ಮೆಟ್ರೋ ಶುಭಾರಂಭ, ಪ್ರತಿಕ್ರಿಯೆ ನೀರಸ

ನೇರಳೆ ಮಾರ್ಗ; ಮೊದಲ ದಿನ 3,770 ಮಂದಿ ಪ್ರಯಾಣ

Team Udayavani, Sep 8, 2020, 12:08 PM IST

ಮೆಟ್ರೋ ಶುಭಾರಂಭ, ಪ್ರತಿಕ್ರಿಯೆ ನೀರಸ

ಬೆಂಗಳೂರು: ಕೋವಿಡ್ ಹಾವಳಿಗೂ ಮುನ್ನ ಪ್ರಯಾಣಿಕರಿಗೆ ಮೆಟ್ರೋ ರೈಲುಗಳ ಸಾಕಾಗು ತ್ತಿರಲಿಲ್ಲ. ಆದರೆ, ಸೋಮವಾರ ರೈಲುಗಳಿದ್ದವು; ಪ್ರಯಾಣಿಕರು ಬರಲಿಲ್ಲ!

ಸುಮಾರು ಐದು ತಿಂಗಳ ನಂತರ ಹಳಿಗೆ ಇಳಿದ “ನಮ್ಮ ಮಟ್ರೋ’ ರೈಲುಗಳಲ್ಲಿ ಮೊದಲ ದಿನ ಕಂಡು ಬಂದ ದೃಶ್ಯ ಇದು. ಪ್ರತಿ ಐದು ನಿಮಿಷಕ್ಕೊಂದು ಆರು ಬೋಗಿಗಳ ರೈಲುಗಳು ಕಾರ್ಯಾಚರಣೆ ಮಾಡಿದವು. ಎಲ್ಲ ಮುನ್ನೆ ಚ್ಚರಿಕೆ ಕ್ರಮ ಕೈಗೊಳ್ಳಲಾಗಿತ್ತು. ದಟ್ಟಣೆಯಾಗದಂತೆ ಹೆಚ್ಚು ಸಿಬ್ಬಂದಿಯನ್ನು ನಿಲ್ದಾಣಗಳಲ್ಲಿ ನಿಯೋಜಿಸಲಾಗಿತ್ತು. ಆದರೆ, ನಿರ್ವಹಣೆಗಾಗಿ ನಿಯೋಜಿಸಿದ್ದ ಸಿಬ್ಬಂದಿಯಷ್ಟು ಪ್ರಯಾಣಿಕರೂ ಕಾಣಸಿಗಲಿಲ್ಲ. ಸುದೀರ್ಘಾವಧಿ ನಂತರ ಸೋಂಕು ಹಾವಳಿ ನಡುವೆ ಪುನಾರಂಭಗೊಂಡಿದ್ದರಿಂದ ಈ ಸ್ಪಂದನೆ ನಿರೀಕ್ಷಿತವೂ ಆಗಿತ್ತು.

ಸೆಲ್ಫಿ, ವಿಡಿಯೋ.: ನಿಗದಿಯಂತೆ ಎರಡೂ ತುದಿ ಗಳಿಂದ ಸರಿಯಾಗಿ 8ಗಂಟೆಗೆ ರೈಲುಗಳು ಏಕಕಾಲ ದಲ್ಲಿ ನಿರ್ಗಮಿಸಿದವು. ಪ್ರಯಾಣಿಕರು ಮೊದಲ ಟ್ರಿಪ್‌ನಲ್ಲಿ ಸೆಲ್ಫಿ ತೆಗೆದುಕೊಂಡರು. ಇನ್ನು ಕೆಲವರು ನಿರ್ಗಮಿಸುತ್ತಿರುವ ರೈಲಿನ ವೀಡಿಯೋ ಅಥವಾ ಫೋಟೋ ಸೆರೆಹಿಡಿದರು. ಇನ್ನು ಬೆಳಗ್ಗೆ “ಪೀಕ್‌ ಅವರ್‌’ನಲ್ಲೇ ಅಂದರೆ 9ರ ಸುಮಾರಿಗೆ ಮೈಸೂರು ರಸ್ತೆಯಿಂದ ಬೈಯಪ್ಪನಹಳ್ಳಿ ವರೆಗೆ ಹೊರಟ ರೈಲಿನಲ್ಲಿ 70 ಜನರೂ ಇರಲಿಲ್ಲ. ಈ ಮಧ್ಯೆ ಮೊದಲ ಮೂರು ತಾಸು ಅಂದರೆ ಬೆಳಗ್ಗೆ 8ರಿಂದ 11ರವರೆಗೆ ಅಂದಾಜು 2000 ಜನ ಪ್ರಯಾಣಿಸಿದ್ದಾರೆ. ಎಲ್ಲಿಯೂ ಗೊಂದಲಕ್ಕೆ ಅವಕಾಶ ಇರಲಿಲ್ಲ. ಹೆಜ್ಜೆ-ಹೆಜ್ಜೆಗೂ ಸೂಚನೆಗಳನ್ನು ಹಾಕಲಾಗಿತ್ತು ಹಾಗೂ ಅಲ್ಲಲ್ಲಿ ಸಿಬ್ಬಂದಿ ಕೂಡ ಪ್ರಯಾಣಿಕರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಐದು ತಿಂಗಳ ನಂತರ ಓಡಾಟ ಶುರುವಾಗಿದ್ದರಿಂದ ಪ್ರಯಾಣಿಕರ ಸಂಖ್ಯೆ ವಿರಳವಾಗಿದ್ದುದು ನಿರೀಕ್ಷಿತ ಎಂದು ನಿಗಮದ ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ತಿಳಿಸಿದರು.

ಇನ್ನು ಕೇವಲ ನೇರಳೆ ಮಾರ್ಗದಲ್ಲಿ ಸೇವೆ ಕಲ್ಪಿಸಿರುವುದು, ಸ್ಮಾರ್ಟ್‌ ಕಾರ್ಡ್‌ ಹೊಂದಿರುವ ವರಿಗೆ ಮಾತ್ರ ಅವಕಾಶ, ಒಂದು ತಾಸು ಮುಂಚಿತ ವಾಗಿಯೇ ಡಿಜಿಟಲ್‌ ಪೇಮೆಂಟ್‌ ಮೂಲ ಕವೇ ರಿಚಾರ್ಜ್‌ ಮಾಡಿಕೊಂಡಿರ ಬೇಕು ಎನ್ನುವುದು ಸೇರಿದಂತೆ ಹಲವಾರು ನಿರ್ಬಂಧ ಗಳು ನೀರಸ ಪ್ರತಿಕ್ರಿಯೆಗೆ ಕಾರಣವಾಗಿದೆ.

90 ಟ್ರಿಪ್‌; 3,770 ಜನ :  ಆರು ಬೋಗಿಗಳ “ನಮ್ಮ ಮೆಟ್ರೋ’ ಆರು ತಾಸುಗಳಲ್ಲಿ ಸುಮಾರು 90 ಟ್ರಿಪ್‌ಗ್ಳನ್ನು ಪೂರೈಸಿದೆ. ಆದರೆ, ಇದರಲ್ಲಿ ಇಡೀ ದಿನ ಸಂಚರಿಸಿದ ಪ್ರಯಾಣಿಕರ ಸಂಖ್ಯೆ ಎರಡು ಮೆಟ್ರೋ ರೈಲುಗಳ ಒಟ್ಟಾರೆ ಸಾಮರ್ಥ್ಯದಷ್ಟು ಮಾತ್ರ. ಅಂದರೆ ಪ್ರತಿ ಟ್ರಿಪ್‌ನಲ್ಲಿ ಸರಾಸರಿ 40ರಿಂದ 42 ಜನ ಪ್ರಯಾಣಿಸಿದ್ದಾರೆ! ಬೆಳಗ್ಗೆ ಮತ್ತು ಸಂಜೆ ನಿಗದಿಪಡಿಸಿದ “ಪೀಕ್‌ ಅವರ್‌’ನಲ್ಲಿ ಪ್ರತಿ ಐದು ನಿಮಿಷಗಳ ಅಂತರದಲ್ಲಿ ಮೆಟ್ರೋ ರೈಲುಗಳು ಕಾರ್ಯಾಚರಣೆ ಮಾಡಿವೆ. ಇದರಲ್ಲಿ 3,770 ಜನ ಪ್ರಯಾಣಿಸಿದ್ದು, ಸುಮಾರು 1.25 ಲಕ್ಷ ರೂ. ಆದಾಯ ಹರಿದುಬಂದಿದೆ. ಈ ಪೈಕಿ ಬೆಳಿಗ್ಗೆ 1,975 ಜನ ಸಂಚರಿಸಿದ್ದಾರೆ.

ಮೆಟ್ರೋದಲ್ಲಿ ಪ್ರಯಾಣಿಸಿದ ರಾಮುಲು : ಈ ಮಧ್ಯೆ ಸ್ವತಃ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮೊದಲ ದಿನ ಮೆಟ್ರೋ ನಿಲ್ದಾಣಕ್ಕೆ ಭೇಟಿ ನೀಡಿ, ರೈಲಿನಲ್ಲಿ ಪ್ರಯಾಣ ಬೆಳೆಸಿದರು. ಈ ಮೂಲಕ ಪ್ರಯಾಣಿಕರಲ್ಲಿ ಸಮೂಹ ಸಾರಿಗೆ ಬಳಕೆ ಬಗ್ಗೆವಿಶ್ವಾಸ ಮೂಡಿಸುವ ಕೆಲಸ ಮಾಡಿದರು. ಮಧ್ಯಾಹ್ನ ವಿಧಾನಸೌಧ ನಿಲ್ದಾಣದಿಂದ ಮೆಜೆಸ್ಟಿಕ್‌ನ ಕೆಂಪೇಗೌಡ ನಿಲ್ದಾಣದವರೆಗೆ ಸಂಚರಿಸಿ ಕೋವಿಡ್‌ ಹಿನ್ನೆಲೆಯಲ್ಲಿ ಸುರಕ್ಷಿತ ಪ್ರಯಾಣಕ್ಕೆ ಕೈಗೊಂಡಿರುವ ಕ್ರಮಗಳನ್ನು ಪರಿಶೀಲಿಸಿದರು. ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, “ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ಮೆಟ್ರೋ ರೈಲಿನಲ್ಲಿ ಪ್ರಯಾಣಿಸಲು ಭಯ ಬೇಡ. ಎಚ್ಚರಿಕೆ ಅಗತ್ಯ. ಎಲ್ಲ ಪ್ರಯಾಣಿಕರು ಸರ್ಕಾರದ ನಿಯಮಗಳನ್ನು ಪಾಲಿಸಬೇಕು’ ಎಂದು ಹೇಳಿದರು.

ರೀಚಾರ್ಜ್‌ ನಿಯಮ ಪರಿಷ್ಕರಣೆ : ಸ್ಮಾರ್ಟ್‌ ಕಾರ್ಡ್‌ ರೀಚಾರ್ಜ್‌ ನಿಯಮ ವನ್ನು ಮಧ್ಯಾ ಹ್ನದ ಹೊತ್ತಿಗೆ ಪರಿಷ್ಕರಿಸಿ, ಯುಪಿಐ- ಪಿಒಎಸ್‌ ಅಥವಾ ಪೇಟಿಎಂ ಮೂಲಕ ಯಾವುದೇ ಮೆಟ್ರೋ ನಿಲ್ದಾಣಗಳಲ್ಲಿ ರೀಚಾರ್ಜ್‌ ಮಾಡಿ ಪ್ರಯಾಣಿಸಲು ಅವಕಾಶ ಕಲ್ಪಿಸಿದೆ. ರಿಚಾರ್ಜ್‌ ಮಾಡಿಸಿದ ತಕ್ಷಣ ಬಳಕೆಗೆ ಅನುವುಮಾಡಿಕೊಟ್ಟಿತು. ಇದರಿಂದ ಒಂದು ತಾಸು ಕಾಯುವ ಕಿರಿಕಿರಿ ತಪ್ಪಿತು. ಹಲವು ಬಾರಿ ಮಾರ್ಗಸೂಚಿ ಗಳ ಬಗ್ಗೆ ಪ್ರಚಾರ ಹಾಗೂ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿದ್ದರಿಂದ ಪ್ರಯಾಣಿಕರು ನಿಯಮಗಳನ್ನು ಪಾಲಿಸಿ, ಶಿಸ್ತುಬದ್ಧವಾಗಿ ಪ್ರಯಾಣಿಸಿದರು. ಪ್ರವೇಶದ್ವಾರದಲ್ಲಿ ಸ್ಕ್ರೀನಿಂಗ್‌, ಸ್ಯಾನಿಟೈಸರ್‌, ಮಾಸ್ಕ್ ಧರಿಸಿದ್ದರು. ಆದರೆ, ರೀಚಾರ್ಜ್‌ಗೆ ಸೂಚಿ ಸಿದ್ದ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ ಜನ ತುಂಬಾ ಕಡಿಮೆ ಇದ್ದುದರಿಂದ ಕೌಂಟರ್‌ಗಳಲ್ಲಿ ಪಿಒಎಸ್‌ ಮೂಲಕವೂರೀಚಾರ್ಜ್‌ ಗೆ ಅವಕಾಶ ಮಾಡಿಕೊಡಲಾಯಿತು ಎಂದು ಬಿಎಂಆರ್‌ಸಿಎಲ್‌ ಕಾರ್ಯ  ನಿರ್ವಹಣಾ ನಿರ್ದೇ ಶಕ ಎ.ಎಸ್‌. ಶಂಕರ್‌ ಸ್ಪಷ್ಟ ಪಡಿಸಿದರು.

ಟಾಪ್ ನ್ಯೂಸ್

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

CN Ashwath Narayan: ಕಾಂಗ್ರೆಸ್‌ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

9-bng

Jai Shri Ram ಎಂದು ಕೂಗಿದ್ದಕ್ಕೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

ಗ್ಯಾರಂಟಿ ಯೋಜನೆಗಳ ಟೀಕೆಗೆ ತಾಯಂದಿರೇ ಉತ್ತರ ನೀಡುತ್ತಾರೆ: ಡಿಕೆ ಶಿವಕುಮಾರ್

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Gujarat Lok Sabha Constituency: ಗುಜರಾತ್‌ ಎಂಬ ಕೇಸರಿ ಕೋಟೆಗೆ ಲಗ್ಗೆ ಸಾಧ್ಯವೇ?

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Lok Sabha Election: ಮಠಾಧೀಶರ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಾಯಿತಿ ಸಿದ್ದೇಶ್ವರ

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

Israel – Iran: ಕ್ಷಿಪಣಿ ದಾಳಿಯ ಮೂಲಕ ಸೇಡು ತೀರಿಸಿಕೊಂಡ ಇಸ್ರೇಲ್; ಎಚ್ಚರಿಕೆ ನೀಡಿದ ಇರಾನ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.