ಹೆಲ್ಮೆಟ್‌ ತಪಾಸಣೆ ಇಲ್ಲ

Team Udayavani, Feb 1, 2018, 11:37 AM IST

ಬೆಂಗಳೂರು: ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಐಎಸ್‌ಐ ಹಾಗೂ ಬಿಐಎಸ್‌ ಗುಣಮಟ್ಟದ ಹೆಲ್ಮೆಟ್‌ ಕಡ್ಡಾಯ ಹಾಗೂ ಫೆ.1ರಿಂದ ವಿಶೇಷ ತಪಾಸಣೆ ನಡೆಯಲಿದೆ ಎಂಬ ಗೊಂದಲಕ್ಕೆ ಸಂಚಾರ ಪೊಲೀಸರು ತೆರೆಯೆಳೆದಿದ್ದಾರೆ. ಪೊಲೀಸರು ಹೆಲ್ಮೆಟ್‌ ಗುಣಮಟ್ಟ ಕುರಿತು ಯಾವುದೇ ತಪಾಸಣೆ ನಡೆಸುವುದಿಲ್ಲ. ಆದರೆ, ಸವಾರರು ತಮ್ಮ ಸುರಕ್ಷತೆ ದೃಷ್ಟಿಯಿಂದ ಉತ್ತಮ ಗುಣಮಟ್ಟದ ಹೆಲ್ಮೆಟ್‌
ಧರಿಸಬೇಕು ಎಂದು ಸಂಚಾರ ಪೊಲೀಸರು ಹೇಳಿದ್ದಾರೆ.

ಹೆಲ್ಮೆಟ್‌ಗಳ ತಪಾಸಣೆ ತಾಂತ್ರಿಕವಾಗಿ ಸಾಧ್ಯವಿಲ್ಲ ಎಂದು ಸಂಚಾರ ಪೊಲೀಸರು ಸ್ಪಷ್ಟಪಡಿಸಿದ್ದು, ಮುಂದಿನ ತೀರ್ಮಾನದವರಿಗೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸಚಿವರು ಸೂಚಿಸಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಫೆ.1ರಿಂದ ಪ್ರತಿ ಸವಾರನನ್ನು ತಡೆದು ಬಿಐಎಸ್‌ ಮತ್ತು ಐಎಸ್‌ಐ ಮುದ್ರೆಯ ಹೆಲ್ಮೆಟ್‌ ಪರೀಕ್ಷೆ ಮಾಡುವುದು ಸಾಧ್ಯವಿಲ್ಲ. ಹೀಗಾಗಿ ಅಪರೇಷನ್‌ ಸೇಫ್ ರೈಡ್‌ ಕಾರ್ಯಾಚರಣೆಯನ್ನು ಕೈಬಿಟ್ಟಿದ್ದೇವೆ ಎಂದು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಆರ್‌. ಹಿತೇಂದ್ರ ತಿಳಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ