ಮೆಟ್ರೋ ಆದಾಯವೆಲ್ಲ ಬಡ್ಡಿಗೇ ಚುಕ್ತಾ
Team Udayavani, Jan 18, 2022, 12:33 PM IST
ಬೆಂಗಳೂರು: “ನಮ್ಮ ಮೆಟ್ರೋ’ದಿಂದ ಬರುವ ಆದಾಯದಲ್ಲಿ ಅರ್ಧಕ್ಕರ್ಧ ಬರೀ ಆ ಯೋಜನೆಗೆ ಮಾಡಿದ ಸಾಲದ ಮೇಲಿನ ಬಡ್ಡಿಗೇ ಹೋಗುತ್ತದೆ. ಈ ಮಧ್ಯೆ ಕೊರೊನಾ ಗಾಯದ ಮೇಲೆ ಬರೆ ಎಳೆದಿದೆ!
ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ವು “ನಮ್ಮ ಮೆಟ್ರೋ’ ಮೊದಲ ಮತ್ತು ಎರಡನೇ ಹಂತದ ಯೋಜನೆಗಾಗಿ ಸರ್ಕಾರದ ಆರ್ಥಿಕ ನೆರವಿನ ಜತೆಗೆ ದೇಶಿಯ ಮತ್ತು ಅಂತಾರಾಷ್ಟ್ರೀಯ ಬ್ಯಾಂಕ್‌ಗಳಲ್ಲಿ ಸಾವಿರಾರು ಕೋಟಿ ರೂ. ಸಾಲ ಪಡೆದಿದೆ. ಅದರಲ್ಲಿ ಈಗಾಗಲೇ ಕೆಲವು ಹಿಂಪಾವತಿಯೂ ಮಾಡಿದೆ.
ಆದರೂ ಈ ಪೈಕಿ ಇನ್ನೂ ಸರಿಸುಮಾರು 12 ಸಾವಿರ ಕೋಟಿ ರೂ.ಗಳಿಗೂ ಅಧಿಕ ವಿವಿಧ ರೂಪದ ಸಾಲ ಇದೆ. ಅದರ ಬಡ್ಡಿಯೇ ವಾರ್ಷಿಕನೂರು ಕೋಟಿ ರೂ. ಆಗುತ್ತದೆ. ದಿನಕ್ಕೆ ಈ ಬಡ್ಡಿಬಾಬ್ತು 25 ಲಕ್ಷಕ್ಕೂ ಅಧಿಕವಾಗಿದ್ದು, ಬರುವಕಾರ್ಯಾಚರಣೆ ಆದಾಯ ಕೇವಲ 50 ಲಕ್ಷ ರೂ. ಆಗಿದೆ.
ಒಂದೇ ಒಂದು ಸಮಾಧಾನಕರಅಂಶವೆಂದರೆ- ಈ ಸಾಲ ಮತ್ತು ಅದರಬಡ್ಡಿಯನ್ನು ಸರ್ಕಾರವೇ ಭರಿಸುತ್ತದೆ. ಆದರೆ, ದಶಕ ಕಳೆದರೂ ತಕ್ಕಮಟ್ಟಿಗೆ ಕೂಡ ಮೆಟ್ರೋಸ್ವಾವಲಂಬನೆ ಸಾಧಿಸಿಲ್ಲ.ಕೊರೊನಾ ಪೂರ್ವದಲ್ಲಿ ನಿತ್ಯ ನಾಲ್ಕು ಲಕ್ಷ ಪ್ರಯಾಣಿಕರಸಂಚಾರದೊಂದಿಗೆ ಒಂದು ಕೋಟಿಗೂ ಅಧಿಕ ಆದಾಯ ಬರುತ್ತಿತ್ತು.
ಇದರೊಂದಿಗೆ ತುಸು ಸ್ವಾವಲಂಬನೆಯ ಸೂಚನೆಗಳು ದೊರಕಿದ್ದವು. ಅಷ್ಟರಲ್ಲಿ ಸೋಂಕಿನ ಹಾವಳಿಯು ನಿಗಮದ ನಿರೀಕ್ಷೆಗಳನ್ನು ನುಚ್ಚುನೂರು ಮಾಡಿತು. ಇನ್ನು ಮೊದಲೆರಡು ಅಲೆಗಳ ನಂತರ ಕೂಡ ಹಿಂದಿನ ಸ್ಥಿತಿಗೆ ಮರಳುವ ಲಕ್ಷಣಗಳು ಕಂಡುಬಂದಿದ್ದವು. ಜನವರಿ ಮೊದಲ ವಾರದಲ್ಲಿ “ನಮ್ಮ
ಮೆಟ್ರೋ’ದಲ್ಲಿ ನಿತ್ಯ 3-3.5 ಲಕ್ಷ ಜನ ಸಂಚರಿಸುತ್ತಿದ್ದರು. ಇದರಿಂದ 70-75 ಲಕ್ಷ ರೂ. ಕಾರ್ಯಾಚರಣೆ ಆದಾಯ ಬರುತ್ತಿತ್ತು. ಈಮಧ್ಯೆ ಮೂರನೇ ಹಾವಳಿ ಒಕ್ಕರಿಸಿದ್ದರಿಂದನಾಲ್ಕು ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಒಂದು ಲಕ್ಷ ಖೋತಾ ಆಯಿತು. ಬೆನ್ನಲ್ಲೇಆದಾಯ ಕೂಡ ಕುಸಿತ ಕಂಡಿತು. ಇದು ಗಾಯದ ಮೇಲೆ ಬರೆ ಎಳೆದಿದ್ದು, ಸರ್ಕಾರದಮೇಲಿನ ಅವಲಂಬನೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಪ್ರಯಾಣಿಕರ ಸಂಖ್ಯೆ ಕುಸಿತ :
“ಜನವರಿ ಮೊದಲ ವಾರಕ್ಕೆ ಹೋಲಿಸಿದರೆ, ಅಲ್ಪಾವಧಿಯಲ್ಲೇ ಗಣನೀಯ ಪ್ರಮಾಣದಲ್ಲಿ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿದಿದೆ. ಇದಕ್ಕೆ ಸಹಜವಾಗಿ ಜನರಲ್ಲಿರುವ ಭೀತಿ ಮತ್ತು ಅನಗತ್ಯ ಸಂಚಾರಕ್ಕೆ ಬ್ರೇಕ್ ಬಿದ್ದಿರುವುದು ಕಾರಣವಾಗಿದೆ.ಇದರಿಂದ ಕಾರ್ಯಾಚರಣೆ ಆದಾಯಖೋತಾ ಆಗಿದೆ. ಕೋವಿಡ್ ಪೂರ್ವ ಸ್ಥಿತಿತಲುಪುವ ಹಂತದಲ್ಲಿದ್ದ ನಮಗೆ ಇದು ದೊಡ್ಡ ಹಿನ್ನಡೆಯೇ ಆಗಿದೆ. ಇದರಲ್ಲಿಅನುಮಾನ ಇಲ್ಲ. ಆದರೆ, ಜನರ ಆರೋಗ್ಯ ದೃಷ್ಟಿಯಿಂದ ಈ ಕ್ರಮ ಅನಿವಾರ್ಯ ಕೂಡಆಗಿದೆ. ಸಾಲದ ಮತ್ತು ಬಡ್ಡಿ ಹಿಂಪಾವತಿ ಸರ್ಕಾರವೇ ಭರಿಸುವುದರಿಂದ ಅದರಿಂದ ಸಮಸ್ಯೆ ಸಮಸ್ಯೆ ಇಲ್ಲ. ಬಹುತೇಕ ದೀರ್ಘಾವಧಿಯ ಸಾಲ ಅಂದರೆ ಕನಿಷ್ಠ 15 ವರ್ಷ ಮೇಲ್ಪಟ್ಟ ಸಾಲದ ಒಪ್ಪಂದಗಳಿವೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ “ಉದಯವಾಣಿ’ಗೆ ಸ್ಪಷ್ಟಪಡಿಸಿದರು.
-ವಿಜಯಕುಮಾರ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಿಸ್ಕೆಟ್ ವ್ಯವಹಾರಕ್ಕೆಂದು ಕೋಟಿಗಟ್ಟಲೆ ಸಾಲ ಪಡೆದು ಕ್ಯಾಸಿನೋ ಜೂಜಾಟ ಆಡಿದ ಆರೋಪಿ ಅರೆಸ್ಟ್
ಕ್ರಿಕೆಟ್ ಬೆಟ್ಟಿಂಗ್: ಸಾಲ ತೀರಿಸಲು ಬೈಕ್ ಕಳ್ಳತನ; ಆರೋಪಿ ಬಂಧನ
ಶಾಲೆ ಬಳಿ ಸಾರಿ.. ಸಾರಿ.. ಬರಹ: ಮುನಿಸಿಕೊಂಡ ಪ್ರಿಯತಮೆಯ ಓಲೈಕೆಗೆ ಪಾಗಲ್ ಪ್ರೇಮಿಯ ಕೃತ್ಯ?
ಶೋಕಿ ಜೀವನಕ್ಕಾಗಿ ಚಿನ್ನಾಭರಣ ಮಳಿಗೆಯಲ್ಲಿ ಕಳ್ಳತನ ; ಮೂವರ ಬಂಧನ
ಫೇಸ್ ಬುಕ್ ನಲ್ಲಿ ಹಾಕಿದ್ದ ಸೆಲ್ಫಿ ಪೋಸ್ಟ್ ನಿಂದ 5 ವರ್ಷದ ಬಳಿಕ ಅರೆಸ್ಟ್ ಆದ ಕೊಲೆ ಆರೋಪಿ!