ಮಕ್ಕಳಿಗೆ ವಿಷವುಣಿಸಿ ತಾಯಿ ಆತ್ಮಹತ್ಯೆ


Team Udayavani, Mar 31, 2019, 12:23 PM IST

makkalige

ಬೆಂಗಳೂರು: ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದ ಗೃಹಿಣಿ, ತನ್ನ ಇಬ್ಬರು ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಮೃತಪಟ್ಟ ಘಟನೆ ರಾಮಮೂರ್ತಿನಗರದಲ್ಲಿ ನಡೆದಿದೆ.

ಜಯಂತಿನಗರದ ನಿವಾಸಿ ಮೀನಾ (24) ಆಕೆಯ ಮಗು ಸುಗುಣ (3) ಮೃತಪಟ್ಟಿದ್ದು, ಚರಣ್‌ (7) ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಈ ಕುರಿತು ರಾಮಮೂರ್ತಿನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೃತ ಮೀನಾ ಮಾನಸಿಕ ಖನ್ನತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಆದರೆ, ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಮಿಳುನಾಡು ಮೂಲದ, ಗಾರೆ ಕೆಲಸಗಾರ ಕುಮಾರೇಶನ್‌ ಹಾಗೂ ಮೀನಾ ದಂಪತಿ ಮಕ್ಕಳ ಜತೆ ಜಯಂತಿನಗರದಲ್ಲಿ ಹಲವು ವರ್ಷಗಳಿಂದ ವಾಸವಿದ್ದಾರೆ. ಶುಕ್ರವಾರ (ಮಾ.29) ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಹೋಗಿದ್ದ ಕುಮಾರೇಶನ್‌, ಮಧ್ಯಾಹ್ನ 1 ಗಂಟೆ ಸುಮಾರಿಗೆ ಊಟ ಮಾಡಲು ಮನೆಗೆ ಬಂದಿದ್ದಾರೆ.

ಕೆಲ ಹೊತ್ತು ಬಾಗಿಲು ಬಡಿದರೂ ತೆಗೆಯದಿದ್ದಾಗ ಅನುಮಾನಗೊಂಡು ಬಾಗಿಲು ಮುರಿದು ನೋಡಿದಾಗ ಪತ್ನಿ ಹಾಗೂ ಮಕ್ಕಳಿಬ್ಬರ ಬಾಯಲ್ಲಿ ನೊರೆ ಬಂದು, ಪ್ರಜ್ಞಾಹೀನರಾಗಿ ಬಿದ್ದಿದ್ದರು. ಇದನ್ನು ಕಂಡು ಕುಮಾರೇಶನ್‌ ಕೂಗಿಕೊಂಡಿದ್ದಾರೆ.

ಕೂಡಲೇ ಅಕ್ಕಪಕ್ಕದ ಮನೆಗಳವರು ನೆರವಿಗೆ ಬಂದು, ಮೂವರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರೀಕ್ಷಿಸಿದ ವೈದ್ಯರು ಮೀನಾ ಹಾಗೂ ಸುಗುಣ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಬಳಿಕ ಚಿಂತಾಜನಕ ಸ್ಥಿತಿಯಲ್ಲಿದ್ದ ಚರಣ್‌ಗೆ ಚಿಕಿತ್ಸೆ ನೀಡಿದ್ದಾರೆ.

ಮೀನಾ ಹಾಗೂ ಸುಗುಣಳ ಮೃತದೇಹಗಳ ಮರಣೋತ್ತರ ಪರೀಕ್ಷೆ ಪೂರ್ಣಗೊಳಿಸಿ ಸಂಬಂಧಿಕರಿಗೆ ಒಪ್ಪಿಸಿದ್ದು, ಅಂತ್ಯಕ್ರಿಯೆಗೆ ತಮಿಳುನಾಡಿಗೆ ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ವಿವರಿಸಿದರು.

ಮೃತ ಮೀನಾ ಅವರ ಪೋಷಕರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. 2011ರಲ್ಲಿ ಕುಮಾರೇಶನ್‌ ಹಾಗೂ ಮೀನಾ ವಿವಾಹವಾಗಿದ್ದು, ದಂಪತಿ ಅನೂನ್ಯವಾಗಿದ್ದರು. ಮೀನಾಳದ್ದು ಅತ್ಯಂತ ಮೌನ ಸ್ವಭಾವ, ಯಾರೊಂದಿಗೂ ಮುಕ್ತವಾಗಿ ಬೆರೆಯುತ್ತಿರಲಿಲ್ಲ.

ಘಟನೆ ನಡೆಯುವ ಹಿಂದಿನ ದಿನ ಕುಮಾರೇಶನ್‌, ಪತ್ನಿ ಹಾಗೂ ಮಕ್ಕಳನ್ನು ಹೊರಗಡೆ ಊಟಕ್ಕೆ ಕರೆದೊಯ್ದಿದ್ದರು ಎಂದು ಮೀನಾಳ ಪೋಷಕರಾದ ಪನ್ನೀರಸೆಲ್ವಂ ಹಾಗೂ ರಾಧಾ ಹೇಳಿಕೆ ನೀಡಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವಾರ ಹಿಂದಷ್ಟೇ ಇಂಥದ್ದೇ ಘಟನೆ: ಕಳೆದ ಒಂದು ವಾರದ ಹಿಂದಷ್ಟೇ ಚಂದ್ರಲೇಔಟ್‌ ಸಮೀಪದ ಕಲ್ಯಾಣನಗರದಲ್ಲಿ ಗೃಹಿಣಿಯೊಬ್ಬರು ಎರಡೂವರೆ ವರ್ಷದ ಮಗನನ್ನು ನೇಣುಬಿಗಿದು ಕೊಲೆಗೈದು, ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದರು.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಡೆತ್‌ನೋಟ್‌ ಬರೆದಿಟ್ಟಿದ್ದ ಮಂಗಳೂರು ಮೂಲದ ಪ್ರತಿಮಾ ಮಂಗಲೋರರ್‌, ಪುತ್ರ ಸಾತ್ವಿಕ್‌ನನ್ನು ನೇಣುಬಿಗಿದು ಕೊಂದು ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.

ಟಾಪ್ ನ್ಯೂಸ್

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಕ್ಕು ಮತ್ತು ಕರ್ತವ್ಯಗಳು ಜೊತೆಯಾಗಿ ಹೋಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

3yakshagana

ಯಕ್ಷಗಾನ ಹಿರಿಯ ಕಲಾವಿದ ಬೇತ ಕುಂಞ ಕುಲಾಲ್ ನಿಧನ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

thavarchand gahlot

ಸಮಾಜದ ದುರ್ಬಲ ವರ್ಗಗಳ ಏಳಿಗೆಗೆ ನನ್ನ ಸರ್ಕಾರ ಬದ್ಧ: ರಾಜ್ಯಪಾಲರ ಗಣರಾಜ್ಯೋತ್ಸವ ಸಂದೇಶ

1fire2

ಚಾರ್ಮಾಡಿ ಅರಣ್ಯದಲ್ಲಿ ಅಗ್ನಿ ಆಕಸ್ಮಿಕ: ನೂರಾರು ಎಕರೆ ಅರಣ್ಯ ಬೆಂಕಿಗಾಹುತಿ

ಬಿ.ಸಿ.ಪಾಟೀಲ್

ಸೆಲ್ಯೂಟ್ ಹೊಡೆಯುತ್ತಿದ್ದ ಮೈದಾನದಲ್ಲಿ ಗೌರವ ಸ್ವೀಕರಿಸಿದ್ದು ನನ್ನ ಭಾಗ್ಯ: ಬಿ.ಸಿ.ಪಾಟೀಲ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಅಪಘಾತದಲ್ಲಿ ಮರ್ಮಾಂಗ ಶಾಶ್ವತ ಊನ : ಯುವಕನಿಗೆ 17 ಲಕ್ಷ ರೂ. ಪರಿಹಾರ ನೀಡಲು ಹೈಕೋರ್ಟ್‌ ಆದೇಶ

ಮತದಾರರ ಸಂಖ್ಯೆ: ಪ್ರಮೀಳಾ ಪಾರುಪತ್ಯ

ಮತದಾರರ ಸಂಖ್ಯೆ: ಪ್ರಮೀಳಾ ಪಾರುಪತ್ಯ

ನಗರದ ಹೊರಭಾಗದಲ್ಲೇ ಸೋಂಕು ಅಧಿಕ

ನಗರದ ಹೊರಭಾಗದಲ್ಲೇ ಸೋಂಕು ಅಧಿಕ

BJP FLAG

ಬಿಬಿಎಂಪಿ ಚುನಾವಣೆ ಪೂರ್ವ ಸಿದ್ಧತೆ: ಜ. 25 ರಿಂದ ಮೂರು ದಿನ ಬಿಜೆಪಿ ಸಭೆ

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

ಈ ಬೆಕ್ಕು ಹುಡುಕಿ ಕೊಟ್ಟರೆ 35 ಸಾವಿರ ರೂ. ಬಹುಮಾನ.!

MUST WATCH

udayavani youtube

73ನೇ ಗಣರಾಜ್ಯೋತ್ಸವ ಹಿನ್ನೆಲೆ ರಾಷ್ಟ್ರವನ್ನುದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಷಣ

udayavani youtube

ಮದುವೆ ದಿನದಂದು ಕಾಫಿದೊರೆ ಸಿದ್ದಾರ್ಥ ಹೆಗ್ಗಡೆ ಅವರಿಗೆ ನುಡಿ ನಮನ ಸಲ್ಲಿಸಿದ ಮದುಮಗ

udayavani youtube

ಅಭಿಮಾನದಿಂದ ಹಾಕಿದ ಕೇಸರಿ ರುಮಾಲು ಕಿತ್ತೆಸೆದ ಸಿದ್ದರಾಮಯ್ಯ ! ದಂಗಾದ ಅಭಿಮಾನಿ

udayavani youtube

ಮುತ್ತಿನ ಪ್ರಕರಣ : ಶಿಲ್ಪಾ ಶೆಟ್ಟಿಯನ್ನು ’ಸಂತ್ರಸ್ತೆ’ ಎಂದ ಮುಂಬೈ ಕೋರ್ಟ್

udayavani youtube

ವಾಹನ ಸವಾರರ ಗೋಳು ಕೇಳುವವರು ಯಾರು

ಹೊಸ ಸೇರ್ಪಡೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

ಮತದಾನದ ಹಕ್ಕು ಪ್ರಜಾಪ್ರಭುತ್ವದ ಅಡಿಪಾಯ: ಗೋವಾ ರಾಜ್ಯಪಾಲ ಪಿ.ಎಸ್.ಶ್ರೀಧರನ್ ಪಿಳ್ಳೆ

5democracy

ಮತದಾರರ ಕೈಯಲ್ಲಿದೆ ಸುಭದ್ರ ಪ್ರಜಾಪ್ರಭುತ್ವ

jagadish shettar

ಆಯಾ ಜಿಲ್ಲೆಯ ಸಚಿವರಿಗೆ ಜಿಲ್ಲಾ ಉಸ್ತುವಾರಿ ಸ್ಥಾನ ನೀಡುವುದು ಉತ್ತಮ: ಶೆಟ್ಟರ್

4——–

ಕಲಬುರಗಿ-ಬೆಂಗಳೂರು ರೈಲು ಶೀಘ್ರ ಆರಂಭ

Untitled-1

ದೇಶದ ಉನ್ನತಿಗಾಗಿರುವ ಕಾನೂನುಗಳಿಗೆ ವಿರೋಧ ವಿಷಾಧನೀಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.