Udayavni Special

ಕಾಲಮಿತಿಯಲ್ಲಿ ಕೈಗಾರಿಕೆ ಆರಂಭಿಸದವರಿಗೆ ನೋಟಿಸ್‌

Team Udayavani, Jul 26, 2018, 7:00 AM IST

minister-industry-kj-george.jpg

ಬೆಂಗಳೂರು: ಕೈಗಾರಿಕೆ ಉದ್ದೇಶಕ್ಕೆ ಜಮೀನು ಪಡೆದು ನಿಗದಿತ ಕಾಲಮಿತಿಯಲ್ಲಿ ಪ್ರಾರಂಭಿಸದಿದ್ದರೆ ನಿಯಮಾವಳಿ ಪ್ರಕಾರ ವಾಪಸ್‌ ಪಡೆಯಲು ಕ್ರಮ ಕೈಗೊಳ್ಳಲಾಗುವುದೆಂದು ಕೈಗಾರಿಕೆ ಸಚಿವ ಕೆ.ಜೆ.ಜಾರ್ಜ್‌ ತಿಳಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜಮೀನು ಪಡೆದು ಕೈಗಾರಿಕೆ ಪ್ರಾರಂಭಿಸದ, ಬೇರೆ ಉದ್ದೇಶಕ್ಕೆ ಬಳಕೆ ಮಾಡಿರುವ ಪ್ರಕರಣಗಳಲ್ಲಿ ನೋಟಿಸ್‌ ನೀಡುವ ಕಾರ್ಯ ಪ್ರಾರಂಭವಾಗಿದೆ ಎಂದು ಹೇಳಿದರು.

ಕೈಗಾರಿಕೆ ಉದ್ದೇಶಕ್ಕೆ ಜಮೀನು ಪ್ರಾರಂಭಿಸದಿದ್ದರೆ ನಿಯಮಾವಳಿ ಪ್ರಕಾರ ಕ್ರಮ ಕೈಗೊಳ್ಳಲು ಅವಕಾಶವಿದೆ. ಆದರೆ, ಅದಕ್ಕೊಂದು ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ರಾಜ್ಯದ ಕೆಲವು ಕಡೆ ಕೈಗಾರಿಕೆ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ಕೊಡುವಲ್ಲಿ ವಿಳಂಬವಾಗಿದೆ ಎಂಬ ದೂರುಗಳಿದ್ದು, ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಚಾಮರಾಜನಗರದಲ್ಲಿ 1,400 ಎಕರೆ ವ್ಯಾಪ್ತಿಯಲ್ಲಿ ಕೈಗಾರಿಕೆ ಪ್ರದೇಶ ಅಭಿವೃದ್ಧಿ ಪಡಿಸಲಾಗುತ್ತಿದೆ. ಟೆಕ್ಸ್‌ಟೈಲ್‌ ಹಾಗೂ ಫ‌ುಡ್‌ಪಾರ್ಕ್‌ಗೆ ಅವಕಾಶವಿದ್ದು ಈಗಾಗಲೇ ಸಾಕಷ್ಟು ಸ್ಥಳೀಯ ಹಾಗೂ ವಿದೇಶಿ ಕಂಪನಿಗಳು ಅಲ್ಲಿ ಕೈಗಾರಿಕೆ ಸ್ಥಾಪನೆಗೆ ಒಲವು ತೋರಿವೆ ಎಂದು ತಿಳಿಸಿದರು.

ಮೈಸೂರಿನಲ್ಲಿಯೂ 4,500 ಕೋಟಿ ರೂ. ಬಂಡವಾಳ ಹೂಡಿಕೆಗೆ ಅವಕಾಶವಿರುವ ಕೈಗಾರಿಕೆ ವಲಯ ಸ್ಥಾಪಿಸಲಾಗಿದೆ. ಈಗಾಗಲೇ ಏಷಿಯನ್‌ ಪೈಂಟ್ಸ್‌ ಸಂಸ್ಥೆ 2,500 ಕೋಟಿ ರೂ. ಬಂಡವಾಳ ಹೂಡಿಕೆಗೆ ಮುಂದಾಗಿದೆ. ಚೆನ್ನೈ-ತುಮಕೂರು-ಹುಬ್ಬಳ್ಳಿಕಾರಿಡಾರ್‌ನಡಿ ತುಮಕೂರು ಸಮೀಪ 10 ಸಾವಿರ ಎಕರೆ ಪ್ರದೇಶದಲ್ಲಿ ಬೃಹತ್‌ ಕೈಗಾರಿಕೆ ವಲಯ ಸ್ಥಾಪನೆಯಾಗುತ್ತಿದೆ ಎಂದು ಹೇಳಿದರು.

ಕೆ.ಆರ್‌.ಪೇಟೆಯ ಬೂಕನಕೆರೆಯಲ್ಲಿ ಫ‌ುಡ್‌ಪಾರ್ಕ್‌ಗಾಗಿ ಜಮೀನು ಸ್ವಾಧೀನಪಡಿಸಿಕೊಂಡು ಗುದ್ದಲಿ ಪೂಜೆ ನೆರವೇರಿಸಿದರೂ ಇನ್ನೂ ಕಾಮಗಾರಿ ಆರಂಭವಾದ ಬಗ್ಗೆ ಪ್ರತಿಕ್ರಿಯಿಸಿ, ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಜರ್ಮನ್‌ ನಿಯೋಗ ಭೇಟಿ
ಜರ್ಮನ್‌ ಕಾನ್ಸುಲೇಟ್‌ ನಿಯೋಗ ಬುಧವಾರ ಸಚಿವ ಕೆ.ಜೆ.ಜಾರ್ಜ್‌ ಅವರನ್ನು ಭೇಟಿ ಮಾಡಿ ಬಂಡವಾಳ ಹೂಡಿಕೆ, ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳ ಸ್ಥಾಪನೆ ಕುರಿತು ಚರ್ಚಿಸಿತು. ಕರ್ನಾಟಕದಲ್ಲಿ ಎಲ್ಲ ವಲಯಗಳಲ್ಲೂ ಬಂಡವಾಳ ಹೂಡಿಕೆಗೆ ಅವಕಾಶಗಳಿದ್ದು ಕೈಗಾರಿಕೆ ಸ್ನೇಹಿ ವಾತಾವರಣವಿದೆ ಎಂದು ಸಚಿವರು ಮಾಹಿತಿ ನೀಡಿದರು.

ಜೈವಿಕ ತಂತ್ರಜ್ಞಾನದಿಂದ ನ್ಯಾನೋ ತಂತ್ರಜ್ಞಾನದವರೆಗೆ ಜಗತ್ತಿನಲ್ಲಿ ಆಗಿರುವ ಸಂಶೋಧನೆ ಸಂಬಂಧಿತ ಉದ್ಯಮಗಳಲ್ಲಿ ಬಂಡವಾಳ ಹೂಡಿಕೆ ಪ್ರೋತ್ಸಾಹಿಸಲು ನವೆಂಬರ್‌ 29 ರಿಂದ ಮೂರು ದಿನ ಬೆಂಗಳೂರಿನಲ್ಲಿ “ಟೆಕ್‌ ಸಮ್ಮಿಟ್‌’ ಹಮ್ಮಿಕೊಳ್ಳಲಾಗಿದೆ.
– ಗೌರವ್‌ ಗುಪ್ತಾ, ಪ್ರಧಾನ ಕಾರ್ಯದರ್ಶಿ, ಕೈಗಾರಿಕೆ ಇಲಾಖೆ

ಟಾಪ್ ನ್ಯೂಸ್

89ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪಿಎಂ ಮನಮೋಹನ್‌ ಸಿಂಗ್‌

89ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪಿಎಂ ಮನಮೋಹನ್‌ ಸಿಂಗ್‌

ಹೈದರಾಬಾದ್‌- ಬೆಂಗಳೂರು ಬುಲೆಟ್‌ ಟ್ರೈನ್‌ಗೆ ವಿಶ್ವಬ್ಯಾಂಕ್‌ ನೆರವು

ಹೈದರಾಬಾದ್‌- ಬೆಂಗಳೂರು ಬುಲೆಟ್‌ ಟ್ರೈನ್‌ಗೆ ವಿಶ್ವಬ್ಯಾಂಕ್‌ ನೆರವು

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

sagara news

ಕೋಟಿ ಬಾಳುವ ಆಸ್ತಿ ಉಳಿಸಿಕೊಳ್ಳುವಲ್ಲಿ  ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ!

ಯಡಿಯೂರಪ್ಪ ಲೂಟಿ‌ ಹೊಡೆಯುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪ ಲೂಟಿ‌ ಹೊಡೆಯುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

humanabada news

ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ- ಆತಂಕದಲ್ಲಿ ಪಾಲಕರು

koppala news

ಆನೆಗುಂದಿ ಪಂಪಾ ಸರೋವರ, ಆದಿಶಕ್ತಿ ದೇಗುಲಕ್ಕೆ ಸಚಿವ ಶ್ರೀರಾಮುಲು ಭೇಟಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

ಯಡಿಯೂರಪ್ಪ ಲೂಟಿ‌ ಹೊಡೆಯುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

ಯಡಿಯೂರಪ್ಪ ಲೂಟಿ‌ ಹೊಡೆಯುದನ್ನು ಬಿಟ್ಟು ಬೇರೇನೂ ಮಾಡಿಲ್ಲ: ಸಿದ್ದರಾಮಯ್ಯ

humanabada news

ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ- ಆತಂಕದಲ್ಲಿ ಪಾಲಕರು

cfgfgtrr

ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ

ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿ:CMಕುರ್ಚಿ ಮೇಲೆ ಪ್ರಬಲಸಮುದಾಯಗಳ ‘ಟವೆ‌ಲ್‌’

ಕಾಂಗ್ರೆಸ್‌ನಲ್ಲಿ ಕೂಸು ಹುಟ್ಟುವ ಮುನ್ನ ಕುಲಾವಿ:CMಕುರ್ಚಿ ಮೇಲೆ ಪ್ರಬಲಸಮುದಾಯಗಳ ‘ಟವೆ‌ಲ್‌’

MUST WATCH

udayavani youtube

ಕೋವಿಡ್ ಆತಂಕದ ನಡುವೆ ಜಾನಪದ ಸಮ್ಮೇಳನದಲ್ಲಿ ಶಾಲಾ ಮಕ್ಕಳು ಭಾಗಿ

udayavani youtube

ಪಾಕ್ – ಚೀನಾ ಹೆಸರು ಹೇಳಲು ಮೋದಿಗೆ ಭಯವೇಕೆ ? ಕಾಂಗ್ರೆಸ್ ಪ್ರಶ್ನೆ|

udayavani youtube

ವಿನಾಯಕ ನಗರಕ್ಕೆ ವಿಘ್ನ ತಂದೊಡ್ಡಲಿರುವ ಅಕ್ರಮ ಗ್ಯಾಸ್ ಫಿಲ್ಲಿಂಗ್

udayavani youtube

ಕಾಪು ಗೃಹೋಪಯೋಗಿ ಮಾರಾಟ ಮಳೆಗೆಯಲ್ಲಿ‌ ಬೆಂಕಿ, ಅಪಾರ ಸೊತ್ತು‌ಹಾನಿ

udayavani youtube

ಕಾಫಿ ತೋಟಕ್ಕೆ ಲಗ್ಗೆಯಿಟ್ಟ ಕಾಡುಕೋಣಗಳ ಹಿಂಡು

ಹೊಸ ಸೇರ್ಪಡೆ

89ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪಿಎಂ ಮನಮೋಹನ್‌ ಸಿಂಗ್‌

89ನೇ ವಸಂತಕ್ಕೆ ಕಾಲಿರಿಸಿದ ಮಾಜಿ ಪಿಎಂ ಮನಮೋಹನ್‌ ಸಿಂಗ್‌

ಜಿಲ್ಲಾಧಿಕಾರಿಗಳ ವಿರುದ್ಧ  ಹೋರಾಟಗಾರರ ಆಕ್ರೋಶ

ಜಿಲ್ಲಾಧಿಕಾರಿಗಳ ವಿರುದ್ಧ ಹೋರಾಟಗಾರರ ಆಕ್ರೋಶ

ಹೈದರಾಬಾದ್‌- ಬೆಂಗಳೂರು ಬುಲೆಟ್‌ ಟ್ರೈನ್‌ಗೆ ವಿಶ್ವಬ್ಯಾಂಕ್‌ ನೆರವು

ಹೈದರಾಬಾದ್‌- ಬೆಂಗಳೂರು ಬುಲೆಟ್‌ ಟ್ರೈನ್‌ಗೆ ವಿಶ್ವಬ್ಯಾಂಕ್‌ ನೆರವು

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

ರೈತರ ಹೋರಾಟಕ್ಕೆ ಕಾಂಗ್ರೆಸ್ ಯಾವಾಗಲೂ ಜೊತೆಯಾಗಿ ನಿಲ್ಲಲಿದೆ: ಡಿಕೆಶಿ

sagara news

ಕೋಟಿ ಬಾಳುವ ಆಸ್ತಿ ಉಳಿಸಿಕೊಳ್ಳುವಲ್ಲಿ  ಪ್ರವಾಸೋದ್ಯಮ ಇಲಾಖೆ ನಿರ್ಲಕ್ಷ್ಯ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.