ಬಳಕೆಯಾಗದೇ ಉಳಿದಿದೆ ನಿರ್ಭಯ ಅನುದಾನ

Team Udayavani, Oct 6, 2019, 3:09 AM IST

balake

ಬೆಂಗಳೂರು: ಸಮೂಹ ಸಾರಿಗೆಯಲ್ಲಿ ಮಹಿಯರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ 2016-17ನೇ ಸಾಲಿನಲ್ಲಿ “ನಿರ್ಭಯ’ ಯೋಜನೆಯಡಿ ಮಹಾನಗರ ಸಾರಿಗೆ ಸಂಸ್ಥೆಗಳಿಗೆ ನೀಡಿದ್ದ 33.64 ಕೋಟಿ ರೂ. ಅನುದಾನದಲ್ಲಿ ಬಿಎಂಟಿಸಿ ಖರ್ಚು ಮಾಡಿರುವುದು ಕೇವಲ 2.37 ಕೋಟಿ ರೂ.!

ಸಾರ್ವಜನಿಕರು ಸಮೂಹ ಸಾರಿಗೆ ಬಳಸುವ ಮೂಲಕ ಸಂಚಾರ ದಟ್ಟಣೆ, ಮಾಲಿನ್ಯ ತೆಡಯಲು ಸಹಕರಿಸಬೇಕು ಎಂದು ಮನವಿ ಮಾಡುವ ಕೇಂದ್ರ ಸರ್ಕಾರ, ಬಸ್‌ಗಳಲ್ಲಿ ಪ್ರಯಾಣಿಸುವಾಗ ಶೋಷಣೆ ಎದುರುಸುವ ಮಹಿಳೆಯರ ಸುರಕ್ಷತೆಗೆಂದೇ ನಿರ್ಭಯ ಯೋಜನೆ ಅಡಿ ಮಹಾನಗರ ಸಾರಿಗೆ ಸಂಸ್ಥೆಗಳಿಗೆ ಹೆಚ್ಚುವರಿ ಅನುದಾನ ನೀಡಿದೆ.

ಇದರ ಭಾಗವಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ (ಬಿಎಂಟಿಸಿ) 2016-17ನೇ ಸಾಲಿನಲ್ಲಿ 33.64 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ ಸಂಸ್ಥೆ ಕೇವಲ 2.37 ಕೋಟಿ ರೂ. ಖರ್ಚು ಮಾಡಿದೆ ಎಂಬುದನ್ನು ಆರ್‌ಟಿಐ ಕಾರ್ಯಕರ್ತ ಯೋಗೇಶ್‌ ಗೌಡ ದಾಖಲೆಗಳ ಮೂಲಕ ಬಹಿರಂಗಪಡಿಸಿದ್ದಾರೆ. ಖರ್ಚಾಗದೇ ಉಳಿದಿರುವ ಅನುದಾನ ಕೇಂದ್ರ ಸರ್ಕಾರಕ್ಕೆ ವಾಪಸಾಗುವ ಸಾಧ್ಯತೆಯಿದೆ.

ಮಹಿಳಾ ಪ್ರಯಾಣಿಕರ ಸುರಕ್ಷತೆ ಖಾತರಿಪಡಿಸುವ ನಿಟ್ಟಿನಲ್ಲಿ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಬಿಎಂಟಿಸಿ ಡಿಪೋಗಳಲ್ಲಿ ಮಹಿಳಾ ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ, ಮಹಿಳೆಯರು ಹೆಚ್ಚು ಕಾರ್ಯ ನಿರ್ವಹಿಸುವ ಗಾರ್ಮೆಂಟ್ಸ್‌ಗಳಿಗೆ ಪ್ರತ್ಯೇಕ ಬಸ್‌ ಸೇವೆ, ಎಲ್ಲಾ ಬಸ್‌ಗಳಲ್ಲಿ ಪಿಂಕ್‌ ಅಲಾರಂ ಅಳವಡಿಕೆ, ಮಹಿಳೆಯರಿಗೆ ಬಸ್‌ ಚಾಲನೆ ತರಬೇತಿ ನೀಡುವುದೂ ಸೇರಿ ಹಲವು ಕ್ರಮಗಳನ್ನು ತೆಗೆದುಕೊಳ್ಳುವ ಎಲ್ಲಾ ಅವಕಾಶಗಳಿದ್ದರೂ ಬಿಎಂಟಿಸಿ ಅಧಿಕಾರಿಗಳು ಆಸಕ್ತಿ ವಹಿಸಿಲ್ಲ ಎಂಬುದು ಸ್ಪಷ್ಟವಾಗಿದೆ.

ನಿರ್ಭಯ ಅನುದಾನದಲ್ಲಿ ಈವರೆಗೆ 27 ನಿರ್ಭಯ ಜೀಪು ಮತ್ತು 3 ತರಬೇತಿ ವಾಹನಗಳನ್ನು ಖರೀದಿ ಮಾಡಿರುವ ಸಂಸ್ಥೆ, ಬಾಕಿ ಹಣ ಬಳಸುವ ಗೋಜಿಗೆ ಹೋಗಿಲ್ಲ. ಬಿಎಂಟಿಸಿಯ 145 ಬಸ್‌ಗಳು ರಾತ್ರಿ ಪಾಳಿಯಲ್ಲಿ ಸಂಚರಿಸುತ್ತವೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ರಸ್ತೆಯಲ್ಲಿರುವ ಈ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಇಲ್ಲದಿರುವುದು ರಾತ್ರಿ ಪ್ರಯಾಣಿಸುವ ಮಹಿಳೆಯರಲ್ಲಿ ಅಸುರಕ್ಷತೆಯ ಮನೋಭಾವ ಮೂಡಿಸುತ್ತದೆ.

ಈ ಹಿಂದೆ ನಿರ್ಭಯ ಅನುದಾನ ಬಳಕೆಗೆ ಸೂಕ್ತ ಕಾರ್ಯಸೂಚಿ ಸಿದ್ಧಪಡಿಸಿರಲಿಲ್ಲ. ಈಗ ಬಸ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸುವ ಅಂಶ ಸೇರಿಸಲಾಗಿದೆ. ಹೊಸ ಕಾರ್ಯಸೂಚಿ ಅನ್ವಯ ಯೋಜನೆ ಅನುಷ್ಠಾನಕ್ಕೆ ಟೆಂಡರ್‌ ಆಹ್ವಾನಿಸಲು ಸಿದ್ಧತೆ ನಡೆದಿದೆ.
-ಸಿ.ಶಿಖಾ, ಬಿಎಂಟಿಸಿ ಎಂ.ಡಿ

ಅನುದಾನ ಪಡೆದು ಎರಡು ವರ್ಷ ಕಳೆದರೂ ಹಣ ವಿನಿಯೋಗ ಮಾಡಿಲ್ಲ. ಮಹಿಳಾ ಸಿಬ್ಬಂದಿ ಮತ್ತು ಪ್ರಯಾಣಿಕರ ಸುರಕ್ಷತೆಗೆ ಹಲವಾರು ಕ್ರಮ ಕೈಗೊಳ್ಳುವುದು ಬಾಕಿ ಇದ್ದು, ಕೂಡಲೆ ಅನುದಾನ ಬಳಸಿ ಸೌಲಭ್ಯ ಕಲ್ಪಿಸಬೇಕು.
-ಯೋಗೇಶ್‌ ಗೌಡ, ಆರ್‌ಟಿಐ ಕಾರ್ಯಕರ್ತ

* ಲೋಕೇಶ್‌ ರಾಮ್‌

ಟಾಪ್ ನ್ಯೂಸ್

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

ಡೆಲ್ಲಿ-ಮುಂಬೈ ಮುಖಾಮುಖಿ; ಆರ್‌ಸಿಬಿ ಭವಿಷ್ಯ ನಿರ್ಧರಿಸಲಿದೆ

ಡೆಲ್ಲಿ-ಮುಂಬೈ ಮುಖಾಮುಖಿ; ಆರ್‌ಸಿಬಿ ಭವಿಷ್ಯ ನಿರ್ಧರಿಸಲಿದೆ

ಹಣ ಪಾವತಿಗೆ ನಗು ಸಾಕು! ಮಾಸ್ಟರ್‌ಕಾರ್ಡ್‌ನಿಂದ ಹೊಸ ಮಾಸ್ಟರ್‌ ಪ್ಲ್ಯಾನ್

ಹಣ ಪಾವತಿಗೆ ನಗು ಸಾಕು! ಮಾಸ್ಟರ್‌ಕಾರ್ಡ್‌ನಿಂದ ಹೊಸ ಮಾಸ್ಟರ್‌ ಪ್ಲ್ಯಾನ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿ.. ಜೈಲಿಗೆ ಹೋದ ಭಾಮೈದುನ

ಬಾವನ ಮೇಲೆ ಸೇಡು ತೀರಿಸಿಕೊಳ್ಳಲು ಹುಸಿ ಬಾಂಬ್ ಕರೆ ಮಾಡಿ.. ಜೈಲಿಗೆ ಹೋದ ಭಾಮೈದುನ

ತನ್ನ ಅಕ್ಕನ ಮನೆಯಲ್ಲೇ ಬರೋಬ್ಬರಿ 31 ಲಕ್ಷದ ಚಿನ್ನಾಭರಣ ಕದ್ದಿದ್ದ ಸಹೋದರ ಈಗ ಕಂಬಿ ಹಿಂದೆ

ಸಾಲ ತೀರಿಸಲು ತನ್ನ ಸಹೋದರಿಯ ಮನೆಯಲ್ಲೇ ಬರೋಬ್ಬರಿ 31 ಲಕ್ಷದ ಚಿನ್ನಾಭರಣ ಕದ್ದ ಸಹೋದರ

1-adsadada

ಬೆಂಗಳೂರು: ನಾಲ್ವರು ಪಾದಚಾರಿಗಳಿಗೆ ಗುದ್ದಿದ ಕಾರು; ಓರ್ವ ಬಲಿ

6

ಕೆಎಂಎಫ್: ದಾಖಲೆ ಪ್ರಮಾಣದ ಹಾಲು ಉತ್ಪಾದನೆ

5

ಎಲ್ಲಾ ಮಕ್ಕಳಿಗೂ ಆಂಗ್ಲ ಮಾಧ್ಯಮ ಶಿಕ್ಷಣ

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಎಲ್ಲೇ ಇದ್ದರೂ ಕನ್ನಡವೇ ಜೀವ; ಕೆನಡಾದಲ್ಲಿ ಕನ್ನಡ ಕಹಳೆ ಮೊಳಗಿಸಿದ ಚಂದ್ರ ಆರ್ಯ ಅಂತರಂಗ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಜನನ-ಮರಣ ಪ್ರಮಾಣಪತ್ರಕ್ಕೆ ತಪ್ಪಿಲ್ಲ ಅಲೆದಾಟ

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ಹೊರಗುತ್ತಿಗೆ ನೇಮಕಾತಿಗಳಲ್ಲಿ ಶೇ. 33 ಮೀಸಲಾತಿ; ಮಹಿಳೆಯರಿಗೆ ಮೀಸಲು

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ನಿರಂತರ ಮಳೆಗೆ ಜಲಾಶಯಗಳಲ್ಲಿ ಒಳಹರಿವು ಹೆಚ್ಚಳ; ಶೀಘ್ರ ಭರ್ತಿಯಾಗಲಿದೆ ಯಗಚಿ ಜಲಾಶಯ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

ಜೂ. 21: ಮೈಸೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.