24 ಗಂಟೆ ತಾಜಾ ಇರುವ ಮಯ್ಯಾಸ್ ಅಕ್ಕಿ ಇಡ್ಲಿ
Team Udayavani, May 10, 2019, 11:30 AM IST
ಬೆಂಗಳೂರು: ಭೋಜನ ಪ್ರಿಯರಿಗೆ ಖುಷಿ ಸುದ್ದಿ. ಹೋಟೆಲ್ ಉದ್ಯಮದ ಜನಪ್ರಿಯ ಮಯ್ನಾಸ್ ಗ್ರೂಪ್ ಇದೀಗ ನಾನೋ ತಂತ್ರಾಂಶ ಬಳಸಿ 24 ಗಂಟೆ ತಾಜಾತನದಿಂದ ಇರಬಲ್ಲ ‘ಮಯ್ಯಾಸ್ ಅಕ್ಕಿ ಇಡ್ಲಿ’ಯನ್ನು ಗ್ರಾಹಕರಿಗೆ ಪರಿಚಯಿಸಿದೆ.
ಫಿಜಾ, ಬರ್ಗರ್ ಸಂಸ್ಕೃತಿಯಲ್ಲಿ ಕಳೆದು ಹೋಗುತ್ತಿರುವ ಬೆಂಗಳೂರಿನ ಆಹಾರ ಪ್ರಿಯರನ್ನು ಮತ್ತೆ ದಕ್ಷಿಣ ಭಾರತದ ಆಹಾರ ಸಂಸ್ಕೃತಿಗೆ ಮರಳಿ ತರುವ ಉದ್ದೇಶದಿಂದ ಈ ಉತ್ಪನ್ನ ಪರಿಚಯಿಸಲಾಗಿದೆ. ಗುರುವಾರ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅವರು ಬಿಡುಗಡೆ ಗೊಳಿಸಿದರು.
ಈ ಸಂದರ್ಭದಲ್ಲಿ ಮಾನಾಡಿದ ನ್ಯಾ.ವೆಂಕಟಾಚಲಯ್ಯ, ಸದಾನಂದ ಮಯ್ನಾ ಅವರ ತಂದೆ ಎಂಟಿಆರ್ ಹೋಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾಗ ನಾನು ಹೋಟೆಲ್ನ ಖಾಯಂ ಗ್ರಾಹಕನಾಗಿದ್ದೆ. ಆ ಕಾಲದಲ್ಲಿ ಬೆಂಗಳೂರಿಗೆ ಭೇಟಿ ನೀಡುವವರು, ಎಂಟಿಆರ್ ಹೋಟೆಲ್ನಲ್ಲಿ ಆಹಾರ ಸವಿಯದಿದ್ದರೆ ಅವರ ಭೇಟಿ ಅಪೂರ್ಣ ಎಂದೇ ಭಾವಿಸುತ್ತಿದ್ದರು ಎಂದು ನೆನಪಿಸಿಕೊಂಡರು.
ಇಡ್ಲಿಯಿಂದ ಅಡ್ಡ ಪರಿಣಾಮ ಬೀರ ಬಾರದು ಎಂದು, ಒಂದು ವರ್ಷದಿಂದ ಇಡ್ಲಿಗಳನ್ನು ನಾನೇ ಸೇವಿಸುತ್ತಿದ್ದೆ. ನ್ಯಾ.ವೆಂಕಟಾಚಲಯ್ಯ, ನಮ್ಮ ಗ್ರೂಪ್‌ನ ಕೆಲವರಿಗೆ ನೀಡಿದಾಗ ಉತ್ತಮ ಪ್ರತಿಕ್ರಿಯೆ ಬಂತು. ಆಗ ಇಡ್ಲಿ ಮಾರಾಟ ಮಾಡಬ ಹುದೆಂಬ ಧೈರ್ಯ ಬಂತು ಎಂದು ಸದಾನಂದ ಮಯ್ಯಾ ಹೇಳಿದರು.