ಹಾಗೂ ಸೀಗೇಹಳ್ಳಿ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿಗೆ 30 ಕೋಟಿ ರೂ.

ಆಸ್ತಿಗಳು ಮತ್ತು ಸ್ವತ್ತುಗಳ ನಿರ್ವಹಣೆ
-ಪಾಲಿಕೆ ಆಸ್ತಿಗಳ ರಕ್ಷಣೆ ಹಾಗೂ ಸಂರಕ್ಷಣೆಗಾಗಿ 10 ಕೋಟಿ ರೂ. 
-ಅಭಿವೃದ್ಧಿ ಕಾಮಗಾರಿಗಳಿಗೆ ಭೂ ಸ್ವಾಧೀನಪಡಿಸಿಕೊಂಡ ಮಾಲೀಕರಿಗೆ ಭೂ ಪರಿಹಾರ ನೀಡುವ ಸಲುವಾಗಿ 50 ರೂ. 
-ಪಾಲಿಕೆಯ ಒಡೆತನ ಆಸ್ತಿಗಳ ಲೆಕ್ಕಪರಿಶೋಧನೆ ಮತ್ತು ಮೌಲ್ಯ ಮಾಪನಕ್ಕಾಗಿ 5 ಕೋಟಿ ರೂ. 

ತೋಟಗಾರಿಕೆ ಇಲಾಖೆ 
-ಪೂರ್ವ, ಪಶ್ಚಿಮ, ದಕ್ಷಿಣ, ದಾಸರಹಳ್ಳಿ, ಯಲಹಂಕ, ಆರ್‌.ಆರ್‌.ನಗರ, ಮಹದೇವಪುರ, ಬೊಮ್ಮನಹಳ್ಳಿ ವಲಯಗಳಲ್ಲಿ ಉದ್ಯಾನ, ಮಿಡಿಯನ್ಸ್‌ ಅಭಿವೃದ್ಧಿಗೆ ಪ್ರತಿ ವಲಯಕ್ಕೆ 34 ಕೋಟಿ ರೂ.
-ರುದ್ರಭೂಮಿ ಸ್ಮಶಾನಗಳನ್ನು ನಿರ್ವಹಿಸಲು 3 ಕೋಟಿ ರೂ. 
-198 ವಾರ್ಡ್‌ಗಳಲ್ಲಿ ಗಿಡಿ ನೆಡುವ ಕಾರ್ಯಕ್ರಮಕ್ಕಾಗಿ 5 ಕೋಟಿ ರೂ. 
-ಮರಗಣತಿ ನಡೆಸಲು 2 ಕೋಟಿ ರೂ. 
-10 ಲಕ್ಷ ಸಸಿ ನೆಡಲು ಎರಡು ನರ್ಸರಿಗಳ ಸ್ಥಾಪನೆಗೆ 3 ಕೋಟಿ ರೂ. 

14ನೇ ಹಣಕಾಸು ಆಯೋಗದ ಕಾಮಗಾರಿಗಳು
14ನೇ ಹಣಕಾಸು ಆಯೋಗದಲ್ಲಿ ಪಾಲಿಕೆಗೆ 405.76 ಕೋಟಿ ಅನುದಾನ ಒದಗಿಸಲಾಗಿದ್ದು, ಇದರಡಿ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಕಾಮಗಾರಿಗಳು ಹೀಗಿವೆ. 
* ಬೀದಿ ದೀಪಗಳ ನಿರ್ವಹಣೆ- 41 ಕೋಟಿ 
* ರುದ್ರಭೂಮಿ, ವಿದ್ಯುತ್‌ ಚಿತಾಗಾರದ ನಿರ್ವಹಣೆ- 20 ಕೋಟಿ 
* ಸಮುದಾಯ ಆಸ್ತಿಗಳ ನಿರ್ವಹಣೆ- 20 ಕೋಟಿ 
* ಕುಡಿಯುವ ನೀರು- 81 ಕೋಟಿ
* ಸಾರ್ವಜನಿಕ ಶೌಚಾಲಯಗಳ ನಿರ್ವಹಣೆ- 20 ಕೋಟಿ
* ಒಳಚರಂಡಿ ಕಾಮಗಾರಿ- 40 ಕೋಟಿ
* ರಸ್ತೆ ಮತ್ತು ಪಾದಚಾರಿ ಮಾರ್ಗಗಳ ನಿರ್ವಹಣೆ- 61 ಕೋಟಿ
* ಬೃಹತ್‌ ಮಳೆನೀರುಗಾಲುವೆ ಕಾಮಗಾರಿ- 61 ಕೋಟಿ
* ಘನತ್ಯಾಜ್ಯ ನಿರ್ವಹಣೆ ಕಾಮಗಾರಿ- 61 ಕೋಟಿ

ನವ ಬೆಂಗಳೂರು ಯೋಜನೆ ಅಡಿ ಕ್ರಿಯಾಯೋಜನೆಗಳು
* ವೈಟ್‌ಟಾಪಿಂಗ್‌- 1,172 ಕೋಟಿ
* ಕೆರೆಗಳ ಅಭಿವೃದ್ಧಿ- 348 ಕೋಟಿ
* ರಸ್ತೆಗಳ ಅಭಿವೃದ್ಧಿ- 2,246.68 ಕೋಟಿ
* ಗ್ರೇಡ್‌ ಸಪರೇಟರ್‌ಗಳ ನಿರ್ಮಾಣ- 534.60 ಕೋಟಿ
* ಬೃಹತ್‌ ಮಳೆನೀರುಗಾಲುವೆ ಅಭಿವೃದ್ಧಿ- 1,321.14 ಕೋಟಿ
* ಪಾದಚಾರಿ ಮಾರ್ಗಗಳ ಅಭಿವೃದ್ಧಿ- 75 ಕೋಟಿ
* 110 ಹಳ್ಳಿಗಳ ರಸ್ತೆಗಳ ಅಭಿವೃದ್ಧಿ- 275 ಕೋಟಿ
* ಐಟಿಪಿಎಲ್‌ಗೆ ಸಂಪರ್ಕಿಸುವ 14 ಪರ್ಯಾಯ ರಸ್ತೆಗಳ ಅಭಿವೃದ್ಧಿ- 80 ಕೋಟಿ 
* ಎನ್‌ಎಎಲ್‌-ವಿಂಡ್‌ಟನಲ್‌ ರಸ್ತೆ ನಿರ್ಮಾಣ- 65 ಕೋಟಿ
* ಘನತ್ಯಾಜ್ಯ ನಿರ್ವಹಣೆ- 753 ಕೋಟಿ
* ಕಟ್ಟಡಗಳು ಮತ್ತು ಆಸ್ಪತ್ರೆಗಳು- 247.95 ಕೋಟಿ
* ರಕ್ಷಣಾ ಇಲಾಖೆಯಿಂದ ಪಡೆದ ಜಮೀನಿನಲ್ಲಿ ಅನುಷ್ಠಾನದ ಯೋಜನೆಗಳು- 102 ಕೋಟಿ
* ಯೋಜನೆಗಳ ಭೂಸ್ವಾಧೀನ ವೆಚ್ಚ- 100 ಕೋಟಿ
* ಬಿಡಿಎಯಿಂದ ಬಿಬಿಎಂಪಿಗೆ ವರ್ಗಾವಣೆಗೊಂಡ ಯೋಜನೆಗಳು- 195 ಕೋಟಿ

ಟಾಪ್ ನ್ಯೂಸ್

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

hdk

1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಆಪರೇಷನ್ ಕಮಲಕ್ಕೆ ಸಹಕರಿಸಲು ಸಿದ್ದು ದುಡ್ಡು ಪಡೆದಿದ್ದರು : ಎಚ್ ಡಿಕೆ

ಆಪರೇಷನ್ ಕಮಲಕ್ಕೆ ಸಹಕರಿಸಲು ಸಿದ್ದು ದುಡ್ಡು ಪಡೆದಿದ್ದರು : ಎಚ್ ಡಿಕೆ

ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ

ಜಮೀರ್ ಎಂಬ ಕೊಚ್ಚೆ ಮೇಲೆ ಕಲ್ಲು ಎಸೆಯಲ್ಲ : ಎಚ್ ಡಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಅನಧಿಕೃತ ವೈದ್ಯಕೀಯ ತರಬೇತಿ : ಸ್ಪರ್ಶ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ನೋಟಿಸ್

ಗ್ರಾಹಕರ ಕೈ ಸುಡುತ್ತಿರುವ ಬೀನ್ಸ್‌, ಟೊಮ್ಯಾಟೋ, ಕೊತ್ತಂಬರಿ!

ಗ್ರಾಹಕರ ಕೈ ಸುಡುತ್ತಿರುವ ಬೀನ್ಸ್‌, ಟೊಮ್ಯಾಟೋ, ಕೊತ್ತಂಬರಿ!

ತೀವ್ರ ವಿರೋಧದ ನಡುವೆ ಕಟ್ಟಡ ತೆರವು

ತೀವ್ರ ವಿರೋಧದ ನಡುವೆ ಕಟ್ಟಡ ತೆರವು

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

ಕಳ್ಳತನ ಮಾಡ್ತಿರಾ ಗೊತ್ತಿಲ್ಲ:ಆದ್ರೆ ರಸ್ತೆ ದುರಸ್ತಿ ಮಾಡಿ:ಬಿಬಿಎಂಪಿಗೆ ಹೈಕೋರ್ಟ್‌ ತಾಕೀತು

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಮಂಗಳೂರಿನಲ್ಲಿ ಮೂರು ದಿನ ನೀರಿಲ್ಲ

ಮಂಗಳೂರಿನಲ್ಲಿ ಮೂರು ದಿನ ನೀರು ಸರಬರಾಜಿನಲ್ಲಿ ವ್ಯತ್ಯಯ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಪ್ರವಾಸದ ಹೆಸರಿನಲ್ಲಿ ವಂಚನೆ : ಸಿಸಿಬಿ ಪೊಲೀಸರಿಂದ ಅಣ್ಣ ತಂಗಿ ಬಂಧನ

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

hdk

1994ರಲ್ಲಿ ಜನತಾದಳ ಅಧಿಕಾರಕ್ಕೆ ಬರಲು ನನ್ನ ಪಾತ್ರವೇ ದೊಡ್ಡದು: ಹಳೆಯ ಇತಿಹಾಸ ಕೆದಕಿದ HDK

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

ಸಬ್ ಮರೈನ್ ಮಾಹಿತಿ ಸೋರಿಕೆ; ನೌಕಾಪಡೆ ಕಮಾಂಡರ್ ಹಾಗೂ ಇಬ್ಬರು ನಿವೃತ್ತ ಅಧಿಕಾರಿಗಳ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.