ಮೆಟ್ರೋ ಸುರಂಗ ರಹಸ್ಯ


Team Udayavani, Sep 28, 2020, 2:01 PM IST

bng-tdy-1

ಬಹುನಿರೀಕ್ಷಿತ “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಯಲ್ಲಿ ಸುರಂಗ ಕೊರೆಯುವ ಕಾಮಗಾರಿಗೆ ಚಾಲನೆ ದೊರೆತಿದೆ. ನಗರದ ಹೃದಯಭಾಗದಲ್ಲಿ ಭೂಮಿಯ ಆಳಕ್ಕಿಳಿದು ಸುಮಾರು 13.79 ಕಿ.ಮೀ. ಮಾರ್ಗ ನಿರ್ಮಿಸಿ, ರೈಲು ಓಡಿಸುವ ಸಾಹಸ ಇದಾಗಿದೆ. ಅಷ್ಟಕ್ಕೂ ಮೆಟ್ರೋ ಸುರಂಗ ಮಾರ್ಗ ಬೆಂಗಳೂರಿಗೆ ಹೊಸದಲ್ಲ. ಮೊದಲಹಂತದಲ್ಲೂ ಅಂದಾಜು 8.8 ಕಿ.ಮೀ. ಸುರಂಗ ಮಾರ್ಗ ಇದೆ. ಮೆಟ್ರೋ ಸಂಚಾರವೂ ಶುರುವಾಗಿದೆ. ಆದರೆ, ಸುರಂಗದ ಬಗೆಗಿನ ಹಲವು ಕುತೂಹಲಗಳು ಜನಮಾನಸದಲ್ಲಿ ಹಾಗೇ ಉಳಿದಿವೆ. ಈ ಮಧ್ಯೆ ಎರಡನೇ ಹಂತದ ನಾಲ್ಕು ಪ್ಯಾಕೇಜ್‌ಗಳ ಪೈಕಿ ಎರಡರಲ್ಲಿ ದೈತ್ಯ ಟನಲ್‌ಬೋರಿಂಗ್‌ ಯಂತ್ರಗಳು ಅಧಿಕೃತವಾಗಿ ಸುರಂಗ ಕೊರೆಯಲು ಆರಂಭಿಸಿವೆ. ಈ ಹಿನ್ನೆಲೆಯಲ್ಲಿ ನಗರದ ಕೇಂದ್ರ ವ್ಯಾಪಾರ ವಲಯ(ಸಿಬಿಡಿ)ದಲ್ಲಿ ಸುರಂಗ ಯಾಕೆ? ಹೇಗೆ ಕೊರೆಯಲಾಗುತ್ತದೆ? ಇದಕ್ಕಿರುವ ಅಡತಡೆಗಳೇನು?ಟಿಬಿಎಂ ಕಾರ್ಯವೈಖರಿ ಹೇಗೆ? ಇಂತಹ ಹಲವು ಕುತೂಹಲಕರ ಅಂಶಗಳ ಮೇಲೆಬೆಳಕುಚೆಲ್ಲುವ ಪ್ರಯತ್ನ ಈ ಬಾರಿಯ ಸುದ್ದಿ ಸುತ್ತಾಟದಲ್ಲಿ.

 ಮೆಟ್ರೋದಲ್ಲಿ ಸುರಂಗ ಮಾರ್ಗದ ಮುಖ್ಯ ಉದ್ದೇಶ ಬಹುಪಯೋಗಿ ಭೂಬಳಕೆ ಆಗಿದೆ. ಅಲ್ಲದೆ, ನಗರದ ಸೌಂದರ್ಯ ಕಾಪಾಡುವುದರ ಜತೆಗೆ ಅಭಿವೃದ್ಧಿಕಾರ್ಯವೂಕೈಗೂಡುತ್ತದೆ. “ನಮ್ಮ ಮೆಟ್ರೋ’ ಬಹುತೇಕ ನಗರದ ಹೃದಯಭಾಗದಲ್ಲೇ ಹಾದುಹೋಗುತ್ತದೆ. ಈ ಮೊದಲೇ ಭೂಮಿಯ ಲಭ್ಯತೆ ತುಂಬಾಕಡಿಮೆ ಇದೆ. ಅದರಲ್ಲೂ ಸಿಬಿಡಿ ಪ್ರದೇಶದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು. ಸುರಂಗ ನಿರ್ಮಿಸಿದರೆ, ಲಭ್ಯವಿರುವ ಭೂಮಿಯಲ್ಲಿ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿದಂತಾಗುತ್ತದೆ. ಇನ್ನು ಭೂಸ್ವಾಧೀನ ಪ್ರಕ್ರಿಯೆಗೆ ಸಾಕಷ್ಟುಸಮಯ ಹಿಡಿಯುತ್ತದೆ. ಆಗ, ಯೋಜನೆ ಅನುಷ್ಠಾನ ವಿಳಂಬವಾಗುತ್ತದೆ. ಅದುಯೋಜನಾ ವೆಚ್ಚ ವಿಸ್ತರಣೆ ರೂಪದಲ್ಲಿ ಪರಿಣಮಿಸುತ್ತದೆ. ಸುರಂಗದಲ್ಲೂ ಭೂಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಆದರೆ ನಿಲ್ದಾಣಕ್ಕೆ ಮಾತ್ರ ಇದರ ಅವಶ್ಯಕತೆ ಇದೆ. ಹಾಗೂ ನಂತರದಲ್ಲಿ ಆ ಜಾಗವನ್ನು ಬೇರೆ ಉದ್ದೇಶಗಳಿಗೂ ಬಳಸಬಹುದು.

ಎತ್ತರಿಸಿದ ಮಾರ್ಗ ಸುಲಭ ಮತ್ತು ವೆಚ್ಚವೂ ಕಡಿಮೆ. ಆದರೆ, ನಗರದ ಸೌಂದರ್ಯ ಇದರಲ್ಲಿ ಮುಚ್ಚಿಹೋಗುವ ಸಾಧ್ಯತೆ ಇದೆ. ಉದಾಹರಣೆಗೆ ವಿಧಾನಸೌಧ- ಹೈಕೋರ್ಟ್‌ ಮಧ್ಯೆ ಎತ್ತರಿಸಿದ ಮಾರ್ಗ ಹಾದುಹೋದರೆ, ವಿಧಾನಸೌಧ ಕಾಣುವುದೇ ಇಲ್ಲ. ಅಲ್ಲದೆ, ಒಂದು ವೇಳೆ ಭವಿಷ್ಯದಲ್ಲಿ ಯಾವುದೇ ಘಟನೆ ಸಂಭವಿಸಿದರೂ, ಜನರನ್ನು ಸುರಂಗದಲ್ಲಿ ರಕ್ಷಿಸಬಹುದು. ಈ ಎಲ್ಲ ದೃಷ್ಟಿಯಿಂದ ಸುರಂಗ ಮಾರ್ಗ ಮುಖ್ಯವಾಗಿದೆ.

ಟನಲ್‌ ಸೆಗ್ಮೆಂಟ್‌ ಅಳವಡಿಕೆ: ಎತ್ತರಿಸಿದ ಮಾರ್ಗದಲ್ಲಿ ಪ್ರತಿ ಕಿ.ಮೀ. ಅಂತರದಲ್ಲಿ ಸಿಮೆಂಟ್‌ ಸೆಗ್ಮೆಂಟ್‌ಗಳನ್ನು ಜೋಡಿಸಿದರೆ, ಕೆಲಸ ಮುಗಿಯುತ್ತದೆ. ಆದರೆ, ಸುರಂಗದಲ್ಲಿ ಟಿಬಿಎಂ ಕೊರೆಯುತ್ತ ಹೋದಂತೆ, ಹಿಂದಿನಿಂದ ರಿಂಗ್‌ಗಳನ್ನು ಜೋಡಿಸುತ್ತ ಹೋಗಬೇಕು. ಒಂದು ರಿಂಗ್‌ಗೆ 5-6 ಸೆಗ್ಮೆಂಟ್‌ಗಳು ಬೇಕಾಗುತ್ತದೆ. ಪ್ರತಿ 1.5 ಮೀ.ಗೆ ಒಂದು ಸೆಗ್ಮೆಂಟ್‌ ಬರುತ್ತದೆ. ಇವುಗಳ ತಯಾರಿಕೆಘಟಕ ಒಂದೆಡೆ ಇದ್ದರೆ, ಅಳವಡಿಕೆ ಮತ್ತೆಲ್ಲೋ ಇರುತ್ತದೆ. ಹೊತ್ತುತರುವುದು ಸಮಸ್ಯೆ.

10 ಕಿ.ಮೀ.; 800 ದಿನಗಳು :  10 ಕಿ.ಮೀ. ಉದ್ದದ ಸುರಂಗವನ್ನು 800 ದಿನಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಿದ್ದು, ಮೊದಲ ಹಂತದಲ್ಲಿ ದಿನಕ್ಕೆ 6 ಮೀ. ಸುರಂಗಕೊರೆಯುವ ಗುರಿ ಹೊಂದಲಾಗಿತ್ತು. 2ನೇ ಹಂತದಲ್ಲಿ ಈ ಗುರಿ ಅರ್ಧಕ್ಕರ್ಧ ಕಡಿತಗೊಂಡಿದ್ದು, ನಿತ್ಯ 3 ಮೀ. ಕೊರೆವ ಗುರಿ ಹೊಂದಲಾಗಿದೆ. ಇದಕ್ಕೆಕಾರಣ ಮಣ್ಣು ಎಂದೂ ಹೇಳಲಾಗಿದೆ. ಟಿಬಿಎಂಯಂತ್ರ ಪ್ರತಿ ಸುತ್ತಿಗೆ ಭೂಮಿಯಲ್ಲಿನ 40ಕ್ಯೂಬಿಕ್‌ ಮಣ್ಣನ್ನು ಬಗೆದು ಹೊರಹಾಕುತ್ತದೆ. ಈ ಮಣ್ಣನ್ನು ನೀರಿನ ಮಿಶ್ರಣದೊಂದಿಗೆ ಪೈಪ್‌ ಮೂಲಕ ಹೊರಹಾಕಲಾಗುತ್ತದೆ. ಆದರೆ,ಯಾವುದೇ ಕಾರಣಕ್ಕೂ ಮಣ್ಣು ಬೀಳದಂತೆ ಪೈಪ್‌ ಪ್ರಕಾರದ 4 ಮೀ. ನ “ಸ್ಟೀಲ್‌ ಟ್ಯೂಬ್‌’ ಸಿಬ್ಬಂದಿಗೆ ಸೂರಾಗಿರುತ್ತದೆ. ಒಳಗಡೆ 26ರಿಂದ 28 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿರುತ್ತದೆ.

ಡ್ರಿಲ್ಲಿಂಗ್‌ ಮಷಿನ್‌ನಂತೆ ಕೆಲಸ :  ಟಿಬಿಎಂ ಒಂದು ಡ್ರಿಲಿಂಗ್‌ಯಂತ್ರ ಇದ್ದಂತೆ. ಗೋಡೆಯ ಒಂದು ಚುಕ್ಕೆ ಮೇಲಿಟ್ಟು ಹಿಂದಿನಿಂದ ಒತ್ತಡ ಹಾಕಲಾಗುತ್ತದೆ. ಅದೇ ರೀತಿ, ಸುರಂಗದಲ್ಲೂಯಂತ್ರಕ್ಕೆ ಹಿಂದಿನಿಂದ 300ರಿಂದ 600 ಟನ್‌ನಷ್ಟು ಒತ್ತಡ ಹಾಕಬೇಕಾಗುತ್ತದೆ. ಇನ್ನು ಸುರಂಗದಲ್ಲಿಕಲ್ಲು ಬಂದರೆ ಟಿಬಿಎಂನಕಟರ್‌ಹೆಡ್‌ ಒಂದು ನಿಮಿಷಕ್ಕೆ ನಾಲ್ಕು ಬಾರಿ ತಿರುಗಿಸಬೇಕಾಗುತ್ತದೆ. ಮಣ್ಣು ಬಂದರೆ 1-2 ಬಾರಿ ತಿರುಗಿಸಬೇಕು. ಈಗಾಗಲೇ ಗೊತ್ತಿರುವಂತೆ ನಗರದ ಮಣ್ಣು ಕಲ್ಲಿನ ಮಿಶ್ರಣವಾಗಿದೆ. ಒಂದು ವೇಳೆ ಸುರಂಗದಲ್ಲಿ ಬಂಡೆ ಎದುರಾದರೆ, ಅದನ್ನುಕೊರೆಯುವುದುಕಷ್ಟ.ಯಾಕೆಂದರೆ, ಇಡೀ ಬಂಡೆಯೇ ತಿರುಗಲು ಶುರುವಾಗುತ್ತದೆ. ಆಗ ಅದರ ಮೇಲಿನ ಮಣ್ಣಿನ ಪದರಗಳು ಅಲುಗಾಡುತ್ತದೆ. ಇದರಿಂದ ಮೇಲಿನಕಟ್ಟಡಗಳಿಗೆ ತೊಡಕಾಗಬಹುದು. ಈ ವೇಳೆ ಮೇಲಿನಿಂದ ರಂಧ್ರ ಕೊರೆದು, ಸಿಮೆಂಟ್‌ನಿಂದ ಗ್ರೌಟಿಂಗ್‌ ಮಾಡಲಾಗುತ್ತದೆ. ದೊಡ್ಡ ಬಂಡೆಯಾದರೆ ಹಲವು ಬಾರಿ ಗ್ರೌಟಿಂಗ್‌ ಮಾಡಬೇಕಾಗುತ್ತದೆ. ಮಣ್ಣಿನ ಪರೀಕ್ಷೆ ವೇಳೆ ಈ ಸುಳಿವು ಸಿಗದು.

ಮಣ್ಣು ಪರೀಕ್ಷೆ ಸವಾಲು :  ಸುರಂಗಕೊರೆವ ಮುನ್ನ ಉದ್ದೇಶಿತ ಮಾರ್ಗದಲ್ಲಿ ಮಣ್ಣು ಪರೀಕ್ಷೆ ನಡೆಸಬೇಕು. ಇದಕ್ಕಾಗಿ ಹತ್ತಾರು ಮೀ. ಆಳದಲ್ಲಿಕೊಳವೆಬಾವಿ ಮಾದರಿಯಲ್ಲಿಕೊರೆಯಬೇಕಾಗುತ್ತದೆ. ಆದರೆ, ಸುರಂಗ ಹಾದುಹೋಗುವ ದಾರಿಯಲ್ಲಿಕಟ್ಟಡಗಳು ಇರುತ್ತವೆ. ಅಲ್ಲಿ ಅವಕಾಶ ಸಿಗುವುದಿಲ್ಲ. ಹಾಗಾಗಿ, ರಸ್ತೆಗಳ ಬದಿ ಕೊಳವೆಕೊರೆದು ಮಾದರಿ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆಕೆ.ಜಿ. ರಸ್ತೆಯ ಎರಡು ಬದಿಯಲ್ಲಿ ಮೆಟ್ರೋ ಸುರಂಗ ಮಾರ್ಗ ಹಾದುಹೋಗಿದೆ. ಆದರೆ, ಮಣ್ಣಿನ ಮಾದರಿ ಸಂಗ್ರಹಿಸಿದ್ದು ರಸ್ತೆ ಮಧ್ಯೆದಿಂದ. ವಿಚಿತ್ರವೆಂದರೆ ಬೆಂಗಳೂರಿನ ಮಣ್ಣಿನ ಗುಣಧರ್ಮ ಪ್ರತಿ 5-10 ಮೀ.ಗೆ ಭಿನ್ನವಾಗಿರುತ್ತದೆ. ಪರಿಣಾಮ ಪರೀಕ್ಷೆಯಲ್ಲಿಕಂಡುಕೊಂಡಿದ್ದು ಒಂದು; ವಾಸ್ತವ ಇನ್ನೊಂದು ಆಗಿರುತ್ತದೆ. ಹಾಗಾಗಿ, ಈ ಸಲ ಪ್ರತಿ 30 ಮೀ. ಗೊಂದುಕೊಳವೆಕೊರೆದು ಮಣ್ಣಿನ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.

ನೂರಾರು ಬೋರ್‌ವೆಲ್‌ :  ಮಾರ್ಗದುದ್ದಕ್ಕೂ ನೂರಾರುಕೊಳವೆಬಾವಿಗಳು ದೊರೆಯುತ್ತವೆ. ಅವುಗಳನ್ನು ಸಿಮೆಂಟ್‌ಕಾಂಕ್ರೀಟ್‌ನಿಂದ ಮುಚ್ಚಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಕೊಳವೆಬಾವಿ ಮಾಲಿಕರಿಗೆ ಪರಿಹಾರ ನೀಡುವುದರ ಜತೆಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ. ಟಿಬಿಎಂ ಪ್ರತಿ ಬಾರಿ ತೆಗೆಯುವ40 ಕ್ಯೂಬಿಕ್‌ ಮಣ್ಣನ್ನು ಹೊರಹಾಕಲು40 ಸಾವಿರ ಲೀ.ಗೂ ಅಧಿಕ ನೀರು ಬೇಕಾಗುತ್ತದೆ. ಹಾಗಾಗಿ ನಿತ್ಯ ಲಕ್ಷಾಂತರ ಲೀ. ನೀರು ಬೇಕಾಗುತ್ತದೆ. ಇದಕ್ಕಾಗಿ ಪುನರ್ಬಳಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ಎರಡು ಕಡೆ ಕೆಲಸ ಆರಂಭ : ಡೈರಿ ವೃತ್ತದಿಂದ ನಾಗವಾರದವರೆಗೆ ಒಟ್ಟಾರೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಎರಡು ಪ್ಯಾಕೇಜ್‌ಗಳಲ್ಲಿ ಈಗ ಸುರಂಗಕೊರೆಯುವಕಾರ್ಯಕ್ಕೆ ಚಾಲನೆ ದೊರಕಿದೆ. ಟ್ಯಾನರಿ ರಸ್ತೆಯಕಂಟೋನ್ಮೆಂಟ್‌ನಿಂದ ಶಿವಾಜಿನಗರಕಡೆಗೆಊರ್ಜಾ ಮತ್ತು ವಿಂದ್ಯಾ ಯಂತ್ರಗಳುಕಾರ್ಯಾರಂಭ ಮಾಡಿವೆ. ಅದೇ ರೀತಿ, ಶಿವಾಜಿನಗರದಿಂದ ವೆಲ್ಲಾರಕಡೆಗೆ ವಾರದ ಹಿಂದಷ್ಟೇ “ಅವನಿ’ ಪಯಣ ಶುರು ಮಾಡಿದೆ.

ಗಂಟೆಗೆ ಸಾವಿರ ಯೂನಿಟ್‌ :  ಈ ಬಾರಿ ವಿದ್ಯುತ್‌ಚಾಲಿತಯಂತ್ರವನ್ನು ಬಳಕೆ ಮಾಡುತ್ತಿದ್ದು, ಸದ್ಯಕ್ಕೆ ಗಂಟೆಗೆ ಸಾವಿರ ಯೂನಿಟ್‌ಖರ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ 6 ಮೆ.ವಾ.ವರೆಗೂ ವಿದ್ಯುತ್‌ ಬೇಕಾಗಬಹುದು. ಬೆಸ್ಕಾಂ ವಿದ್ಯುತ್‌ ಪೂರೈಕೆ ಹೊಣೆ ಹೊತ್ತಿದೆ. ಈ ಮೊದಲಿನ ಟಿಬಿಎಂಗೆ ನಿತ್ಯ 10-12 ಸಾವಿರ ಲೀ. ಡೀಸೆಲ್‌ಖರ್ಚಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಡೀಸೆಲ್‌ ಬಂಕ್‌ ತೆರೆಯಲಾಗಿತ್ತು.

 

 ವಿಜಯಕುಮಾರ್‌ ಚಂದರಗಿ

ಟಾಪ್ ನ್ಯೂಸ್

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

ಶೋಧ ಕಾರ್ಯಾಚರಣೆಯ ಬಿಸಿಗೆ ತಣ್ಣಗಾದರೇ?

IPL 2024; Chahal’s 200-wicket haul; First bowler to achieve this feat

IPL 2024; ಚಹಲ್‌ 200 ವಿಕೆಟ್‌ಗಳ ಕಮಾಲ್‌; ಈ ಸಾಧನೆಗೈದ ಮೊದಲ ಬೌಲರ್‌

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!

Andhra ಟಿಡಿಪಿ ಅಭ್ಯರ್ಥಿ ಆಸ್ತಿ ಬರೋಬ್ಬರಿ 5,785 ಕೋ.ರೂ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Bengaluru: ಕದಂಬ ಹೋಟೆಲ್‌ ಸ್ಫೋಟ ಮಾಡುವುದಾಗಿ ಬೆದರಿಕೆ 

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

Rameshwaram Cafe Case: ರಾಮೇಶ್ವರಂ ಕೆಫೆ ಸ್ಫೋಟ ಶಂಕಿತರು ಮತ್ತೆ 7 ದಿನ ಎನ್‌ಐಎ ವಶಕ್ಕೆ

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

FIR: ಬಾಲಕಿಗೆ ಲೈಂಗಿಕ ದೌರ್ಜನ್ಯ, ಆರೋಪಿ ಬಂಧನ: ಎಫ್ಐಆರ್‌

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Fraud: ಹೂಡಿಕೆ ನೆಪದಲ್ಲಿ ವ್ಯಾಪಾರಿಗೆ 5 ಕೋಟಿ ವಂಚನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

Bengalur: ವೈದ್ಯರ ನಿರ್ಲಕ್ಷ್ಯಕ್ಕೆ ರೋಗಿ ಸಾವು; ಠಾಣೆ ಬಳಿ ಶವ ಇರಿಸಿ ಪ್ರತಿಭಟನೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

1-C-brijesh

Dakshina Kannada; ಕ್ಯಾಪ್ಟನ್‌ ಬ್ರಿಜೇಶ್‌ ಚೌಟರ ‘ನವಯುಗ-ನವಪಥ’ ಕಾರ್ಯಸೂಚಿ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

1-JP-H

Jayaprakash Hegde: ಎಲ್ಲ ವರ್ಗದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಸಾಮರ್ಥ್ಯ ಇನ್ನೂ ಇದೆ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

DCvsGT; ಪಂತ್‌ ನಾಯಕತ್ವಕ್ಕೆ ಅಗ್ನಿಪರೀಕ್ಷೆ:  ತವರಿನ “ಕೋಟ್ಲಾ’ದಲ್ಲಿ ಗುಜರಾತ್‌ ಎದುರಾಳಿ

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

ಬಸ್ರೂರಿನ ಶಾಸನಗಳನ್ನು ಉಳಿಸುವವರಾರು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.