Udayavni Special

ಆಸ್ತಿ ವಿವರಕ್ಕೆ ಮೌಲ್ಯ ಆ್ಯಪ್‌


Team Udayavani, Aug 28, 2018, 6:00 AM IST

app-moblie.jpg

ಬೆಂಗಳೂರು: ರಾಜ್ಯದಲ್ಲಿರುವ ಯಾವುದೇ ಆಸ್ತಿಯ ಮಾರ್ಗಸೂಚಿ ದರ, ಮೌಲ್ಯ ಸೇರಿದಂತೆ ಇತರೆ ಅಗತ್ಯ ಮಾಹಿತಿಯನ್ನು ಅಂಗೈನಲ್ಲೇ ಪಡೆಯಬಹುದಾದ ಮೊಬೈಲ್‌ ಆ್ಯಪ್‌ “ಮೌಲ್ಯ’ ಸಿದ್ಧವಾಗಿದ್ದು, ಸದ್ಯದಲ್ಲೇ ಬಳಕೆಗೆ ಮುಕ್ತವಾಗಲಿದೆ.

ಮಾಹಿತಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸಾರ್ವಜನಿಕರಿಗೆ ಸುಧಾರಿತ ಸೌಲಭ್ಯ ಕಲ್ಪಿಸಲು ಮುಂದಾಗಿರುವ ನೋಂದಣಿ ಮತ್ತು ಮುದ್ರಾಂಕ ಇಲಾಖೆಯು “ಮೌಲ್ಯ’ ಆ್ಯಪ್‌ ಸಿದ್ಧಪಡಿಸಿದೆ. ಜತೆಗೆ ಕೃಷಿಕರು ಸಾಲ ಪಡೆಯುವ ಹಾಗೂ ಮರು ಪಾವತಿಸುವ ಪ್ರಕ್ರಿಯೆಯಲ್ಲಿ ಉಪನೋಂದಣಾಧಿಕಾರಿ ಕಚೇರಿಗೆ ಅನಗತ್ಯವಾಗಿ ಓಡಾಡುವುದನ್ನು ತಪ್ಪಿಸಲು ಹೊಸ ವ್ಯವಸ್ಥೆ ರೂಪಿಸಿದ್ದು, ಕೆಲವೇ ದಿನಗಳಲ್ಲಿ ಅನುಷ್ಠಾನವಾಗಲಿದೆ.

ರಾಜ್ಯದಲ್ಲಿ ವಾರ್ಷಿಕವಾಗಿ 20 ಲಕ್ಷಕ್ಕೂ ಹೆಚ್ಚು ಆಸ್ತಿ ನೋಂದಣಿಯಾಗುತ್ತವೆ. ಇದರಲ್ಲಿ ಶೇ.70ರಷ್ಟು ಆಸ್ತಿ ನೋಂದಣಿ ಬೆಂಗಳೂರಿನಲ್ಲೇ ನಡೆಯುತ್ತದೆ. ಆಸ್ತಿ ಖರೀದಿದಾರರು ನಿರ್ದಿಷ್ಟ ಆಸ್ತಿಗೆ ಸಂಬಂಧಪಟ್ಟಂತೆ ಮಾರ್ಗಸೂಚಿ ದರ ಸೇರಿದಂತೆ ಇತರೆ ವಿವರ ಪಡೆಯಲು ಪರದಾಡುವಂತಾಗಿದೆ. ಅಲ್ಲದೇ ಭೂಮಿಗೆ ಸಂಬಂಧಪಟ್ಟ ದಾಖಲೆಗಳ ಸತ್ಯಾಸತ್ಯತೆ ಪತ್ತೆ ಹಚ್ಚುವುದು ಕೂಡ ಸವಾಲಿನ ಕೆಲಸವೇ ಆಗಿದೆ.

ಮುಖ್ಯವಾಗಿ ಗೃಹ ಮಂಡಳಿ ಸೇರಿದಂತೆ ಇತರೆ ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು  ಮಂಡಳಿಗಳು ಹಂಚಿಕೆ ಮಾಡುವ ನಿವೇಶನಗಳಿಗಿಂತ ರೆವಿನ್ಯೂ ನಿವೇಶನಗಳಿಗೆ ಸಂಬಂಧಪಟ್ಟಂತೆ ದಾಖಲೆಗಳ ದೃಢೀಕರಣ, ಮಾರ್ಗಸೂಚಿ ದರದ ಬಗ್ಗೆ ನಿಖರ ಮಾಹಿತಿ ಪಡೆಯಲು ಸಾಕಷ್ಟು ಕಸರತ್ತು ನಡೆಸಬೇಕಿದೆ. ಜತೆಗೆ ಕಾನೂನು ತಜ್ಞರ ಸಲಹೆ ಸೇರಿದಂತೆ ಇತರೆ ದೃಢೀಕರಣ ಪ್ರಕ್ರಿಯೆಗಾಗಿ ಹಣ, ಸಮಯ ಕೂಡ ವ್ಯಯ ಮಾಡಬೇಕಾಗುತ್ತದೆ. ಆ ಹಿನ್ನೆಲೆಯಲ್ಲಿ ಕುಳಿತಲ್ಲೇ ಮಾಹಿತಿ ಪಡೆಯಬಹುದಾದ ಮೊಬೈಲ್‌ ಆ್ಯಪ್‌ಅನ್ನು ಇಲಾಖೆ ಸಿದ್ಧಪಡಿಸಿದೆ.

“ಮೌಲ್ಯ’ ಆ್ಯಪ್‌
ರಾಜ್ಯದಲ್ಲಿರುವ ಆಸ್ತಿಗಳ ಸರ್ವೇ ಸಂಖ್ಯೆ, ಮಾರ್ಗಸೂಚಿ ದರ ಇತರೆ ಮಾಹಿತಿಯನ್ನು ನೋಂದಣಿ ಮತ್ತು ಮುದ್ರಾಂಕ ಇಲಾಖೆಯು ಆನ್‌ಲೈನ್‌ನಲ್ಲಿ ದಾಖಲಿಸಿದ್ದು, ಅದರ ಬಳಕೆಗೆ ವಿಶೇಷ ಆ್ಯಪ್‌ ರೂಪಿಸಿದೆ. ಇದರಲ್ಲಿ ಆಸ್ತಿಯ ಕೆಲ ಪ್ರಾಥಮಿಕ ವಿವರ ನಮೂದಿಸಿದರೆ ಅದರ ಮಾರ್ಗಸೂಚಿ ದರ ಇತರೆ ಮಾಹಿತಿ ತಿಳಿಯಬಹುದು. ಕೃಷಿ ಭೂಮಿ, ಕೃಷಿಯೇತರ ಭೂಮಿ ಎಂಬ ಆಯ್ಕೆಗಳನ್ನು ನಮೂದಿಸಿ ಖಾತರಿಪಡಿಸಿಕೊಳ್ಳಬಹುದು. ನಿರ್ದಿಷ್ಟ ಆಸ್ತಿಯ ಜಾಗದಲ್ಲಿ ನಿಂತು ಸ್ಥಳದ ಗುರುತು ನೀಡಿ (ಜಿಪಿಎಸ್‌ ಪೊಸಿಷನ್‌ ಲೊಕೇಷನ್‌) ಸರ್ವೇ ಸಂಖ್ಯೆ, ವಿಳಾಸ ಇತರೆ ಮಾಹಿತಿ ದಾಖಲಿಸಿದರೆ ವಿವರ ಸಿಗಲಿದೆ. ಸದ್ಯದಲ್ಲೇ ಗೂಗಲ್‌ ಪ್ಲೇ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್‌ ಮಾಡಿಕೊಳ್ಳುವ ಸೌಲಭ್ಯವನ್ನು ಇಲಾಖೆ ಕಲ್ಪಿಸಲಿದೆ.

ಆ್ಯಪ್‌ನಿಂದ ಪ್ರಯೋಜನ
– ಕುಳಿತಲ್ಲೇ ಖರೀದಿಸ ಬಯಸುವ ಆಸ್ತಿಯ ಪ್ರಾಥಮಿಕ ವಿವರ
– ಮಾರ್ಗಸೂಚಿ ದರದ ನಿರ್ದಿಷ್ಟ ಮಾಹಿತಿ
– ಆಸ್ತಿ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಅಪಮೌಲ್ಯಗೊಳಿಸುವ ಕೃತ್ಯಗಳಿಗೆ ಕಡಿವಾಣ

ಬಿಬಿಎಂಪಿ ಸಹಯೋಗಕ್ಕೆ ಚಿಂತನೆ
ಇಲಾಖೆಯು ಈ ಮಾಹಿತಿಯನ್ನು ಬಿಬಿಎಂಪಿಯೊಂದಿಗೆ ಹಂಚಿಕೆ ಮಾಡಿಕೊಳ್ಳಲು ಚಿಂತಿಸಿದೆ. ಇದರಿಂದ ಬೆಂಗಳೂರಿನಲ್ಲಿರುವ ಎಲ್ಲ ಆಸ್ತಿಗಳಿಂದ ನಿಖರ ಆಸ್ತಿ ತೆರಿಗೆ ಸಂಗ್ರಹಿಸಲು ಪಾಲಿಕೆಗೆ ಅನುಕೂಲವಾಗಬಹುದು. ಒಟ್ಟು ನಿರ್ಮಿತಿ ಪ್ರದೇಶಕ್ಕಿಂತ ಕಡಿಮೆ ವಿಸ್ತೀರ್ಣ ನಮೂದಿಸಿ ತೆರಿಗೆ ವಂಚಿಸುವುದು, ಮಹಡಿಗಳ ಸಂಖ್ಯೆ, ಬಾಡಿಗೆಗೆ ನೀಡಿದ್ದರೂ ಸ್ವಂತ ಬಳಕೆ ಎಂದು ನಮೂದಿಸಿ ಕಡಿಮೆ ತೆರಿಗೆ ಪಾವತಿಸುವುದು ಸೇರಿದಂತೆ ಸುಳ್ಳು ಮಾಹಿತಿ ನೀಡಿ ತೆರಿಗೆ ವಂಚಿಸುವುದಕ್ಕೆ ಕಡಿವಾಣ ಹಾಕಲು ಸಹಕಾರಿಯಾಗುವ ನಿರೀಕ್ಷೆ ಇದೆ. ಹಾಗಾಗಿ ಮಾಹಿತಿ ವಿನಿಮಯಕ್ಕೂ ಇಲಾಖೆ ನಿರ್ಧರಿಸಿದೆ.

ರೈತರಿಗೂ ಸರಳ ಪ್ರಕ್ರಿಯೆ
ರೈತರು ಬೆಳೆ ಸಾಲ ಪಡೆಯುವ ಪ್ರಕ್ರಿಯೆಯಲ್ಲೂ ಉಪನೋಂದಣಾಧಿಕಾರಿ ಕಚೇರಿಗೆ ಅಲೆದಾಡಬೇಕಾದ ಸ್ಥಿತಿ ಇದ್ದು, ಇಲ್ಲಿಯೂ ಮಾಹಿತಿ ತಂತ್ರಜ್ಞಾನ ಬಳಕೆ ಮೂಲಕ ಸರಳಗೊಳಿಸುವ ವ್ಯವಸ್ಥೆಯನ್ನು ಇಲಾಖೆ ರೂಪಿಸಿದೆ. ಸಾಮಾನ್ಯವಾಗಿ ಬೆಳೆ ಸಾಲ ಮಂಜೂರಾದ ಬಳಿಕ ರೈತರು ಅಡಮಾನ ಪತ್ರವನ್ನು ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಾಯಿಸಬೇಕಾಗುತ್ತದೆ. ಈ ಪ್ರಕ್ರಿಯೆ ಸಾಕಷ್ಟು ವಿಳಂಬವಾಗುತ್ತದೆ. ಜತೆಗೆ ಸಾಲ ಮರುಪಾವತಿಸಿದ ಬಳಿಕವೂ ಇದೇ ರೀತಿ ಪ್ರಕ್ರಿಯೆ ನಡೆಯುತ್ತದೆ.

ಆ ಹಿನ್ನೆಲೆಯಲ್ಲಿ ಇಲಾಖೆಯು ಕರ್ನಾಟಕ ಕೃಷಿ ಸಾಲ ನಿರ್ವಹಣೆ ಹಾಗೂ ಇತರೆ ಅವಕಾಶಗಳ ಕಾಯ್ದೆಯಡಿಯ (ಕರ್ನಾಟಕ ಅಗ್ರಿಕಲ್ಚರಲ್‌ ಕ್ರೆಡಿಟ್‌ ಪ್ರಾವಿಷನ್ಸ್‌ ಆ್ಯಂಡ್‌ ಮಿಸಲೇನಿಯಸ್‌ ಪ್ರಾವಿಷನ್ಸ್‌ ಆ್ಯಕ್ಟ್) ಸೌಲಭ್ಯದಂತೆ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದೆ. ಅದರಂತೆ ರೈತರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ಹೆಸರು, ಭೂ ವಿಸ್ತೀರ್ಣ, ಬೆಳೆ ವಿವರ, ಪಡೆಯುತ್ತಿರುವ ಸಾಲ ಮೊತ್ತ ಇತರೆ ಮಾಹಿತಿಗೆ ಸಂಬಂಧಪಟ್ಟ ದಾಖಲೆಗಳನ್ನು ಬ್ಯಾಂಕ್‌ ಮ್ಯಾನೇಜರ್‌ಗೆ ಸಲ್ಲಿಸಿ ಘೋಷಣಾ ಪತ್ರ ನೀಡಿದರೆ ಸಾಕು. ನಂತರ ಬ್ಯಾಂಕ್‌ ಮ್ಯಾನೇಜರ್‌ ಆ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ ಸಂಬಂಧಪಟ್ಟ ಉಪನೋಂದಣಾಧಿಕಾರಿಗೆ ವರ್ಗಾಹಿಸಿ ದೃಢೀಕರಿಸಿಕೊಳ್ಳಲಿದ್ದಾರೆ.

ಸಾಲ ಮಂಜೂರಾಗುತ್ತಿದ್ದಂತೆ ರೈತರ ಪಹಣಿಯಲ್ಲಿ ಸಾಲದ ವಿವರವೂ ನಮೂದಾಗಲಿದೆ. ರೈತರು ಪೂರ್ಣ ಸಾಲ ಮರುಪಾವತಿಸಿದ ಬಳಿಕ ಪಹಣಿಯಲ್ಲಿ ಋಣಮುಕ್ತವೆಂದು ಆನ್‌ಲೈನ್‌ನಲ್ಲೇ ನಮೂದಿಸಲು ಅವಕಾಶವಿದೆ. ಇದರಿಂದ ರೈತರು ಉಪನೋಂದಣಾಧಿಕಾರಿ ಕಚೇರಿಗೆ ಹೋಗುವ ಪ್ರಮೇಯವೇ ಬರುವುದಿಲ್ಲ. ಕೇವಲ ಬ್ಯಾಂಕ್‌ಗೆ ಒಮ್ಮೆ ಹೋಗಿ ಬಂದರೆ ಸಾಕು. ನೂತನ ವ್ಯವಸ್ಥೆ ಸಿದ್ಧವಾಗಿದ್ದು, ಸೆಪ್ಟೆಂಬರ್‌ನಲ್ಲಿ ಅನುಷ್ಠಾನಗೊಳಿಸಲು ಇಲಾಖೆ ಸಿದ್ಧತೆ ನಡೆಸಿದೆ.

ರಾಜ್ಯದಲ್ಲಿ ಯಾವುದೇ ಆಸ್ತಿಗೆ ಸಂಬಂಧಪಟ್ಟ ಪ್ರಾಥಮಿಕ ವಿವರ ಹಾಗೂ ಮಾರ್ಗಸೂಚಿ ದರದ ನಿಖರ ಮಾಹಿತಿಯನ್ನು ತಿಳಿಸುವ “ಮೌಲ್ಯ’ ಆ್ಯಪ್‌ ರೂಪಿಸಲಾಗಿದೆ. ಹಾಗೆಯೇ ರೈತರು ಸಾಲ ಪಡೆಯುವ ಪ್ರಕ್ರಿಯೆಯಲ್ಲೂ ಅನಗತ್ಯ ವಿಳಂಬ, ವೆಚ್ಚ ಕಡಿತಕ್ಕೆ ಮಾಹಿತಿ ತಂತ್ರಜ್ಞಾನ ಬಳಸಿ ಸುಧಾರಿತ ವ್ಯವಸ್ಥೆ ತರಲಾಗಿದೆ. ಇದರಿಂದ ಕಚೇರಿಗಳಿಗೆ ಅನಗತ್ಯವಾಗಿ ಓಡಾಡುವುದು ತಪ್ಪಲಿದ್ದು, ಎರಡೂ ಸೇವೆಗಳು ಸದ್ಯದಲ್ಲೇ ಜಾರಿಯಾಗಲಿವೆ.
– ಡಾ.ಕೆ.ವಿ. ತ್ರಿಲೋಕ್‌ಚಂದ್ರ, ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಯುಕ್ತ

– ಎಂ. ಕೀರ್ತಿಪ್ರಸಾದ್‌

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

IPLಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

ಶರ್ಮಾ ಅರ್ಧ ಶತಕ; ಕೊನೆಯಲ್ಲಿ ಮಿಂಚಿದ ಪೊಲಾರ್ಡ್; ರಾಹುಲ್ ಬಳಗಕ್ಕೆ 192  ಗೆಲುವಿನ ಗುರಿ

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

hdk

ರಾಷ್ಟ್ರೀಯ ಪಕ್ಷದ ನಾಯಕರ ಮೇಲೆ ಉ.ಪ್ರ ಪೊಲೀಸರಿಂದ ದೌರ್ಜನ್ಯ: ಎಚ್.ಡಿ.ಕೆ ಆಕ್ರೋಶ

congres

ಉ.ಪ್ರ ಸರ್ಕಾರ-ಪೊಲೀಸರ ನಡೆ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ, ಪಂಜಿನ ಮೆರವಣಿಗೆ

suresh

ಶಾಲೆಗಳನ್ನು ತೆರೆಯುವ ಧಾವಂತ ಇಲ್ಲ; ಮಕ್ಕಳ ಹಿತವೇ ಮುಖ್ಯ: ಸುರೇಶ್ ಕುಮಾರ್

ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಮತ್ತೆ ಒಂದು ತಿಂಗಳ ಕಾಲ ಬಂದ್

ಸವದತ್ತಿ ಶ್ರೀ ಯಲ್ಲಮ್ಮ ದೇವಸ್ಥಾನ ಮತ್ತೆ ಒಂದು ತಿಂಗಳ ಕಾಲ ಬಂದ್

MUST WATCH

udayavani youtube

ನಂದಿ ಹಿಲ್ಸ್ ನಲ್ಲಿ ಜನಸಾಗರ- ವೀಕೆಂಡ್ ಸ್ಪಾಟ್ ಆಗುವುದೇ ಕೋವಿಡ್ ಹಾಟ್ ಸ್ಪಾಟ್?

udayavani youtube

ಪಡುಪೆರಾರದಲ್ಲಿ ವಿಜಯಪುರದ ಕುಟುಂಬಗಳ ಪರದಾಟ!

udayavani youtube

ಮಂಗಳೂರಿನಲ್ಲಿ ಪ್ರತ್ಯೇಕ ಬೆಂಕಿ ಅವಘಡ : ಬ್ಯಾಂಕ್ ಕಚೇರಿ , 5 ಬೈಕುಗಳು ಬೆಂಕಿಗಾಹುತಿ

udayavani youtube

ಕರಾವಳಿ ಮೀನುಗಾರಿಕೆಯ ಚಿತ್ರ ಬಿಡಿಸಿ ವಿಶೇಷ ಜಾಗೃತಿ ಮೂಡಿಸಿದ ಫಿಕ್ಸೆನ್ಸಿಲ್‌ ಕಲಾವಿದರ ತಂಡ

udayavani youtube

Want to help farmers, Remove Middlemen | APMC Act Amendment ಆಗ್ಲೇ ಬೇಕುಹೊಸ ಸೇರ್ಪಡೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ಕನಿಷ್ಠ ಬೆಂಬಲ ಬೆಲೆ ಸದಾ ಇರಲಿದೆ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ತಂಡಕ್ಕೆ ನೀಡಲು 2 ರೂ. ಇರಲಿಲ್ಲ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಸಿಂಧ್‌ನಲ್ಲಿ ಹಿಂದೂ ಯುವತಿ ಆತ್ಮಹತ್ಯೆ

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

ಗುರುವಾರ 10,070 ಮಂದಿಗೆ ಸೋಂಕು; 130 ಮಂದಿ ಸಾವು

IPL 2020: ಮುಂಬೈ ಮಾರಕ ದಾಳಿಗೆ ಕುಸಿದ ಪಂಜಾಬ್;

IPL 2020: ಮುಂಬೈ ದಾಳಿಗೆ ಕುಸಿದ ಪಂಜಾಬ್; ಕಿಂಗ್ಸ್ ಗೆ 49ರನ್ ಗಳ ಸೋಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.