ನಗರದ ದಾಹ ನೀಗಲು ನೇತ್ರಾವತಿ ನದಿ ನೀರು?


Team Udayavani, Aug 8, 2017, 12:00 PM IST

jalamandali.jpg

ಬೆಂಗಳೂರು: ಮಳೆಗಾಲದಲ್ಲಿ ನೇತ್ರಾವತಿ ನದಿಯಿಂದ ಸಮುದ್ರ ಸೇರುವ ನೀರನ್ನು ಬೆಂಗಳೂರಿಗೆ ಕುಡಿಯುವ ನೀರಿಗಾಗಿ ತರುವ ಪ್ರಸ್ತಾವವೊಂದು ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು, ಯೋಜನೆ ಕುರಿತ ಸಾಧ್ಯತಾ ವರದಿಯನ್ನು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ವಿಜ್ಞಾನಿಗಳು ಸೋಮವಾರ ಜಲಮಂಡಳಿಗೆ ಸಲ್ಲಿಸಿದ್ದಾರೆ.

ಜಲಮಂಡಳಿಯ ಕೇಂದ್ರ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಐಐಎಸ್‌ಸಿ ವಿಜ್ಞಾನಿಗಳು ಸಿದ್ಧಪಡಿಸಿರುವ ಸಾಧ್ಯತಾ ವರದಿಯನ್ನು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌ ಹಾಗೂ ಜಲಮಂಡಳಿಯ ಅಧ್ಯಕ್ಷ ತುಷಾರ್‌ ಗಿರಿನಾಥ್‌ ಅವರಿಗೆ ಹಸ್ತಾಂತರಿಸಿದ್ದಾರೆ. ಜತೆಗೆ ಪ್ರಾತ್ಯಕ್ಷಿತೆ ಮೂಲಕ ಯೋಜನೆಯ ಸಂಪೂರ್ಣ ಮಾಹಿತಿ ನೀಡಿದ್ದಾರೆ. 

ಕರ್ನಾಟಕದ ಪಶ್ಚಿಮ ದಿಕ್ಕಿನಲ್ಲಿ ಹರಿಯುವ ನೇತ್ರಾವತಿ ನದಿ ಸಮುದ್ರಕ್ಕೆ ಸೇರುವ ಭಾಗದಲ್ಲಿ ಜಲಾಶಯ ನಿರ್ಮಿಸಿ ಅಲ್ಲಿಂದ ಬೆಂಗಳೂರಿಗೆ ನೀರು ತರುವುದ ಬಗ್ಗೆ ಮಾಹಿತಿ ನೀಡಲಾಗಿದೆ. ನೇತ್ರಾವತಿ ನದಿಯಿಂದ ಸುಮಾರು 350 ಟಿಎಂಸಿಯಷ್ಟು ಮಳೆನೀರು ಸಮುದ್ರ ಸೇರುತ್ತಿದೆ. ಈ ನೀರನ್ನು ಜಲಾಶಯದ ಮೂಲಕ ಸಂಗ್ರಹಿಸಿ, ಬೆಂಗಳೂರಿಗೆ ಸುಮಾರು 40 ಟಿಎಂಸಿ ನೀರು ತರಬಹುದು ಎಂದು ಉಲ್ಲೇಖೀಸಲಾಗಿದೆ. 

ನೇತ್ರಾವತಿ ನದಿಗೆ ಅಡ್ಡಲಾಗಿ ಸಮುದ್ರದ ಸಮೀಪ ಜಲಾಶಯ ನಿರ್ಮಿಸಲು ಸಾವಿರಾರು ಎಕರೆಯಷ್ಟು ಜಾಗವನ್ನು ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಇದರಿಂದ ಸ್ಥಳೀಯರ ವಿರೋಧ ವ್ಯಕ್ತವಾಗುವ ಸಾಧ್ಯತೆಯಿದೆ. ಜತೆಗೆ ಯೋಜನೆಯಿಂದ ಯೋಜನೆಯಿಂದ ಮೀನುಗಾರರಿಗೆ ತೊಂದರೆಯಾಗುವ ಸಾಧ್ಯೆತೆಯಿದ್ದು, ಯೋಜನೆ ಅನುಷ್ಠಾನಗೊಳಿಸುವುದು ಕಷ್ಟಸಾಧ್ಯ ಎಂಬ ಮಾತುಗಳು ಸಭೆಯಲ್ಲಿ ಕೇಳಿಬಂದಿವೆ. 

ಎತ್ತಿನಹೊಳೆಗೆ ಲಿಂಕ್‌ 
ಬೇಸಿಗೆಯಲ್ಲಿ ಎತ್ತಿನಹೊಳೆ ಯೋಜನೆಯಿಂದ ನೀರು ದೊರೆಯುವುದಿಲ್ಲ. ಹೀಗಾಗಿ ಈ ಯೋಜನೆಯನ್ನು ಎತ್ತಿನಹೊಳೆ ಯೋಜನೆಗೆ ನೇತ್ರಾವತಿ ನದಿಯಿಂದ ಸಮುದ್ರಕ್ಕೆ ಹರಿಯುವ ನೀರನ್ನು ಜಲಾಶಯದ ಮೂಲಕ ಸಂಗ್ರಹಿಸಿ ಆ ಮೂಲಕ ಬೆಂಗಳೂರಿಗೆ ನೀರು ತರುವ ಬಗ್ಗೆ ಚರ್ಚಿಸಿದ್ದಾರೆ. ಸದ್ಯ ಐಐಎಸ್‌ಸಿ ವಿಜ್ಞಾನಿಗಳು ಸಾಧ್ಯತಾ ವರದಿಯನ್ನು ಸಲ್ಲಿಸಿದ್ದು, ಕೂಲಂಕುಷವಾಗಿ ಚರ್ಚಿಸಿದ ಬಳಿಕ ಮುಂದಿನ ತೀರ್ಮಾನ ಕೈಗೊಳ್ಳಲು ಅಧಿಕಾರಿಗಳು ಉದ್ದೇಶಿಸಿದ್ದಾರೆ. 

ಹೆಚ್ಚಲಿರುವ ವೆಚ್ಚ
ಸದ್ಯ ಕಾವೇರಿ ಜಲಾನಯದ ಪ್ರದೇಶದಿಂದ ಬೆಂಗಳೂರಿಗೆ ತರಲಾಗುತ್ತಿರುವ ಒಂದು ಕಿಲೋ ಲೀಟರ್‌ ನೀರಿಗೆ 32 ರೂ. ವೆಚ್ಚವಾಗುತ್ತಿದೆ. ಆದರೆ, ನೇತ್ರಾವತಿ ನದಿಯಿಂದ ಸಮುದ್ರಕ್ಕೆ ಸೇರುವ ನೀರು ಜಲಾಶಯ ನಿರ್ಮಿಸಿ ಮಾರ್ಗ ಪರಿವರ್ತನೆ ಮೂಲಕ ನಗರಕ್ಕೆ ತಂದರೆ ಒಂದು ಕಿಲೋ ಲೀಟರ್‌ ನೀರಿಗೆ 42 ರೂ. ವೆಚ್ಚವಾಗಲಿದೆ. ಯೋಜನೆಯಿಂದ ಮಂಗಳೂರು ಸೇರಿದಂತೆ ಮಾರ್ಗಮಧ್ಯೆ ಬರುವ ಇತರೆ ಭಾಗಗಳಿಗೂ ನೀರು ಪೂರೈಕೆ ಮಾಡಬಹುದಾಗಿದೆ ಎಂಬುದು ವಿಜ್ಞಾನಿಗಳ ಅಭಿಪ್ರಾಯವಾಗಿದೆ. 

ಸಮುದ್ರಕ್ಕೆ ಸೇರುತ್ತಿರುವ ನೇತ್ರಾವತಿ ನದಿ ಜಲಾಶಯ ನಿರ್ಮಿಸಿ, ಅಲ್ಲಿಂದ ನಗರಕ್ಕೆ ಕುಡಿಯುವ ನೀರು ತರುವ ಯೋಜನೆ ಕುರಿತ ಸಾಧ್ಯತಾ ವರದಿಯನ್ನು ಐಐಎಸ್‌ಸಿ ವಿಜ್ಞಾನಿಗಳು ಸಲ್ಲಿಸಿದ್ದು, ಕೂಲಂಕುಷವಾಗಿ ಪರಿಶೀಲಿಸಿದ ನಂತರ ಕ್ರಮಕ್ಕೆ ಮುಂದಾಗುತ್ತೇವೆ.
-ಮಹೇಂದ್ರ ಜೈನ್‌, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ

ಟಾಪ್ ನ್ಯೂಸ್

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಬಿಸಿಯೂಟ ದಿನಸಿಗಾಗಿ 8 ಕಿ.ಮೀ ನಡೆಯುವ ಶಿಕ್ಷಕರು

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಯೋಗಕ್ಕೆ ಸಿಗಲಿದೆ ವಿಮಾ ಡಿಸ್ಕೌಂಟ್‌? ವಿಮಾ ಪ್ರಾಧಿಕಾರದಿಂದ ಕರಡು ಮಾರ್ಗಸೂಚಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

25ramamandira

ಅಯೋಧ್ಯೆ ರಾಮ ಮಂದಿರದ ತಳಪಾಯಕ್ಕೆ ಕರ್ನಾಟಕದ ಶಿಲೆಗಳು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

ಬೆಳ್ಳಂಬೆಳ್ಳಗ್ಗೆ ದುರಂತ: ಬೈಕ್ ಗೆ ಟಿಪ್ಪರ್ ಢಿಕ್ಕಿಯಾಗಿ ತಾಯಿ – ಮಗು ಸಾವು

breast cancer

ಪ್ರತಿ 4 ನಿಮಿಷಕ್ಕೆ ಓರ್ವ ಮಹಿಳೆಯಲ್ಲಿ ಸ್ತನ ಕ್ಯಾನ್ಸರ್‌

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

ಕ್ರಿಸ್‌ಮಸ್‌ ಕೇಕ್‌ ತಯಾರಿ

ಕ್ರಿಸ್‌ಮಸ್‌ ಕೇಕ್‌ ತಯಾರಿ

MUST WATCH

udayavani youtube

ಪತ್ತೆಯಾಗದ ಬಾಲಕನ ದೇಹ : ಕಾಳಿ ನದಿಯಲ್ಲಿ ಮುಂದುವರಿದ ಶೋಧ ಕಾರ್ಯಾಚರಣೆ

udayavani youtube

ಬಾಲಕನನ್ನು ಮೊಸಳೆ ಎಳೆದೊಯ್ದ ಪ್ರಕರಣ : ಬಾಲಕನ ಮನೆಯಲ್ಲಿ ಮುಗಿಲು ಮುಟ್ಟಿದ ಆಕ್ರಂದನ

udayavani youtube

ಸೋತವನ ವಿರುದ್ದವೇ ಶರಣಾಗಿದ್ದೀಯ‌: ಸಿದ್ದರಾಮಯ್ಯಗೆ ಶ್ರೀನಿವಾಸ ಪ್ರಸಾದ್ ಟಾಂಗ್

udayavani youtube

ಚಿಕ್ಕಮಗಳೂರು : ಕೆರೆಯಲ್ಲಿ ಈಜಲು ಹೋದ ಬಾಲಕ ನೀರಲ್ಲಿ ಮುಳುಗಿ ಸಾವು

udayavani youtube

ಶ್ರೀರಂಗಪಟ್ಟಣ ತಾಲೂಕಿನಾದ್ಯಂತ ಭಾರೀ ಮಳೆಗೆ ಸೇತುವೆ ಮುಳುಗಡೆ ರೈತರ ಬೆಳೆ ನಾಶ

ಹೊಸ ಸೇರ್ಪಡೆ

sreeleela

ಟಾಲಿವುಡ್‌ ನಲ್ಲಿ ಶ್ರೀಲೀಲಾಗೆ ಬೇಡಿಕೆ

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

ಒಂದು ಸೋಲಿನಿಂದ ನಮ್ಮ ವಿಶ್ವಕಪ್‌ ಅಭಿಯಾನ ಅಂತ್ಯವಾಗಿಲ್ಲ: ವಿರಾಟ್

fgjhgfd

ಜರ್ಮನಿಯಲ್ಲಿ ನಡೆಯಿತು ಗಡ್ಡದ ಒಲಿಂಪಿಕ್ಸ್‌

rwytju11111111111

ಮಂಗಳವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

ನೈಋತ್ಯ ಮುಂಗಾರು ವಾಪಸ್‌; 1975ರ ಬಳಿಕ ಇಷ್ಟೊಂದು ವಿಳಂಬ 17ನೇ ಬಾರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.