ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!
Team Udayavani, Jan 24, 2022, 11:59 AM IST
ಬೆಂಗಳೂರು: ಬೆಕ್ಕು ಕಳೆದೋಗಿದೆ ಹುಡುಕಿ ಕೋಡಿ ಎಂದು ಮಾಲೀಕರೊಬ್ಬರು ತಿಲಕ್ ನಗರ ಠಾಣೆಗೆ ದೂರು ನೀಡಿದ್ದಾರೆ.
ತಿಲಕನಗರ ಠಾಣೆಯಲ್ಲಿ ಆಲಿಜೆ ಹೆಸರಿನ ಹೆಣ್ಣು ಬೆಕ್ಕು ಮಿಸ್ಸಿಂಗ್ ಕುರಿತು ಎಫ್‌ಐಆರ್ ದಾಖಲಾಗಿದೆ. ಜಯನಗರದರಾಜಣ್ಣ ಲೇಔಟ್ ನಿವಾಸಿ ಮಿಸ್ಬಾ ಶರೀಫ್ ಎಂಬುವರು ದೂರು ನೀಡಿದ್ದು, ಪರ್ಷಿಯನ್ ಮೂಲದ ವಿದೇಶಿ ಬೆಕ್ಕು ಇದಾಗಿದೆ.
ಜ.15 ರಂದು ನಾಪತ್ತೆಯಾಗಿದೆ ಎಂದು ದೂರು ನೀಡಿದ್ದಾರೆ. ದುಷ್ಕರ್ಮಿಗಳು ಚಾವಣಿಯಿಂದ ಬಂದು ಬೆಕ್ಕನ್ನು ಕಳ್ಳತನ ಮಾಡಿದ್ದಾರೆ ಎಂದು ಅನುಮಾನಿಸಿರೋ ಮಿಸ್ಬಾ, ಬೆಕ್ಕು ಹುಡುಕಿಕೊಟ್ಟರೆ 35 ಸಾವಿರ ಬಹುಮಾನ ಕೊಡುವುದಾಗಿಯೂ ಘೋಷಣೆ ಮಾಡಿದ್ದಾರೆ.