Udayavni Special

ಹಿಂದು ಧರ್ಮವೂ ಅಲ್ಲ, ಸಂಸ್ಕೃತಿಯೂ ಅಲ್ಲ

Team Udayavani, Sep 12, 2018, 12:28 PM IST

hindu.jpg

ಬೆಂಗಳೂರು: ಧರ್ಮ ಅನ್ನುವುದು ನಂಬಿಕೆ. ಭಾರತ ಅನುಯಾಯಿಗಳದ್ದು ಅಲ್ಲ, ಅನ್ವೇಷಕರ ನೆಲ. ಹಾಗಾಗಿ ಇಲ್ಲಿ ಕೋಟ್ಯಂತರ ದೇವರನ್ನು ಆರಾಧಿಸಲಾಗುತ್ತದೆ ಎಂದು ಈಶ ಪ್ರತಿಷ್ಠಾನದ ಸದ್ಗುರು ಜಗ್ಗಿ ವಾಸುದೇವ ತಿಳಿಸಿದರು. ಈಶ ಪ್ರತಿಷ್ಠಾನದ “ಯೂತ್‌ ಆ್ಯಂಡ್‌ ಟ್ರಾತ್‌’ ಅಭಿಯಾನದ ಅಂಗವಾಗಿ ಪ್ರಸ್‌ ಕ್ಲಬ್‌ ಆಫ್ ಬೆಂಗಳೂರು ವತಿಯಿಂದ ಮಂಗಳವಾರ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಮಾತನಾಡಿದರು. 

ಧರ್ಮ ಮತ್ತು ನಂಬಿಕೆ ವಿಚಾರದಲ್ಲಿ ಮನುಷ್ಯ ಯಾವತ್ತೂ ಅನ್ವೇಷಕ ಆಗಿರಬೇಕು. ಆ ಅನ್ವೇಷಣೆ ಮೂಲಕ ಆತ ತನ್ನದೇ ಆದ ಸತ್ಯ ಕಂಡುಕೊಳ್ಳಬೇಕು. ಸತ್ಯದ ಅನ್ವೇಷಣೆಗಾಗಿಯೇ ಭಾರತದಲ್ಲಿ ಕೋಟ್ಯಂತರ ದೇವರನ್ನು ಆರಾಧಿಸಲಾಗುತ್ತದೆ. ನಂಬಿಕೆ ಸಂಘಟಿತ ರೂಪ ಪಡೆದುಕೊಂಡರೆ, ಧರ್ಮವಾಗಿ ಪರಿವರ್ತನೆಗೊಳ್ಳುತ್ತದೆ. ಇದು ಸಂಖ್ಯಾಬಲದ ಪ್ರತಿಷ್ಠೆಯ ಹಂತಕ್ಕೆ ಬಂದಾಗ ರಾಜಕೀಯ ದಾಳವಾಗುತ್ತದೆ ಎಂದರು. 

ಹಿಂದುತ್ವ ಅನ್ನುವುದು ಭಾರತೀಯ ವ್ಯಾಖ್ಯಾನ ಅಲ್ಲ, ಅದೊಂದು ವಿದೇಶಿ ಪರಿಭಾಷೆ. ಹಿಂದು ಪದ ಹುಟ್ಟಿಕೊಂಡಿದ್ದು ಹಿಮಾಲಯ ಪರ್ವತ ಹಾಗೂ ಹಿಂದೂ ಮಹಾಸಾಗರದಿಂದ. ಇವೆರೆಡರ ನಡುವಿನ ಭೂಪ್ರದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಹಿಂದು. ವಾಸ್ತವದಲ್ಲಿ ಹಿಂದು ಎಂಬುದು ಧರ್ಮವೂ ಅಲ್ಲ, ಸಂಸ್ಕೃತಿಯೂ ಅಲ್ಲ. ಅದೊಂದು ಭೌಗೋಳಿಕ ಗುರುತು ಅಷ್ಟೇ ಎಂದರು.

ಯುವಕರ ಪ್ರಶ್ನೆಗೆ ಉತ್ತರ: ಯುವಕರ ಪ್ರಶ್ನೆಗಳಿಗೆ ಇಂದು ಉತ್ತರ ಸಿಗುತ್ತಿಲ್ಲ. ಹಾಗಾಗಿ ಅವರಲ್ಲಿ ಹತಾಶೆ, ಆಕ್ರೋಶ ಮನೆ ಮಾಡಿದೆ. ಶೇ.52 ಯುವಜನರನ್ನು ಹೊಂದಿರುವ ದೇಶ ನಮ್ಮದು. ಇವರನ್ನು ದೇಶದ ಆಸ್ತಿಯನ್ನಾಗಿ ಪರಿವರ್ತಿಸಿದರೆ ಪವಾಡ ಸೃಷ್ಟಿಸಬಹುದು. ತಮ್ಮ ಪ್ರಶ್ನೆಗಳಿಗೆ ಧರ್ಮ, ರಾಜಕೀಯ ವ್ಯಕ್ತಿಗಳು, ಶಿಕ್ಷಕರು, ಧರ್ಮ ಗುರುಗಳು ಉತ್ತರ ಕೊಡುತ್ತಿಲ್ಲ ಎಂಬ ಭಾವನೆ ಯುವಕರಲ್ಲಿದೆ. ಇದನ್ನು ಹೊಗಲಾಡಿಸಲು ಅವರ ಚಿಂತನೆಗಳಲ್ಲಿ ಸ್ಪಷ್ಟತೆ ಹಾಗೂ ಸಮತೋಲನ ತರಲು ಅಭಿಯಾನ ಆರಂಭಿಸಲಾಗಿದೆ. ಇದರಲ್ಲಿ ಯುವಕರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಲಾಗುವುದು ಎಂದರು.

“ಗುಂಪು ಥಳಿತ’ಕ್ಕೆ ಧರ್ಮ ಬೆರೆಸುವುದು ಸರಿಯಲ್ಲ: “ಗುಂಪು ಥಳಿತ’ ಪ್ರಕರಣಗಳಿಗೆ (ಲಿಂಚಿಂಗ್‌) ಧರ್ಮದ ಉನ್ಮಾದ ಕಾರಣ ಅನ್ನುವುದು ಸರಿಯಲ್ಲ. ಅಭದ್ರತೆ, ಆತಂಕ , ಆವಿಶ್ವಾಸ ಮತ್ತು ಹತಾಶೆ ಇದಕ್ಕೆ ಕಾರಣವಾಗಿದೆ. ಗೋವನ್ನುಧರ್ಮದ ಆಧಾರದಲ್ಲಿ ನೋಡುವುದಕ್ಕಿಂತ ಬದುಕು ಮತ್ತು ಆರ್ಥಿಕತೆಯ ದೃಷ್ಟಿಯಿಂದ ನೋಡಲಾಗುತ್ತದೆ. ಗೋವು ಕಳ್ಳರಿಂದ ತನ್ನ ಬದುಕು ಮತ್ತು ಆರ್ಥಿಕತೆ ಕಳೆದು ಹೋಗುತ್ತದೆ ಎಂಬ ಅಭದ್ರತೆ ಕಾಡುತ್ತದೆ.

ಒಂದು ಮಗು ಅಥವಾ ಗೋವು ಕಳೆದುಕೊಂಡವನು ಈಗಿನ ನ್ಯಾಯಾಂಗ ವ್ಯವಸ್ಥೆಯಲ್ಲಿ ತ್ವರಿತ ನ್ಯಾಯ ಪಡೆದುಕೊಳ್ಳಲು ಸಾಧ್ಯವೇ?. ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಈ ಘಟನೆಗಳು ವಿಮರ್ಶಿಸಬೇಕಾಗಿದೆ. ಹಾಗಂತ ನಾನು ಲಿಂಚಿಂಗ್‌ ಸಮರ್ಥಿಸುವುದಿಲ್ಲ. ಇವುಗಳನ್ನು ತಡೆಗಟ್ಟಲು ನಮ್ಮಲ್ಲಿನ ಕಾನೂನು ವ್ಯವಸ್ಥೆ ದುರ್ಬಲ ಆಗಿರುವುದೂ ಸಹ ಸಮಸ್ಯೆ ಉಲ್ಬಣಕ್ಕೆ ಕಾರಣವಾಗಿದೆ ಎಂದು ಸದ್ಗುರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಸಲಿಂಗಕಾಮ ದೈಹಿಕ, ಸಾಮಾಜಿಕ ವಿದ್ಯಮಾನ: ದೇಶಕ್ಕೆ ಸಂವಿಧಾನವೇ ಗ್ರಂಥ. ಸಾರ್ವತ್ರಿಕ ಮತ್ತು ಸಾರ್ವಜನಿಕ ಬದುಕಿನಲ್ಲಿ ಈ ಗ್ರಂಥದ ಪ್ರಕಾರವೇ ನಡೆದುಕೊಳ್ಳಬೇಕು. ಧಾರ್ಮಿಕ ಗ್ರಂಥಗಳನ್ನು ತಮ್ಮ ವೈಯುಕ್ತಿಕ ಪಾಂಡಿತ್ಯ ಹೆಚ್ಚಿಸಿಕೊಳ್ಳಲು, ಆ ಮೂಲಕ ಜೀವನದಲ್ಲಿ ಅಧ್ಯಾತ್ಮಿಕತೆ ಪಡೆದುಕೊಳ್ಳಲು ಮನೆಗಳಲ್ಲೇ ಅಧ್ಯಯನ ಮಾಡಬೇಕು.

ತಾನು ಓದುವ ಧರ್ಮ ಗ್ರಂಥ ಇನ್ನೊಬ್ಬರೂ ಓದಬೇಕು ಅದರಂತೆ ನಡೆದುಕೊಳ್ಳಬೇಕು ಎಂದು ವಾದಿಸುವುದು ಸರಿಯಲ್ಲ. ಸಲಿಂಗಕಾಮ ದೈಹಿಕ ವಿದ್ಯಮಾನ ಹೌದು. ಆದರೆ, ಸಾಮಾಜಿಕ ವಿದ್ಯಮಾನ ಅನ್ನುವುದನ್ನೂ ಅಲ್ಲಗಳೆಯುವಂತಿಲ್ಲ. ಚುನಾವಣೆಗಳು 3 ತಿಂಗಳು ಇರುವರೆಗೆ ಯಾರೂ ಚುನಾವಣೆಗಳ ಬಗ್ಗೆ ಮಾತನಾಡದಂತಹ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸಂವಾದದಲ್ಲಿ ಸದ್ಗುರು ಪ್ರಶ್ನೆಗಳಿಗೆ ಉತ್ತರಿಸಿದರು. 

ತನ್ನ ಕುಟುಂಬಕ್ಕಿಂತ ತನ್ನ ರಾಜ್ಯದ ಜನರ ಕ್ಷೇಮ ಮತ್ತು ಕಲ್ಯಾಣ ಮುಖ್ಯ ಎಂದು ತಿಳಿದು ಅದಕ್ಕಾಗಿ ತನ್ನ ಸರ್ವಸ್ವವನ್ನೂ ತ್ಯಾಗ ಮಾಡಿದ ರಾಜನೊಬ್ಬನ ಉದಾತ್ತ ಮಾದರಿಯನ್ನು ರಾಮನ ಬದುಕಿನಲ್ಲಿ ನಾವು ಕಾಣಬಹುದು. ದೇವರು ಎಂಬ ಕಾರಣಕ್ಕೆ ಅಲ್ಲ, ಮಾನವೀಯತೆಯನ್ನೂ ಮೀರಿದ ಗುಣಗಳಿಗಾಗಿ ರಾಮನನ್ನು ಆರಾಧಿಸಲಾಗುತ್ತದೆ. ಸ್ವಾರ್ಥ ಬಿಟ್ಟು ಜನರ ಕ್ಷೇಮ ಬಯಸುವ ರಾಜಕೀಯ ನಾಯಕರು ಇಂದು ನಮಗೆ ಬೇಕಾಗಿದ್ದಾರೆ.
-ಸದ್ಗುರು ಜಗ್ಗಿ ವಾಸುದೇವ

ಟಾಪ್ ನ್ಯೂಸ್

horoscope

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ವ್ಯಾಪಾರ ವ್ಯವಹಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರುವುದು

75ನೇ ಸ್ವಾತಂತ್ರ್ಯೋತ್ಸವ ಸಮಿತಿಯಲ್ಲಿ ಹಲವು ಕನ್ನಡಿಗರಿಗೆ ಸ್ಥಾನ

75ನೇ ಸ್ವಾತಂತ್ರ್ಯೋತ್ಸವ ಸಮಿತಿಯಲ್ಲಿ ಹಲವು ಕನ್ನಡಿಗರಿಗೆ ಸ್ಥಾನ

5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

ರಾಮಮಂದಿರ ನಿರ್ಮಾಣಕ್ಕಾಗಿ 2,500 ಕೋ.ರೂ. ನಿಧಿ ಸಂಗ್ರಹ : ದೇಣಿಗೆ ಸಂಗ್ರಹ ಅಂತ್ಯ

ರಾಮಮಂದಿರ ನಿರ್ಮಾಣಕ್ಕಾಗಿ 2,500 ಕೋ.ರೂ. ನಿಧಿ ಸಂಗ್ರಹ : ದೇಣಿಗೆ ಸಂಗ್ರಹ ಅಂತ್ಯ

ಪ್ರತಿಭಟನೆಗೆ 100 ದಿನ : ರೈತರಿಂದ 5 ಗಂಟೆ ಕಾಲ ಹೆದ್ದಾರಿ ತಡೆ

ಪ್ರತಿಭಟನೆಗೆ 100 ದಿನ : ರೈತರಿಂದ 5 ಗಂಟೆ ಕಾಲ ಹೆದ್ದಾರಿ ತಡೆ

ಎಪ್ರಿಲ್‌ 9ರಿಂದ ಐಪಿಎಲ್‌ ಆರಂಭ ? ಪಂದ್ಯಾಟ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತ

ಎಪ್ರಿಲ್‌ 9ರಿಂದ ಐಪಿಎಲ್‌ ಆರಂಭ ? ಪಂದ್ಯಾಟ ಭಾರತದಲ್ಲೇ ನಡೆಯುವುದು ಬಹುತೇಕ ಖಚಿತ

ಆರು ಸಚಿವರಿಗೆ ಮಧ್ಯಾಂತರ ರಕ್ಷಣೆ : ಸಚಿವರ ಅರ್ಜಿ ಪರಿಗಣಿಸಿದ ಕೋರ್ಟ್‌

ಆರು ಸಚಿವರಿಗೆ ಮಧ್ಯಾಂತರ ರಕ್ಷಣೆ : ಸಚಿವರ ಅರ್ಜಿ ಪರಿಗಣಿಸಿದ ಕೋರ್ಟ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

ಮಕ್ಕಳಲ್ಲಿ ಆವಿಷ್ಕಾರ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸಲು ಲ್ಯಾಬ್‌ ಸಹಕಾರಿ: ಅಶ್ವತ್ಥನಾರಾಯಣ

ಮಕ್ಕಳಲ್ಲಿ ಆವಿಷ್ಕಾರ ಮತ್ತು ವೈಜ್ಞಾನಿಕ ಮನೋಭಾವ ಮೂಡಿಸಲು ಲ್ಯಾಬ್‌ ಸಹಕಾರಿ: ಅಶ್ವತ್ಥನಾರಾಯಣ

ನಂದಿಬೆಟ್ಟಕ್ಕೆ ರೋಪ್‌ವೇ

ನಂದಿಬೆಟ್ಟಕ್ಕೆ ರೋಪ್‌ವೇ

Untitled-1

ವಿಚಾರಣೆಗೆ ಮಧ್ಯಂತರ ತಡೆ

ದಿನೇಶ್‌ ಕಲ್ಲಹಳ್ಳಿ ದಿಢೀರ್‌ ಠಾಣೆಗೆ ಹಾಜರು : ವಿಚಾರಣೆ ವೇಳೆ ಸಂತ್ರಸ್ತೆಯ ಪರಿಚಯವಿಲ್ಲವೆಂದ

ದಿನೇಶ್‌ ಕಲ್ಲಹಳ್ಳಿ ದಿಢೀರ್‌ ಠಾಣೆಗೆ ಹಾಜರು : ವಿಚಾರಣೆ ವೇಳೆ ಸಂತ್ರಸ್ತೆಯ ಪರಿಚಯವಿಲ್ಲವೆಂದ

MUST WATCH

udayavani youtube

ಸಿದ್ದರಾಮಯ್ಯ ಬಳಿ ಏನೂ ಇಲ್ಲ ಬರೀ ಬೂಟಾಟಿಕೆ ಮಾಡ್ತಾರೆ: ಡಿ.ವಿ. ಸದಾನಂದ ಗೌಡ

udayavani youtube

ಖ್ಯಾತ ಕವಿ ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟರುಇನ್ನಿಲ್ಲ | Udayavani News Bulletin 6-3-21

udayavani youtube

ಮುಂಬೈನಲ್ಲೇನೂ ನಡೆದಿಲ್ಲ, ನಮ್ಮ ಕೈ, ಬಾಯಿ ಶುದ್ಧವಿದೆ: ಸಚಿವ ಭೈರತಿ ಬಸವರಾಜ್

udayavani youtube

ಗ್ರಾಹಕನ ಸೋಗಿನಲ್ಲಿ ಬಂದು ಚಿನ್ನ ಕಳ್ಳತನ; ಸಿನೀಮಿಯ ಶೈಲಿಯಲ್ಲಿ ಬೆನ್ನಟ್ಟಿ ಹಿಡಿದ ಮಾಲೀಕ

udayavani youtube

ಜೂನಿಯರ್ ಮೇಲೆ ರ‍್ಯಾಗಿಂಗ್ : ಆರೋಪಿ ವಿದ್ಯಾರ್ಥಿಗಳ ಅಮಾನತು

ಹೊಸ ಸೇರ್ಪಡೆ

horoscope

ನಿಮ್ಮ ಗ್ರಹಬಲ: ಈ ರಾಶಿಯವರಿಗೆ ವ್ಯಾಪಾರ ವ್ಯವಹಾರ ರಂಗದಲ್ಲಿ ಅದೃಷ್ಟದ ಆಸರೆ ಸದಾ ಇರುವುದು

75ನೇ ಸ್ವಾತಂತ್ರ್ಯೋತ್ಸವ ಸಮಿತಿಯಲ್ಲಿ ಹಲವು ಕನ್ನಡಿಗರಿಗೆ ಸ್ಥಾನ

75ನೇ ಸ್ವಾತಂತ್ರ್ಯೋತ್ಸವ ಸಮಿತಿಯಲ್ಲಿ ಹಲವು ಕನ್ನಡಿಗರಿಗೆ ಸ್ಥಾನ

5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

5 ಕೋ. ರೂ.ಡೀಲ್‌ ಯಾವಾಗ ನಡೆಯಿತು: ಕುಮಾರಸ್ವಾಮಿಗೆ ದಿನೇಶ್‌ ಕಲ್ಲಹಳ್ಳಿ ಪ್ರಶ್ನೆ

ರಾಮಮಂದಿರ ನಿರ್ಮಾಣಕ್ಕಾಗಿ 2,500 ಕೋ.ರೂ. ನಿಧಿ ಸಂಗ್ರಹ : ದೇಣಿಗೆ ಸಂಗ್ರಹ ಅಂತ್ಯ

ರಾಮಮಂದಿರ ನಿರ್ಮಾಣಕ್ಕಾಗಿ 2,500 ಕೋ.ರೂ. ನಿಧಿ ಸಂಗ್ರಹ : ದೇಣಿಗೆ ಸಂಗ್ರಹ ಅಂತ್ಯ

ಪ್ರತಿಭಟನೆಗೆ 100 ದಿನ : ರೈತರಿಂದ 5 ಗಂಟೆ ಕಾಲ ಹೆದ್ದಾರಿ ತಡೆ

ಪ್ರತಿಭಟನೆಗೆ 100 ದಿನ : ರೈತರಿಂದ 5 ಗಂಟೆ ಕಾಲ ಹೆದ್ದಾರಿ ತಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.