ಡಿಕೆಶಿಗೆ ಐಟಿ ನಂತರ ಇಡಿ ಆತಂಕ; ಹಬ್ಬ ಆಚರಣೆಗೂ ಅವಕಾಶ ನೀಡದ ಐಟಿ ತಂಡ

Team Udayavani, Aug 5, 2017, 6:00 AM IST

170804kpn75.jpg

ಬೆಂಗಳೂರು: ಸತತ ಮೂರು ದಿನಗಳ ಐವತ್ತು ಗಂಟೆಗಳಷ್ಟು ಕಾಲ “ಗೃಹಬಂಧನ’ದಲ್ಲಿದ್ದು ಆದಾಯ ತೆರಿಗೆ ಇಲಾಖೆ ದಾಳಿಯಿಂದ ಜರ್ಜರಿತರಾಗಿರುವ ಇಂಧನ ಸಚಿವ ಡಿ.ಕೆ.ಶಿವಕುಮಾರ್‌ಗೆ ಇದೀಗ ಜಾರಿ ನಿರ್ದೇಶನಾಲಯ (ಇಡಿ) ತನಿಖೆಯ ಭೀತಿ ಎದುರಾಗಿದೆ.

ಆದಾಯ ತೆರಿಗೆ  ಇಲಾಖೆಯು ತಮ್ಮ ದಾಳಿ ನಂತರ ಕೆಲವೊಮ್ಮೆ ಜಾರಿ ನಿರ್ದೇಶನಾಲಯಕ್ಕೆ ಶಿಫಾರಸು ಮಾಡುವ ಸಾಧ್ಯತೆ ಇರುವುದು ಇಲ್ಲವೇ ಲೇವಾದೇವಿ ಕಾಯ್ದೆಯಡಿ ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲು ಅವಕಾಶ ಇರುವುದರಿಂದ ಮುಂದೆ ಇಡಿ ವಿಚಾರಣೆಗೂ ಒಳಪಡುವ ಆತಂಕವಿದೆ.

ಶುಕ್ರವಾರ ಮಧ್ಯರಾತ್ರಿ ವೇಳೆಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಪರಿಶೀಲನೆ ಮತ್ತು ದಾಖಲೆ ವಶಕ್ಕೆ ಪಡೆಯುವ ಪ್ರಕ್ರಿಯೆ ಮುಗಿಸಿದ್ದು, ಮುಂದಿನದು ಜಾರಿ ನಿರ್ದೇಶನಾಲಯ ಸರದಿ ಎಂದು ಮೂಲಗಳು ತಿಳಿಸಿವೆ.

ಜಾರಿ ನಿರ್ದೇಶನಾಲಯ ತತಕ್ಷಣವೇ ಪ್ರಕರಣ ದಾಖಲಿಸಿಕೊಳ್ಳಬಹುದು ಅಥವಾ ಆದಾಯ ತೆರಿಗೆ ಇಲಾಖೆಯಿಂದ ಸಂಪೂರ್ಣ ಮಾಹಿತಿ ಪಡೆದ ನಂತರ  ಮುಂದಾಗಬಹುದು. ಜಾರಿ ನಿರ್ದೇಶನಾಲಯದ ಅಂಗಳಕ್ಕೆ ಪ್ರಕರಣ ತಲುಪಿದರೆ ಬಂಧನದ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ ಎಂದು ಹೇಳಲಾಗಿದೆ.

ಆದರೆ, ಮತ್ತೂಂದು ಮೂಲಗಳ ಪ್ರಕಾರ, ಡಿ.ಕೆ.ಶಿವಕುಮಾರ್‌ ಮೇಲಿನ ಆದಾಯ ತೆರಿಗೆ ದಾಳಿ ರಾಜಕೀಯ ಸ್ವರೂಪ ಪಡೆಯುತ್ತಿರುವುದರಿಂದ ಸದ್ಯಕ್ಕೆ ಐಟಿ ದಾಳಿಗೆ ಸೀಮಿತಗೊಳಿಸುವ ಸಾಧ್ಯತೆ ಹೆಚ್ಚು ಎಂದೂ ಹೇಳಲಾಗಿದೆ. ಐಟಿ ದಾಳಿ ರಾಜಕೀಯವಾಗಿ ಕಾಂಗ್ರೆಸ್‌ಗೆ ಲಾಭ, ಅದರಲ್ಲೂ ಡಿ.ಕೆ. ಶಿವಕುಮಾರ್‌ ಪರ ಅನುಕಂಪ ಹೆಚ್ಚುವ ಸಾಧ್ಯತೆ ಇರುವುದರಿಂದ ತಕ್ಷಣಕ್ಕೆ ಐಟಿ ದಾಳಿಗೆ ಸೀಮಿತಗೊಳಿಸುವ ಸಾಧ್ಯತೆಯಿದೆ ಎಂದೂ ಹೇಳಲಾಗುತ್ತಿದೆ. ಆದರೆ, ಗುಜರಾತ್‌ ಶಾಸಕರು ಇನ್ನೂ ರೆಸಾರ್ಟ್‌ನಲ್ಲೇ ಉಳಿದಿರುವುದು ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರ ಉಸ್ತುವಾರಿ ವಹಿಸಿಕೊಂಡಿರುವುದರಿಂದ ಇಡಿ ಕಣ್ಣು  ಡಿ.ಕೆ.ಶಿವಕುಮಾರ್‌ ಮೇಲೆ ಬಿದ್ದರೂ ಅಚ್ಚರಿಯಲ್ಲ ಎನ್ನಲಾಗಿದೆ.

ಈ ಮಧ್ಯೆ, ಡಿ.ಕೆ.ಶಿವಕುಮಾರ್‌ ಅವರ ಮತ್ತಷ್ಟು ಆಪ್ತರ ಮೇಲೂ ಐಟಿ ಇಲಾಖೆ ನಿಗಾ ವಹಿಸಿದ್ದು, ಯಾವುದೇ ಸಂದರ್ಭದಲ್ಲಿ ದಾಳಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ. ಶುಕ್ರವಾರ ತಡರಾತ್ರಿಯವರೆಗೆ ಸದಾಶಿನಗರ ನಗರದ “ಕೆಂಕೇರಿ’ ನಿವಾಸ ಸೇರಿ ಡಿ.ಕೆ.ಶಿವಕುಮಾರ್‌ ಆಪ್ತರ ನಿವಾಸ ಮತ್ತು ಕಚೇರಿಗಳಲ್ಲಿ ಪರಿಶೀಲನೆ ಮುಗಿಸಿ ಮತ್ತು ದಾಖಲೆ ವಶಕ್ಕೆ ಪಡೆದು ಪಂಚನಾಮೆ ಪ್ರಕ್ರಿಯೆ ಮುಗಿಸಿ ಪ್ರಾದೇಶಿಕ ಐಟಿ ಕಚೇರಿಗೆ ಬಾಕ್ಸ್‌ಗಳಲ್ಲಿ ದಾಖಲೆ ಸೇರಿದಂತೆ ದಾಳಿ ಸಂದರ್ಭದಲ್ಲಿ ವಶಕ್ಕೆ ಪಡೆದ ಚಿನ್ನಾಭನರಣ, ನಗದು, ಇತರೆ ವಸ್ತುಗಳನ್ನು ತಲುಪಿಸಿದ್ದಾರೆ.

ಮುಂದೇನು?
69 ಕಡೆ ಮೂರು ದಿನ ನಡೆಸಿದ ದಾಳಿ ಸಂದರ್ಭದಲ್ಲಿ ದೊರೆತಿರುವ ದಾಖಲೆಗಳು, ಹಣ, ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಒಂದೆಡೆ ತಂದು ಸಮಗ್ರ ಪರಿಶೀಲನೆ ನಡೆಯಲಿದೆ. ಸದಾಶಿವನಗರ ನಿವಾಸ ಅಷ್ಟೇ ಅಲ್ಲದೆ ದೊಡ್ಡಾಲಹಳ್ಳಿ, ಕೋಡಿಹಳ್ಳಿ ನಿವಾಸಗಳು, ದೆಹಲಿಯ ಸಪœರ್‌ಜಂಗ್‌ ಎನ್‌ಕ್ಲೇವ್‌, ಸಂಸದ ಡಿ.ಕೆ.ಸುರೇಶ್‌ ಕಚೇರಿ ಮತ್ತು ನಿವಾಸ, ವಿಧಾನಪರಿಷತ್‌ ಸದಸ್ಯ ರವಿ ಅವರ ನಿವಾಸ, ಆಪ್ತ ದ್ವಾರಕಾನಾಥ್‌ ಗುರೂಜಿ, ಸ್ನೇಹಿತ ಸುನಿಲ್‌ಕುಮಾರ್‌ ಶರ್ಮಾ, ಬಾಲಾಜಿ, ಧವನಂ ಜ್ಯುಯೆಲರ್, ಶೋಭಾ ಡೆವಲಪರ್ ಸಂಸ್ಥೆಗಳ ಮೇಲಿನ ದಾಳಿ ಸಂದರ್ಭದಲ್ಲಿ ದೊರೆತ ದಾಖಲೆ, ಹಣ.  ಈಗಲೇಟನ್‌ ರೆಸಾರ್ಟ್‌ನಲ್ಲಿ ಹರಿದ ದಾಖಲೆ ಪತ್ರ ಇವೆಲ್ಲವನ್ನೂ ಹೋಲಿಕೆ ನಡೆಸಲಾಗುತ್ತದೆ.
ಡಿ.ಕೆ.ಶಿವಕುಮಾರ್‌ ಅವರು ಪಾಲುದಾರಿಕೆ ಹೊಂದಿರುವ ಆಸ್ತಿ,  ಒಂದೊಮ್ಮೆ ಬೇನಾಮಿ ಆಸ್ತಿ ಇದ್ದರೆ ಅದರ ಪಟ್ಟಿ ತಯಾರಿಸಿಕೊಳ್ಳಲಾಗುತ್ತದೆ.  

ಐಟಿ  ಇಲಾಖೆ ಮುಂದಿನ ಪ್ರಕ್ರಿಯೆಯಾಗಿ ಸಮನ್ಸ್‌ ಜಾರಿ ಮಾಡಿ ವಿಚಾರಣೆಗೆ ಆಗ್ಗಾಗ್ಗೆ ಕರೆಸಿಕೊಳ್ಳಬಹುದು. ಶಿವಕುಮಾರ್‌ ಅಷ್ಟೇ ಅಲ್ಲದೆ ದಾಳಿಗೊಳಗಾದವರನ್ನೂ ವಿಚಾರಣೆಗೆ ಕರೆಯಬಹುದು. ವಿಚಾರಣೆ ಇಷ್ಟೇ ದಿನಕ್ಕೆ ಮುಗಿಯಲಿದೆ ಎಂದು ಹೇಳಲಿಕ್ಕಾಗದು. ಮೂರು ತಿಂಗಳೊಳಗೆ ಎಫ್ಐಆರ್‌ ಸಹ ದಾಖಲಿಸಿಕೊಳ್ಳಬಹುದು. ಹಣ ಮತ್ತು ಆಸ್ತಿ ಮೂಲದ ಬಗ್ಗೆ ಖಚಿತ ಮಾಹಿತಿ ನೀಡದೆ ಇದ್ದರೆ, ಹಣ ಹೆಚ್ಚಾಗಿ ದೊರೆತಿದ್ದರೆ, ನಿಷೇಧಿತ ನೋಟುಗಳು ದೊರೆತಿದ್ದರೆ ಆಗ ಸಹಜವಾಗಿ ಜಾರಿ ನಿರ್ದೇಶನಾಲಯಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಅಂತಾರಾಜ್ಯ ಅಥವಾ ವಿದೇಶದ ನಡುವಿನ ವಹಿವಾಟು, ಅಕ್ರಮದ ಸಾಕ್ಷ್ಯ ದೊರೆತರೆ ಸಿಬಿಐಗೂ ಶಿಫಾರಸು ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಲಕ್ಷ್ಮೀ ಪೂಜೆಯಂದೇ ಕಳವಳ
ಎಲ್ಲವೂ ಸರಿ ಇದ್ದಿದ್ದರೆ ಸಚಿವರ ಮನೆಯಲ್ಲಿ ಶುಕ್ರವಾರದ ಲಕ್ಷ್ಮೀ ಪೂಜೆ ಬಹಳ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ ಐಟಿ ದಾಳಿಯಿಂದ ತತ್ತರಿಸಿರುವ “ಕೆಂಕೇರಿ’ಯಲ್ಲಿ ಕಳವಳವೇ ಮನೆ ಮಾಡಿತ್ತು. ಅಧಿಕಾರಿ ತಪಾಸಣೆಗೆ ಹೈರಾಣವಾಗಿದ್ದ ಸಚಿವ ಡಿಕೆಶಿ ಮತ್ತು ಮನೆ ಮಂದಿಗೆ ಪೂಜೆ ಮಾಡುವ ಉತ್ಸಾಹ ಇರಲಿಲ್ಲ. ಈ ನಡುವೆ ಸಚಿವರು ದಣಿವಿನಿಂದ ಅನಾರೋಗ್ಯಪೀಡಿತರಾಗಿದ್ದು, ಮನೆ ಮಂದಿಯನ್ನು ಮತ್ತಷ್ಟು ಕಳವಳಕ್ಕೀಡು ಮಾಡಿತ್ತು. ಮಧ್ಯಾಹ್ನದ ತನಕ ಮನೆಮಂದಿ ಯಾರೂ ಹೊರಗೆ ಕಾಣಿಸಿರಲಿಲ್ಲ. ಅಪರಾಹ್ನ ಪತ್ನಿ ಮತ್ತು ಮಕ್ಕಳು ಬಾಲ್ಕನಿಗೆ ಬಂದ ತಕ್ಷಣ ಛಾಯಾಗ್ರಾಹಕರ ಕಣ್ಣಿಗೆ ಸಿಕ್ಕಿದ್ದರು.

ಅಣ್ಣನ ಆರೋಗ್ಯದಲ್ಲಿ ಸ್ವಲ್ಪ ಮಟ್ಟಿನ ಏರುಪೇರಾಗಿದೆ ಎಂಬ ಸುದ್ದಿ ತಿಳಿದ ತಕ್ಷಣವೇ ಸದಾಶಿವ ನಗರಕ್ಕೆ ಆಗಮಿಸಿದ್ದ ಸಂಸದ ಡಿ.ಕೆ.ಸುರೇಶ್‌ ಅವರನ್ನು ಮನೆಯೊಳಗೆ ಬಿಡಲು ಭದ್ರತಾ ಸಿಬ್ಬಂದಿ ಆರಂಭದಲ್ಲಿ ನಿರಾಕರಿಸಿದರು. ನಂತರ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಘೋಷಣೆ ಕೂಗುತ್ತಿದ್ದಂತೆ ಸ್ಥಳೀಯ ಪೊಲೀಸರು ಸಿಆರ್‌ಪಿಎಫ್ ಯೋಧರ ಮನವೊಲಿಸಿದರು. ಮನೆಯೊಳಗೆ ಪ್ರವೇಶಿಸಿದ ಡಿ.ಕೆ.ಸುರೇಶ್‌, ಅಣ್ಣನೊಂದಿಗೆ ಸ್ವಲ್ಪಹೊತ್ತು ಮಾತುಕತೆ ನಡೆಸಿ, ಮನೆಯವರಿಗೆ ವರಮಹಾಲಕ್ಷ್ಮಿಹಬ್ಬದ ಶುಭಾಶಯ ಕೋರಿ ವಾಪಾಸಾದರು.

ಡಿ.ಕೆ. ಶಿವಕುಮಾರ್‌ ಅವರ ರಾಜೀನಾಮೆ ಕೇಳಲು ಬಿಜೆಪಿ ನಾಯಕರಿಗೆ ನೈತಿಕತೆ ಇಲ್ಲ. ಅನಂತಕುಮಾರ್‌, ಯಡಿಯೂರಪ್ಪ ಮೇಲೆ ಆರೋಪಗಳಿಲ್ಲವೇ? ಎಲ್ಲ ಬೆಳವಣಿಗೆ ಗಮನಿಸಿದರೆ ಅಮಿತ್‌ ಶಾ ಅವರೇ ಈ ದಾಳಿ ಮಾಡಿಸಿರುವುದು ಸ್ಪಷ್ಟ. ಅವರ ಮನೆ ಸರ್ಚ್‌ ಮಾಡಲು ಸಿಆರ್‌ಪಿಎಫ್ ಸಿಬ್ಬಂದಿ ಬಳಸುವ ಅಗತ್ಯವೇನಿತ್ತು?
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.