Udayavni Special

ಕಾಂಗ್ರೆಸ್‍ನಿಂದ ಮೈತ್ರಿಗೆ ಅಧಿಕೃತ ತಿಲಾಂಜಲಿ


Team Udayavani, Sep 22, 2019, 3:08 AM IST

dinesh

ಬೆಂಗಳೂರು: ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಏಕಾಂಗಿ ಸ್ಪರ್ಧೆಗೆ ಸಿದ್ಧತೆ ಮಾಡಿಕೊಂಡಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದರು. ಈ ಮೂಲಕ ಜೆಡಿಎಸ್‌ ಜತೆಗಿನ ಒಂದೂವರೆ ವರ್ಷದ ಮೈತ್ರಿಗೆ ಕಾಂಗ್ರೆಸ್‌ ಅಧಿಕೃತವಾಗಿ ತಿಲಾಂಜಲಿ ನೀಡಿದೆ.

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆ ಆಗಿರುವುದರಿಂದ ತುರ್ತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, “ಉಪ ಚುನಾವಣೆಗೆ ನಾವು ಸನ್ನದ್ಧವಾಗಿದ್ದು, ಕೇಂದ್ರ ಚುನಾವಣಾ ಆಯೋಗ 15 ಕ್ಷೇತ್ರಕ್ಕೆ ಚುನಾವಣೆ ಘೋಷಿಸಿರುವುದು ಸ್ವಾಗತಾರ್ಹ. ಎಲ್ಲ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ’ ಎಂದು ಹೇಳಿದರು.

ನಾವು ಈಗಾಗಲೇ ಎಲ್ಲ ಕ್ಷೇತ್ರಗಳಿಗೆ ಚುನಾವಣೆ ಸಿದ್ಧತೆ ಕುರಿತು 2 ಬಾರಿ ಸಭೆ ನಡೆಸಿದ್ದೇವೆ. ಹೊಸಕೋಟೆಯಲ್ಲಿ ಸಮಾವೇಶದ ಮೂಲಕ ಚುನಾವಣೆ ರಣಕಹಳೆ ಊದಿದ್ದೇವೆಂದರು.  ಕೆಲವು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನಡುವೆ ನೇರ ಸ್ಪರ್ಧೆ ಇದೆ. ಕೆಲವು ಕ್ಷೇತ್ರಗಳಲ್ಲಿ ಬಿಜೆಪಿ-ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ಹೀಗಾಗಿ ಕಾಂಗ್ರೆಸ್‌ ಎಲ್ಲ ಕ್ಷೇತ್ರಗಳಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ ಎಂದು ಹೇಳಿದರು.

ಕೋರ್ಟ್‌ಗೆ ಮನವರಿಕೆ ಮಾಡುತ್ತೇವೆ: ಕಳೆದ ಒಂದೂವರೆ ವರ್ಷದಿಂದ ಬಿಜೆಪಿ ಮೈತ್ರಿ ಸರ್ಕಾರವನ್ನು ಉರುಳಿಸಿ, ಈಗ ಬಹುಮತ ಇಲ್ಲದಿದ್ದರೂ ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್‌-ಜೆಡಿಎಸ್‌ ಶಾಸಕರಿಗೆ ಏನೇನು ಆಮಿಷ ಒಡ್ಡಿ ಸರ್ಕಾರ ರಚನೆ ಮಾಡಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಸೋಮವಾರ ಅನರ್ಹತೆ ಪ್ರಕರಣ ವಿಚಾರಣೆಗೆ ಬರಲಿದೆ.

ಕಾಂಗ್ರೆಸ್‌ ಕೂಡ ಕೇವಿಯೆಟ್‌ ಹಾಕಿರುವುದರಿಂದ ಸ್ಪೀಕರ್‌ ತೀರ್ಮಾನ ಸರಿಯಾಗಿದೆ ಎಂದು ನಾವು ಕೋರ್ಟ್‌ಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡುತ್ತೇವೆಂದರು. ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯುವ ವಿಚಾರಣೆ ಆಧಾರದಲ್ಲಿ ಅನರ್ಹರು ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಸ್ಪಷ್ಟವಾಗಲಿದೆ. ಅವರಿಗೆ ಸ್ಪರ್ಧಿಸಲು ಅವಕಾಶ ನೀಡಬಾರದು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆಂದರು.

ದೇವರೇ ಬಲ್ಲ: ಈಗಾಗಲೇ ಚುನಾವಣಾ ಆಯೋಗ ಅನರ್ಹರಿಗೆ ಈ ಚುನಾವಣೆಯಲ್ಲಿ ಸ್ಪರ್ಧೆಗೆ ಅವಕಾಶ ಇಲ್ಲ ಎಂದು ಹೇಳಿದೆ. ಇನ್ನು ರಾಜರಾಜೇಶ್ವರಿ ನಗರ ಹಾಗೂ ಮಸ್ಕಿ ಕ್ಷೇತ್ರಗಳಲ್ಲಿ ಅನರ್ಹ ಶಾಸಕರ ಗೆಲುವು ಪ್ರಶ್ನಿಸಿ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಆ ಕ್ಷೇತ್ರಗಳಿಗೆ ಯಾವಾಗ ಚುನಾವಣೆ ನಡೆಯುತ್ತದೆಯೋ ದೇವರೇ ಬಲ್ಲ. ಅವರನ್ನು ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದರು.

ಈಗಾಗಲೇ ಪಕ್ಷದ ವತಿಯಿಂದ ಪ್ರವಾಹ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡದಿರುವುದರಿಂದ ಸೆ.24 ರಂದು ಬೆಳಗಾವಿ ಸಮಾವೇಶ ಮಾಡಲು ತೀರ್ಮಾನಿಸಿದ್ದೇವೆ. ಬಿಜೆಪಿ ಸಂಸದರು ಪ್ರವಾಹ ಪರಿಹಾರಕ್ಕೆ ಕೇಂದ್ರದಿಂದ ಹಣ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಅವರ ಮಾತು ಕೇಳಿದರೆ ಕೇಂದ್ರ ಸರ್ಕಾರ ದಿವಾಳಿ ಎನ್ನುವುದು ಸ್ಪಷ್ಟವಾಗಿದೆ. ಇದೆಲ್ಲವನ್ನು ನಾವು ಜನರ ಮುಂದೆ ಇಡುತ್ತೇವೆ ಎಂದು ಹೇಳಿದರು. ಆದರೆ, ಸೆ. 26 ರಂದು ನಡೆಯುವ ಸರ್ವ ಸದಸ್ಯರ ಸಭೆ ಮುಂದೂಡಲಾಗಿದೆ ಎಂದು ಹೇಳಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಮಿಡತೆ ದಾಳಿ ಎದುರಿಸಲು ಕೈಜೋಡಿಸಿದ ಭಾರತ – ಪಾಕ್‌!

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಬೀದರ್ ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ 6ನೇ ಬಲಿ; 39 ಪಾಸಿಟಿವ್ ಪತ್ತೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

jaasti atike

ವಾಯು, ಶಬ್ದ ಮಾಲಿನ್ಯ ಪ್ರಮಾಣ ಏರಿಕೆ

soochane kendra

ಖಾಸಗಿ ವಿಮಾನದಲ್ಲಿ ಆಗಮಿಸಲು ಕೇಂದ್ರ ಸೂಚನೆ?

nanegudi-bidda

ನನೆಗುದಿಗೆ ಬಿದ್ದ ಕಾಮಗಾರಿಗಳಿಗೆ ಮರುಜೀವ

raddu sidda

ಇಂದಿರಾ ಕ್ಯಾಂಟೀನ್‌: ಸಿದ್ದು, ಜಾರ್ಜ್‌ ವಿರುದ್ಧದ ಪ್ರಕರಣ ರದ್ದು

kiosk

ತಿಂಗಳಲ್ಲಿ ಕೈಕೊಟ್ಟ ಪೊಲೀಸ್‌ ಕಿಯೋಸ್ಕ್‌

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ದಕ್ಷಿಣ ಭಾರತದ ಈ ಎರಡು ಜಿಲ್ಲೆಗಳಿಗೆ ಇನ್ನೂ ಕಾಲಿಟ್ಟಿಲ್ಲ ಮಹಾಮಾರಿ!

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ಶಹಾಪುರ ಪೊಲೀಸ್ ಸಿಬ್ಬಂದಿಗೆ ಕೋವಿಡ್ ಸೋಂಕು ದೃಢ

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ವಿಶ್ವ ಬೈಸಿಕಲ್‌ ದಿನದಂದೇ ಅಟ್ಲಾಸ್‌ ಸೈಕಲ್‌ ಫ್ಯಾಕ್ಟರಿ ಬಂದ್‌!

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಹುಬ್ಬಳ್ಳಿಯಲ್ಲಿ ತೆರೆದುಕೊಳ್ಳಲಿದೆ ಜಗತ್ತಿನ ಅತಿ ಉದ್ದದ ರೈಲ್ವೇ ಪ್ಲ್ಯಾಟ್‌ಫಾರಂ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

ಶನಿವಾರದಿಂದ ಭಕ್ತರಿಗೆ ದರ್ಶನ ನೀಡಲಿದ್ದಾನೆ ಬಾಲಾಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.