ರಾತ್ರಿ ಕರ್ಫ್ಯೂ: ಊರು ಸೇರಲು ತವಕಿಸಿದ ಜನ


Team Udayavani, Apr 11, 2021, 1:25 PM IST

ರಾತ್ರಿ ಕರ್ಫ್ಯೂ: ಊರು ಸೇರಲು ತವಕಿಸಿದ ಜನ

ಬೆಂಗಳೂರು: ಸಾರಿಗೆ ಸಂಸ್ಥೆಯ ನೌಕರರು ನಡೆಸುತ್ತಿರುವ ಮುಷ್ಕರ ಐದನೇ ದಿನಕ್ಕೆ ಕಾಲಿರಿಸಿದೆ. ಹೀಗಾಗಿ ಜನರು ಯುಗಾದಿ ಹಬ್ಬದ ಹಿನ್ನೆಲೆಯಲ್ಲಿಶನಿವಾರ ಬೆಳಗ್ಗೆಯೆ ತಮ್ಮ ಲಗೇಜ್‌ಗಳನ್ನು ಹಿಡಿದುಖಾಸಗಿ ಬಸ್‌ಗಳಲ್ಲೇ ಪ್ರಯಾಣಿಸಿದರು. ನೈಟ್‌ಕರ್ಫ್ಯೂ ಜಾರಿ ಮೊದಲೆ ಊರು ಸೇರಬೇಕು ಎಂಬ ಧಾವಂತ ಅವರಲ್ಲಿತ್ತು.

ಸರ್ಕಾರ ಕೋವಿಡ್ ನಿಯಂತ್ರಿಸುವ ನಿಟ್ಟಿನಲ್ಲಿ ನೈಟ್‌ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ರಾತ್ರಿ ಬಸ್‌ ಇಲ್ಲದೆ ಹೋದರೆ ಊರುಸೇರಲು ತೊಂದರೆ ಅನುಭವಿಸಬೇಕಾಗುತ್ತದೆ ಎಂಬ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗೆಯೇ ತಮ್ಮ ಊರುಗಳತ್ತ ಮುಖಮಾಡುತ್ತಿದ್ದ ದೃಶ್ಯ ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್‌ ನಿಲ್ದಾಣದಲ್ಲಿ ಕಂಡು ಬಂತು.

ಕಲಬುರಗಿ, ಬಳ್ಳಾರಿ, ಬೀದರ್‌,ಕೊಪ್ಪಳ, ವಿಜಯಪುರ, ಕೋಲಾರ,ಹೊಸದುರ್ಗ, ಶಿವಮೊಗ್ಗ,ಅರಸಿಕೆರೆ, ತುಮಕೂರು, ಧಾರವಾಡ, ಹಾವೇರಿ, ದಾವಣಗೆರೆ, ಮೈಸೂರು, ಕೊಡುಗು , ಹಾಸನ ಮತ್ತುಚಿಕ್ಕಮಗಳೂರು ಭಾಗದ ಜನರು ಪುಟಾಣಿ ಮಕ್ಕಳೊಂದಿಗೆ ಖಾಸಗಿ ಬಸ್‌ ಏರಿ ತಮ್ಮ ಸ್ವಗ್ರಾಮಗಳತ್ತಮುಖ ಮಾಡಿದರು. ಈ ವೇಳೆ ಮಾತನಾಡಿ ಬಳ್ಳಾರಿ ಮೂಲದ ಕಾರ್ಮಿಕ ಸಂಗಪ್ಪ ಬಿರಾದಾರ್‌, ಹೊಟ್ಟೆತುಂಬಿಸಿಕೊಳ್ಳಲು ಬೆಂಗಳೂರಿಗೆ ಸಂಸಾರ ಸಮೇತ ಬಂದಿದ್ದೆ.ಹಬ್ಬದ ಹಿನ್ನೆಲೆಯಲ್ಲಿ ಊರಿಗೆ ಹೋಗುತ್ತಿದ್ದೇನೆ. ಸರ್ಕಾರ ಈಗಾಗಲೇ ಕೆಲವು ನಗರಗಳಲ್ಲಿ ನೈಟ್‌ ಕರ್ಫ್ಯೂ ಜಾರಿ ಮಾಡಿದೆ. ಹೀಗಾಗಿ ಹೊತ್ತಿನ ಮುಂಚೆ ಊರು ಸೇರೋಣ ಎಂದು ತೀರ್ಮಾನಿಸಿ ಬೆಳಗ್ಗೆಯೇ ಬಸ್‌ ಏರುತ್ತಿರುವುದಾಗಿ ಹೇಳಿದರು.

ಬಿಕೋ ಎನುತ್ತಿದ್ದ ಬಿಎಂಟಿಸಿ ಬಸ್‌ ನಿಲ್ದಾಣಗಳು: ಸಾರಿಗೆ ಸಂಸ್ಥೆಯ ನೌಕರರ ಮುಷ್ಕರದ ಹಿನ್ನೆಲೆಯಲ್ಲಿಶಾಂತಿನಗರ, ಬನಶಂಕರಿ, ಶಿವಾಜಿ ನಗರ, ಮೆಜೆಸ್ಟಿಕ್‌,ಯಶವಂತಪುರ ಸೇರಿದಂತೆ ಹಲವು ಬಸ್‌ ನಿಲ್ದಾಣಗಳಲ್ಲಿ ಜನರಿಲ್ಲದೆ ಬಿಕೋ ಅನ್ನುತ್ತಿದ್ದವು.ಬಿಎಂಟಿಸಿಯ ಹಿರಿಯ ಅಧಿಕಾರಿಗಳನ್ನು ಹೊರತುಪಡಿಸಿದರೆ ಇಡೀ ಬಸ್‌ ನಿಲ್ದಾಣಗಳು ಖಾಲಿ ಖಾಲಿಯಾಗಿದ್ದವು. ಮೆಜೆಸ್ಟಿಕ್‌ನಲ್ಲಿ ಜಿಗಣಿ, ತಾವರೆಕೆರೆ, ಮಾಗಡಿ ರಸ್ತೆ, ಯಶವಂತಪುರ, ವಿದ್ಯಾರಣ್ಯಪುರ,ಯಲಹಂಕ, ವಿಜಯನಗರ, ಬನಶಂಕರಿ, ಹೆಸರುಘಟ್ಟಸೇರಿದಂತೆ ಇನ್ನಿತರ ಕಡೆಗಳಲ್ಲಿ ಖಾಸಗಿ ಬಸ್‌ಗಳುಪ್ರಯಾಣಿಸಿದವು. ಆದರೆ ಎಲ್ಲಾ ಬಸ್‌ಗಳಲ್ಲಿಆಸನಗಳು ಭರ್ತಿಯಾಗಿರಲಿಲ್ಲ. ಆ ಹಿನ್ನೆಲೆಯಲ್ಲಿತಾಸು ಗಟ್ಟಲೆ ಪ್ರಯಾಣಿಕರು ಕಾಯುವ ಪರಿಸ್ಥಿತಿ ಉಂಟಾಗಿತ್ತು.

ಬಿಎಂಟಿಸಿ ಬಸ್‌ಗಳ ಸಂಚಾರ: ಪೋಲಿಸರ ಭದ್ರತೆಯಲ್ಲಿ ಶನಿವಾರ ಬೆರಳಣಿಕೆ ಸಂಖ್ಯೆಯಲ್ಲಿಬಿಎಂಟಿಸಿ ಬಸ್‌ಗಳು ನಗರದ ವಿವಿಧ ಕಡೆಗಳಪ್ರಯಾಣಿಕರನ್ನು ಹೊತ್ತು ಸಂಚರಿಸಿದವು.ವಿಜಯನಗರ, ಕಾಮಾಕ್ಷಿ ಪಾಳ್ಯ, ಚಂದ್ರಾಲೇಔಟ್‌, ಯೂನಿವರ್ಸಿಟಿ ಕ್ವಾಟ್ರಸ್‌, ಮಾಲತ್ತಹಳ್ಳಿ, ಸುಜಾತಸೇರಿದಂತೆ ಹಲವು ಕಡೆಗಳತ್ತ ಬಿಎಂಟಿಸಿ ಬಸ್‌ಗಳುಪಯಣಿಸಿದವು. ಹಾಗೆಯೇ ಯಲಹಂಕ, ಚಿಕ್ಕಜಾಲ, ಸಾದೇನಹಳ್ಳಿಯತ್ತ ಮೆಜೆಸ್ಟಿಕ್‌ ನಿಂದ ಸಾಗಿದವು. ಜತೆಗೆಅಂತಾರಾಷ್ಟ್ರೀಯ ವಿಮಾನದತ್ತ ಪ್ರಯಾಣಿಸುವ ವೋಲ್ವೊ ಬಸ್‌ಗಳ ಸಂಖ್ಯೆ ಕೂಡ ಅಧಿಕ ವಿತ್ತು. ವಿಮಾನದ ಮೂಲಕ ವಿವಿಧ ರಾಜ್ಯಗಳಿಗೆ ತೆರಳುವಜನರಿಗೆ ತೊಂದರೆ ಆಗಬಾರದು ಎಂಬ ಉದ್ದೇಶ ವೋಲ್ವೊ ಬಸ್‌ ಸಂಚಾರವನ್ನು ಮಾಡಲಾಗಿದೆ ಎಂದುಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದರು.

ಕೆಂಪೇಗೌಡ ಬಸ್‌ ನಿಲ್ದಾಣದ “ಟರ್ಮಿನಲ್‌ 2ಎ’ ದಿಂದ ಹಾಸನ ಮಾರ್ಗವಾಗಿ ಕೆಲವು ಸಂಖ್ಯೆಯಲ್ಲಿ ಐರಾವತ ಮತ್ತು ಸಾಮಾನ್ಯ ಬಸ್‌ಗಳು ಮಂಗಳೂರಿನತ್ತಸಾಗಿದವು.

ಟಾಪ್ ನ್ಯೂಸ್

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಹಿಂದೂ ಧಾರ್ಮಿಕ ಸ್ಥಳಗಳನ್ನು ಭಗ್ನಗೊಳಿಸುವವರಿಗೆ ಕ್ಷಮೆಯಿಲ್ಲ: ಶಾಸಕ ಡಾ.ಭರತ್ ಶೆಟ್ಟಿ

ಫೈಜಾಬಾದ್ ರೈಲ್ವೆ ಜಂಕ್ಷನ್ ಹೆಸರು ಇನ್ಮುಂದೆ ಅಯೋಧ್ಯಾ ಕಂಟ್ಮೋನೆಂಟ್: ಸಿಎಂ ಯೋಗಿ

ಫೈಜಾಬಾದ್ ರೈಲ್ವೆ ಜಂಕ್ಷನ್ ಹೆಸರು ಇನ್ಮುಂದೆ ಅಯೋಧ್ಯಾ ಕಂಟ್ಮೋನೆಂಟ್: ಸಿಎಂ ಯೋಗಿ

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

ಪ್ರಧಾನಿಗಳ ಬಗ್ಗೆ ಏಕವಚನದಲ್ಲಿ ಮಾತಾಡಿದರೆ ದೊಡ್ಡತನವಾಗದು: ಸಿಎಂ ಬೊಮ್ಮಾಯಿ

Untitled-1

ಹುಣಸೂರು: ಮುಂದುವರೆದ ಒಂಟಿ ಸಲಗದ ದಾಂಧಲೆ

22kubala

ಬಹು ನಿರೀಕ್ಷಿತ “ಚಾರ್ಲಿ” ಚಿತ್ರೀಕರಣ ಮುಕ್ತಾಯ: ಡಿಸೆಂಬರ್ 31ಕ್ಕೆ ಬಿಡುಗಡೆ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಭಾರತದ ವಿರುದ್ಧದ ಪಂದ್ಯಕ್ಕಾಗಿ ಒಂದು ದಿನ ಮೊದಲೇ ತಂಡ ಪ್ರಕಟಿಸಿದ ಪಾಕಿಸ್ಥಾನ

ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

ಬಿಜೆಪಿ ಆಡಳಿತದಿಂದ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಇಸ್ಕಾನ್ ಕೀರ್ತನೆ ಮೆರವಣಿಗೆ

ಬಾಂಗ್ಲಾದೇಶದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ಇಸ್ಕಾನ್ ಕೀರ್ತನೆ ಮೆರವಣಿಗೆ

ದೀಪಗಳ ಉತ್ಸವಕ್ಕೆ ಚಾಲನೆ

ದೀಪಗಳ ಉತ್ಸವಕ್ಕೆ ಚಾಲನೆ

ಹೆಲ್ತ್‌ ಕೇರ್

ನಾರಾಯಣ ಹೆಲ್ತ್‌ ಸಿಟಿ ಆಸ್ಪತ್ರೆಯಿಂದ ಮಿತ್ರಾಕ್ಲಿಪ್‌ ಯಶಸ್ವಿ ಬಳಕೆ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

ತಂತ್ರಜ್ಞಾನ ಆಧಾರಿತ ಯುದ್ಧ ಎದುರಿಸಲು ಸಜ್ಜಾಗಿ

ಪಬ್‌ನಲ್ಲಿ ಶಿಳ್ಳೆ ಹೊಡೆದಿದ್ದಕ್ಕೆ ಗಲಾಟೆ

ಪಬ್‌ನಲ್ಲಿ ಶಿಳ್ಳೆ ಹೊಡೆದಿದ್ದಕ್ಕೆ ಗಲಾಟೆ

MUST WATCH

udayavani youtube

ಕೃಷಿಕರ ಬದುಕಿಗೆ ಆಶಾಕಿರಣವಾಗಿರುವ MO4 ಭತ್ತದ ತಳಿಯನ್ನು ಯಾಕೆ ಬೆಳೆಯಬೇಕು?

udayavani youtube

ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಡಿಕ್ಕಿ ಹೊಡೆದ ಕಾರು, ಮಹಿಳೆ ಸಾವು

udayavani youtube

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಹುಲಿಗಳ ಸ್ವಚ್ಛಂದ ವಿಹಾರ

udayavani youtube

ಸಿರಿಯಾದಲ್ಲಿ ಏರ್ ಸ್ಟ್ರೈಕ್ ನಡೆಸಿದ ಅಮೆರಿಕ: ಹಿರಿಯ ಅಲ್ ಖೈದಾ ಉಗ್ರನ ಹತ್ಯೆ

udayavani youtube

ಸಿಡಿಲಿನ ಹೊಡೆತಕ್ಕೆ ಕುಸಿದ ಮನೆಯ ಗೋಡೆ : ತಪ್ಪಿದ ಭಾರೀ ಅನಾಹುತ

ಹೊಸ ಸೇರ್ಪಡೆ

ಕವಿ ಅಜ್ಜೀಬಳಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

ಕವಿ ಅಜ್ಜೀಬಳಗೆ ಸಾಹಿತ್ಯ ಸಿಂಚನ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ

Apply for Taluk Rajyotsava Award

ತಾಲೂಕು ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿ ಸಲ್ಲಿಸಿ

1-ttt

ತಿಪಟೂರು: ಸಿಡಿಲು ಬಡಿದು ಕುರಿಗಾಹಿ ದುರ್ಮರಣ, ಇನ್ನೋರ್ವ ಗಂಭೀರ

Display a Quiet Image at the State Festival

ರಾಜ್ಯೋತ್ಸವದಲ್ಲಿ ಸ್ತಬ್ಧ ಚಿತ್ರ ಪ್ರದರ್ಶಿಸಿ

ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ

ಐದು ಜನ ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.